ಡೊನಾಲ್ಡ್‌ ಟ್ರಂಪ್‌ 
ವಿದೇಶ

‘ನಿಮಗೆ ಆದ ಹಾನಿಗೆ ಪರಿಹಾರ ಬೇಕಾ? ಹಾಗಾದರೆ ನಮ್ಮ ಸಾವುಗಳಿಗೂ ಹಣ ಕೊಡಿ’: ಇರಾನ್‌ ಪರಿಹಾರ ಬೇಡಿಕೆಗೆ ಟ್ರಂಪ್‌ ತಿರುಗೇಟು

ಇರಾನ್‌ ತನ್ನ ಅಣ್ವಸ್ತ್ರ ಯೋಜನೆಯ ಮಹತ್ವಾಕಾಂಕ್ಷೆಯನ್ನು ತ್ಯಜಿಸಬೇಕಾಗಿರುವುದರಿಂದಲೇ ಸಂಘರ್ಷ ಆರಂಭವಾಯಿತು. ಹೀಗಾಗಿ ಇರಾನ್‌ನ ಪರಿಹಾರ ಬೇಡಿಕೆಗೆ ತಾವೂ ಕೂಡ ಪ್ರತಿಬೇಡಿಕೆ ಸಲ್ಲಿಸುವುದಾಗಿ ತಿಳಿಸಿದ್ದಾರೆ.

ವಾಷಿಂಗ್ಟನ್‌: ಇತ್ತೀಚಿನ ಐದು ತಿಂಗಳ ಸೇನಾ ಸಂಘರ್ಷದಲ್ಲಿ ಉಂಟಾದ ಹಾನಿಗೆ ಪರಿಹಾರ ನೀಡಬೇಕು ಎಂಬ ಇರಾನ್‌ನ ಬೇಡಿಕೆಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ತಿರಸ್ಕರಿಸಿದ್ದಾರೆ.

ಬದಲಾಗಿ, ಇರಾನ್‌ ಹಾಗೂ ಅದರ ಪ್ರಾದೇಶಿಕ ಚಟುವಟಿಕೆಗಳಿಂದ ಉಂಟಾದ ಸಾವು-ನೋವುಗಳಿಗೆ ಅಮೆರಿಕದ ಪರವಾಗಿ ಪರಿಹಾರ ನೀಡಬೇಕು ಎಂದು ಪ್ರತಿದಾವೆ ಮುಂದಿಟ್ಟಿದ್ದಾರೆ.

ಈ ಕುರಿತ ತಮ್ಮ ಟ್ರೂತ್‌ ಸೋಷಿಯಲ್‌ ಖಾತೆಯಲ್ಲಿ ಈ ಕುರಿತು ಪೋಸ್ಟ್‌ ಮಾಡಿರುವ ಅವರು, ಸಂಘರ್ಷದ ವೇಳೆ ಉಂಟಾದ ಹಾನಿಗೆ ಇರಾನ್‌ ಪ್ರತಿನಿಧಿಗಳು ಪರಿಹಾರ ಕೇಳುತ್ತಿದ್ದಾರೆ. ಕಳೆದ ಐದು ತಿಂಗಳ ಸೇನಾ ಸಂಘರ್ಷದಲ್ಲಿ ತಮಗಾದ ಹಾನಿಗೆ ಪರಿಹಾರ ನೀಡುವಂತೆ ಇರಾನ್‌ ಪ್ರತಿನಿಧಿಗಳು ಕೇಳುತ್ತಿದ್ದಾರೆ. ಇದು ಆಸಕ್ತಿದಾಯಕ ಬೇಡಿಕೆ.

ಇರಾನ್‌ ತನ್ನ ಅಣ್ವಸ್ತ್ರ ಯೋಜನೆಯ ಮಹತ್ವಾಕಾಂಕ್ಷೆಯನ್ನು ತ್ಯಜಿಸಬೇಕಾಗಿರುವುದರಿಂದಲೇ ಸಂಘರ್ಷ ಆರಂಭವಾಯಿತು. ಹೀಗಾಗಿ ಇರಾನ್‌ನ ಪರಿಹಾರ ಬೇಡಿಕೆಗೆ ತಾವೂ ಕೂಡ ಪ್ರತಿಬೇಡಿಕೆ ಸಲ್ಲಿಸುವುದಾಗಿ ತಿಳಿಸಿದ್ದಾರೆ.

ಇರಾನ್‌ ನಡೆಸಿದ ದಾಳಿಗಳು ಹಾಗೂ ಸಂಘರ್ಷಗಳಿಂದ ಮೃತಪಟ್ಟ ಮತ್ತು ಗಂಭೀರವಾಗಿ ಗಾಯಗೊಂಡ ಜನರಿಗೆ ಇರಾನ್‌ ಪರಿಹಾರ ನೀಡಬೇಕು ಎಂದು ಟ್ರಂಪ್‌ ಹೇಳಿದ್ದಾರೆ.

ರಸ್ತೆ ಬದಿಯ ಬಾಂಬ್‌ ದಾಳಿಗಳು ಸೇರಿದಂತೆ ಹಲವು ಸೇನಾ ಕಾರ್ಯಾಚರಣೆಗಳಿಂದ ಸಂಭವಿಸಿದ ಸಾವು-ನೋವುಗಳನ್ನೂ ಅವರು ಉಲ್ಲೇಖಿಸಿದ್ದಾರೆ.

ಇರಾನ್‌ನ ಮಾಜಿ ಸೇನಾ ಕಮಾಂಡರ್‌ ಖಾಸಿಂ ಸುಲೇಮಾನಿ ಅವರ ನಾಯಕತ್ವದ ಅವಧಿಯಲ್ಲಿ ನಡೆದ ಸಂಘರ್ಷಗಳಿಂದ ಸಾವಿರಾರು ಮಂದಿ ಮೃತಪಟ್ಟಿದ್ದಾರೆ ಎಂದು ಟ್ರಂಪ್‌ ಆರೋಪಿಸಿದ್ದಾರೆ.

ಅಮೆರಿಕದ ಯುಎಸ್‌ಎಸ್‌ ಕೋಲ್‌ ನೌಕಾಪಡೆ ಹಡಗಿನ ಮೇಲಿನ ದಾಳಿಯಲ್ಲಿ ಮೃತಪಟ್ಟವರ ಕುಟುಂಬಗಳಿಗೂ ಇರಾನ್‌ ಪರಿಹಾರ ನೀಡಬೇಕು. ಯುದ್ಧದಲ್ಲಿ ಮೃತಪಟ್ಟ ಇತರರ ಕುಟುಂಬಗಳಿಗೂ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ಟ್ರಂಪ್‌ ತಮ್ಮ ಪರಿಹಾರದ ಬೇಡಿಕೆಯನ್ನು ಮತ್ತಷ್ಟು ವಿಸ್ತರಿಸಿದ್ದು, ಕಳೆದ 50 ವರ್ಷಗಳಲ್ಲಿ ಇರಾನ್‌ ಸರ್ಕಾರದಿಂದ ಹತ್ಯೆಗೀಡಾಗಿದ್ದಾರೆ ಎಂದು ಆರೋಪಿಸಿರುವ ಪ್ರತಿಭಟನಾಕಾರರ ಕುಟುಂಬಗಳಿಗೂ ಪರಿಹಾರ ನೀಡಬೇಕು ಎಂದು ಹೇಳಿದ್ದಾರೆ.

ಕಳೆದ ಐದು ತಿಂಗಳಲ್ಲಿ 52,000 ಮಂದಿ ಮೃತಪಟ್ಟಿದ್ದಾರೆ ಎಂದೂ ಟ್ರಂಪ್‌ ಹೇಳಿಕೊಂಡಿದ್ದಾರೆ. ಆದರೆ, ಈ ಅಂಕಿ-ಅಂಶಗಳಿಗೆ ತಮ್ಮ ಪೋಸ್ಟ್‌ನಲ್ಲಿ ಯಾವುದೇ ಹೆಚ್ಚುವರಿ ವಿವರ ಅಥವಾ ಪುರಾವೆ ನೀಡಿಲ್ಲ.

ಮುಂದಿನ ಎಲ್ಲ ರಾಜತಾಂತ್ರಿಕ ಮಾತುಕತೆಗಳಲ್ಲಿ ಈ ಬೇಡಿಕೆಗಳನ್ನು ಸೇರಿಸುವಂತೆ ಅಮೆರಿಕದ ಮಾತುಕತೆಗಾರರಿಗೆ ಸೂಚಿಸಿರುವುದಾಗಿ ಟ್ರಂಪ್‌ ತಿಳಿಸಿದ್ದಾರೆ.

ಲೆಬನಾನ್‌, ಸಿರಿಯಾ, ಯೆಮೆನ್‌, ಗಾಜಾ ವಿಚಾರವೂ ಪ್ರಸ್ತಾಪ

ಇತ್ತೀಚಿನ ಅಮೆರಿಕ-ಇರಾನ್‌ ಸಂಘರ್ಷಕ್ಕೆ ಮಾತ್ರ ಸೀಮಿತವಾಗದೆ, ಇರಾನ್‌ ಬೆಂಬಲಿಸಿರುವ ಅಥವಾ ಸಂಪರ್ಕ ಹೊಂದಿರುವ ಸಶಸ್ತ್ರ ಗುಂಪುಗಳು ಮತ್ತು ರಾಜಕೀಯ ಮಿತ್ರರಿರುವ ಹಲವು ದೇಶಗಳಲ್ಲಿನ ಸಾವು-ನೋವು ಹಾಗೂ ಹಾನಿಗೂ ಇರಾನ್‌ ಹೊಣೆಗಾರವಾಗಬೇಕು ಎಂದು ಟ್ರಂಪ್‌ ಹೇಳಿದ್ದಾರೆ.

“ಲೆಬನಾನ್‌, ಸಿರಿಯಾ, ಯೆಮೆನ್‌ ಮತ್ತು ಗಾಜಾದ ಜನರಿಗೆ ಉಂಟಾದ ಸಾವು ಮತ್ತು ಹಾನಿಗೂ ಇರಾನ್‌ ಹೊಣೆಗಾರವಾಗಬೇಕು,” ಎಂದು ಹೇಳಿದ್ದಾರೆ.

ಇದರಿಂದ ಭವಿಷ್ಯದ ಅಮೆರಿಕ-ಇರಾನ್‌ ಮಾತುಕತೆಗಳಲ್ಲಿ ಪರಿಹಾರದ ವಿಚಾರದ ವ್ಯಾಪ್ತಿ ಮತ್ತಷ್ಟು ವಿಸ್ತರಿಸುವ ಸಾಧ್ಯತೆ ಇದೆ.

ಅಮೆರಿಕ-ಇರಾನ್‌ ಮಾತುಕತೆಗೆ ಹೊಸ ಸವಾಲು

ಯುದ್ಧದಿಂದ ಉಂಟಾದ ಹಾನಿಗೆ ಪರಿಹಾರ ನೀಡುವ ವಿಚಾರವು ಇದೀಗ ಅಮೆರಿಕ ಮತ್ತು ಇರಾನ್‌ ನಡುವಿನ ರಾಜತಾಂತ್ರಿಕ ಮಾತುಕತೆಗೆ ಮತ್ತೊಂದು ಅಡ್ಡಿಯಾಗಿ ಪರಿಣಮಿಸುವ ಸಾಧ್ಯತೆ ಇದೆ.

ಸಂಘರ್ಷದಿಂದ ಉಂಟಾದ ಹಾನಿಗೆ ಇರಾನ್‌ ಪರಿಹಾರ ಕೇಳಿದೆ ಎನ್ನಲಾಗುತ್ತಿದ್ದು, ಹಾರ್ಮುಜ್‌ ಜಲಸಂಧಿ, ಅಮೆರಿಕದ ನಿರ್ಬಂಧಗಳು ಹಾಗೂ ಸೇನಾ ಚಟುವಟಿಕೆಗಳಿಗೆ ಸಂಬಂಧಿಸಿದ ಹಲವು ಷರತ್ತುಗಳನ್ನೂ ಇರಾನ್‌ ಮುಂದಿಟ್ಟಿದೆ ಎಂದು ವರದಿಯಾಗಿದೆ.

ಆದರೆ, ಟ್ರಂಪ್‌ ಇರಾನ್‌ನ ನಿಲುವನ್ನು ತಿರಸ್ಕರಿಸಿದ್ದು, ಅಮೆರಿಕವೂ ತನ್ನದೇ ಹಣಕಾಸಿನ ಪರಿಹಾರದ ಬೇಡಿಕೆಗಳನ್ನು ಮುಂದಿಡಲಿದೆ ಎಂದು ಸೂಚಿಸಿದ್ದಾರೆ.

ವಿಶ್ವದ ಅತ್ಯಂತ ಪ್ರಮುಖ ಸಾಗಣೆ ಮಾರ್ಗಗಳಲ್ಲಿ ಒಂದಾದ ಹಾರ್ಮುಜ್‌ ಜಲಸಂಧಿ ವಿಚಾರದಲ್ಲೂ ಅಮೆರಿಕ-ಇರಾನ್‌ ನಡುವೆ ಉದ್ವಿಗ್ನತೆ ಮುಂದುವರಿದಿದೆ.

ವಾಷಿಂಗ್ಟನ್‌ ತನ್ನ ಬೇಡಿಕೆಗಳನ್ನು ಈಡೇರಿಸುವವರೆಗೆ ಜಲಸಂಧಿಯನ್ನು ಮುಚ್ಚಿಯೇ ಇಡುವುದಾಗಿ ಇರಾನ್‌ ಬೆದರಿಕೆ ಹಾಕಿದೆ. ಮತ್ತೊಂದೆಡೆ, ಸಂಘರ್ಷ ಹಾಗೂ ಇರಾನ್‌ನ ಅಣ್ವಸ್ತ್ರ ಕಾರ್ಯಕ್ರಮದ ವಿಚಾರದಲ್ಲಿ ಅಮೆರಿಕವು ಟೆಹ್ರಾನ್‌ ಮೇಲೆ ಒತ್ತಡ ಮುಂದುವರಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಪಶ್ಚಿಮ ಕೊಲಂಬಿಯಾದಲ್ಲಿ 7.4 ತೀವ್ರತೆಯ ಭೂಕಂಪ; ಮೃತರ ಸಂಖ್ಯೆ 100ಕ್ಕೆ ಏರಿಕೆ, ಹಲವರಿಗೆ ಗಾಯ

ಬಿಲಿಯನೇರ್ Gautam Adaniಗೆ ಬಿಗ್ ರಿಲೀಫ್: ಎಲ್ಲಾ ಕ್ರಿಮಿನಲ್ ಪ್ರಕರಣಗಳ ವಜಾಗೊಳಿಸಿದ ಅಮೆರಿಕಾ ನ್ಯಾಯಾಲಯ..!

ಬಿಡದಿ ಹೋರಾಟ ಅರ್ಧಕ್ಕೆ ಸ್ಥಗಿತ; ‘ರೈತರ ನ್ಯಾಯಕ್ಕಾಗಿ ತಾರ್ಕಿಕ ಅಂತ್ಯದವರೆಗೆ ಹೋರಾಟ’ ಎಂದ ದೇವೇಗೌಡ, ಆ.18ಕ್ಕೆ ವಿಧಾನಸೌಧ ಮುತ್ತಿಗೆ..!

ಬರ ಪರಿಹಾರಕ್ಕೆ ಕೇಂದ್ರದಿಂದ ಇನ್ನೂ ಉತ್ತರ ಬಂದಿಲ್ಲ; ಅಗತ್ಯವಿದ್ದರೆ ನ್ಯಾಯಾಲಯದ ಮೊರೆ: DCM ಡಾ. ಪರಮೇಶ್ವರ್‌

JDS ಪಾದಯಾತ್ರೆಯಲ್ಲಿ ರೈತರಿಲ್ಲ, ಪಕ್ಷದ ಕಾರ್ಯಕರ್ತರ ಕರೆತಂದಿದ್ದಾರೆ; ನಿಖಿಲ್‌ ರಾಜಕೀಯ ಭವಿಷ್ಯಕ್ಕಾಗಿ ಹೋರಾಟ: ಡಿಕೆ ಶಿವಕುಮಾರ್‌ ವ್ಯಂಗ್ಯ