ಹಾರ್ಮುಜ್ ಜಲಸಂಧಿ ಮತ್ತೆ ಸ್ಥಗಿತ (AI ರಚಿತ ಚಿತ್ರ) 
ವಿದೇಶ

Hormuz ಜಲಸಂಧಿ ಮತ್ತೆ ಸ್ಥಗಿತ, ಜಗತ್ತಿಗೆ ಶಾಕ್ ಕೊಟ್ಟ Iran, ಅಮೆರಿಕ ಮುಂದಿನ ನಡೆಯೇನು?

ಅಮೆರಿಕವು ಇರಾನ್ ಮೇಲೆ ಹೊಸ ದಾಳಿಗಳನ್ನು ನಡೆಸಿದ ಬಳಿಕ, ಹೋರ್ಮುಜ್ ಜಲಸಂಧಿಯನ್ನು "ಎಲ್ಲಾ ದೇಶಗಳ ಮತ್ತು ಎಲ್ಲಾ ರೀತಿಯ ಹಡಗುಗಳಿಗೆ ಮುಚ್ಚಲಾಗಿದೆ" ಎಂದು ಇರಾನ್‌ನ Islamic Revolutionary Guard Corps (IRGC) ಘೋಷಿಸಿದೆ.

ಟೆಹ್ರಾನ್: ಇರಾನ್ ಮೇಲೆ ಅಮೆರಿಕ ಸೇನೆ ಮತ್ತೆ ದಾಳಿ ಆರಂಭಿಸಿದ ಬೆನ್ನಲ್ಲೇ ಇರಾನ್ ಮತ್ತೆ ಹಾರ್ಮುಜ್ (Strait of Hormuz) ಜಲಸಂಧಿಯನ್ನು ಬಂದ್ ಮಾಡಿದೆ.

ಹೌದು.. ಹಾರ್ಮುಜ್ ಜಲಸಂಧಿಯನ್ನು ಎಲ್ಲಾ ಹಡಗುಗಳಿಗೆ ಮುಚ್ಚಲಾಗಿದೆ ಎಂದು ಇರಾನ್ ಘೋಷಣೆ ಮಾಡಿದೆ. ಅಮೆರಿಕವು ಇರಾನ್ ಮೇಲೆ ಹೊಸ ದಾಳಿಗಳನ್ನು ನಡೆಸಿದ ಬಳಿಕ, ಹೋರ್ಮುಜ್ ಜಲಸಂಧಿಯನ್ನು "ಎಲ್ಲಾ ದೇಶಗಳ ಮತ್ತು ಎಲ್ಲಾ ರೀತಿಯ ಹಡಗುಗಳಿಗೆ ಮುಚ್ಚಲಾಗಿದೆ" ಎಂದು ಇರಾನ್‌ನ Islamic Revolutionary Guard Corps (IRGC) ಘೋಷಿಸಿದೆ.

ಜಲಸಂಧಿಯನ್ನು ದಾಟಲು ಯತ್ನಿಸುವ ಯಾವುದೇ ಹಡಗನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ ಎಂದು CNN ವರದಿ ಮಾಡಿದೆ.

IRGC ತನ್ನ ಅಧಿಕೃತ ಟೆಲಿಗ್ರಾಂ ಸಂದೇಶದಲ್ಲಿ, "ಪ್ರಾದೇಶಿಕ ಭದ್ರತಾ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ತಕ್ಷಣದಿಂದಲೇ ಹಾರ್ಮುಜ್ ಜಲಸಂಧಿಯನ್ನು ತೈಲ ಟ್ಯಾಂಕರ್‌ಗಳು ಹಾಗೂ ವಾಣಿಜ್ಯ ಹಡಗುಗಳು ಸೇರಿದಂತೆ ಎಲ್ಲಾ ನೌಕೆಗಳಿಗೆ ಮುಚ್ಚಲಾಗಿದೆ. ಒಂದು ವೇಳೆ ಈ ಜಲಸಂಧಿಯನ್ನು ದಾಟಲು ಪ್ರಯತ್ನಿಸುವ ಯಾವುದೇ ಹಡಗನ್ನು ಗುರಿಯಾಗಿಸಲಾಗುವುದು" ಎಂದು ಅದು ಎಚ್ಚರಿಸಿದೆ.

Al Jazeera ವರದಿ ಪ್ರಕಾರ, ಇರಾನಿನ ಮಾಧ್ಯಮಗಳನ್ನು ಉಲ್ಲೇಖಿಸಿ, ಹೋರ್ಮುಜ್ ಜಲಸಂಧಿಯಲ್ಲಿ ಅಮೆರಿಕದ ಪಡೆಗಳು ಮತ್ತು IRGC ನೌಕಾಪಡೆಯ ನಡುವೆ ತೀವ್ರ ಘರ್ಷಣೆ ಹಾಗೂ ಗುಂಡಿನ ಚಕಮಕಿ ನಡೆದಿರುವ ಕುರಿತು ಮಾಹಿತಿ ಲಭ್ಯವಾಗಿದೆ. ಇದುವರೆಗೆ ಅಮೆರಿಕದ ಪಡೆಗಳು ಏಳು ಕರಾವಳಿ ಪ್ರದೇಶಗಳ ಮೇಲೆ ದಾಳಿ ನಡೆಸಿವೆ ಎಂದು ವರದಿಯಾಗಿದೆ. ಬಂದರ್ ಅಬ್ಬಾಸ್ (Bandar Abbas), ಸಿರಿಕ್ (Sirik), ಕೆಶ್ಮ್ ದ್ವೀಪ (Qeshm Island) ಮತ್ತು ಹೆಂಗಮ್ ದ್ವೀಪ (Hengam Island) ಸುತ್ತಮುತ್ತ ದಾಳಿಗಳು ನಡೆದಿವೆ ಎಂದು ತಿಳಿದುಬಂದಿದೆ.

IRGC ನೌಕಾಪಡೆಯ ಪ್ರಕಾರ, ಹೋರ್ಮುಜ್ ಜಲಸಂಧಿಯನ್ನು "ಅಕ್ರಮವಾಗಿ" ದಾಟಲು ಯತ್ನಿಸಿದ ಎರಡು ಹಡಗುಗಳ ಮೇಲೆ ದಾಳಿ ನಡೆಸಲಾಗಿದೆ. ಇನ್ನೊಂದೆಡೆ, ವರದಿ ಪ್ರಕಾರ, ಅಮೆರಿಕದ ದಾಳಿಯ ಪರಿಣಾಮವಾಗಿ ಮಿನಾಬ್ ಕೌಂಟಿಯ ಕಾರ್ಗಾನ್ ಪ್ರದೇಶದಲ್ಲಿ ಇಬ್ಬರು ನಿವಾಸಿಗಳು ಶೆಲ್‌ಗಳ ಅವಶೇಷಗಳಿಂದ ಗಾಯಗೊಂಡಿದ್ದಾರೆ.

ಇರಾನಿನ Mehr News Agency ಯನ್ನು ಉಲ್ಲೇಖಿಸಿರುವ ಅಲ್ ಜಝೀರಾ ವರದಿ ಪ್ರಕಾರ, ಬಂದರ್ ಅಬ್ಬಾಸ್ ನಗರದಲ್ಲಿ ಹೊಸ ಸ್ಫೋಟಗಳು ಸಂಭವಿಸಿವೆ. ನಗರದ ಪೂರ್ವ ಭಾಗದಲ್ಲಿ ನಡೆದ ಘಟನೆಯೊಂದಿಗೆ ಈ ಸ್ಫೋಟಗಳು ಸಂಬಂಧ ಹೊಂದಿವೆ ಎನ್ನಲಾಗಿದೆ. ದಕ್ಷಿಣದ ಸಿರಿಕ್ ಮತ್ತು ಮಿನಾಬ್ ಪಟ್ಟಣಗಳು, ಕೇಶ್‌ಮ್ ದ್ವೀಪ ಹಾಗೂ ಉತ್ತರದ Gorgan ನಗರ ಸೇರಿದಂತೆ ಹಲವು ಪ್ರದೇಶಗಳಲ್ಲಿಯೂ ಸ್ಫೋಟಗಳ ವರದಿಗಳು ಬಂದಿವೆ.

ಅಮೆರಿಕ ನಿಲುವೇನು?

ಅಮೆರಿಕದ United States Central Command (CENTCOM) ತನ್ನ ಪಡೆಗಳು ಇರಾನ್‌ನ ಹಲವು ಗುರಿಗಳ ವಿರುದ್ಧ ಹೆಚ್ಚುವರಿ "ಸ್ವಯಂರಕ್ಷಣಾ" ದಾಳಿಗಳನ್ನು ಆರಂಭಿಸಿವೆ ಎಂದು ಹೇಳಿದೆ. ಇರಾನ್‌ನ ನಿರಂತರ ಮತ್ತು "ಅನಗತ್ಯ" ಆಕ್ರಮಣಕಾರಿ ಕ್ರಮಗಳಿಗೆ ಪ್ರತಿಕ್ರಿಯೆಯಾಗಿ ಈ ಕಾರ್ಯಾಚರಣೆ ನಡೆಸಲಾಗಿದೆ ಎಂದು ಅದು ತಿಳಿಸಿದೆ.

ಇರಾನ್ ಜಲಸಂಧಿಯನ್ನು ಸಂಪೂರ್ಣವಾಗಿ ಮುಚ್ಚಿರುವುದಾಗಿ ಹೇಳಿಕೊಂಡಿದ್ದರೂ, ಅಮೆರಿಕದ CENTCOM ಕೆಲವು ವಾಣಿಜ್ಯ ಹಡಗುಗಳು ಇನ್ನೂ ಸಂಚಾರ ನಡೆಸುತ್ತಿವೆ ಎಂದು ಪ್ರತಿಪಾದಿಸಿದೆ. ಹೀಗಾಗಿ ನೆಲದ ಮೇಲಿನ ಪರಿಸ್ಥಿತಿ ಕುರಿತು ಪರಸ್ಪರ ವಿರುದ್ಧವಾದ ಹೇಳಿಕೆಗಳು ಹೊರಬಿದ್ದಿವೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹಾರ್ಮುಜ್ ಸಮೀಪ ದಾಳಿ: ಇಬ್ಬರು ಭಾರತೀಯ ನಾವಿಕರು ಸಾವು, ಮುಖ್ಯ ಇಂಜಿನಿಯರ್ ನಾಪತ್ತೆ

ಮಣಿಪುರದಲ್ಲಿ ಮತ್ತೆ ರಕ್ತಪಾತ: ಅಪಹರಣಕ್ಕೊಳಗಾಗಿದ್ದ ನಾಗಾ ಸಮುದಾಯದ 6 ಮಂದಿ ಶವವಾಗಿ ಪತ್ತೆ, ಇನ್ನು ಸುಮ್ಮನಿರಲ್ಲ- ಮಣಿಪುರ CM ಖಡಕ್ ಎಚ್ಚರಿಕೆ!

ಮೈಸೂರು: ಉಪಟಳ ನೀಡುತ್ತಿದ್ದ ಹೆಣ್ಣು ಹುಲಿ ಕೊನೆಗೂ ಸೆರೆ, ನಿಟ್ಟುಸಿರು ಬಿಟ್ಟ ಗ್ರಾಮಸ್ಥರು! video

US-Iran war: ಅಮೆರಿಕಾ ದಾಳಿಗೆ ಇರಾನ್ ತಿರುಗೇಟು; ಬಹ್ರೇನ್-ಕುವೈತ್ ನೆಲೆಗಳ ಮೇಲೆ ಕ್ಷಿಪಣಿ ದಾಳಿ, ಯುದ್ಧ ಪುನರಾರಂಭ..!

ವಾಹನ ಸವಾರರಿಗೆ Good news: Ethanol ಮಿಶ್ರಿತ ಪೆಟ್ರೋಲ್ ಮೇಲಿನ ಎಲ್ಲಾ ಸೆಸ್-ಅಬಕಾರಿ ಸುಂಕ ರದ್ದುಗೊಳಿಸಿದ ಕೇಂದ್ರ ಸರ್ಕಾರ..!

SCROLL FOR NEXT