ಸಾಂದರ್ಭಿಕ ಚಿತ್ರ 
ವಿದೇಶ

ಆರ್ಥಿಕ ಬಿಕ್ಕಟ್ಟಿನಿಂದ ಪಾಕ್ ತತ್ತರ; ಮತ್ತೆ ಅಮೆರಿಕದ ಮುಂದೆ ಸಾಲಕ್ಕಾಗಿ ಕೈಚಾಚಿದ ಪಾಕಿಸ್ತಾನ!

ಅಂತರರಾಷ್ಟ್ರೀಯ ಹಣಕಾಸು ನಿಧಿ (IMF)ಯ ಬೇಲ್‌ಔಟ್ ಕಾರ್ಯಕ್ರಮದ ಹೊರತಾಗಿಯೂ, ಪಾಕಿಸ್ತಾನವು ದಶಕಗಳಲ್ಲೇ ಅತ್ಯಂತ ಕೆಟ್ಟ ಆರ್ಥಿಕ ಬಿಕ್ಕಟ್ಟಿಗೆ ತುತ್ತಾಗಿದೆ.

ವಾಷಿಂಗ್ಟನ್: ಆರ್ಥಿಕ ಬಿಕ್ಕಟ್ಟಿನಿಂದ ತತ್ತರಿಸಿರುವ ಪಾಕಿಸ್ತಾನವು ತನ್ನ ದುರ್ಬಲ ಆರ್ಥಿಕತೆಯನ್ನು ಬಲಪಡಿಸಲು 10 ಶತಕೋಟಿ ಡಾಲರ್‌ ಸಾಲ ನೀಡುವಂತೆ ಮತ್ತೆ ವಿಶ್ವದ ದೊಡ್ಡಣ ಅಮೆರಿಕದ ಮುಂದೈ ಕೈಚಾಚಿದೆ ಎಂದು ವರದಿಯಾಗಿದೆ.

ಅಮೆರಿಕದ ಖಜಾನೆ ಕಾರ್ಯದರ್ಶಿ ಸ್ಕಾಟ್ ಬೆಸೆಂಟ್‌ಗೆ ಪಾಕಿಸ್ತಾನ ಸಲ್ಲಿಸಿದ ಮನವಿಯಲ್ಲಿ, ಇಸ್ಲಾಮಾಬಾದ್, ವಾಷಿಂಗ್ಟನ್‌ನೊಂದಿಗೆ ಐದು ವರ್ಷಗಳ ಅವಧಿಗೆ 10 ಶತಕೋಟಿ ಡಾಲರ್‌ಗಳ 'ದ್ವಿಪಕ್ಷೀಯ ವಿನಿಮಯ ಸ್ಥಿರೀಕರಣ ಬೆಂಬಲ ಸೌಲಭ್ಯ' ಒದಗಿಸುವಂತೆ ಕೇಳಿದೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್ ವರದಿ ಮಾಡಿದೆ.

ಅಂತರರಾಷ್ಟ್ರೀಯ ಹಣಕಾಸು ನಿಧಿ (IMF)ಯ ಬೇಲ್‌ಔಟ್ ಕಾರ್ಯಕ್ರಮದ ಹೊರತಾಗಿಯೂ, ಪಾಕಿಸ್ತಾನವು ದಶಕಗಳಲ್ಲೇ ಅತ್ಯಂತ ಕೆಟ್ಟ ಆರ್ಥಿಕ ಬಿಕ್ಕಟ್ಟಿಗೆ ತುತ್ತಾಗಿದೆ. ಹೀಗಾಗಿ, ಸಾಲಕ್ಕಾಗಿ ಅಮೆರಿಕ ಬಳಿ ಕೈಚಾಚಿದೆ.

ಅಮೆರಿಕ-ಇರಾನ್ ಯುದ್ಧ ನಿಲ್ಲಿಸಲು ಆರಂಭವಾದ ಶಾಂತಿ ಒಪ್ಪಂದ ಮಾತುಕತೆ ವೇಳೆ ಪಾಕಿಸ್ತಾನ ಮಧ್ಯಸ್ಥಿಕೆ ವಹಿಸಿತ್ತು. ಇದು ತನ್ನ ರಾಜತಾಂತ್ರಿಕ ಪ್ರೊಫೈಲ್‌ ಅನ್ನು ಹೆಚ್ಚಿಸಿದೆ. ಹೀಗಾಗಿ ಪಾಕಿಸ್ತಾನ ಈಗ ವಾಷಿಂಗ್ಟನ್‌ ಮತ್ತು ಇತರ ಪಾಲುದಾರರಿಂದ ಆರ್ಥಿಕ ಲಾಭಗಳನ್ನು ಪಡೆಯಬಹುದು ಎಂಬ ನಿರೀಕ್ಷೆಯಲ್ಲಿದೆ.

ಒಂದು ಅಮೆರಿಕ ಪಾಕಿಸ್ತಾನ ಕೋರಿರುವ ಸಾಲಕ್ಕೆ ಅನುಮೋದನೆ ನೀಡಿದರೆ, ಈ ಸೌಲಭ್ಯವು ನಗದು ಕೊರತೆಯಿಂದ ಬಳಲುತ್ತಿರುವ ದಕ್ಷಿಣ ಏಷ್ಯಾದ ಆರ್ಥಿಕತೆಗೆ ಜೀವಸೆಲೆಯಾಗಬಹುದು. ಪಾಕಿಸ್ತಾನವು ತನ್ನ ಅಂತರರಾಷ್ಟ್ರೀಯ ಹಣಕಾಸು ನಿಧಿ ಕಾರ್ಯಕ್ರಮಕ್ಕೆ ಅನುಗುಣವಾಗಿ ಬಿಗಿಯಾದ ಹಣಕಾಸು ಮತ್ತು ವಿತ್ತೀಯ ನೀತಿಗಳನ್ನು ಕೈಗೊಂಡರೂ, ಇದು ಪಾಕಿಸ್ತಾನದ ಮೀಸಲನ್ನು ಬಲಪಡಿಸುತ್ತದೆ. ರೂಪಾಯಿ ಮೇಲಿನ ಒತ್ತಡವನ್ನು ಕಡಿಮೆ ಮಾಡುತ್ತದೆ. ಬಹುಪಕ್ಷೀಯ ಹಣಕಾಸಿನ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವ ಸಾಧ್ಯತೆ ಇದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

NICE ವಿವಾದ: ದೇವೇಗೌಡರು ಬೇಕಿದ್ರೆ ಕೋರ್ಟ್‌ಗೆ ಹೋಗಲಿ, ಉಪವಾಸ ಮಾಡಲಿ; ಮಾಜಿ ಪ್ರಧಾನಿ ಪತ್ರಕ್ಕೆ CM ಡಿಕೆಶಿ ತಿರುಗೇಟು

ಪಠ್ಯಪುಸ್ತಕದಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಪಟ್ಟಿಯಲ್ಲಿ ಪ್ರಧಾನಿ ಮೋದಿ ಹೆಸರು: ನೆಟ್ಟಿಗರಿಂದ ಟೀಕೆ

ಮಹಾ ಅಷ್ಟಮಿಯಂದು ಮದ್ಯದಂಗಡಿ ಮತ್ತು ಬಾರ್‌ಗಳು ಬಂದ್; ದುರ್ಗಾ ಪೂಜೆ ವೇಳೆ ಡಿಜೆ ಸಂಗೀತ ನಿಷೇಧ!

ಸಾಕು ಮಾಡಿ: ಸೇವಾಶ್ರಯ ಪ್ರಕರಣದಲ್ಲಿ ಕೊನೆಗೂ ಅಭಿಷೇಕ್ ಬ್ಯಾನರ್ಜಿಗೆ ಹೈಕೋರ್ಟ್‌ನಿಂದ ಬಿಗ್ ರಿಲೀಫ್, ಬಂಧನಕ್ಕೆ ತಡೆ!

ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಗುಡ್‌ನ್ಯೂಸ್‌; ಶೇ. 7.5 ರಷ್ಟು ಮೀಸಲಾತಿ – ಕರಡು ನಿಯಮ ಪ್ರಕಟ