ಜೆಡಿ ವ್ಯಾನ್ಸ್ 
ವಿದೇಶ

ಮಡುರೊ ಬಂಧನ ಬೆನ್ನಲ್ಲೇ ಅಮೆರಿಕ ಉಪಾಧ್ಯಕ್ಷ JD Vance ಮನೆಯ ಮೇಲೆ ಗುಂಡಿನ ದಾಳಿ; ಆತಂಕ ಸೃಷ್ಟಿ!

ವಿಲಿಯಂ ಹೊವಾರ್ಡ್ ಟಾಫ್ಟ್ ಡ್ರೈವ್‌ನಲ್ಲಿರುವ ಈಸ್ಟ್ ವಾಲ್ನಟ್ ಹಿಲ್ಸ್ ಪ್ರದೇಶದಲ್ಲಿರುವ ವ್ಯಾನ್ಸ್ ಅವರ ಮನೆಯಲ್ಲಿ ಈ ಘಟನೆ ಸಂಭವಿಸಿದೆ.

ವಾಷಿಂಗ್ಟನ್: ಅಮೆರಿಕದ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಅವರ ಓಹಿಯೋ ಮನೆಯ ಮೇಲೆ ನಡೆದ ದಾಳಿ ನಡೆದಿದ್ದು ದೇಶಾದ್ಯಂತ ಆತಂಕ ಸೃಷ್ಟಿಸಿದೆ. ವಿಲಿಯಂ ಹೊವಾರ್ಡ್ ಟಾಫ್ಟ್ ಡ್ರೈವ್‌ನಲ್ಲಿರುವ ಈಸ್ಟ್ ವಾಲ್ನಟ್ ಹಿಲ್ಸ್ ಪ್ರದೇಶದಲ್ಲಿರುವ ವ್ಯಾನ್ಸ್ ಅವರ ಮನೆಯಲ್ಲಿ ಈ ಘಟನೆ ಸಂಭವಿಸಿದೆ. ನಿನ್ನೆ ರಾತ್ರಿ ವ್ಯಾನ್ಸ್ ಮನೆಗೆ ವ್ಯಕ್ತಿಯೊಬ್ಬ ಒಳನುಗ್ಗಿದ್ದನು. ಕೂಡಲೇ ಅಮೆರಿಕ ಸೀಕ್ರೆಟ್ ಸರ್ವಿಸ್ ಮತ್ತು ಸಿನ್ಸಿನಾಟಿ ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾಗಿದ್ದು ವ್ಯಕ್ತಿಯನ್ನು ಬಂಧಿಸಿದರು.

ಅಮೆರಿಕದ ಸೀಕ್ರೆಟ್ ಸರ್ವಿಸ್ ಅಧಿಕಾರಿಯೊಬ್ಬರು ಬೆಳಿಗ್ಗೆ 12:15ರ ಸುಮಾರಿಗೆ ಮನೆಯ ಬಳಿ ವ್ಯಕ್ತಿಯೊಬ್ಬ ಓಡಾಡುತ್ತಿರುವುದನ್ನು ಗಮನಿಸಿದ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದರು. ಘಟನೆಯ ಸಮಯದಲ್ಲಿ ವ್ಯಾನ್ಸ್ ಕುಟುಂಬ ಇರಲಿಲ್ಲ. ಆರಂಭಿಕ ವರದಿಗಳ ಆಧಾರದ ಮೇಲೆ, ಆ ವ್ಯಕ್ತಿ ಉದ್ದೇಶಪೂರ್ವಕವಾಗಿ ಉಪಾಧ್ಯಕ್ಷರ ಮನೆಗೆ ಪ್ರವೇಶಿಸಿದ್ದನ್ನು ಎಂದು ನಂಬಲಾಗಿಲ್ಲ ಎಂದು ಅಧಿಕಾರಿ ಹೇಳಿದ್ದಾರೆ.

ಸ್ಥಳೀಯ ಮಾಧ್ಯಮಗಳು ಮನೆಯ ಮುರಿದ ಕಿಟಕಿಗಳನ್ನು ತೋರಿಸುತ್ತಿವೆ. ಆದರೂ ನಿಖರವಾದ ಮಾಹಿತಿ ಇನ್ನೂ ಸ್ಪಷ್ಟವಾಗಿಲ್ಲ. ವ್ಯಾನ್ಸ್ ಅಥವಾ ಅವರ ಕುಟುಂಬ ಸದಸ್ಯರನ್ನು ಈ ಘಟನೆಯಲ್ಲಿ ಉದ್ದೇಶಪೂರ್ವಕವಾಗಿ ಗುರಿಯಾಗಿಸಲಾಗಿದೆಯೇ ಎಂದು ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ ಎಂದು ಕಾನೂನು ಜಾರಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕಳೆದ ವಾರ, ವೆನೆಜುವೆಲಾದಲ್ಲಿ ಅಮೆರಿಕದ ಕಾರ್ಯಾಚರಣೆಯನ್ನು ಮೇಲ್ವಿಚಾರಣೆ ಮಾಡಲು ಮಾರ್-ಎ-ಲಾಗೊದಲ್ಲಿ ಟ್ರಂಪ್ ಮತ್ತು ಇತರ ಹಿರಿಯ ಆಡಳಿತ ಅಧಿಕಾರಿಗಳೊಂದಿಗೆ ವ್ಯಾನ್ಸ್ ಇರಲಿಲ್ಲ. ಇದರ ಬೆನ್ನಲ್ಲೇ ಈ ಘಟನೆ ನಡೆದಿರುವುದು ಆತಂಕ ಸೃಷ್ಟಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Basmati ಅಕ್ಕಿ ಭಾರತಕ್ಕೆ ಮಾತ್ರ ಸೀಮಿತವಲ್ಲ: ವಿಶೇಷ ಟ್ರೇಡ್‌ಮಾರ್ಕ್ ನೀಡಲು ಆಸ್ಟ್ರೇಲಿಯಾ ಕೋರ್ಟ್ ನಕಾರ, ರಫ್ತುದಾರರಲ್ಲಿ ಹೆಚ್ಚಿದ ಆತಂಕ

ತಮಿಳುನಾಡಿನಲ್ಲಿ ಸಿಎಂ ವಿಜಯ್ ಬಂಪರ್ ಘೋಷಣೆ: ವರ್ಷಕ್ಕೆ 3 ಉಚಿತ LPG ಸಿಲಿಂಡರ್; ಮಹಿಳೆಯರ ಉಚಿತ ಬಸ್ ಪ್ರಯಾಣ ವಿಸ್ತರಣೆ, ಪರಂದೂರು ವಿಮಾನ ನಿಲ್ದಾಣಕ್ಕೆ ಬ್ರೇಕ್..!

ಕಾವೇರಿ ನೀರಿಗಾಗಿ ತಮಿಳುನಾಡು ಕ್ಯಾತೆ: ಆಗಸ್ಟ್.31ಕ್ಕೆ ವಿಚಾರಣೆ ಮುಂದೂಡಿದ ಸುಪ್ರೀಂಕೋರ್ಟ್

ವಾಲ್ಮೀಕಿ ನಿಗಮ ಹಗರಣ: ಸಚಿವ ಬಿ. ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ BJP ಬೃಹತ್ ಪ್ರತಿಭಟನೆ, ಅಶೋಕ್-ವಿಜಯೇಂದ್ರ ಸೇರಿ ಹಲವರು ಪೊಲೀಸರ ವಶಕ್ಕೆ..!

ದೆಹಲಿಯಲ್ಲಿ ಭೀಕರ ಅಪಘಾತ: ನಿಯಂತ್ರಣ ತಪ್ಪಿ ಡಿವೈಡರ್‌ ದಾಟಿ SUVಗೆ ಕಾರು ಡಿಕ್ಕಿ, ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸೇರಿ 6 ಮಂದಿಗೆ ಗಾಯ..!