ಬಲೇನ್ ಶಾ 
ವಿದೇಶ

ನೇಪಾಳ ಚುನಾವಣೆ: ಪ್ರಚಂಡ ಗೆಲುವಿನತ್ತ RSP; ಬೆಂಗಳೂರಿನಲ್ಲಿ ಪದವಿ ಪಡೆದಿದ್ದ ಬಲೇನ್ ಶಾ, 35 ವರ್ಷಕ್ಕೆ ಪ್ರಧಾನಿ ಪಟ್ಟ!

ನೇಪಾಳದ ಚುನಾವಣಾ ಆಯೋಗದ ಪ್ರಕಾರ, 165 ಕ್ಷೇತ್ರಗಳ ಪೈಕಿ RSP 47 ಸ್ಥಾನಗಳನ್ನು ಸಂಪೂರ್ಣವಾಗಿ ವಶಪಡಿಸಿಕೊಂಡಿದ್ದು 72 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಬ್ಯಾಲೆನ್ ಎಂದು ಕರೆಯಲ್ಪಡುವ 35 ವರ್ಷದ ರ‍್ಯಾಪರ್ ಎಂಜಿನಿಯರ್ ನೇಪಾಳದ ಮುಂದಿನ ಪ್ರಧಾನಿಯಾಗುವ ನಿರೀಕ್ಷೆಯಿದೆ.

ಮಾಜಿ ರ‍್ಯಾಪರ್, ರಾಜಕಾರಣಿ ಬಲೇಂದ್ರ ಶಾ ನೇತೃತ್ವದ ರಾಷ್ಟ್ರೀಯ ಸ್ವತಂತ್ರ ಪಕ್ಷ (RSP) ನೇಪಾಳದ ಸಾರ್ವತ್ರಿಕ ಚುನಾವಣೆಯಲ್ಲಿ ಪ್ರಚಂಡ ಗೆಲುವು ಪಡೆಯಲಿದೆ. ದೀರ್ಘಕಾಲ ರಾಜಕೀಯವಾಗಿ ಅಸ್ಥಿರವಾಗಿರುವ ಈ ದೇಶದಲ್ಲಿ ಸಾಂಪ್ರದಾಯಿಕ ಪಕ್ಷಗಳ ಪ್ರಾಬಲ್ಯವನ್ನು ಪ್ರಶ್ನಿಸುವ ಮೂಲಕ ಆರ್‌ಎಸ್‌ಪಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮುವ ನಿರೀಕ್ಷೆಯಿದೆ. ನೇಪಾಳದ ಚುನಾವಣಾ ಆಯೋಗದ ಪ್ರಕಾರ, 165 ಕ್ಷೇತ್ರಗಳ ಪೈಕಿ RSP 47 ಸ್ಥಾನಗಳನ್ನು ಸಂಪೂರ್ಣವಾಗಿ ವಶಪಡಿಸಿಕೊಂಡಿದ್ದು 72 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಬಲೇನ್ ಎಂದು ಕರೆಯಲ್ಪಡುವ 35 ವರ್ಷದ ರ‍್ಯಾಪರ್ ಎಂಜಿನಿಯರ್ ನೇಪಾಳದ ಮುಂದಿನ ಪ್ರಧಾನಿಯಾಗುವ ನಿರೀಕ್ಷೆಯಿದೆ.

2025ರ ಸೆಪ್ಟೆಂಬರ್ 8-9ರಂದು ನೇಪಾಳದಲ್ಲಿ Gen Z ಪ್ರತಿಭಟನೆಗಳ ನಡೆದಿದ್ದು ಇದಾದ ನಂತರ ಚುನಾವಣೆಗಳು ನಡೆಯಿತು. ಭ್ರಷ್ಟಾಚಾರ, ಸ್ವಜನಪಕ್ಷಪಾತ ಮತ್ತು ಹಳತಾದ ನಾಯಕತ್ವವನ್ನು ಕೊನೆಗೊಳಿಸಬೇಕೆಂದು ಒತ್ತಾಯಿಸಿ Gen Z ನೇತೃತ್ವದ ಪ್ರತಿಭಟನೆಗಳು ಪ್ರಧಾನಿ ಕೆ.ಪಿ. ಶರ್ಮಾ ಒಲಿ ಅವರ ಸಮ್ಮಿಶ್ರ ಸರ್ಕಾರವನ್ನು ಉರುಳಿಸಿತ್ತು. ಅದು ಸುಮಾರು ಮೂರನೇ ಎರಡರಷ್ಟು ಬೆಂಬಲವನ್ನು ಹೊಂದಿತ್ತು. ನೇಪಾಳಿ ಕಾಂಗ್ರೆಸ್, ನೇಪಾಳಿ ಕಮ್ಯುನಿಸ್ಟ್ ಪಕ್ಷ ಮತ್ತು ಸಿಪಿಎನ್-ಯುಎಂಎಲ್ ತಲಾ 10 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿವೆ. ಶ್ರಮಿಕ್ ಸಂಸ್ಕೃತಿ ಪಕ್ಷ ಐದು ಸ್ಥಾನಗಳಲ್ಲಿ ಮುನ್ನಡೆ ಸಾಧಿಸುತ್ತಿದ್ದರೆ, ಇತರ ಪಕ್ಷಗಳು ತಲಾ ಎರಡು ಸ್ಥಾನಗಳಲ್ಲಿ ಮುಂದಿವೆ.

ಕಠ್ಮಂಡುವಿನ ಮಾಜಿ ಮೇಯರ್ ಬಲೇಂದ್ರ ಶಾ, ಝಾಪಾ-5ರಿಂದ ಸ್ಪರ್ಧಿಸುತ್ತಿದ್ದಾರೆ. ಇಲ್ಲಿ, ಅವರು ನಾಲ್ಕು ಬಾರಿ ಪ್ರಧಾನಿ ಮತ್ತು ಸಿಪಿಎನ್-ಯುಎಂಎಲ್ ಅಧ್ಯಕ್ಷ ಕೆ.ಪಿ. ಶರ್ಮಾ ಓಲಿ ಅವರ ಭದ್ರಕೋಟೆಯಲ್ಲಿ ಬಲವಾದ ಮುನ್ನಡೆ ಸಾಧಿಸಿದ್ದಾರೆ. ಇಲ್ಲಿಯವರೆಗೆ ಶಾ 39,284 ಮತಗಳನ್ನು ಪಡೆದಿದ್ದರೆ, ಓಲಿ 10,293 ಮತಗಳನ್ನು ಪಡೆದಿದ್ದಾರೆ. 165 ಸದಸ್ಯರನ್ನು ನೇರ ಮತದಾನದ ಮೂಲಕ ಆಯ್ಕೆ ಮಾಡಲಾಗುತ್ತದೆ.

ನೇಪಾಳದ ಸಂಸತ್ತಿನಲ್ಲಿ ಒಟ್ಟು 275 ಸದಸ್ಯರು ಇದ್ದಾರೆ. ಇವರಲ್ಲಿ 165 ಜನರು ನೇರ ಮತದಾನ ವ್ಯವಸ್ಥೆಯ ಮೂಲಕ ಆಯ್ಕೆಯಾಗುತ್ತಾರೆ. ಉಳಿದ 110 ಜನರು ಅನುಪಾತದ ಪ್ರಾತಿನಿಧ್ಯ ವ್ಯವಸ್ಥೆಯ ಮೂಲಕ ಆಯ್ಕೆಯಾಗುತ್ತಾರೆ. ಈ ಸಾರ್ವತ್ರಿಕ ಚುನಾವಣೆಯಲ್ಲಿ ಸುಮಾರು 18.9 ಮಿಲಿಯನ್ ಮತದಾರರು ಪ್ರತಿನಿಧಿ ಸಭೆಯ 275 ಸದಸ್ಯರನ್ನು ಆಯ್ಕೆ ಮಾಡಲು ಅರ್ಹರಾಗಿದ್ದರು. ಗುರುವಾರದ ಮತದಾನದಲ್ಲಿ ಸುಮಾರು 60 ಪ್ರತಿಶತ ಮತದಾರರು ತಮ್ಮ ಮತದಾನವನ್ನು ಚಲಾಯಿಸಿದರು. 165 ನೇರ ಸ್ಥಾನಗಳಿಗೆ ಸುಮಾರು 3,400 ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದರೆ, ಅನುಪಾತದ ಪ್ರಾತಿನಿಧ್ಯ ವ್ಯವಸ್ಥೆಯಡಿಯಲ್ಲಿ 110 ಸ್ಥಾನಗಳಿಗೆ 3,135 ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ.

ಈ ಬಲೇನ್ ಶಾ ಬೆಂಗಳೂರಿನ ಯಲಹಂಕದ ನಿಟ್ಟೆ ಮೀನಾಕ್ಷಿ ಕಾಲೇಜಿನಲ್ಲಿ 2016 ರಿಂದ 2018ರ ಅವಧಿಯಲ್ಲಿ ಎರಡು ವರ್ಷ ಎಂಟೆಕ್ ವ್ಯಾಸಂಗ ಮಾಡಿದ್ದರು. 2018 ರಲ್ಲಿ ಎಂಟೆಕ್ ಕೋರ್ಸ್ ಮುಗಿಸಿ ನೇಪಾಳಕ್ಕೆ ತೆರಳಿದ್ದು ಅವರು 2022ರಲ್ಲಿ ಕಂಠ್ಮಂಡು ಮೇಯರ್ ಆಗಿ ಆಯ್ಕೆಯಾಗಿದರು. ಅದಾದ ನಂತರ 2025ರ Gen Z ಪ್ರತಿಭಟನೆಗಳ ನೇತೃತ್ವದ ವಹಿಸಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಇಸ್ರೇಲ್-ಅಮೆರಿಕವನ್ನ ಕ್ಷಮಿಸೋ ಮಾತೇ ಇಲ್ಲ.. ಆದರೆ...': ನೆರೆಹೊರೆ ರಾಷ್ಟ್ರಗಳ ಕ್ಷಮೆ ಕೋರಿದ Iran

'ಅದು ಮಾನವೀಯ ಕೆಲಸ.. ನಾವು ಸರಿಯಾದ್ದನ್ನೇ ಮಾಡಿದ್ದೆವು': Iran ನೌಕೆಗೆ ಪ್ರವೇಶ ನೀಡಿದ ಕುರಿತು EAM Jaishankar ಹೇಳಿಕೆ!

T20 ವಿಶ್ವಕಪ್ 2026: 'ಅವ್ರನ್ನ ಸೋಲಿಸೋಕೆ ಚಾನ್ಸೇ ಇಲ್ಲ.. ಚೋಕರ್ಸ್ ಪಟ್ಟ ಕೊಟ್ಟು ಬಿಡ್ತೀವಿ..': ಇವ್ರೇ ವಿನ್ನರ್ ಎಂದ Dale Steyn!

ಬಂಗಾಳದ ನೂತನ ರಾಜ್ಯಪಾಲ ಆರ್.ಎನ್.ರವಿ 'ಬಿಜೆಪಿ ಕೇಡರ್, ಆದ್ರೆ ಇದು ಕಠಿಣ ಅಖಾಡ': ಮಮತಾ

ಇರಾನ್ ಯುದ್ಧದ ನಡುವೆಯೇ ಸೌದಿ ರಕ್ಷಣಾ ಸಚಿವರನ್ನು ಭೇಟಿಯಾದ ಪಾಕ್ CDF ಮುನೀರ್! ಕಾರಣವೇನು?

SCROLL FOR NEXT