ಡೊನಾಲ್ಡ್‌ ಟ್ರಂಪ್‌ 
ವಿದೇಶ

Lindsey Graham ಅಂತ್ಯಕ್ರಿಯೆಯಲ್ಲಿ ನಿದ್ರೆಗೆ ಜಾರಿದ ಡೊನಾಲ್ಡ್ ಟ್ರಂಪ್‌: Video ವೈರಲ್, ವೈಟ್ ಹೌಸ್ ಹೇಳಿದ್ದೇನು?

ಅಂತ್ಯಕ್ರಿಯೆಯ ವೇಳೆ ಮೊದಲ ಸಾಲಿನಲ್ಲಿ ಕುಳಿತಿದ್ದ ಟ್ರಂಪ್ ಕೆಲ ಕ್ಷಣಗಳ ಕಾಲ ಕಣ್ಣು ಮುಚ್ಚಿಕೊಂಡು ತೂಕಡಿಸುತ್ತಿರುವಂತೆ ವಿಡಿಯೊದಲ್ಲಿ ಕಂಡು ಬಂದಿತ್ತು.

ವಾಷಿಂಗ್ಟನ್: ಇತ್ತೀಚೆಗೆ ನಿಧನರಾದ ಅಮೆರಿಕದ ಹಿರಿಯ ಸೆನೆಟರ್ ಲಿಂಡ್ಸೆ ಗ್ರಹಾಂ ಅವರ ಅಂತ್ಯಕ್ರಿಯೆಯ ಸಂದರ್ಭದಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ನಿದ್ದೆಗೆ ಜಾರಿದ್ದರು ಎಂಬ ವದಂತಿಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿವೆ.

ಕಾರ್ಯಕ್ರಮದ ವೇಳೆ ಟ್ರಂಪ್ ಅವರಿಗೆ ತೂಕಡಿಕೆ ಬಂದಂತೆ ಕಾಣುವ ವಿಡಿಯೊ ವೈರಲ್ ಆಗಿದ್ದು, ಇದಕ್ಕೆ ವೈಟ್ ಹೌಸ್ ಪ್ರತಿಕ್ರಿಯೆ ನೀಡಿ ಟ್ರಂಪ್ ನಿದ್ರಿಸುತ್ತಿರಲಿಲ್ಲ ಎಂದು ಸ್ಪಷ್ಟಪಡಿಸಿದೆ.

ಮಂಗಳವಾರ ವಾಷಿಂಗ್ಟನ್ ನ್ಯಾಷನಲ್ ಕ್ಯಾಥೆಡ್ರಲ್‌ನಲ್ಲಿ ನಡೆದ ಲಿಂಡ್ಸೆ ಗ್ರಹಾಂ ಅವರ ಅಂತ್ಯಕ್ರಿಯೆಯಲ್ಲಿ ಟ್ರಂಪ್ ಸೇರಿದಂತೆ ಹಲವು ಅಮೆರಿಕದ ಹಿರಿಯ ನಾಯಕರು ಮತ್ತು ವಿದೇಶಿ ಗಣ್ಯರು ಭಾಗವಹಿಸಿದ್ದರು.

ಅಂತ್ಯಕ್ರಿಯೆಯ ವೇಳೆ ಮೊದಲ ಸಾಲಿನಲ್ಲಿ ಕುಳಿತಿದ್ದ ಟ್ರಂಪ್ ಕೆಲ ಕ್ಷಣಗಳ ಕಾಲ ಕಣ್ಣು ಮುಚ್ಚಿಕೊಂಡು ತೂಕಡಿಸುತ್ತಿರುವಂತೆ ವಿಡಿಯೊದಲ್ಲಿ ಕಂಡು ಬಂದಿತ್ತು. ಇದೇ ವೇಳೆ ಅವರು ಟಿಕ್ ಟ್ಯಾಕ್ (Tic Tac) ಮಿಂಟ್ ತಿನ್ನುತ್ತಿದ್ದು, ತಮ್ಮ ಪಕ್ಕದಲ್ಲಿ ಕುಳಿತಿದ್ದ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಅವರಿಗೂ ಒಂದನ್ನು ನೀಡುತ್ತಿರುವ ದೃಶ್ಯವೂ ವೈರಲ್ ಆಗಿದೆ.

ವಿಡಿಯೊ ವೈರಲ್ ಆದ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು ವಿವಿಧ ರೀತಿಯ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ.

"ಇವರೇ ಪರಮಾಣು ಶಸ್ತ್ರಾಸ್ತ್ರಗಳ ಕೋಡ್ ಹೊಂದಿರುವ ವ್ಯಕ್ತಿ ಎಂಬುದನ್ನು ಮರೆಯಬೇಡಿ" ಎಂದು ಒಬ್ಬರು ಬರೆದುಕೊಂಡರೆ, ಮತ್ತೊಬ್ಬರು "ಮುಕ್ತ ಜಗತ್ತಿನ ನಾಯಕ ಇವರೇ" ಎಂದು ವ್ಯಂಗ್ಯವಾಡಿದ್ದಾರೆ.

"ಮಲಗಿರುವ ನಾಯಿಗಳು ಕಚ್ಚುವುದಿಲ್ಲ" ಎಂದು ಒಬ್ಬರು ಪ್ರತಿಕ್ರಿಯಿಸಿದರೆ, ಇನ್ನೊಬ್ಬರು "Rest in Peace ಎಂಬುದನ್ನು ಟ್ರಂಪ್ ಅಕ್ಷರಶಃ ಪಾಲಿಸುತ್ತಿದ್ದಾರೆ ಅನಿಸುತ್ತದೆ" ಎಂದು ಟೀಕಿಸಿದರು. ಕೆಲವರು ಮಾತ್ರ "ಅವರು ಪ್ರಾರ್ಥನೆಯಲ್ಲಿ ಮಗ್ನರಾಗಿರಬಹುದು" ಎಂದು ಟ್ರಂಪ್ ಅವರನ್ನು ಸಮರ್ಥಿಸಿಕೊಂಡಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ ವೈಟ್ ಹೌಸ್ ವಕ್ತಾರ ಡೇವಿಸ್ ಇಂಗಲ್, ಟ್ರಂಪ್ ನಿದ್ರೆಗೆ ಜಾರಿದ್ದರು ಎಂಬ ಆರೋಪವನ್ನು ಸಂಪೂರ್ಣವಾಗಿ ತಳ್ಳಿಹಾಕಿದರು.

ಅಧ್ಯಕ್ಷ ಟ್ರಂಪ್ ತಮ್ಮ ಆತ್ಮೀಯ ಸ್ನೇಹಿತ ಲಿಂಡ್ಸೆ ಗ್ರಹಾಂ ಅವರನ್ನು ಕಳೆದುಕೊಂಡ ದುಃಖದಲ್ಲಿ ಮಗ್ನರಾಗಿದ್ದರು. ಅವರು ಕಾರ್ಯಕ್ರಮದಲ್ಲಿ ಅತ್ಯಂತ ಭಾವನಾತ್ಮಕ ಶ್ರದ್ಧಾಂಜಲಿ ಭಾಷಣ ಮಾಡಿದರು. ಅವರು ಮಲಗಿದ್ದರು ಎಂದು ಹೇಳುತ್ತಿರುವವರು ಸಂಪೂರ್ಣವಾಗಿ ತಪ್ಪು ಮಾಹಿತಿಯನ್ನು ಹರಡುತ್ತಿದ್ದಾರೆ" ಎಂದು ತಿಳಿಸಿದ್ದಾರೆ.

ಕಳೆದ ವರ್ಷ ಅಮೆರಿಕದ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಅತಿ ಹೆಚ್ಚು ವಯಸ್ಸಿನ ವ್ಯಕ್ತಿ ಎಂಬ ದಾಖಲೆ ನಿರ್ಮಿಸಿದ್ದ ಟ್ರಂಪ್ ಅವರ ಆರೋಗ್ಯದ ಬಗ್ಗೆ ಈ ಹಿಂದೆಯೂ ಹಲವು ಬಾರಿ ಪ್ರಶ್ನೆಗಳು ಕೇಳಿಬಂದಿದ್ದವು.

ವಿವಿಧ ಅಧಿಕೃತ ಕಾರ್ಯಕ್ರಮಗಳಲ್ಲಿಯೂ ಅವರು ತೂಕಡಿಸುತ್ತಿರುವಂತೆ ಕಂಡುಬಂದಿದ್ದಾರೆ ಎಂಬ ಟೀಕೆಗಳು ವ್ಯಕ್ತವಾಗಿದ್ದವು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಇರಾಕ್‌ನಲ್ಲಿ ಅಮೆರಿಕ-ಸೌದಿ ಜಂಟಿ ವಾಯುದಾಳಿ: ಇರಾನ್ ಬೆಂಬಲಿತ ಉಗ್ರ ನೆಲೆಗಳು ಧ್ವಂಸ, ಮಧ್ಯಪ್ರಾಚ್ಯ ಮತ್ತೆ ಉದ್ವಿಗ್ನ..!

ರಾಜ್ಯ ಸಚಿವ ಸಂಪುಟ ವಿಸ್ತರಣೆ: ಇಂದೇ ರಾಹುಲ್ ಗಾಂಧಿ ಒಪ್ಪಿಗೆ ಸಾಧ್ಯತೆ, ನಾಳೆ ಸಂಜೆ ನೂತನ ಸಚಿವರ ಪಟ್ಟಾಭಿಷೇಕ..?

ಪಾದಚಾರಿ ಮಾರ್ಗದಲ್ಲಿ Bescom ಅಟಾಟೋಪಕ್ಕೆ ಬ್ರೇಕ್; ಸಚಿವ ಕೃಷ್ಣ ಬೈರೇಗೌಡ ಖಡಕ್ ವಾರ್ನಿಂಗ್..!

ಕರಾವಳಿಯಲ್ಲಿ ವಿಷ ಬಿತ್ತಿದರೆ ಪರಿಣಾಮ ನೆಟ್ಟಗಿರಲ್ಲ, ಅರಬ್ಬಿ ಸಮುದ್ರದ ಮೀನುಗಳಿಗೆ ಆಹಾರವಾಗ್ತೀರಿ: ಪ್ರಕಾಶ್ ರಾಜ್‌ಗೆ ಉಡುಪಿ BJP ಶಾಸಕ ಎಚ್ಚರಿಕೆ..!

ಸುಪ್ರೀಂನ ಮಧ್ಯಂತರ ಆದೇಶ ವಿದ್ಯಾರ್ಥಿಗಳ ವಿರುದ್ಧ ದುರ್ಬಳಕೆಯಾಗುವ ಸಾಧ್ಯತೆ: 'ಕಿರುಕುಳ' ಮುಂದುವರಿದರೆ ಸರಿ ಇರಲ್ಲ- ದೀಪ್ಕೆ ವಾರ್ನಿಂಗ್!