ವಿದೇಶ

ರಷ್ಯಾದ ವಿಶ್ವವಿದ್ಯಾಲಯಲ್ಲಿ ಯುವಕನಿಂದ ಚಾಕು ಇರಿತ: ನಾಲ್ವರು ಭಾರತೀಯ ವಿದ್ಯಾರ್ಥಿಗಳು ಸೇರಿದಂತೆ ಹಲವರಿಗೆ ಗಾಯ-Video

ಪ್ರಾಥಮಿಕ ವರದಿಗಳ ಪ್ರಕಾರ, ಬಾಷ್ಕೋರ್ಟೊಸ್ತಾನ್ ರಿಪಬ್ಲಿಕ್ ನ ಉಫಾದಲ್ಲಿರುವ ರಾಜ್ಯ ವೈದ್ಯಕೀಯ ವಿಶ್ವವಿದ್ಯಾಲಯದ ವಸತಿ ನಿಲಯಕ್ಕೆ ಚಾಕುವಿನೊಂದಿಗೆ ಶಸ್ತ್ರಸಜ್ಜಿತವಾಗಿ ಯುವಕನೊಬ್ಬ ಪ್ರವೇಶಿಸಿದ್ದಾನೆ.

ಮಾಸ್ಕೋ: ರಷ್ಯಾದ ಬಾಷ್ಕೋರ್ಟೊಸ್ತಾನ್ ರಿಪಬ್ಲಿಕ್ ವಿಶ್ವವಿದ್ಯಾಲಯವೊಂದರಲ್ಲಿ ಚಾಕುವಿನಿಂದ ಇರಿದು ಯುವಕನೊಬ್ಬ ಹಲ್ಲೆ ಮಾಡಲಾಗಿದ್ದು, ನಾಲ್ವರು ಭಾರತೀಯ ವಿದ್ಯಾರ್ಥಿಗಳು ಸೇರಿದಂತೆ ಕನಿಷ್ಠ ಆರು ಜನರು ಗಾಯಗೊಂಡಿದ್ದಾರೆ ಎಂದು ಇಲ್ಲಿನ ಭಾರತೀಯ ರಾಯಭಾರ ಕಚೇರಿ ತಿಳಿಸಿದೆ.

ಪ್ರಾಥಮಿಕ ವರದಿಗಳ ಪ್ರಕಾರ, ಬಾಷ್ಕೋರ್ಟೊಸ್ತಾನ್ ರಿಪಬ್ಲಿಕ್ ನ ಉಫಾದಲ್ಲಿರುವ ರಾಜ್ಯ ವೈದ್ಯಕೀಯ ವಿಶ್ವವಿದ್ಯಾಲಯದ ವಸತಿ ನಿಲಯಕ್ಕೆ ಚಾಕುವಿನೊಂದಿಗೆ ಶಸ್ತ್ರಸಜ್ಜಿತವಾಗಿ ಯುವಕನೊಬ್ಬ ಪ್ರವೇಶಿಸಿದ್ದಾನೆ.

ಅಲ್ಲಿ ವಾಸಿಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ದಾಳಿ ಮಾಡಿ ಅವರಲ್ಲಿ ಹಲವರನ್ನು ಇರಿದಿದ್ದಾನೆ ಎಂದು ಆಂತರಿಕ ಸಚಿವಾಲಯ ತಿಳಿಸಿದೆ.

ದಾಳಿಕೋರ ಬಂಧನವನ್ನು ವಿರೋಧಿಸಿ ಚಾಕುವಿನಿಂದ ಇರಿದಿದ್ದು, ಈ ಸಮಯದಲ್ಲಿ ಇಬ್ಬರು ಪೊಲೀಸ್ ಅಧಿಕಾರಿಗಳಿಗೆ ಗಾಯಗಳಾಗಿವೆ. ಇದಲ್ಲದೆ, ಶಂಕಿತನು ತನ್ನ ಮೇಲೆ ದೈಹಿಕ ಹಾನಿಯನ್ನು ಸಹ ಮಾಡಿಕೊಂಡಿದ್ದಾನೆ ಎಂದು ಆಂತರಿಕ ಸಚಿವಾಲಯದ ವಕ್ತಾರೆ ಮೇಜರ್ ಜನರಲ್ ಐರಿನಾ ವೋಲ್ಕ್ ಹೇಳಿದ್ದಾರೆ ಎಂದು RTVI.com ವೆಬ್‌ಪೋರ್ಟಲ್ ಉಲ್ಲೇಖಿಸಿದೆ.

ಇದನ್ನು ದುರದೃಷ್ಟಕರ ಘಟನೆ ಎಂದು ಕರೆದ ಭಾರತೀಯ ರಾಯಭಾರ ಕಚೇರಿ, ನಾಲ್ವರು ಭಾರತೀಯ ವಿದ್ಯಾರ್ಥಿಗಳು ಸೇರಿದಂತೆ ಹಲವಾರು ಜನರು ಗಾಯಗೊಂಡಿದ್ದಾರೆ ಎಂದು ಹೇಳಿದೆ.

ರಾಯಭಾರ ಕಚೇರಿಯು ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದೆ. ಕಜಾನ್‌ನಲ್ಲಿರುವ ದೂತಾವಾಸದ ಅಧಿಕಾರಿಗಳು ಗಾಯಗೊಂಡ ವಿದ್ಯಾರ್ಥಿಗಳಿಗೆ ಸಹಾಯ ಮಾಡಲು ಉಫಾಗೆ ತೆರಳುತ್ತಿದ್ದಾರೆ.

ದಾಳಿಯಲ್ಲಿ ಗಾಯಗೊಂಡ ನಾಲ್ವರು ಜನರಿಗೆ ವೈದ್ಯಕೀಯ ಚಿಕಿತ್ಸೆ ನೀಡಲಾಗುತ್ತಿದೆ ಎಂದು ರಷ್ಯಾದ ಫೆಡರಲ್ ಆರೋಗ್ಯ ಸಚಿವಾಲಯ ಹೇಳಿಕೆ ನೀಡಿದೆ. ಒಬ್ಬನ ಸ್ಥಿತಿ ಗಂಭೀರವಾಗಿದ್ದರೆ, ಇತರ ಮೂವರ ಆರೋಗ್ಯ ಸ್ಥಿತಿ ಸಹಜವಾಗಿದೆ.

15 ವರ್ಷದ ಯುವಕ ಎಂದು ಗುರುತಿಸಲಾದ ದಾಳಿಕೋರನನ್ನು ಗಂಭೀರ ಸ್ಥಿತಿಯಲ್ಲಿ ಸ್ಥಳೀಯ ಮಕ್ಕಳ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಬಾಜಾ ಟೆಲಿಗ್ರಾಮ್ ಚಾನೆಲ್ ತಿಳಿಸಿದೆ.

ಮಾಸ್ಕೋದಿಂದ ಸುಮಾರು 1,200 ಕಿ.ಮೀ ಪೂರ್ವಕ್ಕೆ ಬಾಷ್ಕೋರ್ಟೊಸ್ತಾನ್ ರಿಪಬ್ಲಿಕ್ ರಾಜಧಾನಿ ಉಫಾದಲ್ಲಿ ಅಧಿಕಾರಿಗಳು ಘಟನೆಯ ಬಗ್ಗೆ ಉನ್ನತ ಮಟ್ಟದ ತನಿಖೆಯನ್ನು ಪ್ರಾರಂಭಿಸಿದ್ದಾರೆ.

ದಾಳಿಕೋರ ನಿಷೇಧಿತ ನವ-ನಾಜಿ ಸಂಘಟನೆಗೆ ಸೇರಿದವನು ಎಂದು ಬಾಜಾ ಚಾನೆಲ್ ಹೇಳಿಕೊಂಡಿದೆ. ನಿಷೇಧಿತ NS/WP ನಿಯೋನಾಜಿ ಸಂಘಟನೆಗೆ ಸೇರಿದವನಾಗಿದ್ದಾನೆ. ದಾಳಿಯ ಸಮಯದಲ್ಲಿ, ರಾಷ್ಟ್ರೀಯತಾವಾದಿ ಘೋಷಣೆಗಳನ್ನು ಕೂಗಿದ್ದಾನೆ ಎಂದು ಹೇಳಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬಿಜೆಪಿಯಿಂದ ನಮಗೆ ಅಚ್ಛೇ ದಿನ್ ಬರಲೇ ಇಲ್ಲ! ಮೋಹನ್ ಭಾಗವತ್ ಅಚ್ಚರಿಯ ಹೇಳಿಕೆ

ಭಯೋತ್ಪಾದನೆ ಬಗ್ಗೆ ಭಾರತ ಯಾವುದೇ ದ್ವಿಮುಖ ನೀತಿಯನ್ನು ಹೊಂದಿಲ್ಲ, ರಾಜಿಯ ಪ್ರಶ್ನೆಯೇ ಇಲ್ಲ: ಪ್ರಧಾನಿ ಮೋದಿ-Video

ಟಿ20 ವಿಶ್ವಕಪ್ ಇತಿಹಾಸದಲ್ಲೇ ಭಾರತದ ವಿರುದ್ಧ ಹೀನಾಯ ದಾಖಲೆ ಬರೆದ ಸೌರಭ್ ನೇತ್ರವಲ್ಕರ್

'Mr CM, ನಾಟಕ ನಿಲ್ಲಿಸಿ': ಸಂಸದ ತೇಜಸ್ವೀ ಸೂರ್ಯ

ಆಪ್ತ ಮಿತ್ರನಿಗೆ ಕೈ ಕೊಟ್ಟ ಭಾರತ?; ಅಮೆರಿಕಾ ಹೇಳಿದ್ದೇ ನಿಜವಾಯ್ತಾ?

SCROLL FOR NEXT