ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್- ಕ್ಷಿಪಣಿ- ಕಿಮ್ ಜಾಂಗ್ ಉನ್  online desk
ವಿದೇಶ

ಅಮೆರಿಕ-ಇರಾನ್ ಯುದ್ಧದ ಬೆನ್ನಲ್ಲೇ ಕದನಕ್ಕೆ ಉತ್ತರ ಕೊರಿಯಾ ಎಂಟ್ರಿ; ಕಿಮ್ ಮಾಡ್ತಿರೋದೇನು? ಜಗತ್ತಿಗೆ ಹೊಸ Tension?

ಜಪಾನ್ ನ ಕಡಲ ಗಾರ್ಡ್ ಸಹ ಈ ಬಗ್ಗೆ ಹೇಳಿಕೆ ಪ್ರಕಟಿಸಿದ್ದು, ಬ್ಯಾಲಿಸ್ಟಿಕ್ ಕ್ಷಿಪಣಿಯಂತೆ ತೋರುವ ಕ್ಷಿಪಣಿಯನ್ನು ಉತ್ತರ ಕೊರಿಯಾ ಸ್ಥಳೀಯ ಸಮಯ ಮಧ್ಯಾಹ್ನ 1.30 ಕ್ಕೆ ಉಡಾಯಿಸಿದೆ ಎಂದು ರಕ್ಷಣಾ ಸಚಿವಾಲಯದ ಮಾಹಿತಿಯನ್ನು ಉಲ್ಲೇಖಿಸಿದೆ.

ಪ್ಯೊಂಗ್ಯಾಂಗ್: ಇರಾನ್ ಮೇಲೆ ಅಮೆರಿಕ- ಇಸ್ರೇಲ್ ಜಂಟಿ ದಾಳಿಯ ಪರಿಣಾಮ ಅತ್ತ ಮಧ್ಯಪ್ರಾಚ್ಯ ಯುದ್ಧಗ್ರಸ್ತವಾಗಿರುವಾಗಲೇ ಇತ್ತ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಯುದ್ಧರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ.

ಮಧ್ಯಪ್ರಾಚ್ಯ ಹೊತ್ತಿ ಉರಿಯುತ್ತಿರುವ ನಡುವೆಯೇ ಕಿಮ್ ಜಾಂಗ್ ಉನ್ 10ಕ್ಕಿಂತ ಹೆಚ್ಚು ಗುರುತು ಸಿಗದೇ ಇರುವ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಉಡಾವಣೆ ಮಾಡಿಸಿದ್ದಾರೆ.

ದಕ್ಷಿಣ ಕೊರಿಯಾದ ಜಂಟಿ ಚೀಫ್ಸ್ ಆಫ್ ಸ್ಟಾಫ್ಸ್ ನೀಡಿರುವ ಮಾಹಿತಿಯ ಪ್ರಕಾರ ಅಲ್ಲಿನ ಕಾಲಮಾನ ಮಧ್ಯಾಹ್ನ 1.20 ವೇಳೆಗೆ ಕ್ಷಿಪಣಿಗಳನ್ನು ಪೂರ್ವ ಸಮುದ್ರದ ಪ್ರದೇಶದೆಡೆಗೆ ಪತ್ತೆ ಮಾಡಲಾಗಿದೆ. ವಾರ್ಷಿಕವಾಗಿ ನಡೆಯುವ ದಕ್ಷಿಣ ಕೊರಿಯಾ ಹಾಗೂ ಅಮೆರಿಕಾದ ಜಂಟಿ ಸೇನಾ ತಾಲೀಮಿಗೆ ಸಂಬಂಧಿಸಿದಂತೆ ಉತ್ತರ ಕೊರಿಯಾ ಎಚ್ಚರಿಕೆ ನೀಡಿದ ಬೆನ್ನಲ್ಲೇ ಈ ಕ್ಷಿಪಣಿ ದಾಳಿ ಬಂದಿದೆ.

ಜಪಾನ್ ನ ಸಮುದ್ರದೆಡೆಗೆ ಈ ಕ್ಷಿಪಣಿ ದಾಳಿ ನಡೆದಿದೆ. ಸಿಯೋಲ್ ನ ಸೇನೆ ಕ್ಷಿಪಣಿ ದಾಳಿಯನ್ನು ದೃಢಪಡಿಸಿದ್ದು, ತನ್ನ ಹೇಳಿಕೆಯಲ್ಲಿ ಪ್ರೊಜೆಕ್ಟೈಲ್ ಅಥವಾ ರೇಂಜ್ ನ ಕುರಿತು ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸಿಲ್ಲ.

ಜಪಾನ್ ನ ಕಡಲ ಗಾರ್ಡ್ ಸಹ ಈ ಬಗ್ಗೆ ಹೇಳಿಕೆ ಪ್ರಕಟಿಸಿದ್ದು, ಬ್ಯಾಲಿಸ್ಟಿಕ್ ಕ್ಷಿಪಣಿಯಂತೆ ತೋರುವ ಕ್ಷಿಪಣಿಯನ್ನು ಉತ್ತರ ಕೊರಿಯಾ ಸ್ಥಳೀಯ ಸಮಯ ಮಧ್ಯಾಹ್ನ 1.30 ಕ್ಕೆ ಉಡಾಯಿಸಿದೆ ಎಂದು ರಕ್ಷಣಾ ಸಚಿವಾಲಯದ ಮಾಹಿತಿಯನ್ನು ಉಲ್ಲೇಖಿಸಿದೆ.

ಅಧಿಕಾರಿಗಳ ಪ್ರಕಾರ ಕ್ಷಿಪಣಿ ಜಪಾನ್ ನ EEZ (ಎಕ್ಸ್ಲ್ಯೂಸಿವ್ ಎಕನಾಮಿಕ್ ಝೋನ್) ನ ಹೊರಭಾಗದಲ್ಲಿರುವ ನೀರಿನಲ್ಲಿ ಬಿದ್ದಿದ್ದು, ಈ ಬೆನ್ನಲ್ಲೇ ಜಪಾನ್ ಪ್ರಧಾನಿಯ ವಿಪತ್ತಿ ನಿರ್ವಹಣಾ ಕೇಂದ್ರದಲ್ಲಿ ತುರ್ತು ಪ್ರತಿಕ್ರಿಯೆ ತಂಡವನ್ನು ಸಿದ್ಧಪಡಿಸಿದ್ದು, ಪರಿಸ್ಥಿತಿ ಗಮನಿಸಿ ಹಾನಿಗಳನ್ನು ಪರಿಶೀಲಿಸುತ್ತಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಶಾಂತಿ ಒಪ್ಪಂದಕ್ಕೆ ಒಪ್ಪದಿದ್ದರೆ ಏನೂ ಉಳಿಯಲ್ಲ, ಯುರೇನಿಯಂ ಕೊಟ್ಬಿಡಿ; ಇರಾನ್ ಗೆ ಮತ್ತೆ ಡೊನಾಲ್ಡ್ ಟ್ರಂಪ್ ಎಚ್ಚರಿಕೆ

ಯುರೇನಿಯಂ ಹಸ್ತಾಂತರ, ಪರಮಾಣು ನಿರ್ಬಂಧ: 5 ಷರತ್ತುಗಳನ್ನು ಇರಾನ್ ಮುಂದಿಟ್ಟ ಅಮೆರಿಕ!

IPL 2026: 'It’s okay ಮತ್ತೆ ಈ ರೀತಿ ಮಾಡ್ಬೇಡ': 49 ಎಂದು ಗೇಲಿ ಮಾಡಿದ್ದ ಪಂಜಾಬ್ ಗೆ ಬಟ್ಟೆ ಸುತ್ತಿ ಹೊಡೆದ RCB

IPL 2026: ಕೊನೆಯ ಓವರ್ ನಲ್ಲಿ ಭರ್ಜರಿ ಜಯ, ಪ್ಲೇಆಫ್ ಗೆ RCB ಲಗ್ಗೆ; ರೇಸ್ ನಿಂದ PBKS ಔಟ್, CSK ಆಸೆ ಜೀವಂತ!

Assam: ಸಫಾರಿ ಜೀಪ್ ಮೇಲೆ Rhino ದಾಳಿ, ಒಂದೇ ಹೊಡೆತಕ್ಕೆ ಟೈರ್ ಛಿದ್ರ, ವಾಹನವನ್ನೇ ಉರುಳಿಸಲು ಯತ್ನ, Video Viral

SCROLL FOR NEXT