ನವದೆಹಲಿ: ಕೆನಡಾದ ಎಡ್ಮಂಟನ್‌ನಲ್ಲಿ ಭಾರತೀಯ ಮೂಲದ ಮಹಿಳೆಯನ್ನು ಆಕೆಯ ಲಿವ್ ಇನ್ ಪ್ರಿಯಕರ ಹತ್ಯೆ ಮಾಡಿದ್ದು, ಆತನನ್ನು ಪೊಲೀಸರು ಬಂಧಿಸಿದ್ದಾರೆ.
ಪಂಜಾಬ್‌ನ ಲುಧಿಯಾನ ಜಿಲ್ಲೆಯ ಸಮ್ರಾಲಾ ಮೂಲದ ದಮನ್‌ಪ್ರೀತ್ ಕೌರ್ (23) ಹತ್ಯೆಯಾದ ಮಹಿಳೆ. ಆಕೆಯ ಪ್ರಿಯಕರ ರಿತೀಶ್ ಕುಮಾರ್ (22) ಕೊಲೆಗೈದ ಆರೋಪಿಯಾಗಿದ್ದಾನೆ.
ಜು.9 ರಂದು ರಿತೀಶ್ ಆಕೆಯ ಕತ್ತು ಹಿಸುಕಿ, ಮಾರಣಾಂತಿಕ ಹಲ್ಲೆ ಮಾಡಿದ್ದ. ಆಕೆ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದುದ್ದನ್ನು ಕಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಬಳಿಕ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದಾದ ಮೂರು ದಿನಗಳ ಬಳಿಕ ಚಿಕಿತ್ಸೆ ಫಲಿಸದೇ ಆಕೆ ಸಾವನ್ನಪ್ಪಿದ್ದಳು.
ತನಿಖೆ ನಡೆಸಿದ ಪೊಲೀಸರು ಜುಲೈ 14 ರಂದು ಇದು ಕೊಲೆ ಎಂದು ಘೋಷಿಸಿದ್ದರು. ಜು.22 ರಂದು ಆರೋಪಿಯನ್ನು ಬಂಧಿಸಿದ್ದರು. ಬಳಿಕ ಜುಲೈ 23 ರಂದು ಪೊಲೀಸರು ಮಹಿಳೆಯನ್ನು ಕತ್ತು ಹಿಸುಕಿಕೊಲೆ ಮಾಡಲಾಗಿದೆ ಎಂದು ಬಹಿರಂಗಪಡಿಸಿದರು. ತನಿಖೆ ಕಾರಣದಿಂದಾಗಿ ಈ ವಿಚಾರವನ್ನು ಪೊಲೀಸರು ಅಲ್ಲಿಯ ತನಕ ತಡೆಹಿಡಿದಿದ್ದರು ಎಂದು ತಿಳಿದು ಬಂದಿದೆ.