ಇರಾನ್ ವಿದೇಶಾಂಗ ಸಚಿವ ಸೆಯ್ಯದ್ ಅಬ್ಬಾಸ್ ಅರಾಘ್ಚಿ 
ವಿದೇಶ

ಅಮೆರಿಕದ ಜೊತೆ ನೇರ ಮಾತುಕತೆ ಇಲ್ಲ: ಇರಾನ್ ವಿದೇಶಾಂಗ ಸಚಿವ ಅರಾಘ್ಚಿ ಸ್ಪಷ್ಟನೆ

ಜೂನ್‌ನಲ್ಲಿ ಉಭಯ ದೇಶಗಳ ನಡುವೆ ಸಹಿ ಮಾಡಲಾದ 14 ಅಂಶಗಳ ಒಪ್ಪಂದವನ್ನು ಅಮೆರಿಕ ಉಲ್ಲಂಘಿಸಿರುವುದಕ್ಕೆ ಪರಿಹಾರ ನೀಡುವವರೆಗೆ ನೇರ ಮಾತುಕತೆಗೆ ಮರಳಲು ಇರಾನ್ ಸಿದ್ಧವಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಟೆಹ್ರಾನ್: ಇರಾನ್ ಸದ್ಯ ಅಮೆರಿಕದೊಂದಿಗೆ ಯಾವುದೇ ನೇರ ಮಾತುಕತೆ ನಡೆಸುತ್ತಿಲ್ಲ. ಆದರೆ, ಉಭಯ ದೇಶಗಳ ನಡುವೆ ಮಧ್ಯವರ್ತಿಗಳ ಮೂಲಕ ಸಂದೇಶಗಳ ವಿನಿಮಯ ನಡೆಯುತ್ತಿದೆ ಎಂದು ಇರಾನ್ ವಿದೇಶಾಂಗ ಸಚಿವ ಸೆಯ್ಯದ್ ಅಬ್ಬಾಸ್ ಅರಾಘ್ಚಿ ಭಾನುವಾರ ತಿಳಿಸಿದ್ದಾರೆ.

ಇರಾನ್‌ನ ಸರ್ಕಾರಿ ಮಾಧ್ಯಮ IRIB ವರದಿ ಪ್ರಕಾರ, ಟೆಹ್ರಾನ್ ಮತ್ತು ವಾಷಿಂಗ್ಟನ್ ನಡುವೆ ಮತ್ತೆ ಮಾತುಕತೆ ಆರಂಭಿಸಲು ಹಲವು ದೇಶಗಳು ಪರಿಸ್ಥಿತಿ ಸೃಷ್ಟಿಸುವ ಪ್ರಯತ್ನದಲ್ಲಿವೆ. ನಾವು ಸದ್ಯ ಅಮೆರಿಕದೊಂದಿಗೆ ಮಾತುಕತೆ ನಡೆಸುತ್ತಿಲ್ಲ. ಮಧ್ಯವರ್ತಿಗಳ ಮೂಲಕ ಸಂದೇಶಗಳ ವಿನಿಮಯ ನಡೆಯುತ್ತಿದೆ” ಎಂದು ಅರಾಘ್ಚಿ ತಿಳಿಸಿದ್ದಾರೆ.

ಮಾತುಕತೆ ಪುನರಾರಂಭಿಸಲು ಕೆಲವು ಮಧ್ಯವರ್ತಿ ರಾಷ್ಟ್ರಗಳು ಪ್ರಯತ್ನಿಸುತ್ತಿವೆ. ಆದರೆ, ಜೂನ್‌ನಲ್ಲಿ ಉಭಯ ದೇಶಗಳ ನಡುವೆ ಸಹಿ ಮಾಡಲಾದ 14 ಅಂಶಗಳ ಒಪ್ಪಂದವನ್ನು ಅಮೆರಿಕ ಉಲ್ಲಂಘಿಸಿರುವುದಕ್ಕೆ ಪರಿಹಾರ ನೀಡುವವರೆಗೆ ನೇರ ಮಾತುಕತೆಗೆ ಮರಳಲು ಇರಾನ್ ಸಿದ್ಧವಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

“ಕೆಲವು ಮಧ್ಯವರ್ತಿ ರಾಷ್ಟ್ರಗಳು ಮಾತುಕತೆಗೆ ಮತ್ತೆ ವೇದಿಕೆ ಸಿದ್ಧಪಡಿಸಲು ಪ್ರಯತ್ನಿಸುತ್ತಿವೆ. ಆದರೆ, ಅಮೆರಿಕ ಒಪ್ಪಂದವನ್ನು ಉಲ್ಲಂಘಿಸಿರುವುದನ್ನು ನಿಲ್ಲಿಸಿ, ಈಗಾಗಲೇ ನಡೆದ ಉಲ್ಲಂಘನೆಗಳಿಗೆ ಪರಿಹಾರ ನೀಡುವವರೆಗೆ ಮಾತುಕತೆ ಪುನರಾರಂಭಿಸುವ ಸಾಧ್ಯತೆ ಇಲ್ಲ,” ಎಂದು ಇರಾನ್ ವಿದೇಶಾಂಗ ಸಚಿವರು ಹೇಳಿದ್ದಾರೆ.

ಹೋರ್ಮುಜ್ ಜಲಸಂಧಿ ತೆರೆಯಲು ಹೊಸ ಷರತ್ತು

ಇದಕ್ಕೂ ಮುನ್ನ ಶನಿವಾರ, ಹೋರ್ಮುಜ್ ಜಲಸಂಧಿಯಲ್ಲಿ ಹಡಗುಗಳ ಸಂಚಾರ ನಿರ್ವಹಣೆಗೆ ಕಾನೂನು ವ್ಯವಸ್ಥೆ ರೂಪಿಸುವ ಕುರಿತು ಒಮಾನ್‌ನೊಂದಿಗೆ ಒಪ್ಪಂದ ಬಹುತೇಕ ಅಂತಿಮ ಹಂತದಲ್ಲಿದೆ ಎಂದು ಅರಾಘ್ಚಿ ತಿಳಿಸಿದ್ದರು.

ಆದರೆ, ಜಗತ್ತಿನ ಪ್ರಮುಖ ತೈಲ ಸಾಗಣೆ ಮಾರ್ಗಗಳಲ್ಲಿ ಒಂದಾಗಿರುವ ಹೋರ್ಮುಜ್ ಜಲಸಂಧಿಯನ್ನು ಮತ್ತೆ ತೆರೆಯಲು ಹೆಚ್ಚುವರಿ ಷರತ್ತುಗಳಿವೆ. ಅದರಲ್ಲೂ ಅಮೆರಿಕವು ಒಪ್ಪಂದ ಉಲ್ಲಂಘಿಸಿರುವುದಕ್ಕೆ ಪರಿಹಾರ ನೀಡಬೇಕು ಎಂದು ಇರಾನ್ ಒತ್ತಾಯಿಸಿದೆ.

ಇರಾನ್ ಅಧ್ಯಕ್ಷರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅರಾಘ್ಚಿ, ಹೋರ್ಮುಜ್ ಜಲಸಂಧಿಯ ಮೂಲಕ ಹಡಗುಗಳ ಸಂಚಾರಕ್ಕೆ ಹೊಸ ಮಾರ್ಗ ನಿಗದಿಪಡಿಸುವ ಕುರಿತು ಒಮಾನ್‌ನೊಂದಿಗೆ ಮಾತುಕತೆ ನಡೆಯುತ್ತಿದೆ. ಹೋರ್ಮುಜ್ ಜಲಸಂಧಿಯ ಕಾನೂನು ವ್ಯವಸ್ಥೆ, ನಿರ್ವಹಣೆ ಮತ್ತು ಹಡಗುಗಳ ಸಂಚಾರ ಮಾರ್ಗ ನಿಗದಿ ಕುರಿತು ಒಮಾನ್‌ನೊಂದಿಗೆ ಮಾತುಕತೆ ನಡೆಯುತ್ತಿದೆ. ನಾವು ಒಪ್ಪಂದಕ್ಕೆ ಬಹಳ ಹತ್ತಿರದಲ್ಲಿದ್ದೇವೆ” ಎಂದು ಅವರು ಹೇಳಿದ್ದಾರೆ.

ಆದರೆ, ಹೋರ್ಮುಜ್ ಜಲಸಂಧಿಯನ್ನು ತೆರೆಯುವುದು ಅಮೆರಿಕದ ವಿರುದ್ಧದ ಪರಿಹಾರ ಸೇರಿದಂತೆ ಹಲವು ಷರತ್ತುಗಳಿಗೆ ಒಳಪಟ್ಟಿರುತ್ತದೆ ಎಂದು ಅರಾಘ್ಚಿ ಹೇಳಿದ್ದಾರೆ.

ಹಳೆಯ ಸಂಚಾರ ಮಾರ್ಗಕ್ಕೆ ಇರಾನ್ ವಿರೋಧ

ಈ ಹಿಂದೆ ಹೋರ್ಮುಜ್ ಜಲಸಂಧಿಯಲ್ಲಿ ಬಳಸಲಾಗುತ್ತಿದ್ದ ಸಂಚಾರ ವಿಭಜನಾ ಯೋಜನೆ (TSS) ಅನ್ನು ಇರಾನ್ ಈಗ ಒಪ್ಪುವುದಿಲ್ಲ ಎಂದು ಅರಾಘ್ಚಿ ಹೇಳಿದ್ದಾರೆ.

“ಹಿಂದೆ ಹಡಗುಗಳ ಸಂಚಾರಕ್ಕಾಗಿ ಒಂದು TSS ಅಥವಾ ಮಾರ್ಗವಿತ್ತು. ಆದರೆ, ಅದು ಇನ್ನು ಮುಂದೆ ಸ್ವೀಕಾರಾರ್ಹವಲ್ಲ ಎಂದು ಇರಾನ್ ಪರಿಗಣಿಸಿದೆ. ಹೀಗಾಗಿ ಹೊಸ TSS ರೂಪಿಸಬೇಕಾಗಿದೆ. ಇದರಲ್ಲಿ ಹಲವು ತಾಂತ್ರಿಕ ಮತ್ತು ಕಾನೂನು ಸಂಕೀರ್ಣತೆಗಳಿವೆ” ಎಂದು ಅವರು ಹೇಳಿದ್ದಾರೆ.

ಒಮನ್-ಇರಾನ್ ಮಾತುಕತೆಯಲ್ಲಿ ಪ್ರಗತಿ

ಇರಾನ್ ವಿದೇಶಾಂಗ ಸಚಿವರ ಹೇಳಿಕೆ ಬೆನ್ನಲ್ಲೇ, ಇರಾನ್ ಮತ್ತು ಒಮಾನ್ ನಡುವಿನ ಮಾತುಕತೆಯಲ್ಲಿ ಪ್ರಗತಿ ಕಂಡುಬಂದಿದೆ ಎಂದು ಅಮೆರಿಕದ ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದ್ದಾರೆ. ಈ ಮಾತುಕತೆ ಯಶಸ್ವಿಯಾದರೆ ಆಯಕಟ್ಟಿನ ಹೋರ್ಮುಜ್ ಜಲಸಂಧಿಯನ್ನು ಮತ್ತೆ ತೆರೆಯಲು ಹಾಗೂ ಐದು ತಿಂಗಳ ಸಂಘರ್ಷದಿಂದ ಸ್ಥಗಿತಗೊಂಡಿರುವ ತೈಲ ರಫ್ತು ಪುನರಾರಂಭಿಸಲು ದಾರಿ ಸುಗಮವಾಗಬಹುದು ಎಂದು ಅವರು ಹೇಳಿದ್ದಾರೆ.

ರಾಯಿಟರ್ಸ್ ವರದಿ ಪ್ರಕಾರ, ಹೆಸರು ಬಹಿರಂಗಪಡಿಸದ ಅಮೆರಿಕದ ಅಧಿಕಾರಿಯೊಬ್ಬರು ಇರಾನ್ ಮತ್ತು ಒಮಾನ್ ನಡುವೆ ಶೀಘ್ರದಲ್ಲೇ ಒಪ್ಪಂದವಾಗುವ ನಿರೀಕ್ಷೆಯಿದೆ ಎಂದು ತಿಳಿಸಿದ್ದಾರೆ.

“ಹೋರ್ಮುಜ್ ಜಲಸಂಧಿ ವಿಚಾರದಲ್ಲಿ ಒಮಾನ್ ಮತ್ತು ಇರಾನ್ ನಡುವೆ ಪ್ರಗತಿ ಕಂಡುಬಂದಿದೆ. ಶೀಘ್ರದಲ್ಲೇ ಒಪ್ಪಂದವಾಗುವ ನಿರೀಕ್ಷೆಯಿದೆ. ಯಾವುದೇ ಅಡೆತಡೆಯಿಲ್ಲದೆ ವಾಣಿಜ್ಯ ಹಡಗುಗಳ ಸಂಚಾರ ಪುನರಾರಂಭಿಸುವ ಒಪ್ಪಂದ ಘೋಷಣೆಯಾದ ಬಳಿಕ, ಅಮೆರಿಕ ಇರಾನ್ ಬಂದರುಗಳ ಮೇಲಿನ ನಿರ್ಬಂಧವನ್ನು ತೆರವುಗೊಳಿಸಲಿದೆ,” ಎಂದು ಅಮೆರಿಕದ ಅಧಿಕಾರಿ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಾರಾಮತಿಯಲ್ಲಿ ಮತ್ತೆ ತರಬೇತಿ ವಿಮಾನ ಪತನ; ಅಜಿತ್ ಪವಾರ್ ದುರಂತದ ಬಳಿಕ 2ನೇ ಘಟನೆ

ಇರಾನ್ ಯುದ್ಧದ ಎಫೆಕ್ಟ್: ಅಮೆರಿಕದ ಶಸ್ತ್ರಾಸ್ತ್ರ ದಾಸ್ತಾನು ಖಾಲಿ? ರಕ್ಷಣಾ ಕಂಪನಿಗಳಿಗೆ ಶಸ್ತ್ರಾಸ್ತ್ರ ಉತ್ಪಾದನೆ ಹೆಚ್ಚಿಸಲು ಪೆಂಟಗನ್ ಸೂಚನೆ

ಕೋಮಾ ಸ್ಥಿತಿಯಲ್ಲಿ ಇರಾನ್‌ ಸರ್ವೋಚ್ಚ ನಾಯಕ ಮೊಜ್ತಾಬಾ ಖಮೇನಿ? ವದಂತಿ ಬೆನ್ನಲ್ಲೇ ದಿಢೀರ್ Video ಬಿಡುಗಡೆ ಮಾಡಿದ ಇರಾನ್; ಸತ್ಯ ಮುಚ್ಚಿಡುವ ಯತ್ನವೇ..?

ಜಾರ್ಖಂಡ್ JSSC 2024 ಪ್ರಶ್ನೆಪತ್ರಿಕೆ ಸೋರಿಕೆ: 120 ಉತ್ತರಗಳು, WhatsApp ಮೂಲಕ ಸೋರಿಕೆ; CID ಸ್ಫೋಟಕ ವರದಿ

ಇಡೀ ದೇಹಕ್ಕೆ ಹರಡಿದ cancer, Joe Biden ಆರೋಗ್ಯ ಮತ್ತಷ್ಟು ಕ್ಷೀಣ; BBC ಸಂದರ್ಶನದಲ್ಲಿ ಪುತ್ರ ಹಂಟರ್ ಕಳವಳ