ಸಂಗ್ರಹ ಚಿತ್ರ 
ವಿದೇಶ

ಇರಾನ್ 'ಮಹಾ' ಎಡವಟ್ಟು: ಸುಮ್ಮನಿದ್ದ ದೇಶ ಇದೀಗ ಯುದ್ಧಕ್ಕೆ ಎಂಟ್ರಿ; ಇಸ್ರೇಲ್-ಅಮೆರಿಕಕ್ಕೆ ಫೈಟರ್ ಜೆಟ್ ರವಾನೆ!

ಅಮೆರಿಕ-ಇಸ್ರೇಲ್ ಜಂಟಿ ದಾಳಿಯಲ್ಲಿ ಇರಾನ್‌ ಸರ್ವೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿಯನ್ನು ಹತ್ಯೆ ಮಾಡಿರುವುದಕ್ಕೆ ಇರಾನ್ ಕೊತ ಕೊತ ಕುದಿಯುತ್ತಿದೆ. ಹೀಗಾಗಿ ಮಧ್ಯಪ್ರಾಚ್ಯ ದೇಶಗಳ ಮೇಲೆ ಇರಾನ್ ಕ್ಷಿಪಣಿ ದಾಳಿಗಳನ್ನು ನಡೆಸುತ್ತಿದೆ.

ಅಮೆರಿಕ-ಇಸ್ರೇಲ್ ಜಂಟಿ ದಾಳಿಯಲ್ಲಿ ಇರಾನ್‌ ಸರ್ವೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿಯನ್ನು ಹತ್ಯೆ ಮಾಡಿರುವುದಕ್ಕೆ ಇರಾನ್ ಕೊತ ಕೊತ ಕುದಿಯುತ್ತಿದೆ. ಹೀಗಾಗಿ ಮಧ್ಯಪ್ರಾಚ್ಯ ದೇಶಗಳ ಮೇಲೆ ಇರಾನ್ ಕ್ಷಿಪಣಿ ದಾಳಿಗಳನ್ನು ನಡೆಸುತ್ತಿದೆ. ಸೌದಿ ಅರೇಬಿಯಾ, ಯುಎಇ, ಕುವೈತ್, ಬಹರೇನ್‌ ಮೇಲೆ ಮನಸೋ ಇಚ್ಛೆ ಕ್ಷಿಪಣಿ ದಾಳಿ ಮಾಡುತ್ತಿದೆ. ಈ ಮಧ್ಯೆ ಸೈಪ್ರಸ್ ನಲ್ಲಿರುವ ಬ್ರಿಟಿಷ್ ನೆಲೆಯ ಮೇಲೆ ಇರಾನ್ ಕ್ಷಿಪಣಿ ದಾಳಿ ಮಾಡಿ ಮಹಾ ಎಡವಟ್ಟು ಮಾಡಿಕೊಂಡಿದೆ. ಸುಮ್ಮನಿದ್ದ ಗ್ರೀಸ್ ಇದೀಗ ಯುದ್ಧಕ್ಕೆ ಎಂಟ್ರಿ ಕೊಡುವಂತೆ ಮಾಡಿದೆ.

ಬ್ರಿಟಿಷ್ ನೆಲೆಯ ಮೇಲೆ ದಾಳಿ ಮಾಡಿದ ನಂತರ ಗ್ರೀಸ್ 'ಯಾವುದೇ ಸಂಭಾವ್ಯ ದಾಳಿಗಳಿಂದ' ಸೈಪ್ರಸ್ ಅನ್ನು ರಕ್ಷಿಸಲು ಸಿದ್ಧವಾಗಿದೆ ಎಂದು ಗ್ರೀಕ್ ರಕ್ಷಣಾ ಸಚಿವ ನಿಕೋಸ್ ಡೆಂಡಿಯಾಸ್ ಹೇಳಿದ್ದಾರೆ. ಯುಕೆಯ ಆರ್‌ಎಎಫ್ ಅಕ್ರೋತಿರಿ ವಾಯುನೆಲೆಯನ್ನು ಗುರಿಯಾಗಿಸಿಕೊಂಡಿದ್ದ ಎರಡು ಡ್ರೋನ್‌ಗಳನ್ನು ಸೈಪ್ರಸ್ ವಾಯುಪ್ರದೇಶದಲ್ಲಿ ಹೊಡೆದುರುಳಿಸಲಾಯಿತು. ನಂತರ ದಾಳಿಗಳನ್ನು ಹಿಮ್ಮೆಟ್ಟಿಸಲು ಗ್ರೀಸ್ ಎರಡು ಫ್ರಿಗೇಟ್‌ಗಳು ಮತ್ತು ಎರಡು ಎಫ್ -16 ಜೆಟ್‌ಗಳನ್ನು ಸೈಪ್ರಸ್‌ಗೆ ಕಳುಹಿಸುತ್ತಿರುವುದಾಗಿ ಘೋಷಿಸಿದೆ.

ಇದಕ್ಕೂ ಮೊದಲು, ಸೈಪ್ರಸ್ ಅಧ್ಯಕ್ಷ ನಿಕೋಸ್ ಕ್ರಿಸ್ಟೋಡೌಲೈಡ್ಸ್ ಅವರು ಶಹೀದ್ ಮಾದರಿಯ ಡ್ರೋನ್ ದ್ವೀಪದ ದಕ್ಷಿಣ ಕರಾವಳಿಯಲ್ಲಿರುವ ಯುಕೆ ವಾಯುನೆಲೆಯೊಳಗಿನ ಮಿಲಿಟರಿ ಸ್ಥಾಪನೆಗಳಿಗೆ "ಸಣ್ಣ ಹಾನಿ" ಉಂಟುಮಾಡಿದೆ ಎಂದು ಹೇಳಿದರು. ಸೋಮವಾರ ಮಧ್ಯರಾತ್ರಿಯ ನಂತರ ಡ್ರೋನ್ ದಾಳಿ ನಡೆಸಿದೆ ಎಂದು ಅವರು ಹೇಳಿದರು. ಡ್ರೋನ್ ದಾಳಿಯಿಂದ ಯಾವುದೇ ಸಾವುನೋವುಗಳು ಸಂಭವಿಸಿಲ್ಲ. ಫೆಬ್ರವರಿ 28 ರಂದು ಯುಎಸ್-ಇಸ್ರೇಲಿ ಸಂಘಟಿತ ದಾಳಿಗೆ ಪ್ರತೀಕಾರವಾಗಿ ಇರಾನ್ ಈ ಪ್ರದೇಶದ ಹಲವಾರು ಇಸ್ರೇಲಿ ಮತ್ತು ಅಮೇರಿಕನ್ ಸೌಲಭ್ಯಗಳ ಮೇಲೆ ಕ್ಷಿಪಣಿ ದಾಳಿಗಳನ್ನು ನಡೆಸುತ್ತಿವೆ.

ಬ್ರಿಟಿಷ್ ಪ್ರಧಾನಿ ಕೀರ್ ಸ್ಟಾರ್ಮರ್ ಅವರು "ರಕ್ಷಣಾತ್ಮಕ" ದಾಳಿಗಳಿಗೆ ಬ್ರಿಟಿಷ್ ಮಿಲಿಟರಿ ನೆಲೆಗಳನ್ನು ಬಳಸಲು ಅಮೆರಿಕಕ್ಕೆ ಅನುಮತಿ ನೀಡಿದ ಬೆನ್ನಲ್ಲೇ ಇರಾನ್ ಡ್ರೋನ್ ದಾಳಿ ನಡೆಸಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

BRICS 2026: Modi-Putin ಭೇಟಿ; ಆಪ್ತ ಮಿತ್ರನಿಗೆ ಪ್ರಧಾನಿಯಿಂದ ಪವಿತ್ರ, ವಿಶೇಷ ಉಡುಗೊರೆ! Video

BRICS 2026: ಭಾರತ ಭಿನ್ನಾಭಿಪ್ರಾಯಗಳನ್ನು ಸರಿಯಾಗಿ ನಿರ್ವಹಿಸಲಿ- ಕ್ಸೀ ಜಿನ್ಪಿಂಗ್ ಭಾರತ ಭೇಟಿಗೂ ಮುನ್ನ ಚೀನಾ

ನಿಮ್ಮ ಹೇಳಿಕೆಯಿಂದ ಪಕ್ಷಕ್ಕೆ ಡ್ಯಾಮೇಜ್ ಆಗಬಹುದು: ಸಿದ್ದರಾಮಯ್ಯ ರಾಜಕೀಯ ನಿವೃತ್ತಿ ಹೇಳಿಕೆಗೆ ರಾಹುಲ್​​ ಗಾಂಧಿ ಆಕ್ಷೇಪ

ದೇವಸ್ಥಾನದಲ್ಲಿ ಮೀನು ತಿಂದ ಸುವೇಂದು ಅಧಿಕಾರಿ: ಬಾಗೇಶ್ವರ್ ಬಾಬಾಗೆ ತಿರುಗೇಟು; CM ಮಾಂಸಾಹಾರ ಸೇವನೆ ಬಗ್ಗೆ ಬಿಜೆಪಿ ಹೇಳಿದ್ದೇನು? Video

ಜೈಪುರದಲ್ಲಿ ಘೋರ ಕೃತ್ಯ: ಪತ್ನಿ, ಮೂವರು ಹೆಣ್ಣು ಮಕ್ಕಳ ತಲೆಯನ್ನು ಬ್ರಿಕ್'ನಿಂದ ಜಜ್ಜಿ ಕೊಂದ ಕ್ರೂರಿ!