ಉಗ್ರರ ವಿರುದ್ಧದ ಕಾರ್ಯಾಚರಣೆಯ ಚಿತ್ರ 
ವಿದೇಶ

ಬಲೂಚಿಸ್ತಾನದಲ್ಲಿ ಉಗ್ರ ವಿರೋಧಿ ಕಾರ್ಯಾಚರಣೆ: 70 ಭಯೋತ್ಪಾದಕರು, 10 ಭದ್ರತಾ ಸಿಬ್ಬಂದಿ ಹತ್ಯೆ!

ಭದ್ರತಾ ಪಡೆಗಳ ಮೂಲಗಳ ಪ್ರಕಾರ, ಹತ್ಯೆಗೀಡಾದ ಉಗ್ರರ ಸಂಖ್ಯೆ 108 ಎನ್ನಲಾಗಿದೆ. ಆದಾಗ್ಯೂ, ಇಲ್ಲಿಯವರೆಗೂ 70 ಭಯೋತ್ಪಾದಕರು ಹತ್ಯೆಯಾಗಿರುವುದಾಗಿ ಬಲೂಚಿಸ್ತಾನ್ ಮುಖ್ಯಮಂತ್ರಿ ಸರ್ಫರಾಜ್ ಬುಗ್ತಿ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ಕರಾಚಿ: ಪಾಕಿಸ್ತಾನದ ಬಲೂಚಿಸ್ತಾನದ ವಿವಿಧೆಡೆ ಭದ್ರತಾ ಪಡೆಗಳು ನಡೆಸಿದ ಕಾರ್ಯಾಚರಣೆಯಲ್ಲಿ 70 ಭಯೋತ್ಪಾದಕರು ಹತ್ಯೆಯಾಗಿದ್ದಾರೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.

ಭದ್ರತಾ ಪಡೆಗಳ ಮೂಲಗಳ ಪ್ರಕಾರ, ಹತ್ಯೆಗೀಡಾದ ಉಗ್ರರ ಸಂಖ್ಯೆ 108 ಎನ್ನಲಾಗಿದೆ. ಆದಾಗ್ಯೂ, ಇಲ್ಲಿಯವರೆಗೂ 70 ಭಯೋತ್ಪಾದಕರು ಹತ್ಯೆಯಾಗಿದ್ದು, ಶುಕ್ರವಾರ ರಾತ್ರಿಯಿಂದ ಪ್ರಾರಂಭವಾದ ಕಾರ್ಯಾಚರಣೆಗಳು ಶನಿವಾರ ಸಂಜೆಯೂ ಮುಂದುವರೆದಿದೆ ಎಂದು ಬಲೂಚಿಸ್ತಾನ್ ಮುಖ್ಯಮಂತ್ರಿ ಸರ್ಫರಾಜ್ ಬುಗ್ತಿ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ಬಲೂಚಿಸ್ತಾನ್ ಲಿಬರೇಶನ್ ಆರ್ಮಿ (BLA) ಭಯೋತ್ಪಾದಕರು ಗ್ವಾದರ್‌ನಲ್ಲಿ ನಾಗರಿಕರನ್ನು ಕೊಂದಿದ್ದಾರೆ. ಗುರುವಾರ ಮತ್ತು ಶುಕ್ರವಾರ ಬಲೂಚಿಸ್ತಾನದ ಪಂಜ್‌ಗುರ್ ಮತ್ತು ಹರ್ನೈನಲ್ಲಿ ನಡೆದ ಪ್ರತ್ಯೇಕ ಕಾರ್ಯಾಚರಣೆಯಲ್ಲಿ 41 ಉಗ್ರರು ಹತರಾದ ನಂತರ ನಡೆದ ಕಾರ್ಯಾಚರಣೆಯಲ್ಲಿ 10 ಉಗ್ರರ ಹತ್ಯೆ ನಡೆದಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಫೆಬ್ರವರಿಯಿಂದ ಶನಿವಾರ ಸಂಜೆಯವರೆಗೂ ಕ್ವೆಟ್ಟಾ, ಗ್ವಾದಾರ್ ಸೇರಿದಂತೆ ವಿವಿಧ ಕಡೆಗಳಲ್ಲಿ ಕಾರ್ಯಾಚರಣೆ ನಡೆದಿರುವುದಾಗಿ ಬಲೋಚಿಸ್ತಾನ ಸರ್ಕಾರದ ವಕ್ತಾರ ಶಾಹೀದ್ ರಿಂದ್ ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಆಗ ಸಿದ್ಧಾರ್ಥ್, ಈಗ CJ Roy': 'ತೆರಿಗೆ ಭಯೋತ್ಪಾದನೆ'; ಐಟಿ ದಾಳಿ ಕುರಿತು ಕೇಂದ್ರಕ್ಕೆ ಉದ್ಯಮಿ Mohandas Pai ಪತ್ರ! Video

ಕೇಂದ್ರ ಬಜೆಟ್ 2026: Operation Sindoor ನಂತರ, ಭಯೋತ್ಪಾದಕ ಬೆದರಿಕೆಗಳ ನಡುವೆ ರಕ್ಷಣಾ ವಲಯಕ್ಕೆ ದಾಖಲೆಯ 6.81 ಲಕ್ಷ ಕೋಟಿ ಮೀಸಲು!

News headlines 01-02-2026| ಕೇಂದ್ರ ಬಜೆಟ್ ನಲ್ಲಿ ರಾಜ್ಯಕ್ಕೆ ಅನ್ಯಾಯ- ಸಿಎಂ; IT ದಾಳಿ ವಿರುದ್ಧ ಸಿಡಿದೆದ್ದ ಉದ್ಯಮಿ ಪೈ; ಪ್ರಧಾನಿ, ವಿತ್ತ ಸಚಿವೆಗೆ ಪತ್ರ; ದ್ವೇಷ ಭಾಷಣ ತಡೆ ಮಸೂದೆ ಅಂಕಿತಕ್ಕೆ ರಾಜ್ಯಪಾಲ ನಕಾರ

ಟೆನಿಸ್ ದಿಗ್ಗಜ ಜೊಕೊವಿಕ್ ರನ್ನು ಸೋಲಿಸಿ ಇತಿಹಾಸ ಸೃಷ್ಟಿ: ಚೊಚ್ಚಲ ಆಸ್ಟ್ರೇಲಿಯನ್ ಓಪನ್ ಗೆದ್ದ ಅಲ್ಕರಾಜ್

ಕೇಂದ್ರ ಬಜೆಟ್ ನಲ್ಲಿ ರಾಜ್ಯಕ್ಕೆ ಏನೂ ಕೊಟ್ಟಿಲ್ಲ, ಚೊಂಬು ಕೊಟ್ಟಿದೆ: ಸಿಎಂ ಸಿದ್ದರಾಮಯ್ಯ

SCROLL FOR NEXT