ಆಯತೊಲ್ಲ ಖಮೇನಿ ಮತ್ತು ಇರಾನ್ ರಕ್ಷಣಾ ಸಚಿವ ಅಮೀರ್ ನಾಸಿರ್ಜಾದೆ 
ವಿದೇಶ

Ayatollah Ali Khamenei ಸಾವು: 40 ದಿನಗಳ ಶೋಕಾಚರಣೆಗೆ ಆದೇಶ; ಇರಾನ್ ಸೇನಾಧಿಕಾರಿ, ರಕ್ಷಣಾ ಸಚಿವ ಕೂಡ ಹತ

ಅಮೆರಿಕ ಮತ್ತು ಇಸ್ರೇಲ್ ನಡೆಸಿದ ಜಂಟಿ ಸೇನಾದಾಳಿಯಲ್ಲಿ ಇರಾನ್‌ನ ಸರ್ವೋಚ್ಚ ನಾಯಕ ಆಯತೊಲ್ಲ ಅಲಿ ಖಮೇನಿ ಸಾವಿಗೀಡಾಗಿದ್ದಾರೆ.

ಟೆಹ್ರಾನ್: ಇರಾನ್‌ನ ಸರ್ವೋಚ್ಚ ನಾಯಕ ಆಯತೊಲ್ಲ ಅಲಿ ಖಮೇನಿ ಅಮೆರಿಕ ಮತ್ತು ಇಸ್ರೇಲ್ ಸೇನಾದಾಳಿಯಲ್ಲಿ ಹತರಾದ ಬೆನ್ನಲ್ಲೇ ಇರಾನ್ ನಲ್ಲಿ ತುರ್ತು ಪರಿಸ್ಥಿತಿ ಘೋಷಣೆ ಮಾಡಲಾಗಿದ್ದು, 40 ದಿನಗಳ ಶೋಕಾಚರಣೆಗೆ ಸ್ಥಳೀಯ ಆಡಳಿತ ಆದೇಶ ನೀಡಿದೆ.

ಅಮೆರಿಕ ಮತ್ತು ಇಸ್ರೇಲ್ ನಡೆಸಿದ ಜಂಟಿ ಸೇನಾದಾಳಿಯಲ್ಲಿ ಇರಾನ್‌ನ ಸರ್ವೋಚ್ಚ ನಾಯಕ ಆಯತೊಲ್ಲ ಅಲಿ ಖಮೇನಿ ಸಾವಿಗೀಡಾಗಿದ್ದು, ಶನಿವಾರ ಮುಂಜಾನೆ ತಮ್ಮ ಕಚೇರಿಯಲ್ಲಿ ಅವರು "ತಮ್ಮ ನಿಯೋಜಿತ ಕರ್ತವ್ಯಗಳನ್ನು ನಿರ್ವಹಿಸುತ್ತಿದ್ದಾಗ" ಕೊಲ್ಲಲ್ಪಟ್ಟರು ಎಂದು ಇರಾನ್ ಸರ್ಕಾರಿ ಸ್ವಾಮ್ಯದ ಟಿವಿ ಐಆರ್‌ಐಬಿ ಹೇಳಿದೆ.

ಈ ಬೆಳವಣಿಗೆ ಬೆನ್ನಲ್ಲೇ ಇರಾನ್ ಸ್ಥಳೀಯ ಆಡಳಿತ ದೇಶಾದ್ಯಂತ ತುರ್ತು ಪರಿಸ್ಥಿತಿ ಘೋಷಣೆ ಮಾಡಿದ್ದು, ಇರಾನ್ ನಾದ್ಯಂತ 40 ದಿನಗಳ ಶೋಕಾಚರಣೆಗೆ ಆದೇಶ ಹೊರಡಿಸಿದೆ. ಅಂತೆಯೇ ಖಮೇನಿಯವರ ಮಗಳು, ಅಳಿಯ ಮತ್ತು ಮೊಮ್ಮಗ ಕೂಡ ಈ ದಾಳಿಯಲ್ಲಿ ಸಾವನ್ನಪ್ಪಿದ್ದು, ಇದು ಭಯೋತ್ಪಾದಕ ದಾಳಿ ಎಂದು ಐಆರ್‌ಜಿಸಿ ಹೇಳಿದೆ. ಅಲ್ಲದೆ "ಇರಾನಿನ ರಾಷ್ಟ್ರದ ಸೇಡಿನ ಕೈ... ಅವರನ್ನು ಹೋಗಲು ಬಿಡುವುದಿಲ್ಲ" ಎಂದು ಪ್ರತೀಕಾರದ ಎಚ್ಚರಿಕೆ ನೀಡಿದೆ.

ಇರಾನ್ ಸೇನಾಧಿಕಾರಿ, ರಕ್ಷಣಾ ಸಚಿವ ಕೂಡ ಹತ

ಇದೇ ವೇಳೆ ಇಸ್ರೇಲ್ ದಾಳಿಯಲ್ಲಿ ಇರಾನ್ ರಕ್ಷಣಾ ಸಚಿವ ಅಮೀರ್ ನಾಸಿರ್ಜಾದೆ ಮತ್ತು ಇರಾನ್‌ ರೆವಲ್ಯೂಷ್ನರಿ ಗಾರ್ಡ್ಸ್‌ (ಐಆರ್‌ಜಿಸಿ) ಕಮಾಂಡರ್‌ ಮೊಹಮ್ಮದ್‌ ಪಕ್‌ಪೂರ್‌ ಕೂಡ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ. ಕಳೆದ ವರ್ಷ ಮಾಜಿ ಕಮಾಂಡರ್‌ ಹುಸೇನ್‌ ಸಲಾಮಿ ಹತ್ಯೆಯ ಬಳಿಕ ಪಕ್‌ಪೂರ್‌ ಜೂನ್‌ನಲ್ಲಿ ಆ ಸ್ಥಾನಕ್ಕೇರಿದರು.

ಇವರಿಗೆ ಐಆರ್‌ಜಿಸಿಯ ಸಾಮರ್ಥ್ಯ, ಸಿದ್ಧತೆ ಮತ್ತು ಆಂತರಿಕ ಒಗ್ಗಟ್ಟು ಹೆಚ್ಚಿಸುವ ಜವಾಬ್ದಾರಿ ನೀಡಲಾಗಿತ್ತು. ಆದರೆ ನಿನ್ನೆ ಆರಂಭವಾದ ಇಸ್ರೇಲ್-ಅಮೆರಿಕ ಸೇನಾ ದಾಳಿಯಲ್ಲಿ ಅವರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

ಮೊದಲೇ ಎಚ್ಚರಿಕೆ ನೀಡಿದ್ದ ಅಮೆರಿಕ

ಇನ್ನು ಕಳೆದ ವಾರವಷ್ಟೇ ಪಾಕ್‌ಪೂರ್‌, ‘ಯಾವುದೇ ತಪ್ಪು ಹೆಜ್ಜೆ ಇಡಬೇಡಿ. ನಮ್ಮ ಸೇನೆ ಟ್ರಿಗರ್‌ ಮೇಲೆ ಬೆರಳಿಟ್ಟು ಸನ್ನದ್ಧವಾಗಿದೆ’ ಎಂದು ಅಮೆರಿಕಕ್ಕೆ ಎಚ್ಚರಿಸಿದ್ದರು. ಇದೀಗ ಶನಿವಾರದ ದಾಳಿಯಲ್ಲಿ ಇವರ ಹತ್ಯೆಯಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

NALSAR ವಿದ್ಯಾರ್ಥಿಗಳ ನಿಷೇಧ ಆದೇಶಕ್ಕೆ BCI ಅಧ್ಯಕ್ಷರ ಕ್ಷಮೆ!

ವಿಧಾನಸೌಧದಲ್ಲಿ 'ಫ್ರೀಡಂ ಹಬ್ಬ: ಈ ಮೂರು ನಿಲ್ದಾಣದಲ್ಲಿ ಮೆಟ್ರೋ ನಿಲುಗಡೆ ಇಲ್ಲ!

ತಂದೆ ಎಲ್ಲಿದ್ದಾರೆ ಅಂತ ತಾಯಿನ ಕೇಳಿ; ವಿಧಾನಸಭೆಯಲ್ಲಿ ಹುಡುಕಬೇಡಿ; CM Vijay ಬಗ್ಗೆ ಬಿಜೆಪಿ ಅಧ್ಯಕ್ಷರ ಹೇಳಿಕೆ ವಿವಾದಕ್ಕೆ ಗುರಿ!

‘ರಜಾಕರ್‌ಗಳಿಂದ ನಮ್ಮನ್ನು ರಕ್ಷಿಸಿದ್ದು RSS ಅಲ್ಲ, ಭಾರತೀಯ ಸೇನೆ’: BL ಸಂತೋಷ್ ಗೆ ಸಚಿವ ಪ್ರಿಯಾಂಕ್ ಖರ್ಗೆ ತಿರುಗೇಟು!

ಹಳದಿ ರೇಷ್ಮೆ ಧೋತಿ: ಅಯೋಧ್ಯೆ ರಾಮ ಮಂದಿರದ ಅರ್ಚಕರಿಗೆ ಹೊಸ ಡ್ರೆಸ್ ಕೋಡ್