ಟೋಕಿಯೋ: ಜಪಾನ್ ನ ಚಿಬಾದಲ್ಲಿರುವ ಇಚಿಕಾವಾ ಮೃಗಾಲಯದಲ್ಲಿ ಮಕಾಕ್ ಪ್ರಭೇದದ ಕೋತಿಯೊಂದರ ವಿಡಿಯೋ ವ್ಯಾಪಕ ವೈರಲ್ ಆಗಿತ್ತು. ಇದೀಗ ಅದೇ ಕೋತಿ ಮರಿಯ ಕೃತಕ ಬುದ್ದಿಮತ್ತೆಯ ವಿಡಿಯೋವೊಂದು ವೈರಲ್ ಆಗುತ್ತಿದೆ.
ಹೌದು.. ತಾಯಿಯಿಂದ ಬೇರ್ಪಟ್ಟಿದ್ದ ಮಕಾಕ್ ಪ್ರಭೇದದ ಕೋತಿ ಮರಿಗೆ ಇತರೆ ಕೋತಿಗಳು ವ್ಯಾಪಕ ಕಿರುಕುಳ ನೀಡುತ್ತಿದ್ದವು. ಇದೀಗ ಈ ಕೋತಿಗಳ ವಿರುದ್ಧ ಬೇಬಿ ಪಂಚ್ ರಿವೆಂಜ್ ತೀರಿಸಿಕೊಂಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಪ್ರಸ್ತುತ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಈ ಹಿಂದೆ ಇತರೆ ಕೋತಿಗಳಿಂದ ದಾಳಿಗೊಳಗಾಗಿದ್ದ ಬೇಬಿ ಪಂಚ್, ಇದೀಗ ಅದೇ ಕೋತಿಗಳ ವಿರುದ್ಧ ಸೇಡು ತೀರಿಸಿಕೊಂಡ ವಿಡಿಯೋ ವೈರಲ್ ಆಗುತ್ತಿದೆ.
ಐಎ ವಿಡಿಯೋ
ಆದರೆ ಇದು ನೈಜ ವಿಡಿಯೋ ಅಲ್ಲ.. ಇದು ಎಐ ರಚಿತ ವಿಡಿಯೋ ಇದಾಗಿದ್ದು ಬೇಬಿ ಪಂಚ್ ಅಭಿಮಾನಿಯೊಬ್ಬರು ಈ ವಿಡಿಯೋ ರಚಿಸಿ ಅದನ್ನು ಸಾಮಾಜಿಕ ಜಾಲತಾಣಕ್ಕೆ ಅಪ್ಲೋಡ್ ಮಾಡಿದ್ದಾರೆ. ಆದರೆ ಈ ವಿಡಿಯೋ ನೈಜತೆಯಿಂದ ಕೂಡಿದೆ ಎಂದು ಬಳಕೆದಾರರು ಟ್ವೀಟ್ ಮಾಡಿದ್ದಾರೆ.
ವಿಡಿಯೋ ವೈರಲ್
ಇನ್ನು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ವೈರಲ್ ಆಗುತ್ತಿದ್ದು, ಟ್ವಿಟರ್ ನಲ್ಲಿ ಈ ವಿಡಿಯೋವನ್ನು ಈ ವರೆಗೂ ಬರೊಬ್ಬರಿ 1.9 ಮಿಲಿಯನ್ ಮಂದಿ ವೀಕ್ಷಣೆ ಮಾಡಿದ್ದಾರೆ.