ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್- ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಗ್ಚಿ online desk
ವಿದೇಶ

ಜೂನ್ 30 ರಂದು ಸಭೆಗೆ ತೆಹ್ರಾನ್‌ ಮನವಿ ಮಾಡಿತ್ತು- ಟ್ರಂಪ್; ಮುಂದಿನ ದಿನಗಳಲ್ಲಿ ತಾಂತ್ರಿಕ ಮಾತುಕತೆಗಳ ನಿರೀಕ್ಷೆ ಇಲ್ಲ- ಇರಾನ್

ಇತ್ತೀಚಿನ ದಿನಗಳಲ್ಲಿ ಎರಡೂ ಕಡೆಯವರು ತಮ್ಮ ದುರ್ಬಲವಾದ ಕದನ ವಿರಾಮವನ್ನು ಪರೀಕ್ಷಿಸುತ್ತಾ ಕೊಲ್ಲಿಯಲ್ಲಿ ಗುಂಡಿನ ದಾಳಿ ನಡೆಸಿದ್ದಾರೆ.

ವಾಷಿಂಗ್ ಟನ್: ಮಾತುಕತೆ ನಡೆಸಲು ಯೋಜಿಸಲಾಗಿದೆ ಎಂಬುದನ್ನು ಇರಾನ್ ಈ ಹಿಂದೆ ನಿರಾಕರಿಸಿದ್ದರೂ, ಮಂಗಳವಾರ ಗಲ್ಫ್ ರಾಷ್ಟ್ರ ಕತಾರ್‌ನಲ್ಲಿ ಸಭೆ ನಡೆಸಲು ಇರಾನ್ ವಿನಂತಿಸಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

"ಇರಾನ್ ಸಭೆಗೆ ವಿನಂತಿಸಿದೆ. ನಾಳೆ ದೋಹಾದಲ್ಲಿ ಅದು ನಡೆಯಲಿದೆ!" ಎಂದು ಟ್ರಂಪ್ ಸೋಮವಾರ ತಮ್ಮ ಟ್ರೂತ್ ಸೋಶಿಯಲ್ ಪ್ಲಾಟ್‌ಫಾರ್ಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ಮಧ್ಯಪ್ರಾಚ್ಯ ಯುದ್ಧವನ್ನು ಕೊನೆಗೊಳಿಸಲು ಒಪ್ಪಂದದ ಅನುಷ್ಠಾನದ ಕುರಿತು ಚರ್ಚಿಸಲು ಇರಾನ್ ಮತ್ತು ಅಮೆರಿಕದ ತಾಂತ್ರಿಕ ತಂಡಗಳು ಮುಂದಿನ ದಿನಗಳಲ್ಲಿ ಭೇಟಿಯಾಗುತ್ತವೆ ಎಂಬ ವರದಿಗಳನ್ನು ಇರಾನ್‌ನ ವಿದೇಶಾಂಗ ಸಚಿವಾಲಯ ಸೋಮವಾರ ನಿರಾಕರಿಸಿದೆ.

ಇತ್ತೀಚಿನ ದಿನಗಳಲ್ಲಿ ಎರಡೂ ಕಡೆಯವರು ತಮ್ಮ ದುರ್ಬಲವಾದ ಕದನ ವಿರಾಮವನ್ನು ಪರೀಕ್ಷಿಸುತ್ತಾ ಕೊಲ್ಲಿಯಲ್ಲಿ ಗುಂಡಿನ ದಾಳಿ ನಡೆಸಿದ್ದಾರೆ.

"ಈ ವಾರ ಕಾರ್ಯನಿರತ ಗುಂಪುಗಳ ತಾಂತ್ರಿಕ ಸಭೆಗಳನ್ನು ಯೋಜಿಸಲಾಗಿಲ್ಲ" ಎಂದು ಸರ್ಕಾರಿ ಸ್ವಾಮ್ಯದ ಟಿವಿ ಉಲ್ಲೇಖಿಸಿ ಉಪ ವಿದೇಶಾಂಗ ಸಚಿವ ಕಜೆಮ್ ಘರಿಬಬಾದಿ ಹೇಳಿದ್ದಾರೆ.

ಅಮೆರಿಕದ ಅಧಿಕಾರಿಗಳನ್ನು ಉಲ್ಲೇಖಿಸಿ, ಅಮೆರಿಕದ ಸುದ್ದಿ ತಾಣ ಆಕ್ಸಿಯೋಸ್ ಭಾನುವಾರ ಟೆಹ್ರಾನ್ ಮತ್ತು ವಾಷಿಂಗ್ಟನ್ ಮಂಗಳವಾರ ಕತಾರ್‌ನಲ್ಲಿ ಸಭೆ ನಡೆಸಲಿವೆ ಎಂದು ವರದಿ ಮಾಡಿದೆ, ಈ ಸಭೆ ಆಯಕಟ್ಟಿನ ಹಾರ್ಮುಜ್ ಜಲಸಂಧಿಯ ವಿವಾದವನ್ನು ಪರಿಹರಿಸಲು ಸಹಾಯ ಮಾಡುತ್ತದೆ ಎಂದು ನಿರೀಕ್ಷಿಸಲಾಗಿದೆ.

ಟ್ರಂಪ್ ಆಡಳಿತ ಅಧಿಕಾರಿಯೊಬ್ಬರು ಇದೇ ರೀತಿಯ ಹೇಳಿಕೆಗಳನ್ನು ನೀಡಿರುವುದಾಗಿ ಸಿಎನ್‌ಎನ್ ವರದಿ ಮಾಡಿದೆ, ಆದರೂ ಶ್ವೇತಭವನವು ಅಧಿಕೃತ ಹೇಳಿಕೆಯನ್ನು ನೀಡಿಲ್ಲ.

ಪಾಕಿಸ್ತಾನದ ಜೊತೆಗೆ ಕತಾರ್ ಕೂಡ ಮಧ್ಯಪ್ರಾಚ್ಯದಲ್ಲಿ ಯುದ್ಧವನ್ನು ಕೊನೆಗೊಳಿಸುವ ಗುರಿಯನ್ನು ಹೊಂದಿದ್ದು, ಇರಾನ್ ಮತ್ತು ಯುನೈಟೆಡ್ ಸ್ಟೇಟ್ಸ್ ನಡುವಿನ ಮಾತುಕತೆಗಳಲ್ಲಿ ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸಿದೆ.

ಟೆಹ್ರಾನ್ ಮತ್ತು ವಾಷಿಂಗ್ಟನ್ ನಡುವಿನ ಇತ್ತೀಚಿನ ಚರ್ಚೆಗಳು ಜೂನ್ 21 ರಂದು ಸ್ವಿಟ್ಜರ್‌ಲ್ಯಾಂಡ್‌ನಲ್ಲಿ ನಾಲ್ಕು ದೇಶಗಳ ನಿಯೋಗಗಳ ಹಾಜರಾತಿಯೊಂದಿಗೆ ನಡೆದವು. ಇರಾನ್‌ನಿಂದ ಕೊಲ್ಲಿಯ ಆಚೆ ಇರುವ ಕತಾರ್ - ಮಾತುಕತೆಗಳ ಆರ್ಥಿಕ ಅಂಶಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ.

ಇರಾನ್ ಅಲ್ಲಿ ತನ್ನ ಆಸ್ತಿಗಳನ್ನು ಹೊಂದಿದ್ದು, ಅವುಗಳನ್ನು ಅಮೆರಿಕದ ನಿರ್ಬಂಧಗಳಿಂದಾಗಿ ಸ್ಥಗಿತಗೊಳಿಸಲಾಗಿದೆ. ಈ ಹಣದ ಮೇಲಿನ ನಿರ್ಬಂಧಗಳನ್ನು ತೆಗೆದುಹಾಕಲು ಅಗತ್ಯ ಕ್ರಮಗಳು "ಪ್ರಗತಿಯಲ್ಲಿವೆ" ಎಂದು ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯನ್ ಸೋಮವಾರ ಹೇಳಿದ್ದಾರೆ.

"ಸ್ಥಾಪಿತ ಯೋಜನೆಗಳಿಗೆ ಅನುಗುಣವಾಗಿ, ಕತಾರ್‌ನಲ್ಲಿ ಹಿಡಿದಿಟ್ಟುಕೊಂಡಿರುವ ಒಟ್ಟು $12 ಬಿಲಿಯನ್‌ನಲ್ಲಿ $6 ಬಿಲಿಯನ್ ನ್ನು ಬಿಡುಗಡೆ ಮಾಡಿ ದೇಶಕ್ಕೆ ಹಿಂತಿರುಗಿಸಲಾಗುತ್ತದೆ" ಎಂದು ಅವರು ಅಧ್ಯಕ್ಷರು ಉಲ್ಲೇಖಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸುಪ್ರೀಂ ಕೋರ್ಟ್‌ನಲ್ಲೂ ಕರ್ನಾಟಕಕ್ಕೆ ಹಿನ್ನಡೆ: ಕಾವೇರಿ ವಿಚಾರಣೆ ಒಂದು ವಾರ ಮುಂದೂಡಿಕೆ, CWMA ಆದೇಶ ಪಾಲಿಸಲು ಸೂಚನೆ..!

Jharkhand: ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನು ಭೇಟಿಯಾಗಿ, ನೇಮಕಾತಿ ಪರೀಕ್ಷೆ ವಿವಾದ ಬಗೆಹರಿಸಿ: ಸಿಎಂ ಸೊರೆನ್‌ಗೆ ರಾಹುಲ್ ಗಾಂಧಿ ಮನವಿ

ದೂರು ನೀಡಲು ಕ್ಯೂಆರ್ ಕೋಡ್ ಬಿಡುಗಡೆ; ಹೋಟೆಲ್‌ಗಳ ಅಡುಗೆ ಕೋಣೆಗೆ ಸಿಸಿಟಿವಿ ಕಡ್ಡಾಯ, ಪಿಜಿ ಗಳಿಗೆ ಪ್ರತ್ಯೇಕ ಗೈಡ್‌ಲೈನ್ಸ್‌: ಖಾದರ್ ಮಹತ್ವದ ಘೋಷಣೆ

Rahul Gandhi ವಿರುದ್ಧದ ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಬ್ರೇಕ್! ಹೈಕೋರ್ಟ್‌ಗೆ ಸುಪ್ರೀಂ ಕೋರ್ಟ್ ಮಹತ್ವದ ಆದೇಶ

ಯುರೋಪ್‌ನಲ್ಲಿ ಯುದ್ಧದ ಭೀತಿ: ಉಕ್ರೇನ್‌ನಲ್ಲಿರುವ ಭಾರತದ ಬಿಲಿಯನೇರ್‌ ಉದ್ಯಮಿಯ ಕಾರ್ಖಾನೆ ಮೇಲೆ ರಷ್ಯಾ ದಾಳಿ!