ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ 
ವಿದೇಶ

Hormuz ಜಲಸಂಧಿ ಬಿಕ್ಕಟ್ಟು: Iran ಮೇಲೆ ಅಮೆರಿಕಾ 'ಆರ್ಥಿಕ ದಿಗ್ಬಂಧನ ಅಸ್ತ್ರ' ಪ್ರಯೋಗ; ಇದು ‘ಚದುರಂಗದ ಆಟ’ ಎಂದ Trump..!

ನಾವು ಇದನ್ನು ನಿಧಾನವಾಗಿ ನಡೆಸುತ್ತಿದ್ದೇವೆ. ಅವರೊಂದಿಗೆ ಅರೆ-ಮಾತುಕತೆ ಮಾತ್ರ ನಡೆಸುತ್ತಿದ್ದೇವೆ. ಭಾರೀ ಹಣದುಬ್ಬರ ಹಾಗೂ ಹಣದ ಕೊರತೆಯಿಂದ ಇರಾನ್‌ ಎದುರಿಸುತ್ತಿರುವ ಪರಿಸ್ಥಿತಿಯನ್ನು ನಾವು ಗಮನಿಸುತ್ತಿದ್ದೇವೆ.

ವಾಷಿಂಗ್ಟನ್‌: ಇರಾನ್ ವಿರುದ್ಧದ ಬಿಕ್ಕಟ್ಟನ್ನು ಬಗೆಹರಿಸಲು ಅಮೆರಿಕವು ಸದ್ಯ ಅತ್ಯಂತ ಗೌಪ್ಯ ಹಾಗೂ ನಿಗೂಢ ತಂತ್ರವನ್ನು ಅನುಸರಿಸುತ್ತಿದೆ.

ಈ ಕುರಿತು ಮಾಧ್ಯಮವೊಂದಕ್ಕೆ ನೀಡಿರುವ ಸಂದೇಶದಲ್ಲಿ ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್, "ನಾವು ಇರಾನ್ ಜೊತೆ ಸದ್ಯಕ್ಕೆ 'ಲೋ-ಕೇಯಿಂಗ್' (ಗಮನ ಸೆಳೆಯದಂತೆ ರಹಸ್ಯವಾಗಿ) ಮಾತುಕತೆ ನಡೆಸುತ್ತಿದ್ದೇವೆ. ಈ ಇಡೀ ಜಾಗತಿಕ ರಾಜಕೀಯ ವಿದ್ಯಮಾನವು ಒಂದು ಚೆಸ್ ಆಟದಂತಿದೆ. ಕೊನೆಗೆ ಎಲ್ಲವೂ ಸರಿಯಾಗಲಿದೆ," ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಫೆಬ್ರವರಿ 28, 2026 ರಂದು ಆರಂಭವಾದ ಯುಎಸ್-ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧದ ಬಳಿಕ, ಜಗತ್ತಿನ ಅತ್ಯಂತ ಪ್ರಮುಖ ಕಡಲ ಮಾರ್ಗವಾದ 'ಹಾರ್ಮುಜ್ ಜಲಸಂಧಿ' (Strait of Hormuz) ಸಂಪೂರ್ಣವಾಗಿ ಮುಚ್ಚಲ್ಪಟ್ಟಿದೆ. ಈ ಹಿನ್ನೆಲೆಯಲ್ಲಿ ಟ್ರಂಪ್ ಅವರ ಈ ಹೇಳಿಕೆ ಜಾಗತಿಕ ಮಟ್ಟದಲ್ಲಿ ಭಾರಿ ಕುತೂಹಲ ಮೂಡಿಸಿದೆ.

ಇರಾನ್‌ ಜಲಸಂಧಿ ತೆರೆಯಲು ಕಠಿಣ ಷರತ್ತುಗಳನ್ನು ಮುಂದಿಟ್ಟಿರುವ ಹಿನ್ನೆಲೆಯಲ್ಲಿ ಅಮೆರಿಕ ಮಾತುಕತೆಯನ್ನು ನಿಧಾನಗೊಳಿಸಿದೆ ಎಂದು ಟ್ರಂಪ್‌ ಹೇಳಿದ್ದಾರೆ.

“ನಾವು ಇದನ್ನು ನಿಧಾನವಾಗಿ ನಡೆಸುತ್ತಿದ್ದೇವೆ. ಅವರೊಂದಿಗೆ ಅರೆ-ಮಾತುಕತೆ ಮಾತ್ರ ನಡೆಸುತ್ತಿದ್ದೇವೆ. ಭಾರೀ ಹಣದುಬ್ಬರ ಹಾಗೂ ಹಣದ ಕೊರತೆಯಿಂದ ಇರಾನ್‌ ಎದುರಿಸುತ್ತಿರುವ ಪರಿಸ್ಥಿತಿಯನ್ನು ನಾವು ಗಮನಿಸುತ್ತಿದ್ದೇವೆ,” ಎಂದು ತಿಳಿಸಿದ್ದಾರೆ.

ಕೇವಲ ಒಂದು ವಾರದ ಹಿಂದೆ ಇರಾನ್‌ ವಿರುದ್ಧ ಕಠಿಣ ಎಚ್ಚರಿಕೆಗಳನ್ನು ನೀಡಿದ್ದ ಟ್ರಂಪ್‌, ಇದೀಗ ತುಸು ಸಮಾಧಾನಕರ ಧಾಟಿಯಲ್ಲಿ ಮಾತನಾಡಿದ್ದಾರೆ.

“ಎಲ್ಲವೂ ಸರಿಯಾಗುತ್ತದೆ. ಯಾವಾಗಲೂ ಸರಿಯಾಗುತ್ತದೆ. ಇದು ಚದುರಂಗದ ಆಟದಂತಿದೆ,” ಎಂದು ಅವರು ಹೇಳಿದ್ದಾರೆ.

ಅಮೆರಿಕದ ನೌಕಾ ದಿಗ್ಬಂಧನದಿಂದ ಇರಾನ್‌ ಆಡಳಿತದ ಆರ್ಥಿಕ ಬಿಕ್ಕಟ್ಟು ಮತ್ತಷ್ಟು ತೀವ್ರಗೊಂಡಿದೆ ಎಂದು ಟ್ರಂಪ್‌ ಅಭಿಪ್ರಾಯಪಟ್ಟಿದ್ದಾರೆ.

ಇದಕ್ಕೆ ಪ್ರತಿಯಾಗಿ, ಅಮೆರಿಕ ಮೊದಲು ಇರಾನ್‌ ಬಂದರುಗಳ ಮೇಲಿನ ದಿಗ್ಬಂಧನವನ್ನು ಅಂತ್ಯಗೊಳಿಸಬೇಕು ಮತ್ತು ತೈಲ ನಿರ್ಬಂಧಗಳನ್ನು ತೆರವುಗೊಳಿಸಬೇಕು ಎಂದು ಟೆಹ್ರಾನ್‌ ಒತ್ತಾಯಿಸಿದೆ.

ಇರಾನ್‌ನ ಹೊಸ ಬೇಡಿಕೆಗಳಿಂದ ಪ್ರಮುಖ ಜಲಮಾರ್ಗವನ್ನು ತೆರೆಯುವ ಪ್ರಕ್ರಿಯೆ ಮತ್ತಷ್ಟು ವಿಳಂಬವಾಗುತ್ತಿದ್ದರೂ ಟ್ರಂಪ್‌ ಯಾವುದೇ ಆತಂಕ ಅಥವಾ ಅಸಹನೆಯ ಲಕ್ಷಣ ತೋರಿಸಿಲ್ಲ ಎಂದು ವರದಿ ತಿಳಿಸಿದೆ.

ವಿಶ್ವದ ಒಟ್ಟು ತೈಲ ಮತ್ತು ನೈಸರ್ಗಿಕ ಅನಿಲದ ಸುಮಾರು ಐದನೇ ಒಂದು ಭಾಗ ಸಾಗುವ ಹಾರ್ಮುಜ್‌ ಜಲಸಂಧಿಯು ಫೆಬ್ರವರಿ 28ರಂದು ಅಮೆರಿಕ ಮತ್ತು ಇಸ್ರೇಲ್‌ ಇರಾನ್‌ ವಿರುದ್ಧ ಯುದ್ಧ ಆರಂಭಿಸಿದ ಬಳಿಕ ಬಂದ್‌ ಆಗಿದೆ.

ತೈಲ ಬೆಲೆಗಳು ಇಳಿಕೆಯಾಗುತ್ತಿರುವುದು ಮತ್ತು ಯುದ್ಧದಿಂದ ಅಮೆರಿಕದ ಗ್ರಾಹಕರಿಗೆ ಉಂಟಾಗುತ್ತಿರುವ ಹೊರೆ ಕಡಿಮೆಯಾಗಿರುವುದರಿಂದ ಕಾದುನೋಡುವ ನೀತಿ ಅನುಸರಿಸುವುದು ಸುಲಭವಾಗಿದೆ ಎಂದು ಟ್ರಂಪ್‌ ಹೇಳಿದ್ದಾರೆ.

ಅಮೆರಿಕದೊಂದಿಗೆ ನೇರ ಮಾತುಕತೆ ಇಲ್ಲ: ಇರಾನ್‌

ಇದೇ ವೇಳೆ ಅಮೆರಿಕದೊಂದಿಗೆ ನೇರ ಮಾತುಕತೆ ನಡೆಯುತ್ತಿದೆ ಎಂಬ ವರದಿಗಳನ್ನು ಇರಾನ್‌ ತಳ್ಳಿಹಾಕಿದೆ.

ಇರಾನ್‌ ವಿದೇಶಾಂಗ ಸಚಿವ ಅಬ್ಬಾಸ್‌ ಅರಾಘ್ಚಿ ಭಾನುವಾರ ಮಾತನಾಡಿ, ಎರಡೂ ದೇಶಗಳ ನಡುವೆ ನೇರ ಮಾತುಕತೆ ನಡೆಯುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಜೂನ್‌ನಲ್ಲಿ ನಡೆದ ಮಧ್ಯಂತರ ಒಪ್ಪಂದದಡಿ ಅಮೆರಿಕ ತನ್ನ ಬದ್ಧತೆಗಳನ್ನು ಮೊದಲು ಈಡೇರಿಸಬೇಕು. ಆ ಬಳಿಕವಷ್ಟೇ ನೇರ ಮಾತುಕತೆ ಪುನರಾರಂಭಿಸಲು ಸಾಧ್ಯ ಎಂದು ಟೆಹ್ರಾನ್‌ ಒತ್ತಾಯಿಸುತ್ತಿದೆ.

ಆದರೆ, ಅಮೆರಿಕ ಮತ್ತು ಇರಾನ್‌ ನಡುವೆ ಮಧ್ಯವರ್ತಿಗಳ ಮೂಲಕ ಸಂದೇಶಗಳ ವಿನಿಮಯ ನಡೆಯುತ್ತಿದೆ ಎಂದು ಅರಾಘ್ಚಿ ತಿಳಿಸಿದ್ದಾರೆ.

ಇರಾನ್‌ನ ಪ್ರಮುಖ ಬೇಡಿಕೆಗಳೇನು?

ಎರಡು ದೇಶಗಳ ನಡುವೆ ನಡೆದ ಒಪ್ಪಂದದ ಪ್ರಕಾರ, ಇರಾನ್‌ ತನ್ನ ಮೇಲೆ ನಡೆದ ವ್ಯಾಪಕ ದಾಳಿಗಳಿಗೆ ಅಮೆರಿಕದಿಂದ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದೆ.

ಇದರ ಜೊತೆಗೆ ತನ್ನ ಮೇಲಿನ ಎಲ್ಲಾ ದಿಗ್ಬಂಧನಗಳು ಮತ್ತು ನಿರ್ಬಂಧಗಳನ್ನು ತೆರವುಗೊಳಿಸಬೇಕು, ಇರಾನ್‌ ಹಾಗೂ ಲೆಬನಾನ್‌, ಪ್ಯಾಲೆಸ್ಟೈನ್‌, ಯೆಮನ್‌ ಮತ್ತು ಇರಾಕ್‌ನಲ್ಲಿರುವ ತನ್ನ ಮಿತ್ರರ ವಿರುದ್ಧದ ಅಮೆರಿಕದ ಆಕ್ರಮಣವನ್ನು ನಿಲ್ಲಿಸಬೇಕು ಎಂದು ಟೆಹ್ರಾನ್‌ ಬೇಡಿಕೆ ಇಟ್ಟಿದೆ.

ಹಾರ್ಮುಜ್‌ ಜಲಸಂಧಿ ತೆರೆಯುವ ವಿಚಾರದಲ್ಲಿ ಅಮೆರಿಕ-ಇರಾನ್‌ ನಡುವೆ ಭಿನ್ನಾಭಿಪ್ರಾಯ ಮುಂದುವರಿದಿರುವ ಹಿನ್ನೆಲೆಯಲ್ಲಿ, ಮುಂದಿನ ದಿನಗಳಲ್ಲಿ ಉಭಯ ದೇಶಗಳ ನಡುವಿನ ಮಾತುಕತೆ ಯಾವ ದಿಕ್ಕಿನಲ್ಲಿ ಸಾಗಲಿದೆ ಎಂಬುದು ಕುತೂಹಲ ಮೂಡಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಕಳ್ಳಿ, ಕಳ್ಳಿ' ಅಂತಾ ಘೋಷಣೆ ಕೂಗಿ ಮಮತಾ ಬ್ಯಾನರ್ಜಿ ಕಾರಿನ ಮೇಲೆ ಕಲ್ಲು ತೂರಾಟ, ಕೆಸರು ಎರಚಿ ಆಕ್ರೋಶ! ಭಯಾನಕ Video

ಸಂಪುಟ ವಿಸ್ತರಣೆ ಬಿಕ್ಕಟ್ಟು ಶಮನಕ್ಕೆ ಸಿಎಂ ಡಿಕೆ.ಶಿವಕುಮಾರ್ ದೆಹಲಿಗೆ ದೌಡು: ಹೈಕಮಾಂಡ್‌ ಜೊತೆ ಮಹತ್ವದ ಚರ್ಚೆ..!

ಬಿಡದಿ ಟೌನ್‌ಶಿಪ್‌ ಯೋಜನೆ ಬಗ್ಗೆ BJP-JDS ಅಪಪ್ರಚಾರ, ರೈತರ ಭೂಮಿ ಬಲವಂತವಾಗಿ ಪಡೆಯಲ್ಲ: ಸಚಿವ ಯತೀಂದ್ರ

ಖಾತೆ ಹಂಚಿಕೆಗೂ ಮುನ್ನ ಸಚಿವ ನಾಗೇಂದ್ರಗೆ ಸಂಕಷ್ಟ! ವಿಶೇಷ ನ್ಯಾಯಾಲಯದ ಜಾಮೀನು ಷರತ್ತು ಉಲ್ಲಂಘಿಸಿದ ಆರೋಪ

ಮುಂಬೈ: ಬಾಲಿವುಡ್ ನಟಿಯ ಮೇಲೆ ಅತ್ಯಾಚಾರ ಆರೋಪ; 73 ವರ್ಷದ ಖ್ಯಾತ ಸಿನಿಮಾ ಡೈರೆಕ್ಟರ್ ಬಂಧನ!