ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ 
ವಿದೇಶ

Iranಗೆ Trump ಬಿಗ್ ಶಾಕ್: ಮುಟ್ಟುಗೋಲು ಆಸ್ತಿಯಿಂದಲೇ ಹಡಗುಗಳ ನಷ್ಟ ಭರಿಸಲು ಆದೇಶ..!

ಈ ಕ್ಷಣದಿಂದ, ಹಡಗುಗಳು, ಸರಕುಗಳು ಅಥವಾ ಅವುಗಳಿಗೆ ಸಂಬಂಧಿಸಿದ ಯಾವುದೇ ಆಸ್ತಿಗೆ ಉಂಟಾಗುವ ಎಲ್ಲ ರೀತಿಯ ಹಾನಿಗೆ ಅಮೆರಿಕದ ವಶದಲ್ಲಿರುವ ಹಾಗೂ ನಮ್ಮ ನಿಯಂತ್ರಣದಲ್ಲಿರುವ ಇರಾನ್‌ನ ಹಣದಿಂದಲೇ ಪರಿಹಾರ ನೀಡಲಾಗುತ್ತದೆ.

ವಾಷಿಂಗ್ಟನ್: ಇರಾನ್ ನಡೆಸಿದ ದಾಳಿಗಳಿಂದ ವಾಣಿಜ್ಯ ಹಡಗುಗಳು ಹಾಗೂ ಸರಕು ಸಾಗಣೆ ವ್ಯವಸ್ಥೆಗೆ ಉಂಟಾದ ಹಾನಿಗೆ ಪರಿಹಾರವನ್ನು ಅಮೆರಿಕದ ವಶದಲ್ಲಿರುವ ಇರಾನ್‌ನ ಮುಟ್ಟುಗೋಲು (Frozen) ಆಸ್ತಿಯಿಂದಲೇ ಭರಿಸಲಾಗುವುದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ.

ಈ ಕುರಿತು ತಮ್ಮ ಸಾಮಾಜಿಕ ಜಾಲತಾಣ ಟ್ರೂತ್ ಸೋಶಿಯಲ್ (Truth Social) ನಲ್ಲಿ ಪೋಸ್ಟ್ ಮಾಡಿರುವ ಟ್ರಂಪ್, ಇನ್ನು ಮುಂದೆ ಹಡಗುಗಳು, ಸರಕು ಸಾಗಣೆ ಅಥವಾ ಅದಕ್ಕೆ ಸಂಬಂಧಿಸಿದ ಯಾವುದೇ ಆಸ್ತಿಗೆ ಇರಾನ್‌ನ ದಾಳಿಯಿಂದ ಹಾನಿಯಾದರೆ, ಅದರ ಪರಿಹಾರವನ್ನು ಅಮೆರಿಕದ ನಿಯಂತ್ರಣದಲ್ಲಿರುವ ಇರಾನ್‌ನ ಆಸ್ತಿಯಿಂದಲೇ ನೀಡಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.

ಈ ಕ್ಷಣದಿಂದ, ಹಡಗುಗಳು, ಸರಕುಗಳು ಅಥವಾ ಅವುಗಳಿಗೆ ಸಂಬಂಧಿಸಿದ ಯಾವುದೇ ಆಸ್ತಿಗೆ ಉಂಟಾಗುವ ಎಲ್ಲ ರೀತಿಯ ಹಾನಿಗೆ ಅಮೆರಿಕದ ವಶದಲ್ಲಿರುವ ಹಾಗೂ ನಮ್ಮ ನಿಯಂತ್ರಣದಲ್ಲಿರುವ ಇರಾನ್‌ನ ಹಣದಿಂದಲೇ ಪರಿಹಾರ ನೀಡಲಾಗುತ್ತದೆ. ಈ ಹಾನಿಯ ಪ್ರಮಾಣ ದೊಡ್ಡದಾಗಿರಬಹುದು. ಆದರೂ ಇದೇ ನ್ಯಾಯಸಮ್ಮತ ಮತ್ತು ಸಮಾನತೆಯ ನಿರ್ಧಾರ" ಎಂದು ತಿಳಿಸಿದ್ದಾರೆ.

ಈ ಹೇಳಿಕೆಯು ಹಾರ್ಮುಜ್ ಜಲಸಂಧಿ ಹಾಗೂ ಗಲ್ಫ್ ಪ್ರದೇಶದಲ್ಲಿ ವಾಣಿಜ್ಯ ಹಡಗುಗಳ ಮೇಲೆ ನಡೆದ ದಾಳಿಗಳ ಹಿನ್ನೆಲೆಯಲ್ಲಿ ಮಹತ್ವ ಪಡೆದುಕೊಂಡಿದೆ.

ಇರಾನ್ ಬೆಂಬಲಿತ ಅಥವಾ ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ನಡೆಸಿದ ದಾಳಿಗಳಿಂದ ಹಲವು ವಾಣಿಜ್ಯ ಹಡಗುಗಳು ಅಪಾಯಕ್ಕೆ ಸಿಲುಕಿದ್ದು, ಜಾಗತಿಕ ಸಮುದ್ರ ವ್ಯಾಪಾರಕ್ಕೂ ಅಡ್ಡಿಯಾಗಿದೆ ಎಂದು ಅಮೆರಿಕ ಆರೋಪಿಸಿದೆ.

ಇದೇ ವೇಳೆ, ಅಮೆರಿಕ ಇರಾನ್ ವಿರುದ್ಧದ ತನ್ನ ಸೇನಾ ಕಾರ್ಯಾಚರಣೆಯನ್ನು ಮತ್ತಷ್ಟು ತೀವ್ರಗೊಳಿಸಿದೆ. ಗುರುವಾರ ರಾತ್ರಿ ಕೂಡ ಇರಾನ್‌ನ ವಿವಿಧ ಸೇನಾ ಗುರಿಗಳ ಮೇಲೆ ವೈಮಾನಿಕ ಮತ್ತು ಕ್ಷಿಪಣಿ ದಾಳಿ ನಡೆಸಲಾಗಿದ್ದು, ಇದು ಸತತ 13ನೇ ರಾತ್ರಿ ನಡೆದ ಅಮೆರಿಕದ ದಾಳಿಯಾಗಿದೆ.

ಅಮೆರಿಕದ ಸೆಂಟ್ರಲ್ ಕಮಾಂಡ್ (CENTCOM) ಈ ಕುರಿತು ಹೇಳಿಕೆ ನೀಡಿ, ಈ ಕಾರ್ಯಾಚರಣೆಯಲ್ಲಿ ಇರಾನ್‌ನ ಸೇನಾ ಕಮಾಂಡ್ ಕೇಂದ್ರಗಳು, ಡ್ರೋನ್ ಸಂಗ್ರಹ ಕೇಂದ್ರಗಳು, ಸಂವಹನ ಜಾಲಗಳು, ಕರಾವಳಿ ನಿಗಾ ವ್ಯವಸ್ಥೆಗಳು ಹಾಗೂ ಸಮುದ್ರ ಕಾರ್ಯಾಚರಣೆಗೆ ಸಂಬಂಧಿಸಿದ ಮೂಲಸೌಕರ್ಯಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದೆ ಎಂದು ತಿಳಿಸಿದೆ.

ಟ್ರಂಪ್ ಇತ್ತೀಚೆಗೆ ಇರಾನ್ ವಿರುದ್ಧ ಇನ್ನಷ್ಟು ದೊಡ್ಡ ಮಟ್ಟದ ಸೇನಾ ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನೂ ನೀಡಿದ್ದು, ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನತೆ ಮತ್ತಷ್ಟು ಹೆಚ್ಚುವ ಸಾಧ್ಯತೆ ಎದುರಾಗಿದೆ. ಅಮೆರಿಕದ ನಿರಂತರ ದಾಳಿಗಳು ಹಾಗೂ ಇರಾನ್‌ನ ಪ್ರತಿಕ್ರಿಯೆಗಳ ನಡುವೆ ಹೋರ್ಮುಜ್ ಜಲಸಂಧಿಯ ಭದ್ರತೆ, ಜಾಗತಿಕ ತೈಲ ಸರಬರಾಜು ಮತ್ತು ವಾಣಿಜ್ಯ ನೌಕಾಯಾನ ಕುರಿತು ವಿಶ್ವದ ಗಮನ ಕೇಂದ್ರೀಕೃತವಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

KPSC ಪಶು ವೈದ್ಯಾಧಿಕಾರಿಗಳ ನೇಮಕಾತಿ ಹಗರಣ: ಅಲೋಕ್ ಕುಮಾರ್ ನೇತೃತ್ವದಲ್ಲಿ SIT ರಚನೆ; ಹೈಕೋರ್ಟ್​​ನಿಂದ ಮಹತ್ವದ ಆದೇಶ

Bihar horror: ಅಪ್ರಾಪ್ತ ಜೋಡಿ ಅಡ್ಡಗಟ್ಟಿ ಲೈಂಗಿಕ ಕಿರುಕುಳ; ಆಂಧಭಕ್ತರೇ ಹೊಣೆ - ರಾಹುಲ್ ಗಾಂಧಿ

ರಷ್ಯಾ ಸಂಸತ್ ಚುನಾವಣೆ: 355ಕ್ಕೂ ಹೆಚ್ಚು ಸ್ಥಾನ ಗೆದ್ದ ಪುಟಿನ್ ಪಕ್ಷ; ಹೊಸ ಇತಿಹಾಸ ಸೃಷ್ಟಿ!

ಚಳಿ ಚಳಿ ತಾಳೆನು ಈ ಚಳಿಯಾ! ಹಿರಿಯ ನಟಿ ಅಂಬಿಕಾ ವಿರುದ್ಧ 46 ಕೋಟಿ ರೂ. ಮೌಲ್ಯದ ಚೆಕ್ ವಂಚನೆ ಪ್ರಕರಣ, ದೂರು ದಾಖಲು

ಉತ್ತರ ಕರ್ನಾಟಕದಲ್ಲಿ ಭಾರಿ ಮಳೆ: ಸಿಡಿಲು ಬಡಿದು ಇಬ್ಬರು ಮಹಿಳೆಯರು ಸೇರಿದಂತೆ ಮೂವರು ರೈತರ ಸಾವು!