ಡೊನಾಲ್ಡ್ ಟ್ರಂಪ್, ಬೆಂಜಮಿನ್ ನೆತನ್ಯಾಹು Associated Press
ವಿದೇಶ

ನೆತನ್ಯಾಹು 'ಹುಚ್ಚ'; ಇರಾನ್ ಜೊತೆಗಿನ ಶಾಂತಿ ಮಾತುಕತೆ ಹಳ್ಳಹಿಡಿಸುತ್ತಿದ್ದಾರೆ: ಡೊನಾಲ್ಡ್ ಟ್ರಂಪ್

ಲೆಬನಾನ್‌ನಲ್ಲಿ ಹೆಜ್ಬೊಲ್ಲಾ ವಿರುದ್ಧ ಇಸ್ರೇಲ್ ನಡೆಸುತ್ತಿರುವ ದಾಳಿಗಳು ಇರಾನ್‌ನೊಂದಿಗಿನ ಶಾಂತಿ ಮಾತುಕತೆಗೆ ಅಡ್ಡಿಯಾಗುತ್ತಿದೆ ಎಂದು ಭಾಸವಾಗಿದ್ದು ಹೀಗಾಗಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹುಗೆ 'ಹುಚ್ಚ' ಎಂದು ಕರೆದಿದ್ದೇನೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ಲೆಬನಾನ್‌ನಲ್ಲಿ ಹೆಜ್ಬೊಲ್ಲಾ ವಿರುದ್ಧ ಇಸ್ರೇಲ್ ನಡೆಸುತ್ತಿರುವ ದಾಳಿಗಳು ಇರಾನ್‌ನೊಂದಿಗಿನ ಶಾಂತಿ ಮಾತುಕತೆಗೆ ಅಡ್ಡಿಯಾಗುತ್ತಿದೆ ಎಂದು ಭಾಸವಾಗಿದ್ದು ಹೀಗಾಗಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹುಗೆ 'ಹುಚ್ಚ' ಎಂದು ಕರೆದಿದ್ದೇನೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾರೆ. ಈ ಬಗ್ಗೆ ಸ್ವಲ್ಪ ಅಸಮಾಧಾನವಾಗಿದ್ದರೂ ನೆತನ್ಯಾಹು ಜೊತೆಗಿನ ತಮ್ಮ ಸಂಬಂಧ ಇನ್ನೂ ಉತ್ತಮವಾಗಿದೆ ಎಂದು ಟ್ರಂಪ್ ಹೇಳಿದರು.

ಮನಸ್ಥಾಪ ಒಪ್ಪಿಕೊಂಡರೂ, ನೆತನ್ಯಾಹು ಅವರೊಂದಿಗಿನ ತಮ್ಮ ಸಂಬಂಧವು ಇನ್ನೂ ಬಲವಾಗಿದೆ. ನಾವಿಬ್ಬರೂ 'ಯುದ್ಧಕಾಲದ' ನಾಯಕರಾಗಿರುವುದರಿಂದ ನಾವು ಚೆನ್ನಾಗಿ ಹೊಂದಿಕೊಂಡಿದ್ದೇವೆ ಎಂದು ಟ್ರಂಪ್ ಸಮರ್ಥಿಸಿಕೊಂಡರು.ನಾವು ಒಟ್ಟಿಗೆ ಉತ್ತಮ ಕೆಲಸ ಮಾಡಿದ್ದೇವೆ. ನನಗೆ ಬೆಂಜಮಿನ್ ನೆತನ್ಯಾಹು ತುಂಬಾ ಇಷ್ಟ. ನಾನು ಅವರೊಂದಿಗೆ ಚೆನ್ನಾಗಿ ಕೆಲಸ ಮಾಡುತ್ತೇನೆ ಎಂದು ಟ್ರಂಪ್ ಹೇಳಿದರು.

ನೆತನ್ಯಾಹು ಅವರೊಂದಿಗಿನ ತಮ್ಮ ಫೋನ್ ಕರೆ ಸಂಘರ್ಷ ಮಯವಾಗಿತ್ತು ಎಂದು ಟ್ರಂಪ್ ಒಪ್ಪಿಕೊಂಡರು. ಇರಾನ್ ಜೊತೆಗಿನ ಯುದ್ಧದಿಂದಾಗಿ ಅಮೆರಿಕದ ಮೇಲೆ ಒತ್ತಡ ಹೆಚ್ಚುತ್ತಿದೆ. ಇಂಧನ ಬೆಲೆಗಳು ಮತ್ತು ಆರ್ಥಿಕ ಅನಿಶ್ಚಿತತೆಯು ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷಕ್ಕೆ ಹಾನಿ ಮಾಡುತ್ತದೆ. ಅಲ್ಲದೆ ಜಾಗತಿಕ ವ್ಯಾಪಾರದ ಮೇಲೆ ಪರಿಣಾಮ ಬೀರುತ್ತದೆ.

ಸಂಘರ್ಷ ಯಾವಾಗ ಕೊನೆಗೊಳ್ಳುತ್ತದೆ ಎಂಬುದರ ಬಗ್ಗೆ ತನಗೆ ಖಚಿತವಿಲ್ಲ ಎಂದು ಟ್ರಂಪ್ ಹೇಳಿದರು. ಹಾರ್ಮುಜ್ ಜಲಸಂಧಿಯನ್ನು ಸೆಪ್ಟೆಂಬರ್ 7ರವರೆಗೆ ಮುಚ್ಚಿರಬಹುದು ಎಂದು ಸುಳಿವು ನೀಡಿದರು. ಇರಾನ್ ಪರಮಾಣು ಶಸ್ತ್ರಾಸ್ತ್ರಗಳ ಅನ್ವೇಷಣೆಯನ್ನು ನಿಲ್ಲಿಸಿ, ತೈಲ ಮತ್ತು ಅನಿಲ ಪೂರೈಕೆಗಾಗಿ ಜಲಸಂಧಿಯನ್ನು ಮತ್ತೆ ತೆರೆಯಬೇಕೆಂದು ಟ್ರಂಪ್ ಬಯಸುತ್ತಿದ್ದಾರೆ.

ಮೊಜ್ತಬಾ ಖಮೇನಿ ಮಾತುಕತೆಯಲ್ಲಿ ಭಾಗಿ: ಟ್ರಂಪ್

ಇರಾನ್‌ನ ಸರ್ವೋಚ್ಚ ನಾಯಕ ಮೊಜ್ತಬಾ ಖಮೇನಿ ಶಾಂತಿ ಮಾತುಕತೆಯಲ್ಲಿ ಭಾಗಿಯಾಗಿದ್ದಾರೆ ಎಂದು ಅಮೆರಿಕ ಅಧ್ಯಕ್ಷರು ಹೇಳಿದ್ದಾರೆ. ಅವರ ಬಗ್ಗೆ ತಮಗೆ ಅಪಾರ ಗೌರವವಿದೆ. ದಾಳಿಯಲ್ಲಿ ಉಂಟಾದ ಗಾಯಗಳಿಂದಾಗಿ ಖಮೇನಿ ಆರೋಗ್ಯವಾಗಿಲ್ಲ ಎಂದು ಟ್ರಂಪ್ ಹೇಳಿಕೊಂಡಿದ್ದಾರೆ. ಆದರೆ ಮಾತುಕತೆಗಳನ್ನು ಇನ್ನೂ ಅನುಮೋದಿಸುತ್ತಿದ್ದಾರೆ. ಆದಾಗ್ಯೂ, ಈ ಹೇಳಿಕೆಗಳನ್ನು ಸ್ವತಂತ್ರವಾಗಿ ದೃಢೀಕರಿಸಲಾಗಿಲ್ಲ. ಖಮೇನಿಯನ್ನು ಭೇಟಿಯಾಗುವ ಸಮಯ ಇನ್ನೂ ಸಿಕ್ಕಿಲ್ಲ ಎಂದು ಟ್ರಂಪ್ ಹೇಳಿದ್ದಾರೆ.

ಏತನ್ಮಧ್ಯೆ, ಲೆಬನಾನ್‌ನಲ್ಲಿನ ಉದ್ವಿಗ್ನತೆ ಕಡಿಮೆಯಾಗುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ. ಬುಧವಾರ, ಬೈರುತ್‌ನ ದಕ್ಷಿಣದ ಜನನಿಬಿಡ ಹೆದ್ದಾರಿಯಲ್ಲಿ ಇಸ್ರೇಲಿ ದಾಳಿಯಲ್ಲಿ ಕಾರೊಂದು ನಜ್ಜುಗುಜ್ಜಾಗಿದೆ. ಲೆಬನಾನ್ ಮತ್ತು ಇಸ್ರೇಲ್ ನಡುವಿನ ವಾಷಿಂಗ್ಟನ್‌ನಲ್ಲಿ ಎರಡನೇ ದಿನದ ಮಾತುಕತೆಗೆ ಮುಂಚಿತವಾಗಿ ಈ ದಾಳಿ ನಡೆದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

BRICS 2026: Modi-Putin ಭೇಟಿ; ಆಪ್ತ ಮಿತ್ರನಿಗೆ ಪ್ರಧಾನಿಯಿಂದ ಪವಿತ್ರ, ವಿಶೇಷ ಉಡುಗೊರೆ! Video

BRICS 2026: ಭಾರತ ಭಿನ್ನಾಭಿಪ್ರಾಯಗಳನ್ನು ಸರಿಯಾಗಿ ನಿರ್ವಹಿಸಲಿ- ಕ್ಸೀ ಜಿನ್ಪಿಂಗ್ ಭಾರತ ಭೇಟಿಗೂ ಮುನ್ನ ಚೀನಾ

ನಿಮ್ಮ ಹೇಳಿಕೆಯಿಂದ ಪಕ್ಷಕ್ಕೆ ಡ್ಯಾಮೇಜ್ ಆಗಬಹುದು: ಸಿದ್ದರಾಮಯ್ಯ ರಾಜಕೀಯ ನಿವೃತ್ತಿ ಹೇಳಿಕೆಗೆ ರಾಹುಲ್​​ ಗಾಂಧಿ ಆಕ್ಷೇಪ

ದೇವಸ್ಥಾನದಲ್ಲಿ ಮೀನು ತಿಂದ ಸುವೇಂದು ಅಧಿಕಾರಿ: ಬಾಗೇಶ್ವರ್ ಬಾಬಾಗೆ ತಿರುಗೇಟು; CM ಮಾಂಸಾಹಾರ ಸೇವನೆ ಬಗ್ಗೆ ಬಿಜೆಪಿ ಹೇಳಿದ್ದೇನು? Video

ಜೈಪುರದಲ್ಲಿ ಘೋರ ಕೃತ್ಯ: ಪತ್ನಿ, ಮೂವರು ಹೆಣ್ಣು ಮಕ್ಕಳ ತಲೆಯನ್ನು ಬ್ರಿಕ್'ನಿಂದ ಜಜ್ಜಿ ಕೊಂದ ಕ್ರೂರಿ!