ಡೊನಾಲ್ಡ್ ಟ್ರಂಪ್-ನರೇಂದ್ರ ಮೋದಿ 
ವಿದೇಶ

ಪ್ರಧಾನಿ ಮೋದಿ ಭಾರತವನ್ನು ಜಾಗತಿಕ ಶಕ್ತಿಯನ್ನಾಗಿ ಮಾಡಿದ್ದಾರೆ, 2027ರ ವರ್ಷಾರಂಭಕ್ಕೆ Indiaಗೆ ಡೊನಾಲ್ಡ್ ಟ್ರಂಪ್: ಮಾರ್ಕೊ ರೂಬಿಯೊ

ಟ್ರಂಪ್ ಮುಂದಿನ ವರ್ಷದ ಆರಂಭದಲ್ಲಿ ಭಾರತಕ್ಕೆ ಭೇಟಿ ನೀಡುವಂತೆ ನಾವು ಕೆಲಸ ಮಾಡುತ್ತಿದ್ದೇವೆ. ಭಾರತ-ಅಮೆರಿಕದ ಅತ್ಯಂತ ಆಪ್ತ ಪಾಲುದಾರ ಹಾಗೂ ಮಿತ್ರ ರಾಷ್ಟ್ರವಾಗಿದೆ.

ವಾಷಿಂಗ್ಟನ್: ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನಡುವಿನ ವೈಯಕ್ತಿಕ ಬಾಂಧವ್ಯ ಅತ್ಯಂತ ಗಟ್ಟಿಯಾಗಿದ್ದು, ಟ್ರಂಪ್ ಅವರು ಮುಂದಿನ ವರ್ಷದ ಆರಂಭದಲ್ಲಿ ಭಾರತಕ್ಕೆ ಭೇಟಿ ನೀಡುವ ಸಾಧ್ಯತೆ ಇದೆ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ತಿಳಿಸಿದ್ದಾರೆ.

ವಾಷಿಂಗ್ಟನ್ ಡಿಸಿಯಲ್ಲಿ ಸುದ್ದಿಸಂಸ್ಥೆ IANS ಜೊತೆ ಮಾತನಾಡಿದ ರೂಬಿಯೊ, ಅಮೆರಿಕಾ ಅಧ್ಯಕ್ಷರ ಭಾರತ ಭೇಟಿಗೆ ಅಗತ್ಯ ಸಿದ್ಧತೆಗಳನ್ನು ಅಂತಿಮಗೊಳಿಸಲು ಈ ವರ್ಷದ ಅಂತ್ಯದೊಳಗೆ ಭಾರತಕ್ಕೆ ಭೇಟಿ ನೀಡುವ ನಿರೀಕ್ಷೆಯಿದೆ ಎಂದು ಹೇಳಿದ್ದಾರೆ.

ಟ್ರಂಪ್ ಮುಂದಿನ ವರ್ಷದ ಆರಂಭದಲ್ಲಿ ಭಾರತಕ್ಕೆ ಭೇಟಿ ನೀಡುವಂತೆ ನಾವು ಕೆಲಸ ಮಾಡುತ್ತಿದ್ದೇವೆ. ಭಾರತ-ಅಮೆರಿಕದ ಅತ್ಯಂತ ಆಪ್ತ ಪಾಲುದಾರ ಹಾಗೂ ಮಿತ್ರ ರಾಷ್ಟ್ರವಾಗಿದೆ. ಪ್ರಧಾನಿ ಮೋದಿ ಮತ್ತು ಅಧ್ಯಕ್ಷ ಟ್ರಂಪ್ ನಡುವಿನ ಸಂಬಂಧ ಅತ್ಯುತ್ತಮವಾಗಿದ್ದು, ರಾಜತಾಂತ್ರಿಕ ಸಂಬಂಧಗಳಲ್ಲಿ ಇದು ಬಹಳ ಮಹತ್ವದ್ದಾಗಿದೆ ಎಂದು ತಿಳಿಸಿದ್ದಾರೆ.

ಇದೇ ವೇಳೆ ಭಾರತ ಮತ್ತು ಅಮೆರಿಕ ನಡುವಿನ ದ್ವಿಪಕ್ಷೀಯ ವ್ಯಾಪಾರ ಒಪ್ಪಂದದ ಮಾತುಕತೆ ಅಂತಿಮ ಹಂತ ತಲುಪಿದ್ದು, ಶೀಘ್ರದಲ್ಲೇ ಅದು ಪೂರ್ಣಗೊಳ್ಳುವ ವಿಶ್ವಾಸವಿದೆ ಎಂದೂ ರೂಬಿಯೊ ಹೇಳಿದ್ದಾರೆ.

ಮಾತುಕತೆಗಳು ಅತ್ಯುತ್ತಮವಾಗಿ ಸಾಗುತ್ತಿವೆ. ಜಿ7 ಸಭೆಯಲ್ಲಿ ಪ್ರಧಾನಿ ಮೋದಿ ಮತ್ತು ಅಧ್ಯಕ್ಷ ಟ್ರಂಪ್ ಉತ್ತಮ ಚರ್ಚೆ ನಡೆಸಿದ್ದರು. ವ್ಯಾಪಾರ ಒಪ್ಪಂದವನ್ನು ಅಂತಿಮಗೊಳಿಸುವ ಹಂತದಲ್ಲಿದ್ದೇವೆ. ಎಲ್ಲವೂ ಸಕಾರಾತ್ಮಕವಾಗಿದೆ," ಎಂದು ತಿಳಿಸಿದ್ದಾರೆ.

ಕ್ವಾಡ್ ರಾಷ್ಟ್ರಗಳ ಮುಂದಿನ ಸಭೆಯತ್ತ ಎರಡೂ ದೇಶಗಳು ಎದುರು ನೋಡುತ್ತಿವೆ. ಅಧ್ಯಕ್ಷ ಟ್ರಂಪ್ ಅವರ ಭಾರತ ಭೇಟಿಗೆ ಸಿದ್ಧತೆ ನಡೆಸುವ ಸಲುವಾಗಿ ಈ ವರ್ಷದ ಅಂತ್ಯದೊಳಗೆ ಭಾರತಕ್ಕೆ ಮತ್ತೊಮ್ಮೆ ಬರಲಿದ್ದೇನೆ ಹೇಳಿದ್ದಾರೆ.

ಬಳಿಕ ಪ್ರಧಾನಿ ಮೋದಿ ಅವರ ನಾಯಕತ್ವವನ್ನು ಶ್ಲಾಘಿಸಿದ ರೂಬಿಯೊ, "ನಾನು ಪ್ರಧಾನಿ ಮೋದಿಯ ಅಭಿಮಾನಿ. ಅವರು ಭಾರತವನ್ನು ಜಾಗತಿಕ ಶಕ್ತಿಯಾಗಿ ರೂಪಿಸಿದ್ದಾರೆ ಎಂದು ಪ್ರಶಂಸಿಸಿದರು.

ಇಂಧನ ಸಹಕಾರದ ಕುರಿತು ಮಾತನಾಡಿದ ಅವರು, ಭಾರತ ಮತ್ತು ಅಮೆರಿಕ ಇಂಧನ ಪೂರೈಕೆ ಹೆಚ್ಚಿಸುವ ನಿಟ್ಟಿನಲ್ಲಿ ಒಟ್ಟಾಗಿ ಕೆಲಸ ಮಾಡುತ್ತಿವೆ. ಭಾರೀ ಕಚ್ಚಾ ತೈಲವನ್ನು ಸಂಸ್ಕರಿಸುವ ಸಾಮರ್ಥ್ಯ ಹೊಂದಿರುವ ಕೆಲವೇ ರಾಷ್ಟ್ರಗಳಲ್ಲಿ ಭಾರತವೂ ಒಂದಾಗಿದೆ ಎಂದು ಹೇಳಿದರು.

ಮುಂದಿನ ವರ್ಷ ಟ್ರಂಪ್ ಅವರು ಭಾರತಕ್ಕೆ ಭೇಟಿ ನೀಡಿದ್ದೇ ಆದರೆ, 2020ರ ಫೆಬ್ರವರಿಯ ಬಳಿಕ ಟ್ರಂಪ್ ಅವರ ಮೊದಲ ಭಾರತ ಪ್ರವಾಸ ಇದಾಗಲಿದೆ. ಅಲ್ಲದೆ, ಎರಡನೇ ಅವಧಿಗೆ ಮತ್ತೆ ಶ್ವೇತಭವನಕ್ಕೆ ಮರಳಿದ ಬಳಿಕ ಅವರ ಮೊದಲ ಭಾರತ ಭೇಟಿ ಇದಾಗಿರುತ್ತದೆ.

ಇತ್ತೀಚೆಗೆ ಫ್ರಾನ್ಸ್‌ನ ಎವಿಯಾನ್‌ನಲ್ಲಿ ನಡೆದ ಜಿ7 ಶೃಂಗಸಭೆಯ ವೇಳೆ ಪ್ರಧಾನಿ ಮೋದಿ ಮತ್ತು ಟ್ರಂಪ್ ಭೇಟಿಯಾಗಿದ್ದರು. ಕಳೆದ 16 ತಿಂಗಳ ಬಳಿಕ ನಡೆದ ಅವರ ಮೊದಲ ದ್ವಿಪಕ್ಷೀಯ ಭೇಟಿ ಅದಾಗಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಪರಿಷತ್ ಸಭಾಪತಿ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಕೌಂಟರ್; ನಾಮಪತ್ರ ಸಲ್ಲಿಸಿದ BJP ಅಭ್ಯರ್ಥಿ; ಸ್ಪೀಕರ್ ಚುನಾವಣೆ ಬಹಿಷ್ಕಾರ

ದೇವೇಗೌಡರ ಪತ್ನಿ ಚೆನ್ನಮ್ಮ ನಿಧನಕ್ಕೆ ವಿಧಾನಸಭೆಯಲ್ಲಿ ಸಂತಾಪ; ಸರ್ಕಾರಿ ಗೌರವ ಸಮರ್ಥಿಸಿಕೊಂಡ CM; ಡಿಕೆಶಿ ಹೇಳಿದ್ದೇನು?

ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ವಿರೋಧಿಸಿ ಕರೆ ನೀಡಿದ್ದ ಕರ್ನಾಟಕ ಬಂದ್ ಗೆ ನೀರಸ ಪ್ರತಿಕ್ರಿಯೆ! ಸಿಗದ ಜನಬೆಂಬಲ, ಬಹುತೇಕ ಕಡೆ ಸಹಜ ಜನಜೀವನ

‘ಅಂಕಲ್, ಪವರ್ ಆಫ್ ಮಾಡಿ’: ಮಹಿಳಾ ಸಿಬ್ಬಂದಿ ಜೀವ ಉಳಿಸಿದ 5ನೇ ತರಗತಿ ಬಾಲಕನ ಸಮಯಪ್ರಜ್ಞೆ! video

ಹೈಕೋರ್ಟ್‌ನಲ್ಲೂ ನಟ ದರ್ಶನ್‌ಗೆ ಭಾರೀ ಹಿನ್ನಡೆ: ಪ್ರದೋಷ್ ಮಾಫಿ ಸಾಕ್ಷಿ ಪ್ರಶ್ನಿಸಿದ್ದ ಮೇಲ್ಮನವಿ ಅರ್ಜಿ ವಜಾ!