ಡೊನಾಲ್ಡ್ ಟ್ರಂಪ್ 
ವಿದೇಶ

ಸುಪ್ರೀಂ ಕೋರ್ಟ್ ತೀರ್ಪಿಗೆ ಡೋಂಟ್ ಕೇರ್: ಶೇ.10ರಷ್ಟು ಜಾಗತಿಕ ಸುಂಕ ಘೋಷಿಸಿದ Donald Trump; ಭಾರತ ವ್ಯಾಪಾರ ಒಪ್ಪಂದ ವಿಷಯ ಪ್ರಸ್ತಾಪ; Video

ಸುಪ್ರೀಂಕೋರ್ಟ್ ನೀಡಿದ ತೀರ್ಪು, ಜಾಗತಿಕ ಮಟ್ಟದಲ್ಲಿ ದೇಶಗಳೊಂದಿಗೆ ವ್ಯಾಪಾರ ನಿಯಂತ್ರಿಸುವ ಮತ್ತು ಶುಲ್ಕ ವಿಧಿಸುವ ಕ್ರಮಗಳನ್ನು ಹೊಂದಿದೆ.

ವಿವಿಧ ದೇಶಗಳ ಸರಕುಗಳ ಮೇಲೆ ವಿಧಿಸಿದ್ದ ಭಾರಿ ಸುಂಕಗಳನ್ನು ಅಮೆರಿಕದ ಸುಪ್ರೀಂ ಕೋರ್ಟ್ ರದ್ದುಗೊಳಿಸಿದರೂ ಕೂಡ ಅಮೆರಿಕದ ವ್ಯಾಪಾರ ಪಾಲುದಾರ ದೇಶಗಳ ಮೇಲೆ ಶೇಕಡಾ 10ರಷ್ಟು ಹೊಸ ಜಾಗತಿಕ ಶುಲ್ಕವನ್ನು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ. ಇದನ್ನು ಅವರ ಸರ್ಕಾರದ ಆರ್ಥಿಕ ನೀತಿಯಲ್ಲಿ ಜಾರಿಗೆ ತಂದಲ್ಲಿ ಸುಂಕ ಹೇರಿಕೆಗೆ ಬಳಸುವ ಇತರೆ ಮಾರ್ಗಗಳನ್ನು ಉಪಯೋಗಿಸುವುದಾಗಿ ಹೇಳಿಕೊಂಡಿದ್ದಾರೆ. ಈ ನೀತಿಯನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿತ್ತು.

ಸುಪ್ರೀಂಕೋರ್ಟ್ ನೀಡಿದ ತೀರ್ಪು, ಜಾಗತಿಕ ಮಟ್ಟದಲ್ಲಿ ದೇಶಗಳೊಂದಿಗೆ ವ್ಯಾಪಾರ ನಿಯಂತ್ರಿಸುವ ಮತ್ತು ಶುಲ್ಕ ವಿಧಿಸುವ ಕ್ರಮಗಳನ್ನು ಹೊಂದಿದೆ.

ಸುಪ್ರೀಂ ಕೋರ್ಟ್ ತೀರ್ಪು ಬಗ್ಗೆ ಆಕ್ರೋಶ

ತಮ್ಮ ಸರ್ಕಾರ ಮಾಡಿಕೊಂಡ ಬಹುತೇಕ ಒಪ್ಪಂದಗಳು ಇನ್ನೂ ಪರಿಣಾಮಕಾರಿಯಾಗಿವೆ ಎಂದು ಹೇಳಿ ವಿಶೇಷವಾಗಿ ಭಾರತವನ್ನು ಉಲ್ಲೇಖಿಸಿದ್ದರು. ಭಾರತ ಜೊತೆಗೆ ಒಪ್ಪಂದ ಮುಂದುವರಿಸುತ್ತೇವೆ ಎಂದು ಪತ್ರಕರ್ತರ ಪ್ರಶ್ನೆಗೆ ಉತ್ತರವಾಗಿ ಟ್ರಂಪ್ ಹೇಳಿದರು.

ಎಲ್ಲಾ ಒಪ್ಪಂದಗಳು — ನಾವು ಅದನ್ನು ಬೇರೆ ರೀತಿಯಲ್ಲಿ ಮಾಡಲಿದ್ದೇವೆ ಎಂದರು. ತಮ್ಮ ಸುಂಕ ಹೇರಿಕೆಯನ್ನು ತಿರಸ್ಕರಿಸಿದ ನ್ಯಾಯಮೂರ್ತಿಗಳಿಬ್ಬರನ್ನು ನಾಮನಿರ್ದೇಶಿಸಿದ ಟ್ರಂಪ್, ನ್ಯಾಯಾಲಯವು ವಿದೇಶಿ ಹಿತಾಸಕ್ತಿಗಳಿಂದ ಪ್ರಭಾವಿತವಾಗಿದೆ ಎಂದು ಆರೋಪಿಸಿದರು.

ನ್ಯಾಯಾಲಯವು ವಿದೇಶಿ ಹಿತಾಸಕ್ತಿಗಳಿಂದ ಪ್ರಭಾವಿತವಾಗಿದೆ ಎಂಬುದು ನನ್ನ ಅಭಿಪ್ರಾಯ ಎಂದು ಟ್ರಂಪ್ ಪತ್ರಕರ್ತರಿಗೆ ಹೇಳಿದರು. ಸುಪ್ರೀಂಕೋರ್ಟ್ ತೀರ್ಪನ್ನು ನಿರಾಶಾಜನಕ ಎಂದು ಕರೆದ ಅವರು ಕನ್ಸರ್ವೇಟಿವ್ ಪ್ರಭಾವಿತ ನ್ಯಾಯಾಲಯದ ಕೆಲ ಸದಸ್ಯರು ಅವರ ವಿರುದ್ಧ ತೀರ್ಪು ನೀಡಿರುವುದಕ್ಕೆ ಖಂಡಿತವಾಗಿಯೂ ಮುಜುಗರ ತಂದಿದೆ ಎಂದರು.

ಅವರ ಹೆಸರನ್ನು ಉಲ್ಲೇಖಿಸದೆ, ಟ್ರಂಪ್ ನ್ಯಾಯಮೂರ್ತಿಗಳ ಕ್ರಿಯೆಯನ್ನು “ಅತ್ಯಂತ ದೇಶಭಕ್ತಿವಿರೋಧಿ ಮತ್ತು ನಮ್ಮ ಸಂವಿಧಾನಕ್ಕೆ ನಿಷ್ಠೆಯಿಲ್ಲದವರು ಎಂದರು. ತಮ್ಮ ಶುಲ್ಕದಿಂದ ಸಿಕ್ಕ ಸುಮಾರು 133 ಬಿಲಿಯನ್ ಡಾಲರ್ ಮರುಪಾವತಿಸುವ ವಿಷಯದ ಬಗ್ಗೆ, ಕಾನೂನು ಹೋರಾಟವು ವರ್ಷಗಳವರೆಗೆ ಸಾಗಬಹುದು ಎಂದರು.

ಅಮೆರಿಕದ ಸುಪ್ರೀಂಕೋರ್ಟ್ ಶುಕ್ರವಾರ, ಕನ್ಸರ್ವೇಟಿವ್ ಮುಖ್ಯ ನ್ಯಾಯಮೂರ್ತಿ ಜಾನ್ ರಾಬರ್ಟ್ಸ್ ರಚಿಸಿದ 6–3 ತೀರ್ಪಿನಲ್ಲಿ, ಟ್ರಂಪ್ 1977 ಕಾನೂನನ್ನು ಬಳಸಿ ಶುಲ್ಕ ವಿಧಿಸುವ ಶಕ್ತಿ ಅವರ ಅಧಿಕಾರಕ್ಕಿಂತ ಮೇಲಿನದ್ದಾಗಿದೆ ಎಂದು ತೀರ್ಪು ನೀಡಿ ಕೆಳ ನ್ಯಾಯಾಲಯದ ತೀರ್ಪನ್ನು ಮಾನ್ಯ ಮಾಡಿತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಮಾತು ತಪ್ಪಿದ ಕೇಂದ್ರ ಸರ್ಕಾರದ ವಿರುದ್ಧ ಮತ್ತೊಂದು ದೊಡ್ಡ ಹೋರಾಟಕ್ಕೆ ಸಜ್ಜಾದ CJP; ಸೆಪ್ಟೆಂಬರ್ 5 ರಂದು ದೆಹಲಿಯಲ್ಲಿ ಬೃಹತ್ ಮೆರವಣಿಗೆ

ತಮಿಳುನಾಡಿಗೆ ಕಾವೇರಿ, ಕನ್ನಡಿಗರಿಗೆ ಮತ್ತೆ ಚೊಂಬು: ನಿತ್ಯ 9,000 ಕ್ಯೂಸೆಕ್ ನೀರು ಬಿಡಲು CWRC ಸೂಚನೆ!

ನೀವು ಹೇಳಿದಂತೆ ಕೇಳದಿದ್ರೆ ದ್ವೇಷಿಸ್ತೀರಾ: JDS ಶಾಸಕ ಹೆಚ್ ಡಿ ರೇವಣ್ಣಗೆ ಹಾಸನ ಜಿಲ್ಲಾಧಿಕಾರಿ ತಿರುಗೇಟು

ಸೀತಾಪುರದಲ್ಲಿ ವಿಚಿತ್ರ ಪ್ರಕರಣ: ಹಗಲು ಪ್ರೇಮಿ, ರಾತ್ರಿ ಗಂಡ ಬೇಕಂತೆ! ಇಬ್ಬರ ಜತೆ ಸಂಸಾರ ನಡೆಸಲು ಪೊಲೀಸ್ ಠಾಣೆ ಮೆಟ್ಟಿಲೇರಿದ ಮಹಿಳೆ! Video

ಬೀದಿ ನಾಯಿಯ ಭೀಕರ ದಾಳಿ: ಮನೆಯಿಂದ ಹೊರಗೆ ಆಟವಾಡುತ್ತಿದ್ದ 5 ವರ್ಷದ ಬಾಲಕಿ ಗಂಭೀರ! Video