ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ 
ವಿದೇಶ

US-Iran war ಎಫೆಕ್ಟ್: ಪಾಕಿಸ್ತಾನದಲ್ಲಿ ಇಂಧನ ಸಂಕಷ್ಟ; ಶಾಲೆಗಳು 2 ವಾರ ಬಂದ್, ಸರ್ಕಾರಿ ಕಚೇರಿಗಳಿಗೆ 4 ದಿನ ಕೆಲಸ

ಪೆಟ್ರೋಲ್, ಡೀಸೆಲ್ ಮತ್ತು ಎಲೆಕ್ಟ್ರಿಕ್ ಬಳಕೆ ಮೇಲೆ ನಿಯಂತ್ರಣ ಕ್ರಮಗಳನ್ನು ಕೂಡ ಕೈಗೊಂಡಿದ್ದು, ಸಾರ್ವಜನಿಕರನ್ನು ಅನಾವಶ್ಯಕ ಬಳಕೆಯನ್ನು ತಡೆಯುವಂತೆ ಮನವಿ ಮಾಡಿದೆ.

ಕರಾಚಿ: ಮಧ್ಯಪ್ರಾಚ್ಯದಲ್ಲಿನ ಪರಿಸ್ಥಿತಿ ಉದ್ವಿಗ್ನತೆ ಹಿನ್ನೆಲೆಯಲ್ಲಿ ಪಾಕಿಸ್ತಾನದಲ್ಲಿ ಇಂಧನ ಕೊರತೆ ಭೀತಿ ತೀವ್ರಗೊಂಡಿದೆ. ಇದರ ಪರಿಣಾಮವಾಗಿ, ಪಾಕಿಸ್ತಾನ ಪ್ರಧಾನಮಂತ್ರಿ ಶೆಹಬಾಜ್ ಶರೀಷ್ ಅವರು ತುರ್ತು ಕ್ರಮವಾಗಿ ಶಾಲೆಗಳಿಗೆ 2 ವಾರ ರಜೆ ಘೋಷಣೆ ಮಾಡಿದ್ದು, ಸರ್ಕಾರಿ ಕಚೇರಿಗಳು ವಾರದಲ್ಲಿ ನಾಲ್ಕು ದಿನಗಳ ಕಾಲ ಕಾರ್ಯ ನಿರ್ವಹಿಸುವಂತೆ ಸೂಚನೆ ನೀಡಿದ್ದಾರೆಂದು ತಿಳಿದುಬಂದಿದೆ.

ಈ ಕ್ರಮದ ಮೂಲಕ ಇಂಧನ ಸಂರಕ್ಷಣೆ ಮತ್ತು ಇಂಧನ ಸರಬರಾಜು ನಿರ್ವಹಣೆಯನ್ನು ಸುಗಮಗೊಳಿಸಲು ಪಾಕಿಸ್ತಾನ ಉದ್ದೇಶಿಸಿದೆ.

ಪೆಟ್ರೋಲ್, ಡೀಸೆಲ್ ಮತ್ತು ಎಲೆಕ್ಟ್ರಿಕ್ ಬಳಕೆ ಮೇಲೆ ನಿಯಂತ್ರಣ ಕ್ರಮಗಳನ್ನು ಕೂಡ ಕೈಗೊಂಡಿದ್ದು, ಸಾರ್ವಜನಿಕರನ್ನು ಅನಾವಶ್ಯಕ ಬಳಕೆಯನ್ನು ತಡೆಯುವಂತೆ ಮನವಿ ಮಾಡಿದೆ.

ಇಂಧನ ಭೀತಿಯಿಂದ ಪಾಕಿಸ್ತಾನದಲ್ಲಿ ಕಳೆದ ದಿನಗಳಲ್ಲಿ ಬೆಲೆ ಏರಿಕೆ, ವಾಹನಗಳು ಮತ್ತು ಉದ್ಯಮಗಳಿಗೆ ತೊಂದರೆ ಉಂಟಾಗಿದೆ. ಹೀಗಾಗಿ ಶಾಲೆಗಳನ್ನು ಬಂದ್ ಮಾಡುವುದು ಮತ್ತು ಕಚೇರಿಗಳ ಕೆಲಸಗಳನ್ನು ಕಡಿಮೆ ಮಾಡುವುದು ತಾತ್ಕಾಲಿಕ ಪರಿಹಾರವೆಂದು ಸರ್ಕಾರ ತಿಳಿಸಿದೆ.

ಜಾಗತಿಕ ತೈಲ ಸರಬರಾಜಿಗೆ ಪ್ರಮುಖವಾದ Strait of Hormuz ಪ್ರದೇಶದಲ್ಲಿ ಉದ್ವಿಗ್ನತೆ ಹೆಚ್ಚಿರುವುದು, ಈ ನಿರ್ಧಾರಕ್ಕೆ ಕಾರಣವಾಗಿದೆ.

ತೈಲ ಸಾಗಣೆ ತಡೆ ಅಥವಾ ಬಂದ್ ಆದರೆ ಪಾಕಿಸ್ತಾನ ಸೇರಿದಂತೆ ಇಂಧನ ಆಧಾರಿತ ದೇಶಗಳಲ್ಲಿ ತೀವ್ರ ಸಂಕಷ್ಟ ಎದುರಾಗಲಿದೆ ಎಂದು ವಿಶ್ಲೇಷಕರು ಎಚ್ಚರಿಸಿದ್ದಾರೆ.

ಪಾಕಿಸ್ತಾನದ ನಾಗರಿಕರು, ಶೈಕ್ಷಣಿಕ ಸಂಸ್ಥೆಗಳು ಮತ್ತು ಉದ್ಯಮಗಳು ಈಗಾಗಲೇ ಇಂಧನ ಬಳಕೆಯನ್ನು ಕಡಿಮೆ ಮಾಡುವ ಪ್ರಯತ್ನಗಳನ್ನು ಆರಂಭಿಸಿದ್ದು, ಮುಂದಿನ ದಿನಗಳಲ್ಲಿ ಅಲ್ಲಿನ ಸರ್ಕಾರ ಇಂಧನ ಸುಧಾರಣೆಗೆ ಹೆಚ್ಚಿನ ಕ್ರಮಗಳನ್ನು ಘೋಷಿಸಲು ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಅರಮನೆಯಂತಾದ 'ಕಾಮನ್​ ಮ್ಯಾನ್'​​ ಕೇಜ್ರಿವಾಲ್​ ನಿವಾಸ: ‘Sheesh Mahal 2’ ಎಂದು BJP ಟೀಕೆ; ಮಾನನಷ್ಟ ಮೊಕದ್ದಮೆ ಎಚ್ಚರಿಕೆ ಕೊಟ್ಟ AAP

ಬೆದರಿಕೆ ರಾಜಕಾರಣದ ವಿರುದ್ಧ ಅಂತಿಮವಾಗಿ ಗೆಲ್ಲುವುದು ನ್ಯಾಯವೇ: ಪವನ್ ಖೇರಾ ಬೆನ್ನಿಗೆ ನಿಂತ ಕಾಂಗ್ರೆಸ್

ವಿರಾಟ್ ಕೊಹ್ಲಿ ಸಿಕ್ಸರ್ ಬಾರಿಸುತ್ತಿದ್ದಂತೆಯೇ ಕುಳಿತ್ತಲೇ ಕುಣಿದು ಕುಪ್ಪಳಿಸಿದ ಅನುಷ್ಕಾ ಶರ್ಮಾ! ನೆಟ್ಟಿಗರು ಏನಾಂತರೇ ಗೊತ್ತಾ? Video

ಸಿಇಟಿ ಪರೀಕ್ಷೆ ವೇಳೆ ಜನಿವಾರ ತೆಗೆಸಿದ ಕಾಲೇಜು ಲೈಸೆನ್ಸ್ ರದ್ದು ಮಾಡಿ ದಂಡ ವಿಧಿಸಿ: ಸಿಎಂಗೆ ಬ್ರಾಹ್ಮಣ ಮಹಾಸಭೆ ಪತ್ರ

10 ವರ್ಷಗಳ ಪ್ಲ್ಯಾನ್, 2 ಗಂಟೆಗಳಲ್ಲಿ ಪರಾರಿ: ಕಿಮ್ ಕಪಿಮುಷ್ಠಿಯಿಂದ ತಪ್ಪಿಸಿಕೊಂಡ ಫ್ಯಾಮಿಲಿ, ವಿಶ್ವದ ಗಮನ ಸೆಳೆದ ಗ್ರೇಟ್ ಎಸ್ಕೇಪ್ ಸ್ಟೋರಿ..!

SCROLL FOR NEXT