ಇಸಾಬೆಲ್ಲಾ 
ವಿದೇಶ

ರಾಜ ವೈಭೋಗ ತೊರೆದು ಮಿಲಿಟರಿ ಸೇರಿದ ಡೆನ್ಮಾರ್ಕ್ ರಾಜಕುಮಾರಿ: ಸಂಬಳವೂ ಬೇಡವೆಂದ ಇಸಾಬೆಲ್ಲಾ!

ಡೆನ್ಮಾರ್ಕ್‌ನ ರಾಜ 10ನೇ ಫ್ರೆಡೆರಿಕ್ ಮತ್ತು ರಾಣಿ ಮೇರಿ ಅವರ ಹಿರಿಯ ಪುತ್ರಿ, ರಾಜಕುಮಾರಿ 'ಇಸಾಬೆಲ್ಲಾ' ಪ್ರೌಢಶಾಲೆಯಿಂದ ಪದವಿ ಪಡೆದ ಕೆಲವೇ ವಾರಗಳ ನಂತರ ಗಾರ್ಡ್ ಹುಸಾರ್ ರೆಜಿಮೆಂಟ್‌ಗೆ ಆಗಮಿಸಿದರು.

ಡೆನ್ಮಾರ್ಕ್‌ನ ರಾಜಕುಮಾರಿ ಇಸಾಬೆಲ್ಲಾ 11 ತಿಂಗಳ ಮಿಲಿಟರಿ ಸೇವೆಯನ್ನು ಪ್ರಾರಂಭಿಸಿದ್ದಾರೆ, ಮಿಲಿಟರಿ ಸೇರಿದ ಡ್ಯಾನಿಶ್ ರಾಜಮನೆತನದ ಮೊದಲ ಮಹಿಳಾ ಸದಸ್ಯೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

19 ವರ್ಷದ ಯುವತಿ ಆಗಸ್ಟ್ 3 ರಂದು ಸ್ಲಾಗೆಲ್ಸೆಯ ಆಂಟ್ವೋರ್ಸ್ಕೋವ್ ಬ್ಯಾರಕ್ಸ್‌ನಲ್ಲಿ ಕರ್ತವ್ಯಕ್ಕೆ ಸೇರ್ಪಡೆಯಾಗಿದ್ದಾರೆ, ಇದು ಡ್ಯಾನಿಶ್ ರಾಜಪ್ರಭುತ್ವಕ್ಕೆ ಐತಿಹಾಸಿಕ ಕ್ಷಣವಾಗಿದೆ ಎಂದು Nine.com.au ವರದಿ ಮಾಡಿದೆ.

ಡೆನ್ಮಾರ್ಕ್‌ನ ರಾಜ 10ನೇ ಫ್ರೆಡೆರಿಕ್ ಮತ್ತು ರಾಣಿ ಮೇರಿ ಅವರ ಹಿರಿಯ ಪುತ್ರಿ, ರಾಜಕುಮಾರಿ 'ಇಸಾಬೆಲ್ಲಾ' ಪ್ರೌಢಶಾಲೆಯಿಂದ ಪದವಿ ಪಡೆದ ಕೆಲವೇ ವಾರಗಳ ನಂತರ ಗಾರ್ಡ್ ಹುಸಾರ್ ರೆಜಿಮೆಂಟ್‌ಗೆ ಆಗಮಿಸಿದರು.

ಬ್ಯಾಗಿ ಜೀನ್ಸ್, ಸ್ವೇಡ್ ಜ್ಯಾಕೆಟ್ ಧರಿಸಿ, ಹೆಗಲ ಮೇಲೆ ದೊಡ್ಡ ಮಿಲಿಟರಿ ಬ್ಯಾಗ್ ಹಾಗೂ ಕೈಯಲ್ಲಿ ಸಣ್ಣ ಪರ್ಸ್ ಹಿಡಿದು ಬಂದ ಆಕೆ ಸಾಮಾನ್ಯರಲ್ಲಿ ಸಾಮಾನ್ಯಳಂತೆ ಕಾಣಿಸಿಕೊಂಡಿದ್ದಾರೆ. ರಾಜಮನೆತನದ ಎಲ್ಲಾ ಸುಖ-ಸೌಲಭ್ಯ ಮತ್ತು ವೈಭವವನ್ನು ಬದಿಗೊತ್ತಿ ಸ್ವತಃ ಕಾರು ಚಲಾಯಿಸಿಕೊಂಡು ಮಿಲಿಟರಿ ಕ್ಯಾಂಪ್‌ಗೆ ಬಂದಿದ್ದರು. ಗೇಟ್‌ ಬಳಿಯಿದ್ದ ಭದ್ರತಾ ಸಿಬ್ಬಂದಿಗೆ ತಮ್ಮ ಗುರುತಿನ ಚೀಟಿ ತೋರಿಸಿ, ಅಲ್ಲಿದ್ದ ಕೆಲವೇ ಕೆಲವು ಫೋಟೋಗ್ರಾಫರ್‌ಗಳತ್ತ ಕೈಬೀಸಿ, ಅವರು 'ಗಾರ್ಡ್ ಹುಸಾರ್ ರೆಜಿಮೆಂಟ್' ತರಬೇತಿ ಕೇಂದ್ರದೊಳಗೆ ಹೆಜ್ಜೆ ಇಟ್ಟರು.

'ಇಸಾಬೆಲ್ಲಾ' ಅವರು, ದೇಶದ ವಿಸ್ತರಿತ ಸೇನಾ ನಿಯಮಗಳ ಅಡಿಯಲ್ಲಿ (11 ತಿಂಗಳು) ಸೇನಾ ತರಬೇತಿಗೆ ಅಧಿಕೃತವಾಗಿ ಸೇರ್ಪಡೆಗೊಂಡಿದ್ದಾರೆ. ಈ ಮೂಲಕ ಮಿಲಿಟರಿ ಸೇವೆಗೆ ಸೇರಿದ ಡೆನ್ಮಾರ್ಕ್ ರಾಜಮನೆತನದ ಮೊದಲ ಮಹಿಳೆ (ರಾಜಕುಮಾರಿ) ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ರಾಜಕುಮಾರಿ ಇಸಾಬೆಲ್ಲಾ ತನ್ನ ಅಣ್ಣ ಕ್ರೌನ್ ಪ್ರಿನ್ಸ್ ಕ್ರಿಶ್ಚಿಯನ್ ಅವರ ಹೆಜ್ಜೆಯನ್ನೇ ಅನುಸರಿಸಿದ್ದಾರೆ, ಅವರು ಅದೇ ಬ್ಯಾರಕ್‌ನಲ್ಲಿ ತಮ್ಮ ಮಿಲಿಟರಿ ಸೇವೆಯನ್ನು ಪೂರ್ಣಗೊಳಿಸಿದರು ಮತ್ತು ಈಗ ಎರಡನೇ ಲೆಫ್ಟಿನೆಂಟ್ ಆಗಿ ತರಬೇತಿ ಪಡೆಯುತ್ತಿದ್ದಾರೆ.

ಡೆನ್ಮಾರ್ಕ್‌ನ ರಾಜಮನೆತನದ ಸದಸ್ಯರು ಸಾಂಪ್ರದಾಯಿಕವಾಗಿ ಸಶಸ್ತ್ರ ಪಡೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ, ಆದರೆ ದೇಶದ ವಿಸ್ತೃತ ಕಾರ್ಯಕ್ರಮದಡಿಯಲ್ಲಿ ಸಕ್ರಿಯ ಮಿಲಿಟರಿ ಸೇವೆಯನ್ನು ಪೂರ್ಣಗೊಳಿಸಿದ ರಾಜಮನೆತನದ ಮೊದಲ ಮಹಿಳೆ ಇಸಾಬೆಲ್ಲಾ.

ಇತರ ನೇಮಕಾತಿಗಳಿಗಿಂತ ಭಿನ್ನವಾಗಿ, ರಾಜಕುಮಾರಿ ಇಸಾಬೆಲ್ಲಾ ಸಾಮಾನ್ಯವಾಗಿ ಸೇನಾ ಸೇವೆಗೆ ನೀಡುವ ಸಂಬಳ ಅಥವಾ ದೈನಂದಿನ ಭತ್ಯೆಯನ್ನು ಪಡೆಯಲು ನಿರಾಕರಿಸಿದ್ದಾರೆ. ಸೇನಾ ತರಬೇತಿಗೆ ಸೇರುವ ಪ್ರತಿಯೊಬ್ಬ ಸೈನಿಕನಿಗೂ ಡೆನ್ಮಾರ್ಕ್ ಸರ್ಕಾರ ಮಾಸಿಕ ಸಂಬಳ ಮತ್ತು ದಿನಭತ್ಯೆಯನ್ನು ನೀಡುತ್ತದೆ. ಆದರೆ ರಾಜಕುಮಾರಿ ಇಸಾಬೆಲ್ಲಾ ಈ ಹಣವನ್ನು ಪಡೆಯಲು ನಿರಾಕರಿಸಿದ್ದಾರೆ. 11 ತಿಂಗಳ ತರಬೇತಿಯ ಅವಧಿಯಲ್ಲಿ ತಮ್ಮ ಸ್ವಂತ ಖರ್ಚು-ವೆಚ್ಚಗಳನ್ನು ಪೋಷಕರ ನೆರವಿನಿಂದಲೇ ನೋಡಿಕೊಳ್ಳುವುದಾಗಿ ಹೇಳುವ ಮೂಲಕ ಸರಳತೆಯನ್ನು ಮೆರೆದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಹಾರ್ಮುಜ್ ಜಲಸಂಧಿ ಒಪ್ಪಂದ ಸನ್ನಿಹಿತ, ಆದರೆ ಯಾವುದಾದರೊಂದು ದೇಶ ತನ್ನ ನಿಲುವಿನಲ್ಲಿ ಸಡಿಲಿಕೆ ತೋರಿಸಬೇಕು: ಇರಾನ್-ಯುಎಸ್

Mojtaba Khamenei ಎಲ್ಲಿದ್ದಾರೆ? ರಹಸ್ಯ ತಾಣದಲ್ಲಿ ಪರಮೋಚ್ಛ ನಾಯಕ; ಅವರ ಉಪಸ್ಥಿತಿಯೇ ನಮ್ಮ ಧೈರ್ಯ ಎಂದ Iran ಅಧ್ಯಕ್ಷ

ಅಸಮಾಧಾನಿತ ಶಾಸಕರ ಸಮಸ್ಯೆ ಆಲಿಸಿದ್ದೇವೆ, ನಾವೆಲ್ಲಾ ಒಂದು ಕುಟುಂಬ- ಸುರ್ಜೆವಾಲ; ಸಚಿವ ಸ್ಥಾನ ಹೊರತಾಗಿ ಬೇರೆ ಏನು ಕೊಟ್ಟರೂ ಒಪ್ಪಲ್ಲ- ಎಂ ಕೃಷ್ಣಪ್ಪ

Sheikh Hasina: ವಾಪಸ್ ಬಾಂಗ್ಲಾದೇಶಕ್ಕೆ ಹೋಗಲು ನಿರ್ಧರಿಸಿದ್ದೇನೆ; ನನ್ನನ್ನು ಕೊಲ್ಲಲಿ, ಜೈಲಿಗೆ ಹಾಕಲಿ - ಶೇಖ್ ಹಸೀನಾ

ಸಚಿವ ಸ್ಥಾನ ಕೋಟಿ ಕೋಟಿಗೆ ಹರಾಜು: BJPಯಿಂದ ಆಡಿಯೋ ಬಿಡುಗಡೆ; ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ