ಅಮೆರಿಕಾ–ಇಸ್ರೇಲ್ ಸೈನಿಕ ಕಾರ್ಯಾಚರಣೆ ವೇಳೆ ಟೆಹ್ರಾನ್ ದಕ್ಷಿಣದ ತೈಲ ಸಂಗ್ರಹ ಘಟಕದಲ್ಲಿ ಜ್ವಾಲೆಗಳು ಎದ್ದವು 
ವಿದೇಶ

West Asia conflict: ಇರಾನ್‌ನ ಪ್ರಮುಖ ತೈಲ ಘಟಕ ಮೇಲೆ ಇಸ್ರೇಲ್ ದಾಳಿ; ಗಲ್ಫ್ ರಾಷ್ಟ್ರಗಳ ಮೇಲೆ ಟೆಹ್ರಾನ್ ಯುದ್ಧ; Video

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಟ್ರೂತ್ ಸೋಷಿಯಲ್ ನಲ್ಲಿ ಮಾಡಿರುವ ಪೋಸ್ಟ್‌ನಲ್ಲಿ ಇನ್ನಷ್ಟು ಇರಾನ್ ಅಧಿಕಾರಿಗಳು ಗುರಿಯಾಗಲಿದ್ದಾರೆ ಎಂದು ಎಚ್ಚರಿಸಿದರು.

ಅಮೆರಿಕಾ, ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧವು ಎರಡನೇ ವಾರಕ್ಕೆ ಕಾಲಿಟ್ಟಿದ್ದು, ಇರಾನ್ ಹಾಗೂ ಮಧ್ಯಪ್ರಾಚ್ಯದ ಇತರ ದೇಶಗಳಲ್ಲಿ ದಾಳಿಗಳು ಮುಂದುವರಿದಿವೆ. ಇಸ್ರೇಲ್ ಸೇನೆ ಲೆಬನಾನ್ ಮೇಲೂ ಹೆಚ್ಚಿನ ದಾಳಿಗಳನ್ನು ನಡೆಸುತ್ತಿದೆ.

ಇರಾನ್ ಮೇಲೆ ಇನ್ನಷ್ಟು ಕಠಿಣ ದಾಳಿ

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಟ್ರೂತ್ ಸೋಷಿಯಲ್ ನಲ್ಲಿ ಮಾಡಿರುವ ಪೋಸ್ಟ್‌ನಲ್ಲಿ ಇನ್ನಷ್ಟು ಇರಾನ್ ಅಧಿಕಾರಿಗಳು ಗುರಿಯಾಗಲಿದ್ದಾರೆ ಎಂದು ಎಚ್ಚರಿಸಿದರು. ಇಂದು ಇರಾನ್ ಮೇಲೆ ಭಾರೀ ದಾಳಿ ನಡೆಯಲಿದೆ ಎಂದು ಹೇಳಿದರು. ಅದೇ ಸಮಯದಲ್ಲಿ ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯನ್ ಅವರು ಇದೇ ದಿನ ಮುಂಚಿತವಾಗಿ ನೆರೆ ರಾಷ್ಟ್ರಗಳಿಗೆ ಟೆಹ್ರಾನ್ ನಡೆಸಿದ ದಾಳಿಗಳ ಬಗ್ಗೆ ಕ್ಷಮೆ ಕೇಳಿರುವುದನ್ನೂ ಟ್ರಂಪ್ ಉಲ್ಲೇಖಿಸಿದರು.

ನಮ್ಮನ್ನು ರಕ್ಷಿಸಿಕೊಳ್ಳುವ ಹಕ್ಕು ನಮಗಿದೆ

ಇರಾನ್ ವಿದೇಶಾಂಗ ಸಚಿವಾಲಯ ಹೇಳಿಕೆಯಲ್ಲಿ ಅಮೆರಿಕಾ ಮತ್ತು ಇಸ್ರೇಲ್ ನಡೆಸುತ್ತಿರುವ ಕ್ರೂರ ಸೈನಿಕ ದಾಳಿಗೆ ಪ್ರತಿಕ್ರಿಯಿಸುವುದು ದೇಶದ ಸ್ವಾಭಾವಿಕ ಸ್ವಯಂರಕ್ಷಣಾ ಹಕ್ಕು ಎಂದು ತಿಳಿಸಿದೆ. ಆಕ್ರಮಣ ನಿಲ್ಲುವವರೆಗೆ ಅಥವಾ ಆಕ್ರಮಣಕಾರರನ್ನು ಗುರುತಿಸಿ ಕ್ರಮ ಕೈಗೊಳ್ಳುವಂತೆ ವಿಶ್ವಸಂಸ್ಥೆ ಭದ್ರತಾ ಮಂಡಳಿ ತನ್ನ ಕರ್ತವ್ಯವನ್ನು ನೆರವೇರಿಸುವವರೆಗೆ ತಹರಾನ್ ಕ್ರಮಗಳನ್ನು ಮುಂದುವರಿಸುತ್ತದೆ.

ಮಿಸೈಲ್ ಮತ್ತು ಡ್ರೋನ್ ದಾಳಿ

ಇರಾನ್ ನಿಂದ ಉಡಾಯಿಸಲಾದ ಕ್ಷಿಪಣಿ ಮತ್ತು ಡ್ರೋನ್‌ಗಳನ್ನು ಕತಾರ್, ಬಹ್ರೈನ್ ಮತ್ತು ಯುಎಇ ತಡೆದಿರುವುದಾಗಿ ತಿಳಿಸಿವೆ. ಈ ದಾಳಿಗಳು ಇಸ್ರೇಲ್ ಮತ್ತು ಇತರ ದೇಶಗಳನ್ನು ಗುರಿಯಾಗಿಸಿಕೊಂಡಿರುವ ಬಾಲಿಸ್ಟಿಕ್ ಕ್ಷಿಪಣಿಗಳನ್ನು ನಿಯಂತ್ರಿಸುವ ಅರೆಸೇನಾಪಡೆ Islamic Revolutionary Guard Corps ಮೇಲಿನ ಧರ್ಮಾಧಾರಿತ ಆಡಳಿತದ ನಿಯಂತ್ರಣ ಸೀಮಿತವಾಗಿದೆ ಎಂಬುದನ್ನು ಸೂಚಿಸುತ್ತವೆ.

‘ಹೆಜ್ಬೊಲ್ಲಾಹ್ ನ್ನು ನಿಷ್ಕ್ರಿಯಗೊಳಿಸಿ’: ಇಸ್ರೇಲ್ ರಕ್ಷಣಾ ಸಚಿವ ಇಸ್ರೇಲ್ ಕಾಟ್ಸ್ ಲೆಬನಾನ್ ಅಧ್ಯಕ್ಷ ಜೋಸೆಫ್ ಔನ್ ಅವರಿಗೆ ಎಚ್ಚರಿಕೆ ನೀಡಿದರು. ಹೆಜ್ಬೊಲ್ಲಾ ವನ್ನು ನಿರಸ್ತ್ರೀಕರಣಗೊಳಿಸಲು ವಿಫಲವಾದರೆ ಲೆಬನಾನ್ ದೇಶವು ಬಹಳ ಭಾರೀ ಬೆಲೆ ತೀರಿಸಬೇಕಾಗುತ್ತದೆ ಎಂದು ಅವರು ಹೇಳಿದರು.

ಇರಾನ್ ಪ್ರಾಥಮಿಕ ಶಾಲೆಯ ಸ್ಫೋಟಕ್ಕೆ ಅಮೆರಿಕಾ ಏರ್‌ಸ್ಟ್ರೈಕ್

ಫೆಬ್ರವರಿ 28 ರಂದು ನಡೆದ ದಾಳಿಯಲ್ಲಿ ಯುದ್ಧ ಆರಂಭವಾದ ಬಳಿಕ ಅತ್ಯಧಿಕ ನಾಗರಿಕರ ಸಾವು ಸಂಭವಿಸಿದೆ ಎಂದು ವರದಿಯಾಗಿದೆ. ಇದರಿಂದ ವಿಶ್ವಸಂಸ್ಥೆ ಹಾಗೂ ಮಾನವ ಹಕ್ಕುಗಳ ಮೇಲ್ವಿಚಾರಕ ಸಂಘಟನೆಗಳಿಂದ ತೀವ್ರ ಟೀಕೆ ವ್ಯಕ್ತವಾಗಿದೆ. ಅಮೆರಿಕಾ ಇದಕ್ಕೆ ಹೊಣೆ ಹೊತ್ತಿಲ್ಲದಿದ್ದರೂ, ವಿಚಾರಣೆ ನಡೆಯುತ್ತಿದೆ ಎಂದು ಹೇಳಿದೆ.

ಇರಾನ್ ಕ್ಷಮೆ ಯಾಚನೆ

ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಇಸ್ರೇಲ್ ಮತ್ತು ಅಮೆರಿಕದೊಂದಿಗೆ ನಡೆಯುತ್ತಿರುವ ಯುದ್ಧದ ವೇಳೆ ನಡೆದ ದಾಳಿಗಳ ಬಗ್ಗೆ ನೆರೆ ರಾಷ್ಟ್ರಗಳಿಗೆ ಕ್ಷಮೆ ಕೇಳಿದರು. ನೆರೆ ದೇಶಗಳಿಂದ ದಾಳಿ ನಡೆಯದ ಹೊರತು ಅವುಗಳನ್ನು ಗುರಿಯಾಗಿಸುವುದಿಲ್ಲ ಎಂದು ಅವರು ಹೇಳಿದರು.

ವಿಮಾನ ಸೇವೆಗಳು

ದುಬೈ ವಿಮಾನ ನಿಲ್ದಾಣವು ಸೇವೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ ನಂತರ ಭಾಗಶಃ ಪುನರಾರಂಭಿಸಲಾಗಿದೆ ಎಂದು ತಿಳಿಸಿದೆ.

ಸಾವುಗಳ ಸಂಖ್ಯೆ ಹೆಚ್ಚಳ

ಅಧಿಕೃತ ಮಾಹಿತಿಯ ಪ್ರಕಾರ, ಇರಾನ್‌ನಲ್ಲಿ ಕನಿಷ್ಠ 1,230 ಮಂದಿ, ಲೆಬನಾನ್‌ನಲ್ಲಿ 200 ಕ್ಕೂ ಹೆಚ್ಚು ಮಂದಿ ಮತ್ತು ಇಸ್ರೇಲ್‌ನಲ್ಲಿ ಸುಮಾರು ಡಜನ್ ಮಂದಿ ಮೃತಪಟ್ಟಿದ್ದಾರೆ. ಜೊತೆಗೆ ಆರು ಅಮೆರಿಕದ ಸೈನಿಕರೂ ಅಸುನೀಗಿದ್ದಾರೆ.

ಲೆಬನಾನ್ ತೊರೆದ ನಾಗರಿಕರು

150 ಕ್ಕೂ ಹೆಚ್ಚು ಇರಾನ್ ನಾಗರಿಕರು—ಅದರಲ್ಲೂ ರಾಜತಾಂತ್ರಿಕರು ಮತ್ತು ಅವರ ಕುಟುಂಬ ಸದಸ್ಯರು ಸೇರಿ—ಲೆಬನಾನ್ ತೊರೆದಿದ್ದಾರೆ ಎಂದು ಹಿರಿಯ ಲೆಬನಾನ್ ಭದ್ರತಾ ಮೂಲವು ರಾಯಿಟರ್ಸ್‌ಗೆ ತಿಳಿಸಿದೆ. ಇಸ್ರೇಲ್ ಸೇನೆ ಲೆಬನಾನ್‌ನಲ್ಲಿರುವ ಇರಾನ್ ಪ್ರತಿನಿಧಿಗಳನ್ನು ಬೆದರಿಕೆ ಹಾಕಿ, ರಾಯಭಾರ ಕಚೇರಿಯ ಸಮೀಪ ದಾಳಿಗಳನ್ನು ನಡೆಸಿದ ಬಳಿಕ ಈ ನಿರ್ಧಾರ ಕೈಗೊಳ್ಳಲಾಗಿದೆ.

ಭದ್ರತಾ ಮೂಲದ ಪ್ರಕಾರ, ಅವರು ರಷ್ಯಾದ ವಿಮಾನದ ಮೂಲಕ ರಷ್ಯಾಗೆ ಕಳುಹಿಸಲಾಗುತ್ತಿದೆ. ಇದೇ ವೇಳೆ ಲೆಬನಾನ್‌ನ ಶಸ್ತ್ರಸಜ್ಜಿತ ಗುಂಪು ಹೆಜ್ಬುಲ್ಲಾ ಮತ್ತು ಇಸ್ರೇಲ್ ನಡುವಿನ ಹೊಸ ಯುದ್ಧ ಆರಂಭವಾದ ನಂತರ ಇನ್ನೂ 20 ಇರಾನಿಯರು ದೇಶ ತೊರೆದಿದ್ದಾರೆ.

ಬೈರತ್ ನಲ್ಲಿರುವ ಇರಾನ್ ರಾಯಭಾರ ಕಚೇರಿಯ ಮೂಲವೊಂದು, ಅಗತ್ಯವಿಲ್ಲದ ಕೆಲ ರಾಜತಾಂತ್ರಿಕರು ದೇಶ ತೊರೆಯುತ್ತಿದ್ದಾರೆ ಎಂದು ತಿಳಿಸಿದರೂ, ಅವರ ಸಂಖ್ಯೆ ಬಗ್ಗೆ ಮಾಹಿತಿ ನೀಡಲಿಲ್ಲ. ನಂತರ ಹೊರಬಂದ ಹೇಳಿಕೆಯಲ್ಲಿ ಇರಾನ್ ವಿದೇಶಾಂಗ ಸಚಿವ, ಲೆಬನಾನ್‌ನಲ್ಲಿ ವಾಸಿಸುತ್ತಿದ್ದ ಇರಾನ್ ನಾಗರಿಕರು ದೇಶದ ಭದ್ರತಾ ಪರಿಸ್ಥಿತಿಯ ಕಾರಣದಿಂದ ತಾತ್ಕಾಲಿಕವಾಗಿ ಬೈರತ್ ನಲ್ಲಿ ತೊರೆದಿದ್ದಾರೆ ಎಂದು ದೃಢಪಡಿಸಿದೆ.

ಲೆಬನಾನ್‌ನಲ್ಲಿರುವ ಇರಾನ್ ರಾಯಭಾರ ಕಚೇರಿ ತನ್ನ ಸಾಮಾನ್ಯ ಕಾರ್ಯಾಚರಣೆಗಳನ್ನು ಮುಂದುವರಿಸುತ್ತಿದ್ದು, ಅಲ್ಲಿ ವಾಸಿಸುವ ಇರಾನ್ ನಾಗರಿಕರಿಗೆ ನೀಡಲಾಗುವ ಕೌನ್ಸುಲರ್ ಸೇವೆಗಳು ಎಂದಿನಂತೆ ಮುಂದುವರಿಯುತ್ತವೆ ಎಂದು ಹೇಳಲಾಗಿದೆ.

ಈ ಯುದ್ಧದಿಂದ, ಇಸ್ರೇಲ್ ನೀಡುತ್ತಿರುವ ಬೆಂಬಲದ ಬಗ್ಗೆ ಮತ್ತೆ ಗಮನ ಸೆಳೆಯಲಾಗಿದೆ. ಹೆಜ್ಬೊಲ್ಲಾ ಸೋಮವಾರ ಇಸ್ರೇಲ್ ಮೇಲೆ ರಾಕೆಟ್ ಮತ್ತು ಡ್ರೋನ್ ದಾಳಿಗಳನ್ನು ನಡೆಸಿದ್ದು, ಇದರಿಂದ ಲೆಬನಾನ್‌ನಾದ್ಯಂತ ಇಸ್ರೇಲ್ ಭಾರೀ ಬಾಂಬ್ ದಾಳಿಗಳನ್ನು ನಡೆಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ದುರಹಂಕಾರ ಬಿಟ್ಟು ಕಾನೂನು ಪಾಲಿಸಿ: ಇಲ್ಲಿ ಶ್ರೀರಾಮನೇ ಲೆಕ್ಕ ಕೊಡಬೇಕು, ಇನ್ನು ರಾಮನ ಹೆಸ್ರಲ್ಲಿ ರಾಜಕೀಯ ಮಾಡಿದವರು ಕೊಡಬಾರ್ದಾ?

'ತಮಿಳಿಗರು ಬೀದಿ ನಾಯಿಗಳು': ತೀವ್ರ ವಿವಾದದ ಬಳಿಕ ಸ್ಪಷ್ಟನೆ ನೀಡಿದ ನಟ ರಾಘವ ಲಾರೆನ್ಸ್

ತನಿಖಾ ಸಂಸ್ಥೆಗಳು ಹೇಳಿದ ಮೊತ್ತವಷ್ಟೇ ನಿರ್ಬಂಧಕ್ಕೆ ಅರ್ಹ; ಖಾತೆಯನ್ನು ಸ್ಥಗಿತಗೊಳಿಸುವಂತಿಲ್ಲ- ಹೈಕೋರ್ಟ್ ಮಹತ್ವದ ತೀರ್ಪು

ವಚನಾನಂದ ಶ್ರೀಗೆ ನಿರೀಕ್ಷಣಾ ಜಾಮೀನು ಕೊಟ್ಟ ರೀತಿ ಆಘಾತಕಾರಿ: POCSO ಕೇಸ್ ಸಂಬಂಧ ಹೈಕೋರ್ಟ್ ಹೇಳಿಕೆ

ಅಯೋಧ್ಯೆಯ ಶ್ರೀರಾಮನಿಗೆ ವಿಶ್ವದ ಅತ್ಯಂತ ದುಬಾರಿ ಮಾವಿನ ಹಣ್ಣು ಅರ್ಪಿಸಿದ ಭಕ್ತ; ಈ "ಸೂರ್ಯನ ಮೊಟ್ಟೆ" ಬೆಲೆ ಎಷ್ಟು ಗೊತ್ತಾ?

SCROLL FOR NEXT