ಡೊನಾಲ್ಡ್ ಟ್ರಂಪ್ 
ವಿದೇಶ

ಇನ್ನು 18 ದಿನಗಳಲ್ಲಿ ಇರಾನ್ ವಿರುದ್ಧದ ಯುದ್ಧ ಅಂತ್ಯ; 'ಗೆಲುವು ಸಂಪೂರ್ಣ ನಮ್ಮದೇ': ಡೊನಾಲ್ಡ್ ಟ್ರಂಪ್ ಭರವಸೆ

ಅಷ್ಟರೊಳಗೆ ಹೊಸ ಪರಮಾಣು ಒಪ್ಪಂದ ಪೂರ್ಣಗೊಳ್ಳುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇರಾನ್ ಮತ್ತು ಇಸ್ರೇಲ್ ವಾರಾಂತ್ಯದ ಪ್ರತೀಕಾರದ ಮಿಲಿಟರಿ ದಾಳಿಗಳಿಂದ ಹಿಂದೆ ಸರಿದಂತೆ ಅಮೆರಿಕ ಅಧ್ಯಕ್ಷರು ಈ ರೀತಿ ಹೇಳಿದ್ದಾರೆ.

ವಾಷಿಂಗ್ಟನ್: ಮುಂದಿನ ಹದಿನೈದು ದಿನಗಳಲ್ಲಿ ಅಮೆರಿಕ ಇರಾನ್ ವಿರುದ್ಧ "ಸಂಪೂರ್ಣ ಗೆಲುವು" ಸಾಧಿಸುತ್ತದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರತಿಪಾದಿಸಿದ್ದಾರೆ.

ಅಷ್ಟರೊಳಗೆ ಹೊಸ ಪರಮಾಣು ಒಪ್ಪಂದ ಪೂರ್ಣಗೊಳ್ಳುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇರಾನ್ ಮತ್ತು ಇಸ್ರೇಲ್ ವಾರಾಂತ್ಯದ ಪ್ರತೀಕಾರದ ಮಿಲಿಟರಿ ದಾಳಿಗಳಿಂದ ಹಿಂದೆ ಸರಿದಂತೆ ಅಮೆರಿಕ ಅಧ್ಯಕ್ಷರು ಈ ರೀತಿ ಹೇಳಿದ್ದಾರೆ.

ವರ್ಚುವಲ್ ಫೋನ್ ಕಾರ್ಯಕ್ರಮವಾದ ಪ್ರಚಾರ ಟೆಲಿ Rally ಯಲ್ಲಿ ಬೆಂಬಲಿಗರನ್ನುದ್ದೇಶಿಸಿ ಮಾತನಾಡಿದ ಯುಎಸ್ ಅಧ್ಯಕ್ಷರು, ಈ ರೀತಿಯ ಹೇಳಿಕೆ ನೀಡಿದರು. ಇರಾನ್ ಜೊತೆಗಿನ ರಾಜತಾಂತ್ರಿಕ ಮಾತುಕತೆಯಲ್ಲಿ ಗಮನಾರ್ಹ ಪ್ರಮಾಣದಲ್ಲಿ ಪ್ರಗತಿಯಾಗಿದೆ. ವಾಷಿಂಗ್ಟನ್‌ನ ಪ್ರಮುಖ ಕಾರ್ಯತಂತ್ರದ ಬೇಡಿಕೆಗಳನ್ನು ಇರಾನ್ ಒಪ್ಪಿಕೊಳ್ಳಬೇಕಾಗಿದೆ ಎಂದರು.

ನಾವು ಈಗ ಮಾತುಕತೆ ನಡೆಸುತ್ತಿದ್ದೇವೆ. ಅವರು ಉತ್ತಮ ಒಪ್ಪಂದ ಮಾಡಿಕೊಳ್ಳಲು ಬಯಸುತ್ತಿದ್ದಾರೆ. ಅವರು ನಮಗೆ ಎಲ್ಲವನ್ನೂ ನೀಡಲು ಸಿದ್ಧರಿದ್ದಾರೆ. ಯಾವುದೇ ಪರಮಾಣು ಶಸ್ತ್ರಾಸ್ತ್ರವನ್ನು ಹೊಂದುವುದಿಲ್ಲ ಎಂದು ಹೇಳಿದ್ದಾರೆ ಎಂದು ಟ್ರಂಪ್ ತಿಳಿಸಿದರು. ಭೌಗೋಳಿಕ ರಾಜಕೀಯ ಬಿಕ್ಕಟ್ಟಿನ ಯಶಸ್ವಿ ಪರಿಹಾರವನ್ನು ದೇಶೀಯ ಆರ್ಥಿಕ ಪರಿಹಾರದೊಂದಿಗೆ ಸಮೀಕರಿಸಿದ ಅಮೆರಿಕ ಅಧ್ಯಕ್ಷರು, ಜಾಗತಿಕ ಇಂಧನ ಮಾರುಕಟ್ಟೆಗಳನ್ನು ಮರುರೂಪಿಸುವ ಮುನ್ಸೂಚನೆ ನೀಡಿದರು.

ನಾವು ಆ ಯುದ್ಧವನ್ನು ಗೆಲ್ಲುತ್ತಿದ್ದೇವೆ ಎಂದು ನಾನು ಭಾವಿಸುತ್ತೇನೆ. ಆದರೆ ಮುಂದಿನ ಎರಡು ವಾರಗಳಲ್ಲಿ ಸಂಪೂರ್ಣ ವಿಜಯವನ್ನು ಘೋಷಿಸಿದಾಗ ನಿಜವಾಗಿಯೂ ಅದನ್ನು ಗೆಲ್ಲುತ್ತೀರಿ. ಇದು ಸಂಪೂರ್ಣ ವಿಜಯವಾಗಿರುತ್ತದೆ. ಇದು ಶೀಘ್ರದಲ್ಲೇ ಸಂಭವಿಸುತ್ತದೆ ಮತ್ತು ತೈಲ ಬೆಲೆಗಳು ಕುಸಿಯುತ್ತವೆ ಎಂದು ಅವರು ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ದೆಹಲಿಯಲ್ಲಿ ಹೈಡ್ರಾಮಾ: EC ಕಚೇರಿ ಮುತ್ತಿಗೆಗೆ ಯತ್ನಿಸಿದ ರಾಹುಲ್, ಪ್ರಿಯಾಂಕಾ ಗಾಂಧಿ ಸೇರಿ INDIA ಒಕ್ಕೂಟದ ಹಲವು ಸಂಸದರು ಪೊಲೀಸ್ ವಶಕ್ಕೆ..!

SIR ವಿವಾದ: 'ಶಾಸಕ ಯತ್ನಾಳ್ ಬಣ್ಣ ಬಯಲು'; ವಿಜಯಪುರದಲ್ಲಿ ಬದುಕಿರುವ 8 ಮುಸ್ಲಿಂ ಮತದಾರರು 'ಸತ್ತಿದ್ದಾರೆ' ಎಂದು ಅರ್ಜಿ!

DIG ಸೋಮಶೇಖರ್ ಕಾಮಕಾಂಡ ಬಟಾಬಯಲು: ಅಪರಾಧಿ ಪತ್ನಿಗೆ ವಿಡಿಯೋ ಕಾಲ್; ಬೆತ್ತಲಾಗುವಂತೆ ಒತ್ತಡ!

ರೇಣುಕಾಸ್ವಾಮಿ ಕೊಲೆ ಪ್ರಕರಣ: ಜೈಲಿನಲ್ಲಿ ಪವಿತ್ರಾ ಗೌಡಗೆ ನೈಜಿರಿಯನ್ ಪ್ರಜೆಗಳ ಕಾಟ! ಕೋರ್ಟ್ ಗರಂ

ಏಷ್ಯನ್‌ ಗೇಮ್ಸ್‌ ವಿಜೇತರಿಗೆ ಸಿಎಂ ಅಭಿನಂದನೆ; ಚಿನ್ನದ ಪದಕ ವಿಜೇತರಿಗೆ 1 ಕೋಟಿ ನಗದು,ಗ್ರೂಪ್-ಬಿ ಹುದ್ದೆಗಳಿಗೆ ನೇರ ನೇಮಕಾತಿ!