ಮೃತಪಟ್ಟ ಮಗು 
ವಿದೇಶ

ಶಾರ್ಜಾ: ಅಪಘಾತದಲ್ಲಿ ಮೃತಪಟ್ಟ 2 ವರ್ಷದ ಮಗು; ಕಾರು ಚಾಲಕನಿಗೆ ಕ್ಷಮಾಪಣೆ ನೀಡಿದ ಕೇರಳದ ಪೋಷಕರು

2 ತಿಂಗಳ ಮಗು ಅಲನ್ ರೂಮಿ ಬುಧವಾರ ತಮ್ಮ ತಾಯಿಯೊಂದಿಗೆ ಕೇರಳದಿಂದ ಯುಎಇಗೆ ಹೋಗಿದ್ದ ಸಂದರ್ಭದಲ್ಲಿ ಅಪಘಾತದಲ್ಲಿ ಮೃತಪಟ್ಟಿತು.

ಶಾರ್ಜಾ: ಯುನೈಟೆಡ್ ಅರಬ್ ಎಮಿರೇಟ್ಸ್ ನಲ್ಲಿ ಭಾರತೀಯ ವಲಸಿಗ ದಂಪತಿ ತಮ್ಮ ಮಗುವಿನ ಅಪಘಾತಕ್ಕೆ ಕಾರಣನಾದ ವ್ಯಕ್ತಿಗೆ ಕ್ಷಮಾದಾನ ಮಾಡಿದ ಅಪರೂಪದ ಮನಕಲಕುವ ಸಂಗತಿ ನಡೆದಿದೆ.

ಯುಎಇದಲ್ಲಿ ವಾಸಿಸುತ್ತಿದ್ದ ಭಾರತೀಯ ವಲಸಿಗ ದಂಪತಿ, ಶಾರ್ಜಾದಲ್ಲಿ ಕಳೆದ ವಾರ ತಮ್ಮ ಎರಡು ವರ್ಷದ ಮಗುವಿಗೆ ಆಕಸ್ಮಿಕವಾಗಿ ಕಾರು ಹೊಡೆದು ಮೃತಪಟ್ಟ ಚಾಲಕನನ್ನು ಕಾನೂನು ಶಿಕ್ಷೆಯಿಂದ ಕ್ಷಮಿಸಿದ್ದಾರೆ.

ಅಪಘಾತ ಹೇಗಾಯ್ತು?

2 ತಿಂಗಳ ಮಗು ಅಲನ್ ರೂಮಿ ಬುಧವಾರ ತಮ್ಮ ತಾಯಿಯೊಂದಿಗೆ ಕೇರಳದಿಂದ ಯುಎಇಗೆ ಹೋಗಿದ್ದ ಸಂದರ್ಭದಲ್ಲಿ ಅಪಘಾತದಲ್ಲಿ ಮೃತಪಟ್ಟಿತು. ಅಪಘಾತ ಸಂಜೆ 7 ಗಂಟೆಯ ನಂತರ ನಡೆದಿತ್ತು. ಅಪಘಾತವು ಮುವೈಲೆಹ್ ಪ್ರದೇಶದ ಅವರ ಮನೆಯ ಸುತ್ತಲಿನ ಮರಳು ಪಾರ್ಕಿಂಗ್ ಪ್ರದೇಶದಲ್ಲಿ ಸಂಭವಿಸಿದೆ. ಮಗುವಿನೊಂದಿಗೆ ಇದ್ದ ತಾಯಿ ಕಸವನ್ನು ಹಾಕಲು ಪಾರ್ಕಿಂಗ್ ಲಾಟ್ ಗೆ ಹೋದಾಗ ಅಲನ್ ಆಟವಾಡುತ್ತ ಹಿಂಬಾಲಿಸಿದ್ದಾನೆ. ಪಕ್ಕದ ಮನೆಯವರು ತಮ್ಮ ಕಾರನ್ನು ಹೊರಗೆ ರಿವರ್ಸ್ ತೆಗೆಯುತ್ತಿದ್ದಾಗ ಪುಟ್ಟ ಮಗುವಿಗೆ ಹೊಡೆದಿದೆ.

ಮಗುವನ್ನು ನನಗೆ ಹಿಡಿಯಲಾಗಲಿಲ್ಲ. ಅವನು ಕಾರಿನ ಹತ್ತಿರ ಹೋದನು. ಚಾಲಕನು ಅವನನ್ನು ನೋಡಲಿಲ್ಲ. ಅದು ಕ್ಷಣದೊಳಗೇ ಸಂಭವಿಸಿತು. ಪರಿಸ್ಥಿತಿ ಕೈಮೀರಿ ಹೋಗಿತ್ತು ಎಂದು ತಾಯಿ ಭಯಾನಕ ಕ್ಷಣವನ್ನು ನೆನಪಿಸಿಕೊಂಡು ಹೇಳುತ್ತಾರೆ.

ಕಾರು ಹೊಡೆದ ಚಾಲಕ ಅವರನ್ನು ತಕ್ಷಣದ ಪ್ರೈವೇಟ್ ಹಾಸ್ಪಿಟಲ್ ಗೆ ಕರೆದೊಯ್ದಿದ್ದಾರೆ. ವೈದ್ಯರು ಬಳಿಕ ಮಗುವನ್ನು ಸರ್ಕಾರಿ ಆಸ್ಪತ್ರೆಗೆ ಕಳುಹಿಸಿದರು. ಆದರೆ ಮಗುವನ್ನು ರಕ್ಷಿಸಲಾಗಲಿಲ್ಲ. ತೀವ್ರ ಪೆಟ್ಟಾಗಿ ಮೃತಪಟ್ಟಿದ್ದರು. ಮಗುವಿನ ಅಂತ್ಯಕ್ರಿಯೆ ದುಬೈಯಲ್ಲಿ ನೆರವೇರಿಸಿದ ಬಳಿಕ ಕುಟುಂಬವು ಕೇರಳಕ್ಕೆ ಹಿಂತಿರುಗಿದರು.

ಲಿಖಿತ ರೂಪದಲ್ಲಿ ಕ್ಷಮೆ ಸಲ್ಲಿಸಿದರು

ದುಬೈನಿಂದ ಹಿಂತಿರುಗುವ ಮೊದಲು ದಂಪತಿ ಅಧಿಕಾರಿಗಳಿಗೆ ಲಿಖಿತ ಬರಹ ಬರೆದುಕೊಟ್ಟಿದ್ದರು. ಅಂದು ರಾತ್ರಿ ಚಾಲಕನನ್ನು ವಿಚಾರಣೆಗಾಗಿ ಬಂಧಿಸಲಾಗಿದೆ ಎಂಬ ಸುದ್ದಿ ಬಂದಾಗ, ನಾನು ಪೊಲೀಸರಿಗೆ ನಾವು ಅವನ ವಿರುದ್ಧ ದೂರು ನೀಡಲು ಇಚ್ಛೆ ಇಲ್ಲ ಎಂದು ತಿಳಿಸಿದೆ. ನಾವು ಅದನ್ನು ಲಿಖಿತರೂಪದಲ್ಲೂ ನೀಡಿದೆವು ಎಂದು ಮಗುವಿನ ತಂದೆ ಹೇಳಿದರು. ನಮ್ಮ ನಷ್ಟ ನಮ್ಮದು. ಮಗುವನ್ನು ಮತ್ತೆ ಜೀವಂತ ತರಲು ಸಾಧ್ಯವಿಲ್ಲ, ಕಾರು ಚಾಲಕನಿಗೆ ಶಿಕ್ಷೆ ನೀಡಿ ಮತ್ತೊಂದು ಕುಟುಂಬವನ್ನು ದುಃಖಕ್ಕೆ ಒಳಪಡಿಸಲು ನಾವು ಬಯಸುತ್ತಿಲ್ಲ ಎಂದರು.

ಈ ನಿರ್ಧಾರವು ಪ್ರಕರಣದ ಮೇಲೆ ಯಾವ ರೀತಿಯಾಗಿ ಪ್ರಭಾವ ಬೀರುತ್ತದೆ ಎಂಬುದು ತಕ್ಷಣ ತಿಳಿದಿಲ್ಲ. ಶಾರ್ಜಾ ಪೊಲೀಸರು ತನಿಖೆ ಮುಗಿಸಿ ಪ್ರಕರಣವನ್ನು ಸಾರ್ವಜನಿಕ ಪ್ರೊಸಿಕ್ಯೂಶನ್ ಗೆ ಮುಂದುವರೆಸಿದ್ದಾರೆ. ಪೊಲೀಸ್ ಪೋಷಕರು ಮತ್ತು ಚಾಲಕರಿಗೆ ಸಾವಧಾನರಾಗಬೇಕೆಂದು ಹಿತೈಸಿ ಸೂಚಿಸಿದ್ದಾರೆ.

ಕನಸು ನುಚ್ಚುನೂರು

ತಂದೆ ಕುಟುಂಬ ದೀರ್ಘಾವಧಿ ಭೇಟಿಗೆ ಬಂದಾಗ ದುಬೈಯಿಂದ ಶಾರ್ಜಾ ಗೆ ಸ್ಥಳಾಂತರಗೊಂಡಿದ್ದರು. ತಾಯಿ ಹಿಂದೆ ಯುಎಇಗೆ ಒಮ್ಮೆ ಭೇಟಿ ನೀಡಿದ್ದರು, ಆದರೆ ಮಗನೊಂದಿಗೆ ಇದು ಮೊದಲ ಪ್ರವಾಸವಾಗಿತ್ತು. ಕುಟುಂಬವು ಮೊದಲ ರಂಜಾನ್ ಯುಎಇನಲ್ಲಿ ಕಳೆಯಲು ಬಯಸಿದ್ದರು. ಅವರು ವೀಸಾವನ್ನು ವಿಸ್ತರಿಸಿ ರಂಜಾನ್ ಹಬ್ಬ ಮತ್ತು ಮಗುವಿನ ಎರಡನೇ ಹುಟ್ಟುಹಬ್ಬವನ್ನು ಆಚರಿಸಲು ಯೋಜಿಸಿದ್ದರು. ಏಪ್ರಿಲ್ 23ಕ್ಕೆ ಮಗುವಿಗೆ 2 ವರ್ಷ ತುಂಬುವುದರಲ್ಲಿತ್ತು.

2015 ರಲ್ಲಿ ನಿಧನರಾದ ಸಿರಿಯನ್ ಹುಡುಗ ಅಲನ್ ಕುರ್ದಿ ನೆನಪಿಗಾಗಿ ತಮ್ಮ ಮಗುವಿಗೆ ಅಲನ್ ರೂಮಿ ಎಂದು ನಾಮಕರಣ ಮಾಡಿದ್ದರು. ಮದುವೆಯಾಗಿ ಸುಮಾರು 10 ವರ್ಷಗಳ ನಂತರ ತಮಗೆ ಜನಿಸಿದ ಗಂಡು ಮಗುವಿಗೆ ಅವರು ಅಲನ್ ಎಂದು ಹೆಸರಿಸಿದರು.

ಅಲನ್ ನಮ್ಮ ಜೀವನದ ಬೆಳಕಾಗಿದ್ದರು, ಆದರೆ ನಾವು ಅವನನ್ನು ಇಷ್ಟು ಬೇಗ ಕಳೆದುಕೊಳ್ಳುತ್ತೇವೆ ಎಂದು ಯೋಚಿಸಿರಲಿಲ್ಲ ಎಂದು ತಂದೆ ಕಣ್ಣೀರಿಡುತ್ತಾ ಹೇಳುತ್ತಾರೆ.

ಇದು ಯಾರ ತಪ್ಪೂ ಅಲ್ಲ. ಎಲ್ಲಾ ಕಡೆಯಿಂದ ಗಮನ ಕೊರತೆ ಇದ್ದ ದುರದೃಷ್ಟಕರ ಘಟನೆಯಾಗಿತ್ತು. ಚಾಲಕನನ್ನು ಶಿಕ್ಷಿಸುವುದರಿಂದ ನಮ್ಮ ಮಗ ಹಿಂತಿರುಗುವುದಿಲ್ಲ. ನಾವು ಈಗ ಚಾಲಕನ ಬಿಡುಗಡೆಗಾಗಿ ಆತನಿಗೆ ಕ್ಷಮಿಸಿದ್ದೇವೆ ಎನ್ನುತ್ತಾರೆ ಮಗುವಿನ ತಂದೆ ಶರ್ಫುದ್ದೀನ್.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಮಾತುಕತೆಗೆ ವ್ಯಾನ್ಸ್ ನೇತೃತ್ವದ ಅಮೆರಿಕಾ ತಂಡ ಇಸ್ಲಾಮಾಬಾದ್ ಗೆ ಆಗಮನ, ಲೆಬನಾನ್ ಕದನ ವಿರಾಮ, ಆಸ್ತಿ ಬಿಡುಗಡೆ ಪ್ರಮುಖ ಅಜೆಂಡಾ-Video

ಇರಾನ್‌ ಸರ್ವೋಚ್ಚ ನಾಯಕ ಮೊಜ್ತಾಬಾ ಖಮೇನಿ ಮುಖ ವಿರೂಪಗೊಂಡಿದೆ, ಕಾಲುಗಳಿಗೆ ತೀವ್ರ ಗಾಯವಾಗಿದೆ: ವರದಿ

IPL 2026: RCB ಸೋಲಿಸಿದ RRಗೆ ಬಿಗ್ ಶಾಕ್, ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಸಿಬ್ಬಂದಿ, BCCI ಶಿಕ್ಷೆ..! Video

ತೀವ್ರ ಕುತೂಹಲ ಘಟ್ಟಕ್ಕೆ ತಲುಪಿದ ಪಶ್ಚಿಮ ಏಷ್ಯಾ ಸಂಘರ್ಷ: ಇಂದು ಪಾಕಿಸ್ತಾನ ಮಧ್ಯಸ್ಥಿಕೆಯಲ್ಲಿ ಇರಾನ್-ಅಮೆರಿಕ ನಡುವೆ ಸಂಧಾನ ಮಾತುಕತೆ-Video

PSL ನಲ್ಲಿ ಮತ್ತೊಂದು ಹೈಡ್ರಾಮಾ: ಇದ್ಯಾವ್ ಸೀಮೆ ಬೌಲಿಂಗ್?.. ಮೈದಾನದಲ್ಲೇ Daryl Mitchell vs Usman Tariq ಜಟಾಪಟಿ, ಇಷ್ಟಕ್ಕೂ ಆಗಿದ್ದೇನು?

SCROLL FOR NEXT