ವಾಯುದಾಳಿ ಚಿತ್ರ 
ವಿದೇಶ

ಅಫ್ಘಾನಿಸ್ತಾನದ ಮೇಲೆ ಪಾಕಿಸ್ತಾನ ರಾತ್ರೋರಾತ್ರಿ ವಾಯುದಾಳಿ: 35 ಸಾವು,100 ಕ್ಕೂ ಹೆಚ್ಚು ಮಂದಿಗೆ ಗಾಯ!

ಅಫ್ಘಾನ್ ಪ್ರಾಂತ್ಯಗಳಾದ ಪಕ್ತಿಕಾ, ಪಕ್ತಿಯಾ ಮತ್ತು ಕುನಾರ್‌ಗಳಲ್ಲಿನ ಸ್ಥಳಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದೆ. ಉಗ್ರರ ನೆಲೆಗಳನ್ನು ಗುರಿಯಾಗಿಸಿಕೊಂಡು ಈ ದಾಳಿ ನಡೆದಿದೆ

ಕಾಬೂಲ್: ಪೂರ್ವ ಅಫ್ಘಾನಿಸ್ತಾನದಲ್ಲಿ ಪಾಕಿಸ್ತಾನದ ಸೇನೆಯು ನಡೆಸಿದ ರಾತ್ರೋರಾತ್ರಿ ವಾಯುದಾಳಿ 35 ಮಂದಿ ಸಾವನ್ನಪ್ಪಿದ್ದು, 100 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಪಾಕಿಸ್ತಾನ ಸೇನೆ ಮತ್ತು ಪಾಕಿಸ್ತಾನ ವಾಯುಪಡೆ ಜಂಟಿಯಾಗಿ ಈ ಕಾರ್ಯಾಚರಣೆ ನಡೆಸಿರುವುದಾಗಿ ಮೂಲಗಳಿಂದ ತಿಳಿದುಬಂದಿದೆ.

ಅಫ್ಘಾನ್ ಪ್ರಾಂತ್ಯಗಳಾದ ಪಕ್ತಿಕಾ, ಪಕ್ತಿಯಾ ಮತ್ತು ಕುನಾರ್‌ಗಳಲ್ಲಿನ ಸ್ಥಳಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದೆ. ಉಗ್ರರ ನೆಲೆಗಳನ್ನು ಗುರಿಯಾಗಿಸಿಕೊಂಡು ಈ ದಾಳಿ ನಡೆದಿದೆ ಎಂದು ಪಾಕಿಸ್ತಾನದ ಮಾಹಿತಿ ಸಚಿವ ಅತ್ತೌಲ್ಲಾ ತರಾರ್ ಹೇಳಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಅವರು ಮಾಹಿತಿ ಹಂಚಿಕೊಂಡಿದ್ದು, ಉಗ್ರಗಾಮಿ ಅಡಗುತಾಣಗಳು ಮತ್ತು ಸುರಕ್ಷಿತ ತಾಣಗಳನ್ನು ಗುರಿಯಾಗಿಸಿಕೊಂಡು ಈ ದಾಳಿ ನಡೆಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಕರಾಚಿಯಲ್ಲಿರುವ ಅರೆಸೈನಿಕ ರೇಂಜರ್‌ಗಳ ಪ್ರಾದೇಶಿಕ ಪ್ರಧಾನ ಕಚೇರಿಯ ಮೇಲೆ ದಾಳಿ ನಡೆದು ಮೂವರು ಸೈನಿಕರು ಸಾವನ್ನಪ್ಪಿದ ನಂತರ ಈ ದಾಳಿ ನಡೆದಿದೆ. ಪಾಕಿಸ್ತಾನಿ ತಾಲಿಬಾನ್‌ನ ಬೇರ್ಪಟ್ಟ ಬಣವಾದ ಜಮಾತ್-ಉಲ್-ಅಹ್ರಾರ್, ಕರಾಚಿ ದಾಳಿಯ ಹೊಣೆಯನ್ನು ಹೊತ್ತುಕೊಂಡು.

ಅಪ್ಘಾನಿಸ್ತಾನದ ಪಕ್ತಿಕಾ ಪ್ರಾಂತ್ಯದ ಗಿಯಾನ್ ಜಿಲ್ಲೆ, ಪಕ್ತಿಯಾ ಪ್ರಾಂತ್ಯದ ತ್ಸಾಮ್ಕಾನಿ ಜಿಲ್ಲೆ ಮತ್ತು ಕುನಾರ್ ಪ್ರಾಂತ್ಯದ ಮರವಾರಾ ಜಿಲ್ಲೆಗಳಲ್ಲಿನ ವಸತಿ ಪ್ರದೇಶಗಳು ಮತ್ತು ಮಸೀದಿಯ ಮೇಲೆ ದಾಳಿಗಳು ನಡೆದಿವೆ.

ದಾಳಿಯಲ್ಲಿ ಸಾವನ್ನಪ್ಪಿದವರಲ್ಲಿ ಮಹಿಳೆಯರು ಮತ್ತು ಮಕ್ಕಳೂ ಸೇರಿದ್ದಾರೆ ಮಕ್ಕಳು ಸೇರಿದಂತೆ 40 ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ರಕ್ಷಣಾ ಕಾರ್ಯಾಚರಣೆ ಮುಂದುವರಿದಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎನ್ನಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಪರಿಷತ್ ಸಭಾಪತಿ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಕೌಂಟರ್; ನಾಮಪತ್ರ ಸಲ್ಲಿಸಿದ BJP ಅಭ್ಯರ್ಥಿ; ಸ್ಪೀಕರ್ ಚುನಾವಣೆ ಬಹಿಷ್ಕಾರ

RSS ಪಥಸಂಚಲನ, ಸಾರ್ವಜನಿಕ ಸ್ಥಳ ಬಳಕೆ ತಡೆಯಲು ಹೊಸ ಕಾನೂನು ತರಲು ಮುಂದಾದ ಡಿಕೆ ಸರ್ಕಾರ!

ಮನೆ ಮುಂದೆ ಕಾರು ನಿಲ್ಲಿಸೋದಕ್ಕೂ ದಂಡ; ಲೂಟಿ ಸರ್ಕಾರದ ಹೊಸ ಸ್ಕೆಚ್: ಆರ್ ಅಶೋಕ್ ವಾಗ್ದಾಳಿ

ಅಕಾಲಿ ದಳ ಮುಖ್ಯಸ್ಥ ಸುಖ ಬೀರ್ ಸಿಂಗ್ ಮೇಲೆ 'ಕಿರ್ಪಾನ್' ನಿಂದ ದಾಳಿ: ಗುರುದ್ವಾರದ ಸೇವಕನಿಂದಲೇ ಕೃತ್ಯ! ಆರೋಪಿ ವಶಕ್ಕೆ

ಕರ್ನಾಟಕ ಪುರುಷರ ಕ್ರಿಕೆಟ್ ತಂಡಕ್ಕೆ ಮುಖ್ಯ ಕೋಚ್ ಆಗಿ ವಿನಯ್ ಕುಮಾರ್ ನೇಮಕ