ಡಿಯೋಜೆನೆಸ್ ಕ್ವಿಂಟೆರೊ 
ವಿದೇಶ

ಕೊಲಂಬಿಯಾ–ವೆನೆಜುವೆಲಾ ಗಡಿ ಬಳಿ ವಿಮಾನ ಪತನ: ಸಂಸದ ಸೇರಿ 15 ಮಂದಿ ದುರ್ಮರಣ

ದುರಂತದಲ್ಲಿ ಯಾರೂ ಬದುಕುಳಿದಿಲ್ಲ ಎಂದು ವಾಯುಯಾನ ಪ್ರಾಧಿಕಾರದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಬೀಚ್‌ಕ್ರಾಫ್ಟ್ 1900 ಟ್ವಿನ್-ಪ್ರೊಪೆಲ್ಲರ್ ದುರಂತಕ್ಕೀಡಾದ ಫ್ಲೈಟ್.

ಬೊಗೋಟಾ: ಸಂಸದ ಸೇರಿದಂತೆ 15 ಜನರನ್ನು ಹೊತ್ತೊಯ್ಯುತ್ತಿದ್ದ ವಿಮಾನವು ಬುಧವಾರ ಕೊಲಂಬಿಯಾ-ವೆನೆಜುವೆಲಾದ ಗಡಿಯ ಬಳಿ ಪತನಗೊಂಡು ಎಲ್ಲಾ ಪ್ರಯಾಣಿಕರು ಮತ್ತು ಸಿಬ್ಬಂದಿ ಸಾವನ್ನಪ್ಪಿದ್ದಾರೆ.

ಸರ್ಕಾರಿ ವಿಮಾನಯಾನ ಸಂಸ್ಥೆ ಸಟೇನಾ ನಿರ್ವಹಿಸುತ್ತಿದ್ದ ಈ ವಿಮಾನವು ಗಡಿ ನಗರವಾದ ಕುಕುಟಾದಿಂದ ಹೊರಟು, ಮಧ್ಯಾಹ್ನ ಸುಮಾರು (1700GMT) ಹತ್ತಿರದ ಓಕಾನಾದಲ್ಲಿ ಇಳಿಯುವಾಗ ನಿಯಂತ್ರಣ ಕಳೆದುಕೊಂಡು ಪತನಗೊಂಡಿತು ಎಂದು ಕೊಲಂಬಿಯಾದ ನಾಗರಿಕ ವಿಮಾನಯಾನ ಪ್ರಾಧಿಕಾರ ತಿಳಿಸಿದೆ.

ದುರಂತದಲ್ಲಿ ಯಾರೂ ಬದುಕುಳಿದಿಲ್ಲ ಎಂದು ವಾಯುಯಾನ ಪ್ರಾಧಿಕಾರದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಬೀಚ್‌ಕ್ರಾಫ್ಟ್ 1900 ಟ್ವಿನ್-ಪ್ರೊಪೆಲ್ಲರ್ ದುರಂತಕ್ಕೀಡಾದ ಫ್ಲೈಟ್. ವಿಮಾನದಲ್ಲಿ 13 ಪ್ರಯಾಣಿಕರು ಮತ್ತು ಇಬ್ಬರು ಸಿಬ್ಬಂದಿ ಇದ್ದರು. ಅಪಘಾತ ಸಂಭವಿಸಿದ ಪ್ರದೇಶ ಪರ್ವತಮಯವಾಗಿದ್ದು, ಹವಾಮಾನ ಅಸ್ಥಿರತೆ ಹೆಚ್ಚಿರುವ ವಲಯವಾಗಿರುವುದು ರಕ್ಷಣಾ ಕಾರ್ಯಾಚರಣೆಗೆ ಸವಾಲಾಗಿ ಪರಿಣಮಿಸಿದೆ.

ವಿಮಾನದಲ್ಲಿದ್ದವರಲ್ಲಿ ಕೊಲಂಬಿಯಾ ಸಂಸತ್ ಸದಸ್ಯರೊಬ್ಬರು ಮತ್ತು ಮುಂದಿನ ಚುನಾವಣೆಗೆ ಸ್ಪರ್ಧಿಸುತ್ತಿದ್ದ ಅಭ್ಯರ್ಥಿಯೊಬ್ಬರು ಸೇರಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ದುರಂತದ ಬಳಿಕ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗೆ ಕೊಲಂಬಿಯಾ ವಾಯುಪಡೆಯನ್ನು ನಿಯೋಜಿಸಲಾಗಿದೆ. ಅಪಘಾತದ ನಿಖರ ಕಾರಣ ತಿಳಿಯಲು ತನಿಖೆ ಮುಂದುವರಿದಿದೆ.

ಕುಕುಟಾ ಪ್ರದೇಶವು ಪರ್ವತಮಯವಾಗಿದ್ದು, ಹವಾಮಾನ ಬದಲಾಗುತ್ತಿರುತ್ತದೆ. ಈ ಪ್ರದೇಶಗಳು ಕೊಲಂಬಿಯಾದ ಅತಿದೊಡ್ಡ ಗೆರಿಲ್ಲಾ ಗ್ರೂಪ್, ನ್ಯಾಷನಲ್ ಲಿಬರೇಶನ್ ಆರ್ಮಿಯಿಂದ ನಿಯಂತ್ರಿಸಲ್ಪಡುತ್ತವೆ. ಇದು ಸ್ಪ್ಯಾನಿಷ್ ಸಂಕ್ಷಿಪ್ತ ರೂಪ ELN ನಿಂದ ಪ್ರಸಿದ್ಧವಾಗಿದೆ.‌

ವಿಮಾನವನ್ನು ಹುಡುಕಲು ಮತ್ತು ಶವಗಳನ್ನು ಹೊರತೆಗೆಯಲು ಸರ್ಕಾರ ವಾಯುಪಡೆಯನ್ನು ನಿಯೋಜಿಸಿತು. ಒಬ್ಬರು ಸಂಸದ ಮತ್ತು ಒಬ್ಬರು ಚುನಾವಣಾ ಅಭ್ಯರ್ಥಿ ವಿಮಾನದಲ್ಲಿದ್ದರು ಎನ್ನಲಾಗಿದೆ. ಕ್ವಿಂಟೆರೊ ಕೊಲಂಬಿಯಾದ ಚೇಂಬರ್ ಆಫ್ ಡೆಪ್ಯೂಟೀಸ್‌ನ ಸದಸ್ಯರಾಗಿದ್ದಾರೆ. ಸಾಲ್ಸೆಡೊ ಮುಂಬರುವ ಚುನಾವಣೆಗಳಿಗೆ ಅಭ್ಯರ್ಥಿಯಾಗಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಮಹಾರಾಷ್ಟ್ರದಲ್ಲಿ ಕ್ಷಿಪ್ರ ರಾಜಕೀಯ ಬೆಳವಣಿಗೆ: DCM ಆಗಿ ಅಜಿತ್‌ ಪವಾರ್‌ ಪತ್ನಿ ಸುನೇತ್ರಾ ಆಯ್ಕೆ, ಇಂದು ಸಂಜೆ 5ಕ್ಕೆ ಪ್ರಮಾಣವಚನ ಸ್ವೀಕಾರ?

ಮಕ್ಕಳಲ್ಲಿ ಹೆಚ್ಚುತ್ತಿರುವ ಮಾನಸಿಕ ಆರೋಗ್ಯ ಸಮಸ್ಯೆ: 16 ವರ್ಷದೊಳಗಿನವರಿಗೆ "social media" ಬಳಕೆ ನಿಷೇಧಕ್ಕೆ ರಾಜ್ಯ ಸರ್ಕಾರ ಚಿಂತನೆ..!

ಉದ್ಯಮಿ ರಾಯ್ ಆತ್ಮಹತ್ಯೆ: ತನಿಖೆ ನಡೆಸಿ ಜನರಿಗೆ ಸತ್ಯಾಂಶ ತಿಳಿಸುವುದು ನಮ್ಮ ಸರ್ಕಾರದ ಕೆಲಸ; ಡಿ.ಕೆ. ಶಿವಕುಮಾರ್

ಕಚೇರಿಯಲ್ಲಿ ಐಟಿ ಶೋಧ ನಡೆಯುತ್ತಿದ್ದಾಗಲೇ ಶೂಟ್ ಮಾಡಿಕೊಂಡ ಸಿ.ಜೆ ರಾಯ್; ಪೊಲೀಸ್ ಆಯುಕ್ತರು ಹೇಳಿದ್ದೇನು?

ಉಪ ಮುಖ್ಯಮಂತ್ರಿ ಹುದ್ದೆಯ ಬಗ್ಗೆ ಎನ್‌ಸಿಪಿ ನಿರ್ಧಾರವನ್ನು ಬೆಂಬಲಿಸುತ್ತೇವೆ: ಫಡ್ನವೀಸ್

SCROLL FOR NEXT