ಢಾಕಾ: ದಲಿತ ಹಿಂದೂ ವ್ಯಕ್ತಿ ದೀಪು ದಾಸ್ ಹತ್ಯೆ ಪ್ರಕರಣ ಪ್ರಮುಖ ಆರೋಪಿಯೊಬ್ಬನ ಶವ ಅನುಮಾನಾಸ್ಪದ ರೀತಿಯಲ್ಲಿ ಪತ್ತೆಯಾಗಿದೆ. ಬಾಂಗ್ಲಾದೇಶದ ಪ್ರಮುಖ ವಿದ್ಯಾರ್ಥಿ ನಾಯಕ ಹಾಗೂ 'ಇಂಕ್ವಿಲಾಬ್ ಮಂಚ'ದ ವಕ್ತಾರ, ಭಾರತ ವಿರೋಧಿ ಉಸ್ಮಾನ್ ಹಾದಿ ಹತ್ಯೆಯಿಂದ ಪ್ರಾರಂಭವಾದ ಹತ್ಯೆ ಸರಣಿ ಮುಂದುವರೆದಿದೆ.
ಡಿ.18ರಂದು ಮೈಮೆನ್ಸಿಂಗ್ ಜಿಲ್ಲೆಯಲ್ಲಿ 27 ವರ್ಷದ ದೀಪು ದಾಸ್ ಅವರನ್ನು ಕಾರ್ಖಾನೆಯ ಮೇಲ್ವಿಚಾರಕರು ರಾಜೀನಾಮೆ ನೀಡುವಂತೆ ಒತ್ತಾಯಿಸಿದ್ದರು. ನಂತರ ಉದ್ರಿಕ್ತರ ಗುಂಪೊಂದು ಬಂದು ದೀಪು ದಾಸ್ ನನ್ನು ರಸ್ತೆಯಲ್ಲಿ ಎಳೆದುಕೊಂಡು ಹೋಗಿ ಮಾರಣಾಂತಿಕವಾಗಿ ಥಳಿಸಿದ್ದಲ್ಲದೇ ದೇಹವನ್ನು ಮರಕ್ಕೆ ನೇತುಹಾಕಿ ಬೆಂಕಿ ಹಚ್ಚಿದ್ದರು. ಈ ಕೃತ್ಯಕ್ಕೆ ಜಾಗತಿಕವಾಗಿ ಖಂಡನೆ ವ್ಯಕ್ತವಾಗಿತ್ತು.ಇನ್ನು ಕೊಲೆಯಲ್ಲಿ ಭಾಗಿಯಾಗಿದ್ದ ಹಸನ್ ಶಹಾದತ್ ಎಂಬಾತನ ಶವ ವಿದ್ಯುತ್ ತಂತಿಗೆ ನೇತಾಡುತ್ತಿರುವ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಸಂಚು ರೂಪಿಸಿ ದಾಳಿ ನಡೆಸಿದವರಲ್ಲಿ ಮತ್ತೊಬ್ಬ ಪ್ರಮುಖ ಆರೋಪಿ ಯಾಸಿನ್ ಅರಾಫತ್ ನನ್ನು ಈ ಹಿಂದೆ ಪೊಲೀಸರು ಬಂಧಿಸಿದ್ದರು. ಹತ್ಯೆ ನಂತರ ಅರಾಫತ್ ಆ ಪ್ರದೇಶದಿಂದ ಪರಾರಿಯಾಗಿ ತಲೆಮರೆಸಿಕೊಂಡಿದ್ದನು.