ಡೊನಾಲ್ಡ್ ಟ್ರಂಪ್ 
ವಿದೇಶ

ಟ್ರಂಪ್ ರ 'ಶಾಂತಿ ಮಂಡಳಿ' ಸೇರಲು ಭಾರತ ನಕಾರ; ಪಾಕಿಸ್ತಾನ ಸಹಿ!

ಗಾಜಾ ಪಟ್ಟಿಯಲ್ಲಿ ಇಸ್ರೇಲ್ ಮತ್ತು ಹಮಾಸ್ ನಡುವಿನ ಕದನ ವಿರಾಮ ಒಪ್ಪಂದದ ಎರಡನೇ ಹಂತದಡಿ ಘೋಷಿಸಲಾದ ಮಂಡಳಿ ಸೇರಲು ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಜಾಗತಿಕ ನಾಯಕರನ್ನು ಅಮೆರಿಕ ಅಧ್ಯಕ್ಷರು ಆಹ್ವಾನಿಸಿದ್ದರು.

ದಾವೋಸ್: ಗಾಜಾದಲ್ಲಿ ಶಾಶ್ವತ ಶಾಂತಿ ತರುವ ಹಾಗೂ ಸಂಭಾವ್ಯ ಜಾಗತಿಕ ಬಿಕ್ಕಟ್ಟು ಪರಿಹರಿಸುವ ನಿಟ್ಟಿನಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗುರುವಾರ 'ಶಾಂತಿ ಮಂಡಳಿ'ಯನ್ನು ಅನಾವರಣಗೊಳಿಸಿದ್ದು, ಈ ಮಂಡಳಿ ಸೇರಲು ಸಹಿ ಹಾಕುವ ಕಾರ್ಯಕ್ರಮದಿಂದ ದೂರ ಉಳಿದ ರಾಷ್ಟ್ರಗಳಲ್ಲಿ ಭಾರತವೂ ಒಂದಾಗಿದೆ.

ಆದರೆ ಪಾಕಿಸ್ತಾನ ಶಾಂತಿ ಮಂಡಳಿಯ ನಿಯಮಗಳಿಗೆ (Board of Peace Charter) ಸಹಿ ಹಾಕಿದೆ. ಗಾಜಾ ಪಟ್ಟಿಯಲ್ಲಿ ಇಸ್ರೇಲ್ ಮತ್ತು ಹಮಾಸ್ ನಡುವಿನ ಕದನ ವಿರಾಮ ಒಪ್ಪಂದದ ಎರಡನೇ ಹಂತದಡಿ ಘೋಷಿಸಲಾದ ಮಂಡಳಿ ಸೇರಲು ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಜಾಗತಿಕ ನಾಯಕರನ್ನು ಅಮೆರಿಕ ಅಧ್ಯಕ್ಷರು ಆಹ್ವಾನಿಸಿದ್ದರು.

ಫ್ರಾನ್ಸ್, ಯುನೈಟೆಡ್ ಕಿಂಗ್‌ಡಮ್, ಚೀನಾ, ಜರ್ಮನಿ ಮತ್ತಿತರ ಹಲವು ಪ್ರಮುಖ ರಾಷ್ಟ್ರಗಳು ಟ್ರಂಪ್ ಅವರ ಶಾಂತಿ ಮಂಡಳಿ ಸೇರಲು ಸಹಿ ಮಾಡುವ ಸಮಾರಂಭವನ್ನು ಬಹಿಷ್ಕರಿಸಿವೆ.

ಸ್ವಿಸ್ ಪರ್ವತ ರೆಸಾರ್ಟ್‌ನಲ್ಲಿ ವಾರ್ಷಿಕ ವಿಶ್ವ ಆರ್ಥಿಕ ವೇದಿಕ ವೇಳೆ ಟ್ರಂಪ್ ಸಮಾರಂಭವನ್ನು ಆಯೋಜಿಸಿದ್ದರು. ಪ್ರಧಾನಿ ಮೋದಿಯವರಿಗೆ ಟ್ರಂಪ್ ಅವರ ಆಹ್ವಾನ ಕುರಿತ ಪ್ರಶ್ನೆಗೆ ಭಾರತ, ಇನ್ನೂ ಈ ವಿಚಾರದಲ್ಲಿ ಅಂತಿಮ ತೀರ್ಮಾನ ತೆಗೆದುಕೊಂಡಿಲ್ಲ ಎಂದು ಉನ್ನತ ಮೂಲಗಳಿಂದ ತಿಳಿದುಬಂದಿದೆ.

ಇದು ಸೂಕ್ಷ್ಮ ವಿಷಯಗಳನ್ನು ಒಳಗೊಂಡಿರುವುದರಿಂದ ಭಾರತ ವಿವಿಧ ಅಂಶಗಳನ್ನು ಪರಿಗಣಿಸುತ್ತಿದೆ ಎಂದು ತಿಳಿದುಬಂದಿದೆ. ಇಸ್ರೇಲ್ ಮತ್ತು ಪ್ಯಾಲೆಸ್ತೀನ್ ಗಡಿಯೊಳಗೆ ಶಾಂತಿ ಮತ್ತು ಭದ್ರತೆಗಾಗಿ ಪ್ಯಾಲೆಸ್ತೀನ್ ಸಮಸ್ಯೆಗೆ 'ದ್ವಿ-ರಾಜ್ಯ ಪರಿಹಾರ'ಕ್ಕಾಗಿ ಭಾರತ ಒತ್ತಾಯಿಸುತ್ತಿದೆ.

ಶಾಂತಿ ಮಂಡಳಿಗೆ ಸೇರಿದ ದೇಶಗಳಲ್ಲಿ ಅರ್ಜೆಂಟೀನಾ ಅರ್ಮೇನಿಯಾ, ಅಜೆರ್ಬೈಜಾನ್, ಬಹ್ರೇನ್, ಬೆಲಾರಸ್, ಈಜಿಪ್ಟ್, ಹಂಗೇರಿ, ಕಝಾಕಿಸ್ತಾನ್, ಮೊರಾಕೊ, ಪಾಕಿಸ್ತಾನ, ಯುನೈಟೆಡ್ ಅರಬ್ ಎಮಿರೇಟ್ಸ್, ಸೌದಿ ಅರೇಬಿಯಾ ಮತ್ತು ವಿಯೆಟ್ನಾಂ ಸೇರಿವೆ. ಜರ್ಮನಿ, ಇಟಲಿ, ಪರಾಗ್ವೆ, ರಷ್ಯಾ, ಸ್ಲೊವೇನಿಯಾ, ತುರ್ಕಿಯೆ ಮತ್ತು ಉಕ್ರೇನ್ ಸೇರಿದಂತೆ ಹಲವಾರು ದೇಶಗಳು ಆಹ್ವಾನ ತಿರಸ್ಕರಿಸಿವೆ.

ಗಾಜಾ ಮತ್ತು ಅದರಾಚೆಗೆ ಶಾಂತಿ ಮತ್ತು ಸ್ಥಿರತೆಯನ್ನು ತರಲು ಟ್ರಂಪ್‌ರ 'ಬೋರ್ಡ್ ಆಫ್ ಪೀಸ್' ಅನ್ನು ಹೊಸ ಅಂತಾರಾಷ್ಟ್ರೀಯ ಸಂಸ್ಥೆಯಾಗಿ ಬಿಂಬಿಸಲು ಅಮೆರಿಕ ಯೋಜಿಸುತ್ತಿದೆ. ಇದರಿಂದ ವಿಶ್ವಸಂಸ್ಥೆಗೂ ಅಪಾಯ ಎನ್ನಲಾಗುತ್ತಿದೆ.

ಎರಡು ವರ್ಷಗಳ ಇಸ್ರೇಲಿ ಮಿಲಿಟರಿ ಆಕ್ರಮಣ ವೇಳೆ ಧ್ವಂಸಗೊಂಡ ಗಾಜಾ ಪಟ್ಟಿಯ ಆಡಳಿತದ ಮೇಲ್ವಿಚಾರಣೆ ಮಾಡಲು ಮತ್ತು ಪುನರಾಭಿವೃದ್ಧಿಗೆ ಹಣಕಾಸಿನ ಸಮನ್ವಯ ಕಾರ್ಯವನ್ನು ನೂತನ ಮಂಡಳಿ ನೋಡಿಕೊಳ್ಳುತ್ತದೆ ಎಂದು ಹೇಳಲಾಗಿದೆ.

ಆದಾಗ್ಯೂ, ಇದು ಸ್ಥಿರತೆಯನ್ನು ಉತ್ತೇಜಿಸಲು, ವಿಶ್ವಾಸಾರ್ಹ ಮತ್ತು ಕಾನೂನುಬದ್ಧ ಆಡಳಿತವನ್ನು ಮರುಸ್ಥಾಪಿಸಲು ಮತ್ತು ಸಂಘರ್ಷದಿಂದ ಪ್ರಭಾವಿತವಾಗಿರುವ ಅಥವಾ ಬೆದರಿಕೆಯಿರುವ ಪ್ರದೇಶಗಳಲ್ಲಿ ಶಾಶ್ವತವಾದ ಶಾಂತಿಯನ್ನು ಕಾಪಾಡಲು ಪ್ರಯತ್ನಿಸುವ ಅಂತಾರಾಷ್ಟ್ರೀಯ ಸಂಸ್ಥೆಯಾಗಿದೆ' ಎಂದು ನಿಯಮಗಳಲ್ಲಿ ಹೇಳಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಖ್ಯಾತ ಗಾಯಕಿ ಎಸ್ ಜಾನಕಿಗೆ ಪುತ್ರ ಶೋಕ: ಹಠಾತ್ ಹೃದಯಾಘಾತಕ್ಕೆ ಬಲಿಯಾದ ಮುರಳಿ ಕೃಷ್ಣ!

T20 World cup ಟೂರ್ನಿಗೆ ಬಾಂಗ್ಲಾದೇಶ ಬಹಿಷ್ಕಾರ: 2 ಮಿಲಿಯನ್ ಡಾಲರ್ ದಂಡ; ಈ ತಂಡಕ್ಕೆ ಜಾಕ್‌ಪಾಟ್!

ದಾವೋಸ್ ಸಮಾವೇಶ: ವಿಜಯಪುರ, ಬಳ್ಳಾರಿಯಲ್ಲಿ ಸಂಜೀವ್ ಗೊಯೆಂಕಾ ಸಮೂಹ 10,500 ಕೋಟಿ ರೂ ಹೂಡಿಕೆ!

RCB ಖರೀದಿಗೆ 'ಆದಾರ್‌ ಪೂನಾವಾಲಾ' ತೀವ್ರ ಕಸರತ್ತು!

BBK12 ವಿಜೇತ ಗಿಲ್ಲಿ ನಟನಿಗೆ ಸಿಎಂ ಸಿದ್ದರಾಮಯ್ಯ ಅಭಿನಂದನೆ!

SCROLL FOR NEXT