ಡೊನಾಲ್ಡ್ ಟ್ರಂಪ್ 
ವಿದೇಶ

ಇರಾನ್ ಮೇಲೆ ಅಮೆರಿಕ ದಾಳಿಗೆ 'ಆಪರೇಷನ್ ಎಪಿಕ್ ಫ್ಯೂರಿ' ಎಂದು ಹೆಸರು; ಇಸ್ಲಾಮಿಕ್ ಸರ್ಕಾರ ಉರುಳಿಸುವುದು ನಮ್ಮ ಗುರಿ ಎಂದ ಟ್ರಂಪ್

ಇರಾನ್ ವಿರುದ್ಧ ಶನಿವಾರ ಪ್ರಮುಖ ದಾಳಿಯನ್ನು ಘೋಷಿಸಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇರಾನ್, ಸೇನೆ, ನೌಕಾಪಡೆ ಮತ್ತು ಕ್ಷಿಪಣಿ ತಾಣಗಳನ್ನು "ನಾಶಪಡಿಸುವುದಾಗಿ" ಪ್ರತಿಜ್ಞೆ ಮಾಡಿದರು.

ಪಶ್ಚಿಮ ಪಾಮ್ ಬೀಚ್: ಮಧ್ಯಪ್ರಾಚ್ಯ ಮತ್ತೆ ಉದ್ವಿಗ್ನಗೊಂಡಿದ್ದು, ಇಸ್ರೇಲ್ ಮತ್ತು ಅಮೆರಿ ಜಂಟಿಯಾಗಿ ಇರಾನ್ ಮೇಲೆ ಕ್ಷಿಪಣಿ ದಾಳಿ ನಡೆಸುತ್ತಿವೆ.

ಇರಾನ್ ವಿರುದ್ಧ ಶನಿವಾರ ಪ್ರಮುಖ ದಾಳಿಯನ್ನು ಘೋಷಿಸಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇರಾನ್, ಸೇನೆ, ನೌಕಾಪಡೆ ಮತ್ತು ಕ್ಷಿಪಣಿ ತಾಣಗಳನ್ನು "ನಾಶಪಡಿಸುವುದಾಗಿ" ಪ್ರತಿಜ್ಞೆ ಮಾಡಿದರು ಮತ್ತು ಇರಾನಿಯನ್ನರು ತಮ್ಮ ಸರ್ಕಾರವನ್ನು ಉರುಳಿಸಬೇಕು ಎಂದು ಒತ್ತಾಯಿಸಿದರು.

ಅಮೆರಿಕ ಮತ್ತು ಇಸ್ರೇಲ್ ಇರಾನ್ ಮೇಲೆ ಬಾಂಬ್ ದಾಳಿ ಮಾಡಲು ಆರಂಭಿಸಿದ ನಂತರ ಟ್ರಂಪ್ ಬಿಡುಗಡೆ ಮಾಡಿದ ವಿಡಿಯೋ ಭಾಷಣದಲ್ಲಿ, ಇಸ್ಲಾಮಿಕ್ ಗಣರಾಜ್ಯದ ಮಿಲಿಟರಿಯನ್ನು ನಾಶಮಾಡುವುದು ಮತ್ತು 1979ರ ಕ್ರಾಂತಿಯ ನಂತರ ಅಧಿಕಾರದಲ್ಲಿರುವ ಸರ್ಕಾರವನ್ನು ಉರುಳಿಸುವುದು ನಮ್ಮ ಗುರಿಯಾಗಿದೆ ಎಂದು ಗುಡುಗಿದ್ದಾರೆ.

"ನಾವು ಅವರ ಕ್ಷಿಪಣಿಗಳನ್ನು ನಾಶಮಾಡಲಿದ್ದೇವೆ ಮತ್ತು ಅವರ ಕ್ಷಿಪಣಿ ಉದ್ಯಮವನ್ನು ನೆಲಕ್ಕೆ ಉರುಳಿಸುತ್ತೇವೆ. ಅದನ್ನು ಸಂಪೂರ್ಣವಾಗಿ - ಮತ್ತೆ - ನಾಶಪಡಿಸಲಾಗುವುದು. ನಾವು ಅವರ ನೌಕಾಪಡೆಯನ್ನು ನಾಶಮಾಡಲಿದ್ದೇವೆ" ಎಂದು ಟ್ರಂಪ್ ತಮ್ಮ ಫ್ಲೋರಿಡಾ ಮನೆಯಿಂದ ಟ್ರೂತ್ ಸೋಶಿಯಲ್ ಪ್ಲಾಟ್‌ಫಾರ್ಮ್‌ನಲ್ಲಿ ವಿಡಿಯೋ ಪೋಸ್ಟ್ ಮಾಡಿದ್ದಾರೆ.

"ನಿಮ್ಮ ಸ್ವಾತಂತ್ರ್ಯದ ಸಮಯ ಹತ್ತಿರದಲ್ಲಿದೆ" ಎಂದು ಹೇಳುವ ಮೂಲಕ ಟ್ರಂಪ್, ಇರಾನ್ ಸರ್ಕಾರದ ವಿರುದ್ಧ ದಂಗೆ ಏಳುವಂತೆ ಅಲ್ಲಿನ ಜನರಿಗೆ ಕರೆ ನೀಡಿದ್ದಾರೆ.

"ನಮ್ಮ ಹೋರಾಟ ಮುಗಿದ ನಂತರ, ನೀವು ನಿಮ್ಮ ಸರ್ಕಾರವನ್ನು ವಹಿಸಿಕೊಳ್ಳಿ. ಅದು ನಿಮ್ಮದಾಗುತ್ತದೆ ಮತ್ತು ಇದು "ಬಹುಶಃ ತಲೆಮಾರುಗಳಿಗೆ ನಿಮ್ಮ ಏಕೈಕ ಅವಕಾಶವಾಗಿರುತ್ತದೆ" " ಎಂದು ಟ್ರಂಪ್ ಹೇಳಿದ್ದಾರೆ.

'ಎಲ್ಲೆಡೆ ಬೀಳುತ್ತಿವೆ' ಬಾಂಬ್‌ಗಳು

ಇರಾನ್ ಮೇಲೆ ನಡೆಸುತ್ತಿರು ದಾಳಿಗೆ "ಆಪರೇಷನ್ ಎಪಿಕ್ ಫ್ಯೂರಿ" ಎಂದು ಅಮೆರಿಕ ಹೆಸರಿಟ್ಟಿದ್ದು, ಟೆಹ್ರಾನ್ ಸೇರಿದಂತೆ ಹಲವು ಕಡೆ ಬಾಂಬ್ ಗಳನ್ನು ಸ್ಫೋಟಿಸಲಾಗುತ್ತಿದೆ.

ಇರಾನ್‌ ವಿರುದ್ಧದ ಸೇನಾ ಕಾರ್ಯಾಚರಣೆಯನ್ನು ಅಮೆರಿಕದ ರಕ್ಷಣಾ ದಳ ಪೆಂಟಗನ್‌ 'ಆಪರೇಷನ್ ಎಪಿಕ್‌ ಫ್ಯೂರಿ' ಎಂದು ಕರೆದಿದೆ.

ಇರಾನ್ ಮೇಲಿನ ಈ ದಾಳಿ ಒಂದು ಪ್ರಮುಖ ಸೇನಾ ಕಾರ್ಯಾಚರಣೆಯಾಗಿದೆ ಎಂದ ಪೆಂಟಗನ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಲೋಕೋಪಯೋಗಿ ಇಲಾಖೆಯಲ್ಲಿ 'ಲಂಚ'; ವಿದೇಶಿ ಷೇರು ಹೂಡಿಕೆ ಇತ್ಯಾದಿ; ಸತೀಶ್ ಜಾರಕಿಹೊಳಿ ಮನೆಯಲ್ಲಿ ಸಿಕ್ಕಿದ್ದೇನು? EDಯಿಂದ ಅಧಿಕೃತ ಹೇಳಿಕೆ

BRICS 2026: ಪುಟಿನ್-ಮೋದಿ ಮಾತುಕತೆ: ಕಪ್ಪು ಸಮುದ್ರದಲ್ಲಿ ಭಾರತೀಯರ ಸುರಕ್ಷತೆಯ ವಿಷಯ ಪ್ರಸ್ತಾಪ ರಷ್ಯಾ ಅಧ್ಯಕ್ಷ ಹೇಳಿದ್ದೇನು?

ನಿತೀಶ್ ಕುಮಾರ್ ರಾಜೀನಾಮೆ ನಂತರ ಪಕ್ಷದ ಹೆಸರು ಬದಲಾವಣೆಗೆ ಮುಂದಾದ JDU; ಇಲ್ಲಿದೆ ಕಾರಣ...

BRICS 2026: Modi-Putin ಭೇಟಿ; ಆಪ್ತ ಮಿತ್ರನಿಗೆ ಪ್ರಧಾನಿಯಿಂದ ಪವಿತ್ರ, ವಿಶೇಷ ಉಡುಗೊರೆ! Video

ಜಾಗತಿಕ ಭೌಗೋಳಿಕ-ರಾಜಕೀಯ ಅನಿಶ್ಚಿತತೆ; ರಾಜಕೀಯ ಒತ್ತಡ ಹೇರಲು ಆರ್ಥಿಕ ಅಸ್ತ್ರ ಬಳಕೆ; ಬ್ರಿಕ್ಸ್ ಪ್ರತಿಕ್ರಿಯೆ ಏನು? ಇರಾನ್ ಅಧ್ಯಕ್ಷರ ಪ್ರಶ್ನೆ! Video