ತೈಲ ಹಡಗುಗಳು 
ವಿದೇಶ

ನೌಕಾ ದಿಗ್ಬಂಧನ ಉಲ್ಲಂಘನೆ: ಇರಾನ್‌ಗೆ ತೆರಳುತ್ತಿದ್ದ ಮೂರು ಹಡಗುಗಳಿಗೆ ಅಮೆರಿಕಾ ತಡೆ, 1 ಹಡಗು ವಶಕ್ಕೆ..!

ಜುಲೈ 16ರಂದು ಒಮಾನ್ ಕೊಲ್ಲಿಯಲ್ಲಿ ಅಮೆರಿಕದ 11ನೇ ಮೆರೈನ್ ಎಕ್ಸ್‌ಪಿಡಿಷನರಿ ಯುನಿಟ್ ಸಿಬ್ಬಂದಿ ಎಂ/ಟಿ ವೆನ್ ಯಾವೋ (M/T Wen Yao) ಹಡಗಿನಲ್ಲಿ ಪರಿಶೀಲನಾ ಕಾರ್ಯಾಚರಣೆ ನಡೆಸಿರುವುದಾಗಿ ಸೆಂಟ್‌ಕಾಮ್ ಹೇಳಿದೆ.

ವಾಷಿಂಗ್ಟನ್: ಇರಾನ್ ವಿರುದ್ಧ ಅಮೆರಿಕ ಜಾರಿಗೊಳಿಸಿರುವ ನೌಕಾ ದಿಗ್ಬಂಧನವನ್ನು ಉಲ್ಲಂಘಿಸಿ ಸಂಚರಿಸಲು ಯತ್ನಿಸಿದ್ದ ಮೂರು ವಾಣಿಜ್ಯ ಹಡಗುಗಳನ್ನು ಅಮೆರಿಕದ ಪಡೆಗಳು ತಡೆದಿವೆ ಎಂದು ಅಮೆರಿಕದ ಕೇಂದ್ರೀಯ ಕಮಾಂಡ್ (CENTCOM) ತಿಳಿಸಿದೆ.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ (X)ನಲ್ಲಿ ಪ್ರಕಟಣೆ ನೀಡಿರುವ ಸೆಂಟ್‌ಕಾಮ್, "ಇಲ್ಲಿಯವರೆಗೆ ನೌಕಾ ನಿರ್ಬಂಧ ಉಲ್ಲಂಘಿಸಲು ಯತ್ನಿಸಿದ್ದ ಮೂರು ವಾಣಿಜ್ಯ ಹಡಗುಗಳ ಮಾರ್ಗವನ್ನು ಅಮೆರಿಕದ ಪಡೆಗಳು ಬದಲಿಸಿವೆ. ಆದೇಶ ಪಾಲಿಸದ ಒಂದು ಹಡಗನ್ನು ನಿಷ್ಕ್ರಿಯಗೊಳಿಸಿದ್ದು, ಮತ್ತೊಂದು ಹಡಗನ್ನು ಪರಿಶೀಲನೆಗಾಗಿ ವಶಕ್ಕೆ ಪಡೆದು ನಿಯಮ ಪಾಲನೆ ಖಚಿತಪಡಿಸಲಾಗಿದೆ" ಎಂದು ತಿಳಿಸಿದೆ.

ಜುಲೈ 16ರಂದು ಒಮಾನ್ ಕೊಲ್ಲಿಯಲ್ಲಿ ಅಮೆರಿಕದ 11ನೇ ಮೆರೈನ್ ಎಕ್ಸ್‌ಪಿಡಿಷನರಿ ಯುನಿಟ್ ಸಿಬ್ಬಂದಿ ಎಂ/ಟಿ ವೆನ್ ಯಾವೋ (M/T Wen Yao) ಹಡಗಿನಲ್ಲಿ ಪರಿಶೀಲನಾ ಕಾರ್ಯಾಚರಣೆ ನಡೆಸಿರುವುದಾಗಿ ಸೆಂಟ್‌ಕಾಮ್ ಹೇಳಿದೆ.

ಮಂಗಳವಾರದಿಂದ ಇರಾನ್ ಬಂದರುಗಳಿಗೆ ಪ್ರವೇಶಿಸುವ ಹಾಗೂ ಅಲ್ಲಿಂದ ಹೊರಡುವ ಹಡಗುಗಳ ಮೇಲೆ ಅಮೆರಿಕ ಮತ್ತೆ ನೌಕಾ ನಿರ್ಬಂಧ ಜಾರಿಗೊಳಿಸಿದೆ.

"ಹಾರ್ಮುಜ್ ಜಲಸಂಧಿ ಮತ್ತು ಅದರ ಸುತ್ತಮುತ್ತಲಿನ ಸಮುದ್ರ ಮಾರ್ಗಗಳು ಮುಕ್ತವಾಗಿವೆ. ಆದರೆ, ಅಮೆರಿಕದ ನೌಕಾ ನಿರ್ಬಂಧ ಉಲ್ಲಂಘಿಸುವ ಹಡಗುಗಳಿಗೆ ಮಾತ್ರ ನಿರ್ಬಂಧ ಅನ್ವಯವಾಗುತ್ತದೆ" ಎಂದು ಸೆಂಟ್‌ಕಾಮ್ ತಿಳಿಸಿದೆ.

ಆರು ದಿನಗಳಿಂದ ಇರಾನ್ ಮೇಲೆ ದಾಳಿ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಳೆದ ವಾರ ಏಪ್ರಿಲ್‌ನಲ್ಲಿ ಘೋಷಿಸಲಾಗಿದ್ದ ಕದನ ವಿರಾಮ ಅಂತ್ಯಗೊಂಡಿದೆ ಎಂದು ಘೋಷಿಸಿದ ಬಳಿಕ, ಅಮೆರಿಕದ ಪಡೆಗಳು ಸತತ ಆರು ದಿನಗಳಿಂದ ಇರಾನ್‌ನ ಗುರಿಗಳ ಮೇಲೆ ದಾಳಿ ನಡೆಸುತ್ತಿವೆ.

ಇದಕ್ಕೂ ಮೊದಲು, ಅರೇಬಿಯನ್ ಕೊಲ್ಲಿಯಲ್ಲಿ ಇರಾನ್‌ನ ಖಾರ್ಗ್ ದ್ವೀಪದತ್ತ ಸಾಗುತ್ತಿದ್ದ 'ಕುರಕಾವೊ' ಧ್ವಜ ಹೊಂದಿದ್ದ ಎಂ/ಟಿ ಬೆಲ್ಮಾ (M/T Belma) ತೈಲ ಟ್ಯಾಂಕರ್ ಅಮೆರಿಕದ ನೌಕಾ ನಿರ್ಬಂಧವನ್ನು ಉಲ್ಲಂಘಿಸಲು ಯತ್ನಿಸಿದೆ ಎಂದು ಸೆಂಟ್‌ಕಾಮ್ ಆರೋಪಿಸಿತ್ತು.

ಅಮೆರಿಕದ ಪಡೆಗಳು ಹಲವು ಬಾರಿ ಎಚ್ಚರಿಕೆ ನೀಡಿದರೂ ಹಡಗು ಮಾರ್ಗ ಬದಲಿಸದ ಕಾರಣ, ವಿಮಾನದಿಂದ ಹೆಲ್‌ಫೈರ್ ಕ್ಷಿಪಣಿಗಳನ್ನು ಹಡಗಿನ ಹೊಗೆ ಕೊಳವೆಗೆ ಹಾರಿಸಿ ಅದನ್ನು ನಿಷ್ಕ್ರಿಯಗೊಳಿಸಲಾಗಿದೆ. "ಈ ಹಡಗು ಇನ್ನು ಮುಂದೆ ಇರಾನ್‌ನತ್ತ ಸಂಚರಿಸುತ್ತಿಲ್ಲ" ಎಂದು ಸೆಂಟ್‌ಕಾಮ್ ತಿಳಿಸಿತ್ತು.

ಎರಡು ಹಂತಗಳಲ್ಲಿ ವಾಯುದಾಳಿ

ಬುಧವಾರ ಅಮೆರಿಕದ ಪಡೆಗಳು ಇರಾನ್ ವಿರುದ್ಧ ಎರಡು ಹಂತಗಳಲ್ಲಿ ವಾಯುದಾಳಿ ನಡೆಸಿವೆ ಎಂದು ಸೆಂಟ್‌ಕಾಮ್ ತಿಳಿಸಿದೆ.

ಈ ದಾಳಿಗಳು ಹಾರ್ಮುಜ್ ಜಲಸಂಧಿಯಲ್ಲಿ ಮುಕ್ತವಾಗಿ ಸಂಚರಿಸುವ ಹಡಗುಗಳಿಗೆ ಬೆದರಿಕೆ ಒಡ್ಡಲು ಬಳಸಲಾಗುತ್ತಿದ್ದ ಇರಾನ್‌ನ ಸೇನಾ ಸಾಮರ್ಥ್ಯಗಳನ್ನು ಗುರಿಯಾಗಿಸಿಕೊಂಡಿವೆ ಎಂದು ಅಮೆರಿಕದ ಕೇಂದ್ರೀಯ ಕಮಾಂಡ್ ಹೇಳಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಡ್ರಗ್ಸ್ ಸೇವನೆ ದೃಢ: ಫುಕೆಟ್- ದೆಹಲಿ ಏರ್ ಇಂಡಿಯಾ ವಿಮಾನದ ಮುಖ್ಯ ಪೈಲಟ್ ವಜಾ!

ಜಮ್ಮು-ಕಾಶ್ಮೀರ: ಬುಡ್ಗಾಮ್‌ ಎನ್ ಕೌಂಟರ್ ನಲ್ಲಿ ಉಗ್ರನ ಹತ್ಯೆ; AK ರೈಫಲ್ ಮತ್ತಿತರ ಶಸ್ತ್ರಾಸ್ತ್ರಗಳು ವಶ!

‘ಹೂತುಹಾಕಬೇಕು ಎನ್ನುವವರಲ್ಲ ನಾವು’.. ‘ಮಹಿಳೆಯರಿಗೆ ಶಿಕ್ಷಣ, ಅವಕಾಶ ನೀಡುತ್ತಿದ್ದೇವೆ’: ‘ಮನೆಯಲ್ಲೇ ಇರಬೇಕು’ ಹೇಳಿಕೆಗೆ ಮುಸ್ಲಿಂ ಧರ್ಮಗುರು ಸ್ಪಷ್ಟನೆ, Video

Mysuru Dasara: 'ಯುವ ದಸರಾ' ಉದ್ಘಾಟನೆಗೆ ಖ್ಯಾತ ನೃತ್ಯ ನಿರ್ದೇಶಕ ಪ್ರಭುದೇವಗೆ ಆಹ್ವಾನ!

India without Politics: 'ಹನುಮಾನ್ ಅಂಶ್' ನೋಡಲು ಚಪ್ಪಲಿ ಬಿಚ್ಚಿ ಕುಳಿತ ಮುಸ್ಲಿಂ ವ್ಯಕ್ತಿ; video ವೈರಲ್