ಪಾಕಿಸ್ತಾನದ ಮೇಲೆ ಪ್ರಮುಖ ದಾಳಿ ನಡೆಸಿರುವ ಅಫ್ಘಾನಿಸ್ತಾನ, ಶತ್ರುಗಳ ಹಿಡಿತದಲ್ಲಿರುವ 15 ಠಾಣೆಗಳ ಮೇಲೆ ಹಿಡಿತ ಸಾಧಿಸಿರುವುದಾಗಿ ಹೇಳಿಕೊಂಡಿದೆ. ಅಫ್ಘಾನ್ ಕಾರ್ಯಾಚರಣೆಯಲ್ಲಿ ಹಲವಾರು ಪಾಕಿಸ್ತಾನಿ ಸೈನಿಕರು ಸಾವನ್ನಪ್ಪಿದ್ದಾರೆ ಮತ್ತು ಕೆಲವು ಸೈನಿಕರನ್ನು ಸೆರೆಹಿಡಿಯಲಾಗಿದೆ ಎಂದು ವರದಿಯಾಗಿದೆ.
ಅಫ್ಘಾನಿಸ್ತಾನದ ದಾಂಡ್ ಆವ್ ಪಟಾನ್ ಪ್ರದೇಶದ ವಸತಿ ಪ್ರದೇಶಗಳ ಮೇಲೆ ದಾಳಿ ಮಾಡುವ ಮೂಲಕ ಪಾಕಿಸ್ತಾನ ಪ್ರತೀಕಾರ ತೀರಿಸಿಕೊಂಡಿದೆ. ಈ ಮಿಲಿಟರಿ ಕಾರ್ಯಾಚರಣೆಯ ವೀಡಿಯೊ ವೈರಲ್ ಆಗಿದೆ. ಏತನ್ಮಧ್ಯೆ, ಅಫ್ಘಾನ್ ರಕ್ಷಣಾ ಸಚಿವಾಲಯವು ಮಹತ್ವದ ಹೇಳಿಕೆ ನೀಡಿದ್ದು, ಅಫ್ಘಾನ್ ಸೇನೆಯ ಕಾರ್ಯಾಚರಣೆಯಲ್ಲಿ 40 ಪಾಕಿಸ್ತಾನಿ ಸೈನಿಕರನ್ನು ಹತ್ಯೆ ಮಾಡಿದೆ ಎಂದು ಹೇಳಿದೆ. 13 ಪಾಕಿಸ್ತಾನಿ ಸೈನಿಕರ ಮೃತದೇಹಗಳನ್ನು ಪಾಕಿಸ್ತಾನಕ್ಕೆ ಹಸ್ತಾಂತರಿಸಲಾಗಿದೆ ಎಂದು ದೃಢಪಡಿಸಲಾಗಿದೆ. ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ನಡುವೆ ಉದ್ವಿಗ್ನತೆ ಹೆಚ್ಚಾಗಿದೆ.
ಅಫ್ಘಾನಿಸ್ತಾನದ ಮೇಲೆ ಪಾಕಿಸ್ತಾನ ನಡೆಸಿದ ವೈಮಾನಿಕ ದಾಳಿಯ ನಂತರ ಖ್ವಾಜಾ ಆಸಿಫ್ ಅವರ ಪೂರ್ಣ ಪ್ರಮಾಣದ ಯುದ್ಧದ ಬೆದರಿಕೆ ಉದ್ವಿಗ್ನತೆಯನ್ನು ಹೆಚ್ಚಿಸಿದೆ. ಫೆಬ್ರವರಿ 27ರಂದು ಅಫ್ಘಾನ್ ನೆಲದಲ್ಲಿ ಹೊಸ ದಾಳಿಗಳ ನಂತರ, ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್, ನಮ್ಮ ತಾಳ್ಮೆಯ ಮಿತಿ ಮೀರಿದೆ. ಇದು ನಮ್ಮ ಮತ್ತು ನಿಮ್ಮ ನಡುವಿನ ಪೂರ್ಣ ಪ್ರಮಾಣದ ಯುದ್ಧ" ಎಂದು ಘೋಷಿಸಿದರು. ಹಲವಾರು ದಿನಗಳಿಂದ ಉದ್ವಿಗ್ನತೆ ಹೆಚ್ಚುತ್ತಿತ್ತು. ಫೆಬ್ರವರಿ 21ರಂದು, ಪಾಕಿಸ್ತಾನವು ನಂಗರ್ಹಾರ್, ಪಕ್ತಿಕಾ ಮತ್ತು ಖೋಸ್ಟ್ ಪ್ರಾಂತ್ಯಗಳಲ್ಲಿ ವೈಮಾನಿಕ ದಾಳಿ ನಡೆಸಿತು, ತೆಹ್ರಿಕ್-ಎ-ತಾಲಿಬಾನ್ ಪಾಕಿಸ್ತಾನ್ (ಟಿಟಿಪಿ) ಮತ್ತು ಇಸ್ಲಾಮಿಕ್ ಸ್ಟೇಟ್ ಖೊರಾಸನ್ ಪ್ರಾಂತ್ಯ (ಐಎಸ್‌ಕೆಪಿ) ಗೆ ಸೇರಿದ ಏಳು ಭಯೋತ್ಪಾದಕ ಶಿಬಿರಗಳನ್ನು ಗುರಿಯಾಗಿಸಿಕೊಂಡಿತು. ನಂತರ ಯುಎನ್ ವೀಕ್ಷಕರು ದಾಳಿಯಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ 13 ನಾಗರಿಕರು ಸಾವನ್ನಪ್ಪಿದ್ದಾರೆ ಎಂದು ವರದಿ ಮಾಡಿದ್ದಾರೆ.
ಇಸ್ಲಾಮಾಬಾದ್ ಅಫ್ಘಾನ್ ತಾಲಿಬಾನ್ ವಿರುದ್ಧ "ಆಪರೇಷನ್ ಗಜಬ್ ಲಿಲ್ ಹಕ್" ಅನ್ನು ಪ್ರಾರಂಭಿಸಿದೆ ಎಂದು ಪಾಕಿಸ್ತಾನಿ ಮಾಧ್ಯಮಗಳು ಹೇಳುತ್ತಿವೆ. ಖೈಬರ್ ಪಖ್ತುನ್ಖ್ವಾದ ಚಿತ್ರಾಲ್, ಖೈಬರ್, ಮೊಹ್ಮಂಡ್, ಕುರ್ರಮ್ ಮತ್ತು ಬಜೌರ್ ವಲಯಗಳಲ್ಲಿ ಅಫ್ಘಾನ್ ಕಡೆಯವರು ಅಪ್ರಚೋದಿತ ಗುಂಡಿನ ದಾಳಿ ನಡೆಸಿದ್ದಾರೆ ಎಂದು ಪಾಕಿಸ್ತಾನ ಆರೋಪಿಸಿದೆ. ಅಲ್ಲದೆ ಪಾಕಿಸ್ತಾನದ ದಾಳಿಯಲ್ಲಿ ಇಲ್ಲಿಯವರೆಗೂ 274 ತಾಲಿಬಾನಿಗಳನ್ನು ಹತ್ಯೆ ಮಾಡಿದ್ದೇವೆ ಎಂದು ಹೇಳಿದೆ.