ಬೆಂಜಮಿನ್ ನೆತನ್ಯಾಹು 
ವಿದೇಶ

'ಇದು ಅಂತ್ಯವಿಲ್ಲದ ಯುದ್ಧವಲ್ಲ, ಶಾಂತಿಗೆ ದಾರಿ ತೆರೆಯುವ ಒಂದು ದ್ವಾರ': Iran ಮೇಲಿನ ದಾಳಿಯನ್ನು ಸಮರ್ಥಿಸಿಕೊಂಡ ಬೆಂಜಮಿನ್ ನೆತನ್ಯಾಹು

ಇದು ಶಾಂತಿಗೆ ದಾರಿ ತೆರೆಯುವ ಒಂದು ದ್ವಾರ, ವ್ಯಾಪಕ ಶಾಂತಿಗೆ ಮಾರ್ಗವಾಗುತ್ತದೆ, ನಾವು ಅದನ್ನು ಸಾಧಿಸಬಹುದು ಎಂದು ನಾನು ನಂಬುತ್ತೇನೆ ಎಂದು ನೆತನ್ಯಾಹು ಹೇಳಿದ್ದಾರೆ. ಟ್ರಂಪ್ ಅವರೊಂದಿಗೆ ನಡೆದ ಸಹಕಾರವು ಹಿಂದೆ ಮಹತ್ವದ ರಾಜತಾಂತ್ರಿಕ ಮುನ್ನಡೆಗಳಿಗೆ ಕಾರಣವಾಗಿತ್ತು ಎಂದೂ ಅವರು ಹೇಳಿದ್ದಾರೆ.

ಇಸ್ರೇಲ್ ಪ್ರಧಾನಮಂತ್ರಿ ಬೆಂಜಮಿನ್ ನೆತನ್ಯಾಹು, ಇರಾನ್ ವಿರುದ್ಧ ನಡೆಯುತ್ತಿರುವ ಸೈನಿಕ ಕಾರ್ಯಾಚರಣೆಯು “ಶಾಂತಿಗೆ ದಾರಿ ತೆರೆಯುವ ದ್ವಾರ”ವಾಗಿದ್ದು, ಅಂತ್ಯವಿಲ್ಲದ ಸಂಘರ್ಷವಲ್ಲ ಎಂದು ಹೇಳಿದ್ದಾರೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ಕೈಜೋಡಿಸಿದ ಕ್ರಮವು ಪ್ರಾದೇಶಿಕ ಸ್ಥಿರತೆ ಮತ್ತು ಹೆಚ್ಚುವರಿ ಶಾಂತಿ ಒಪ್ಪಂದಗಳಿಗೆ ದಾರಿಯಾಗಲಿದೆ ಎಂದು ಅವರು ಸಮರ್ಥಿಸಿಕೊಂಡಿದ್ದಾರೆ.

ಇದು ಶಾಂತಿಗೆ ದಾರಿ ತೆರೆಯುವ ಒಂದು ದ್ವಾರ, ವ್ಯಾಪಕ ಶಾಂತಿಗೆ ಮಾರ್ಗವಾಗುತ್ತದೆ, ನಾವು ಅದನ್ನು ಸಾಧಿಸಬಹುದು ಎಂದು ನಾನು ನಂಬುತ್ತೇನೆ ಎಂದು ನೆತನ್ಯಾಹು ಹೇಳಿದ್ದಾರೆ. ಟ್ರಂಪ್ ಅವರೊಂದಿಗೆ ನಡೆದ ಸಹಕಾರವು ಹಿಂದೆ ಮಹತ್ವದ ರಾಜತಾಂತ್ರಿಕ ಮುನ್ನಡೆಗಳಿಗೆ ಕಾರಣವಾಗಿತ್ತು ಎಂದೂ ಅವರು ಹೇಳಿದ್ದಾರೆ.

ಅತ್ಯಂತ ಮುಖ್ಯವಾಗಿ ಅರ್ಥಮಾಡಿಕೊಳ್ಳಬೇಕಾದದ್ದು ಏನೆಂದರೆ, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ನಾನು ಒಟ್ಟಾಗಿ ಕೆಲಸ ಮಾಡಿದಾಗ, ನಾವು ಶಾಂತಿಗಾಗಿ ನಾಲ್ಕು ಮಹತ್ವದ ಸಾಧನೆಗಳನ್ನು ಗಳಿಸಿದ್ದೇವೆ. ಅಧ್ಯಕ್ಷ ಟ್ರಂಪ್ ಅವರ ಮಧ್ಯಸ್ಥಿಕೆಯಲ್ಲಿ, ನನ್ನೊಂದಿಗೆ ಕೈಜೋಡಿಸಿ, ನಾವು ನಾಲ್ಕು ಅರಬ್ ರಾಷ್ಟ್ರಗಳೊಂದಿಗೆ ನಾಲ್ಕು ಶಾಂತಿ ಒಪ್ಪಂದಗಳನ್ನು ಮಾಡಿಕೊಂಡೆವು - ಅದೇ ಅಬ್ರಹಾಂ ಒಪ್ಪಂದಗಳು ಎಂದು ಹೇಳಿದರು.

ಇರಾನ್ ವಿರುದ್ಧ ಮುಂದುವರಿಯುವ ಸಹಕಾರದಿಂದ ಇನ್ನೂ ಅನೇಕ ಶಾಂತಿ ಒಪ್ಪಂದಗಳು ಸಾಧ್ಯವಾಗಬಹುದು ಎಂದು ಅವರು ಹೇಳಿದರು. ಇದು ಅಂತ್ಯವಿಲ್ಲದ ಯುದ್ಧವಲ್ಲ. ಇದು ಶಾಂತಿಗೆ ದಾರಿ ತೆರೆಸುವ ದ್ವಾರ. ಜನರು ಹೇಳುತ್ತಿರುವುದಕ್ಕೆ ಸಂಪೂರ್ಣ ವಿರುದ್ಧವಾಗಿದ್ದು ಸದುದ್ದೇಶದಿಂದ ಕೂಡಿದೆ ಎಂದು ನೆತನ್ಯಾಹು ಹೇಳಿದರು.

ಡೊನಾಲ್ಡ್ ಟ್ರಂಪ್ ಅವರಂತಹ ಅಧ್ಯಕ್ಷರು ಎಂದಿಗೂ ಇರಲಿಲ್ಲ. ಅವರ ದೃಢತೆ, ನಿರ್ಧಾರಶೀಲತೆ, ಚಿಂತನೆಯ ಸ್ಪಷ್ಟತೆ — ವಿಷಯಗಳ ಆಳಕ್ಕೆ ನೇರವಾಗಿ ಹೋಗುವ ಅವರ ಶೈಲಿ ಅಪರೂಪದ್ದು ಎಂದು ಹೇಳಿದರು. ಡೊನಾಲ್ಡ್ ಟ್ರಂಪ್ ಮಾತುಗಳನ್ನು ಬದಿಗಿಟ್ಟು, ನೇರವಾಗಿ ಮುಖ್ಯ ವಿಷಯಕ್ಕೆ ಬರುತ್ತಾರೆ, ಕೈಗೊಳ್ಳಬೇಕಾದ ಕ್ರಮವನ್ನು ತೆಗೆದುಕೊಳ್ಳುತ್ತಾರೆ ಎಂದರು.

ಇಸ್ರೇಲ್‌ಗೆ ಮಾತ್ರವಲ್ಲ, ಸ್ವತಂತ್ರ ಜಗತ್ತಿನ ರಾಷ್ಟ್ರಗಳಿಗೆ — ಅಷ್ಟೇ ಅಲ್ಲ, ಸಂಪೂರ್ಣ ಜಗತ್ತಿಗೆ — ನಾವು ಅವರನ್ನು ಸ್ವತಂತ್ರ ಜಗತ್ತಿನ ನಾಯಕನಾಗಿ ಹೊಂದಿರುವುದು ನಮ್ಮ ಭಾಗ್ಯ. ಅಮೆರಿಕವನ್ನು ಮತ್ತೆ ಜಗತ್ತಿನ ನಾಯಕತ್ವ ಸ್ಥಾನಕ್ಕೆ ತಂದಿದ್ದಾರೆ ಎಂದರು.

ಇರಾನ್ ಮೇಲೆ ದಾಳಿ ಅಗತ್ಯವಾಗಿದ್ದೇಕೆ ಎಂಬುದನ್ನು ವಿವರಿಸಿದ ಅವರು, ಇರಾನ್ 47 ವರ್ಷಗಳಿಂದ ಅಮೆರಿಕದ ಮರಣ ಎಂದು ಘೋಷಣೆ ಕೂಗುತ್ತಿದೆ ಎಂದು ಅವರು ಆರೋಪಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ದೆಹಲಿಯಲ್ಲಿ ನಾಯಕರ ಬಂಧನ, ಮೆಟ್ರೋ ಸ್ಥಗಿತ ಕುರಿತ ನ್ಯಾಯಾಂಗ ನಿಂದನೆ: ಭಾನುವಾರವೂ 'ಸುಪ್ರೀಂ' ವಿಶೇಷ ಪೀಠದಿಂದ ವಿಚಾರಣೆ!

BBK 13: ಗಾನವಿ ಹೇಳಿಕೆಗೆ ನೊಂದು ಗಗನ್ ತಾಯಿಗೆ ತಾನೇ ಕ್ಷಮೆ ಕೇಳಿ ಕಣ್ಣೀರು ಹಾಕಿದ ಸುದೀಪ್

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತ, ಆಫ್ರಿಕಾಗೆ ಸೂಕ್ತ ಪ್ರಾತಿನಿಧ್ಯ ಸಿಗಲೇಬೇಕು: ಜೈಶಂಕರ್ ಆಗ್ರಹ

ಪ್ರತಿಭಟನೆಗಳ ನಡುವೆಯೇ ಚು. ಆಯೋಗ ಮಹತ್ವದ ನಡೆ, ಹೊಸ ಉಪಾಯುಕ್ತರ ನೇಮಕ, 27 ಅಧಿಕಾರಿಗಳಿಗೆ ಹೊಸ ಹೊಣೆ!

ಮಣಿಪುರದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ: 30 ಮನೆ-ಅಂಗಡಿಗಳಿಗೆ ಬೆಂಕಿ, ಕನಿಷ್ಠ 5 ಸಾವು!