ಡೊನಾಲ್ಡ್ ಟ್ರಂಪ್, ಪತ್ರಕರ್ತೆ ಕ್ರಿಸ್ಟನ್ ವೆಲ್ಕರ್ 
ವಿದೇಶ

You're Crooked: ಪರ್ತಕರ್ತೆ ಕೇಳಿದ ಪ್ರಶ್ನೆಗೆ ಅಮೆರಿಕ ಅಧ್ಯಕ್ಷ ತಬ್ಬಿಬ್ಬು; TV ಸಂದರ್ಶನ ಮೊಟಕುಗೊಳಿಸಿ, ಮಧ್ಯದಲ್ಲಿಯೇ ಹೊರನಡೆದ ಟ್ರಂಪ್! Video

ವಿಸ್ಕಾನ್ಸಿನ್‌ನಲ್ಲಿ ನಡೆದ ಚುನಾವಣೆಗಳ ಬಗ್ಗೆ ಟ್ರಂಪ್ ಅವರ ಪುನರಾವರ್ತಿತ ಹೇಳಿಕೆಗಳನ್ನು ವೆಲ್ಕರ್ ಪ್ರಶ್ನಿಸಿದ ನಂತರ ಕೋಪಗೊಂಡ ಟ್ರಂಪ್, ನಿಮ್ಮ ತಲೆ ಸರಿಯಿಲ್ಲ ಎಂದು ಹೇಳಿ ಸಂದರ್ಶನವನ್ನು ಅರ್ಧದಲ್ಲಿಯೇ ಮೊಟಕುಗೊಳಿಸಿ ಹೊರ ನಡೆದಿದ್ದಾರೆ.

ವಾಷಿಂಗ್ಟನ್: NBC ನ್ಯೂಸ್ ಚಾನೆಲ್ ಪತ್ರಕರ್ತೆ ಕ್ರಿಸ್ಟನ್ ವೆಲ್ಕರ್ ಕೇಳಿದ ಪ್ರಶ್ನೆಯಿಂದ ಕೋಪಗೊಂಡ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇಂಟರ್ವ್ಯೂ ಮಧ್ಯೆದಲ್ಲಿಯೇ ಹೊರ ನಡೆದಿದ್ದಾರೆ.

ವಿಸ್ಕಾನ್ಸಿನ್‌ನಲ್ಲಿ ನಡೆದ ಚುನಾವಣೆಗಳ ಬಗ್ಗೆ ಟ್ರಂಪ್ ಅವರ ಪುನರಾವರ್ತಿತ ಹೇಳಿಕೆಗಳನ್ನು ವೆಲ್ಕರ್ ಪ್ರಶ್ನಿಸಿದ ನಂತರ ಕೋಪಗೊಂಡ ಟ್ರಂಪ್, ನಿಮ್ಮ ತಲೆ ಸರಿಯಿಲ್ಲ ಎಂದು ಹೇಳಿ ಸಂದರ್ಶನವನ್ನು ಅರ್ಧದಲ್ಲಿಯೇ ಮೊಟಕುಗೊಳಿಸಿ ಹೊರ ನಡೆದಿದ್ದಾರೆ.

ಅಮೆರಿಕದಲ್ಲಿನ ಅಕ್ರಮ ಚುನಾವಣೆಗಳ ಬಗ್ಗೆ ಟ್ರಂಪ್ ಪದೇ ಪದೇ ಹೇಳಿದ ಹೇಳಿಕೆಗಳನ್ನು ವೆಲ್ಕರ್ ಪ್ರಶ್ನಿಸಿದ ನಂತರ ಮಾತಿನ ಚಕಮಕಿ ನಡೆದಿದೆ. ಪ್ರಮುಖ ಮಾಧ್ಯಮ ಸಂಸ್ಥೆಗಳ ಮೇಲೆ ಟ್ರಂಪ್ ಅವರ ನಿರಂತರ ದಾಳಿ ಹಾಗೂ ಪುರಾವೆಗಳ ಕೊರತೆ ನಡುವೆ ಅಮೆರಿಕದ ಚುನಾವಣೆಗಳು ದೋಷಪೂರಿತವಾಗಿವೆ ಎಂಬ ಹೇಳಿಕೆ ಕುರಿತು ಗಮನ ಸೆಳೆದಾಗ ಈ ಘಟನೆ ನಡೆದಿದೆ.

ಕ್ಯಾಲಿಫೋರ್ನಿಯಾದಂತಹ ರಾಜ್ಯಗಳಲ್ಲಿನ ಚುನಾವಣೆಗಳು ವಿಕೃತ"ವಾಗಿವೆ ಎಂಬ ಟ್ರಂಪ್ ಅವರ ಹೇಳಿಕೆಯನ್ನು ವೆಲ್ಕರ್ ತಳ್ಳಿಹಾಕಿದಾಗ ಸಂದರ್ಶನ ತಾರಕಕ್ಕೇರಿತು ಎಂದು ವರದಿಯಾಗಿದೆ. ಈ ಹೇಳಿಕೆಯನ್ನು ಬೆಂಬಲಿಸಲು ಅವರ ಬಳಿ ಪುರಾವೆಗಳಿವೆಯೇ ಎಂದು ಕೇಳಿದಾಗ, "ನಾನು ಮಾಡಬೇಕಾಗಿರುವುದು ನೋಡುವುದಷ್ಟೇ ಎಂದಿದ್ದಾರೆ.

ನಂತರ ವೆಲ್ಕರ್ ನೋಡುವುದು "ಪುರಾವೆಯಲ್ಲ" ಎಂದು ಉತ್ತರಿಸಿದ್ದಾರೆ. ಇದರಿಂದ ಕೋಪಗೊಂಡ ಟ್ರಂಪ್ ಅರ್ಧದಲ್ಲಿಯೇ ಸಂದರ್ಶನ ಮೊಟಕುಗೊಳಿಸಿ ಹೊರನಡೆದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!