ಪಾಕಿಸ್ತಾನ ಪ್ರಧಾನಿ ಶಹಬಾಜ್ ಷರೀಫ್ 
ವಿದೇಶ

ಧಾರ್ಮಿಕ ಭಾವನೆಗಳಿಗೆ ಧಕ್ಕೆ: ಉಗ್ರ ಹಫೀಜ್ ಸಯೀದ್ ಸಹಚರನಿಂದ ದೂರು,15 ದಿನ 'Geo News'ಬ್ಯಾನ್ ಮಾಡಿದ ಪಾಕಿಸ್ತಾನ!

ಪಾಕಿಸ್ತಾನ ಎಲೆಕ್ಟ್ರಾನಿಕ್ ಮಾಧ್ಯಮ ನಿಯಂತ್ರಣ ಪ್ರಾಧಿಕಾರ (PEMRA) ಶನಿವಾರ ತಡರಾತ್ರಿ ಅಮಾನತು ಆದೇಶ ಹೊರಡಿಸಿದ್ದು, ಈ ವಿಷಯದ ಬಗ್ಗೆ ಹೆಚ್ಚಿನ ಕಾನೂನು ಕ್ರಮಗಳನ್ನು ಸಹ ಪ್ರಾರಂಭಿಸಿದೆ.

ಕರಾಚಿ: ಅತಿದೊಡ್ಡ ನ್ಯೂಸ್ ಚಾನೆಲ್ ಗಳಲ್ಲಿ ಒಂದಾದ ಜಿಯೋ ನ್ಯೂಸ್‌ನ ಪರವಾನಗಿ ಮತ್ತು ಪ್ರಸಾರವನ್ನು ಪಾಕಿಸ್ತಾನದ ಎಲೆಕ್ಟ್ರಾನಿಕ್ ಮಾಧ್ಯಮ ನಿಯಂತ್ರಣ ಸಂಸ್ಥೆಯು 15 ದಿನಗಳವರೆಗೆ ನಿಷೇಧಿಸಿದೆ.

ಪಾಕಿಸ್ತಾನ ಎಲೆಕ್ಟ್ರಾನಿಕ್ ಮಾಧ್ಯಮ ನಿಯಂತ್ರಣ ಪ್ರಾಧಿಕಾರ (PEMRA) ಶನಿವಾರ ತಡರಾತ್ರಿ ಅಮಾನತು ಆದೇಶ ಹೊರಡಿಸಿದ್ದು, ಈ ವಿಷಯದ ಬಗ್ಗೆ ಹೆಚ್ಚಿನ ಕಾನೂನು ಕ್ರಮಗಳನ್ನು ಸಹ ಪ್ರಾರಂಭಿಸಿದೆ.

ಶುಕ್ರವಾರ ಬೆಳಿಗ್ಗೆ ಪ್ರಸಾರವಾದ ಜಿಯೋ ನ್ಯೂಸ್‌ನ "ಸಫರ್-ಎ-ಇಷ್ಕ್" ಕಾರ್ಯಕ್ರಮದಲ್ಲಿ ತೋರಿಸಲಾದ ಕೆಲ ದೃಶ್ಯಗಳ ಆಧಾರದ ಮೇಲೆ ಕ್ರಮ ಕೈಗೊಳ್ಳಲಾಗಿದೆ. ಕೆಲವು ದೃಶ್ಯಗಳು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿವೆ ಎಂದು ನಿಯಂತ್ರಣ ಸಂಸ್ಥೆ ಆರೋಪಿಸಿದೆ. ಇದು ಚಾನೆಲ್ ವಿರುದ್ಧ ಶಿಸ್ತು ಕ್ರಮಕ್ಕೆ ಕಾರಣವಾಗಿದೆ.

ಪಿಇಎಂಆರ್‌ಎ (PEMRA) ಪಾಕಿಸ್ತಾನದ ಕಾನೂನಿನ ಅಡಿಯಲ್ಲಿ ಈ ವಿಷಯ ಕುರಿತು ಹೆಚ್ಚಿನ ತನಿಖೆ ಮತ್ತು ಕಾನೂನು ಕ್ರಮಕ್ಕಾಗಿ ತನ್ನ ನಿಯಂತ್ರಕ ಮಂಡಳಿಗೆ ಉಲ್ಲೇಖಿಸಿದೆ. ಘಟನೆಯ ಬಗ್ಗೆ ಆಂತರಿಕ ತನಿಖೆ ನಡೆಸುವಂತೆ ಪ್ರಾಧಿಕಾರವು ಜಿಯೋ ನ್ಯೂಸ್‌ಗೆ ನಿರ್ದೇಶನ ನೀಡಿದೆ. ಕಾರ್ಯಕ್ರಮವನ್ನು ಪರಿಶೀಲಿಸಲು ಮತ್ತು ವಿವರವಾದ ವರದಿಯನ್ನು ಸಲ್ಲಿಸಲು ಚಾನೆಲ್ ಗೆ ಸೂಚಿಸಲಾಗಿದೆ.

ಮರ್ಕಜಿ ಜಮಿಯತ್ ಅಹ್ಲೆ ಹದೀಸ್ ಮುಖ್ಯಸ್ಥ ಇಬ್ತಿಶಾಮ್ ಜಹೀರ್ ಸಲ್ಲಿಸಿದ ದೂರಿನ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ. ಜಹೀರ್ ನಿಷೇಧಿತ ಉಗ್ರಗಾಮಿ ಸಂಘಟನೆ ಲಷ್ಕರ್-ಇ- ತೊಯ್ಬಾ ಸಂಘಟನೆಯ ಸಂಸ್ಥಾಪಕ ಹಫೀಜ್ ಸಯೀದ್ ಅವರ ದೀರ್ಘಕಾಲದ ಸಹಚರ ಎಂದು ವರದಿಯಾಗಿದೆ.

ದೂರು ಸ್ವೀಕರಿಸಿದ ನಂತರ ಪಾಕಿಸ್ತಾನ ಸರ್ಕಾರ ಜಿಯೋ ನ್ಯೂಸ್ ವಿರುದ್ಧ ಕ್ರಮ ಕೈಗೊಂಡಿದೆ. ನಿಯಂತ್ರಣ ಮಂಡಳಿಯು ತನ್ನ ತನಿಖೆಯನ್ನು ಪೂರ್ಣಗೊಳಿಸಿದ ನಂತರ ಮುಂದಿನ ಕ್ರಮವನ್ನು ನಿರ್ಧರಿಸಲಾಗುತ್ತದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಟ್ರಂಪ್ ಆದೇಶ ಬೆನ್ನಲ್ಲೇ ಇರಾನ್ ಮೇಲೆ ಅಮೆರಿಕಾ ಭಾರೀ ವೈಮಾನಿಕ ದಾಳಿ: 10 ಪ್ರಮುಖ ಸೇನಾ ನೆಲೆಗಳು ಧ್ವಂಸ, ಕದನ ವಿರಾಮ ಮತ್ತೆ ಪ್ರಶ್ನಾರ್ಥಕ..!

‘ಉಲ್ಟಾ ಪಲ್ಟಾ’ಖ್ಯಾತಿಯ ನಿರ್ದೇಶಕ, ಹಿರಿಯ ಪತ್ರಕರ್ತ ಎನ್.ಎಸ್. ಶಂಕರ್ ಇನ್ನಿಲ್ಲ!

ಅಹಿಂದ ಅಧಿಕಾರಿಗಳ ಜಾಗದಲ್ಲಿ ಒಕ್ಕಲಿಗರ ನೇಮಕ: ಕಾಂಗ್ರೆಸ್ ನಾಯಕರಲ್ಲಿ ಅಸಮಾಧಾನ ಭುಗಿಲು?

ಇರಾನ್‌ನಿಂದ ಅಮೆರಿಕ ಮಿತ್ರ ರಾಷ್ಟ್ರಗಳ ಮೇಲೆ ಕ್ಷಿಪಣಿ, ಡ್ರೋನ್ ದಾಳಿ; ಮಧ್ಯಪ್ರಾಚ್ಯದಲ್ಲಿ ಮತ್ತೆ ಯುದ್ಧದ ಕಾರ್ಮೋಡ..!

'ಪರಿಸ್ಥಿತಿ ಎದುರಾದರೆ ಇರಾನ್ ಸರ್ವನಾಶ'; ಟ್ರಂಪ್ ಕಠಿಣ ಎಚ್ಚರಿಕೆ, ಶುರುವಾಗುತ್ತಾ ಮಹಾಯುದ್ಧ...?