ಪಾಕಿಸ್ತಾನದ ಉನ್ನತ ಅಧಿಕಾರಿಗಳೊಂದಿಗೆ ಅರಾಘ್ಚಿ ಮಾತುಕತೆ ಚಿತ್ರಗಳು 
ವಿದೇಶ

ಪಾಕಿಸ್ತಾನದೊಂದಿಗೆ ಮಾತುಕತೆ ಮುಗಿಸಿ, ರಷ್ಯಾಕ್ಕೆ ತೆರಳಿದ ಅರಾಘ್ಚಿ! ಪುಟಿನ್ ಭೇಟಿಯಾಗ್ತಾರಾ? ಹೇಳಿದ್ದೇನು?

ರಷ್ಯಾದ ಸೇಂಟ್ ಪೀಟರ್ಸ್‌ಬರ್ಗ್‌ಗೆ ಆಗಮಿಸಿದ ನಂತರ, ಪಾಕಿಸ್ತಾನ ಮತ್ತು ಒಮಾನ್‌ ಜೊತೆಗಿನ ತಮ್ಮ ರಾಜತಾಂತ್ರಿಕ ಮಾತುಕತೆಯ ವಿವರ ಹಂಚಿಕೊಂಡಿದ್ದಾರೆ.

ಸೆಂಟ್ ಪೀಟರ್ಸ್ ಬರ್ಗ್: ಅಮೆರಿಕ ಜೊತೆಗಿನ ಎರಡನೇ ಸುತ್ತಿನ ಶಾಂತಿ ಮಾತುಕತೆಯ ಅನಿಶ್ಚಿತತೆ ನಡುವೆ ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ, ಪಾಕಿಸ್ತಾನ ಮತ್ತು ಒಮನ್ ಪ್ರಯಾಣ ಮುಗಿಸಿ ಇದೀಗ ರಷ್ಯಾಕ್ಕೆ ತೆರಳಿದ್ದಾರೆ.

ರಷ್ಯಾದ ಸೇಂಟ್ ಪೀಟರ್ಸ್‌ಬರ್ಗ್‌ಗೆ ಆಗಮಿಸಿದ ನಂತರ, ಪಾಕಿಸ್ತಾನ ಮತ್ತು ಒಮಾನ್‌ ಜೊತೆಗಿನ ತಮ್ಮ ರಾಜತಾಂತ್ರಿಕ ಮಾತುಕತೆಯ ವಿವರ ಹಂಚಿಕೊಂಡಿದ್ದಾರೆ.

ಪಾಕಿಸ್ತಾನದ ಪ್ರಯಾಣ ಬಹಳ ಫಲ ಪ್ರದವಾಗಿತ್ತು. ಉತ್ತಮ ಸಮಾಲೋಚನೆ ನಡೆಯಿತು ಎಂದು ಅಬ್ಬಾಸ್ ಅರಾಘ್ಚಿ ಹೇಳಿರುವುದಾಗಿ ಇರಾನ್ ರಾಜ್ಯ ಮಾಧ್ಯಮವಾದ IRNA ಸುದ್ದಿ ಸಂಸ್ಥೆ ವರದಿ ಮಾಡಿದೆ. ಮಾತುಕತೆ ವೇಳೆ ಅಧಿಕಾರಿಗಳು ಹಿಂದಿನ ಘಟನೆಗಳು ಮತ್ತು ಇರಾನ್- ಯುಎಸ್ ನಡುವಿನ ಮುಂದಿನ ಮಾತುಕತೆ ಕುರಿತು ಚರ್ಚಿಸಿದ್ದಾರೆ ಎನ್ನಲಾಗಿದೆ.

ಮಸ್ಕತ್ ನಲ್ಲಿ ಹಾರ್ಮುಜ್ ಜಲಸಂಧಿ ಕುರಿತು ಚರ್ಚೆ ನಡೆಸಲಾಗಿದೆ. ಇರಾನ್ ಮತ್ತು ಒಮನ್ ಹಾರ್ಮುಜ್ ಜಲಸಂಧಿಯ ಎರಡು ಕರಾವಳಿ ರಾಜ್ಯಗಳಾಗಿದ್ದು, ಪರಸ್ಪರ ಸಮಾಲೋಚನೆ ಅಗತ್ಯವಾಗಿದೆ. ವಿಶೇಷವಾಗಿ ಜಲಸಂಧಿಯ ಮೂಲಕ ಸುರಕ್ಷಿತ ಸಂಚಾರ ಜಾಗತಿಕ ಸಮಸ್ಯೆಯಾಗಿ ಮಾರ್ಪಟ್ಟಿದೆ ಎಂದು ಅರಘ್ಚಿ ಹೇಳಿರುವುದಾಗಿ ಐಆರ್‌ಎನ್‌ಎ ಸುದ್ದಿ ಸಂಸ್ಥೆ ಹೇಳಿದೆ.

ಹಾರ್ಮುಜ್ ಜಲಸಂಧಿಯ ಎರಡು ಕರಾವಳಿ ರಾಷ್ಟ್ರಗಳಾಗಿ, ನಮ್ಮ ಸಾಮಾನ್ಯ ಹಿತಾಸಕ್ತಿಗಳನ್ನು ಪೂರೈಸಲಾಗಿದೆೇ ಎಂದು ಖಚಿತಪಡಿಸಿಕೊಳ್ಳಲು ಮತ್ತು ಪ್ರಾದೇಶಿಕ ಸ್ಥಿರತೆ ಕಾಪಾಡಿಕೊಳ್ಳಲು ತಜ್ಞರ ಮಟ್ಟದಲ್ಲಿ ಸಮಾಲೋಚನೆಗಳು ಮುಂದುವರಿಯಬೇಕು" ಎಂದು ಎರಡೂ ಕಡೆಯವರು ಒಪ್ಪಿಕೊಂಡಿದ್ದಾರೆ ಎಂದು ಅರಾಘ್ಚಿ ಹೇಳಿದರು.

ಈ ಪ್ರಾದೇಶಿಕ ಸ್ಥಿರತೆಯನ್ನು ಆಧರಿಸಿ, ಇರಾನಿನ ವಿದೇಶಾಂಗ ಸಚಿವರು ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಸೇರಿದಂತೆ ಹಿರಿಯ ರಷ್ಯಾದ ಅಧಿಕಾರಿಗಳೊಂದಿಗೆ ಉನ್ನತ ಮಟ್ಟದ ಚರ್ಚೆಗಳನ್ನು ನಡೆಸಲು ಸೇಂಟ್ ಪೀಟರ್ಸ್ ಬರ್ಗ್ ನಲ್ಲಿದ್ದಾರೆ.

ಪ್ರಾದೇಶಿಕ ಮತ್ತು ಅಂತಾರಾಷ್ಟ್ರೀಯ ವಿಷಯಗಳ ಕುರಿತು ಟೆಹ್ರಾನ್ ಮತ್ತು ಮಾಸ್ಕೋ ನಡುವೆ ನಿಕಟ ಸಮಾಲೋಚನೆ ಮುಂದುವರಿಸುವ ಗುರಿಯೊಂದಿಗೆ ಅವರು ರಷ್ಯಾಕ್ಕೆ ಪ್ರಯಾಣಿಸಿದ್ದಾರೆ ಎಂದು ಅರಾಘ್ಚಿ ಇರಾನಿನ ಮಾಧ್ಯಮಕ್ಕೆ ನೀಡಿದ ಹೇಳಿಕೆಗಳನ್ನು ಉಲ್ಲೇಖಿಸಿ ಅಲ್ ಜಜೀರಾ ವರದಿ ಮಾಡಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಯುದ್ಧ ಕೊನೆಗೊಳಿಸಿ, ಹಾರ್ಮುಜ್ ಜಲಸಂಧಿ ತೆರೆಯಲು 'ಹೊಸ ಪ್ರಸ್ತಾವನೆ' ಮುಂದಿಟ್ಟ ಇರಾನ್!

ಜನಸಂಖ್ಯೆ ಅಸಮಾನತೆಯಿಂದ 1947ರಲ್ಲಿ ದೇಶ ವಿಭಜನೆಯಾಯಿತು: RSS ನಾಯಕ

'ಫ್ರೆಂಡ್ಲಿ ಫೆಡರಲ್ ಅಸ್ಸಾಸಿನ್': ಗುಂಡಿನ ದಾಳಿಗೆ 10 ನಿಮಿಷ ಮೊದಲು ಕುಟುಂಬಕ್ಕೆ ಪತ್ರ ಕಳುಹಿಸಿದ್ದ ವೈಟ್ ಹೌಸ್ ಶೂಟೌಟ್ ಪ್ರಕರಣದ ಆರೋಪಿ

IPL 2026: 'ಫೀಲ್ಡಿಂಗ್‌ಗೆ ಅಡ್ಡಿಪಡಿಸಿದ್ದಕ್ಕೆ ಔಟ್: ಕೆಕೆಆರ್ ಆಕ್ರೋಶ, ಬೌಂಡರಿ ಲೈನ್ ನಲ್ಲಿ ರಘುವಂಶಿ ಮಾಡಿದ್ದೇನು? VIDEO ನೋಡಿ...

ಇರಾನ್ ದಾಳಿಯ ನಡುವೆ ಇಸ್ರೇಲ್ ನೆರವು ಕೋರಿದ UAE! Iron Dome ವಾಯು ರಕ್ಷಣಾ ವ್ಯವಸ್ಥೆ ರವಾನೆ

SCROLL FOR NEXT