ಜೋಸೆಫ್ ಕೆಂಟ್, ಡೊನಾಲ್ಡ್ ಟ್ರಂಪ್  
ವಿದೇಶ

'ಅವರು ರಾಜೀನಾಮೆ ನೀಡಿದ್ದು ಒಳ್ಳೆಯದೇ ಆಯ್ತು': Joseph Kent ಬಗ್ಗೆ ಡೊನಾಲ್ಡ್ ಟ್ರಂಪ್ ಹೀಗಂದಿದ್ದೇಕೆ? Video

ಶ್ವೇತಭವನದ ಓವಲ್ ಆಫೀಸ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಡೊನಾಲ್ಡ್ ಟ್ರಂಪ್, ನಾನು ಅವರ ಹೇಳಿಕೆಯನ್ನು ಓದಿದ್ದೇನೆ. ಅವರು ಒಳ್ಳೆಯ ವ್ಯಕ್ತಿ ಎಂದು ನನಗೆ ಸದಾ ಅನಿಸಿತ್ತು, ಆದರೆ ಭದ್ರತೆ ವಿಷಯದಲ್ಲಿ ಅವರು ಸದಾ ದುರ್ಬಲರಾಗಿದ್ದರು ಎಂದು ಹೇಳಿದರು.

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ರಾಷ್ಟ್ರೀಯ ಭಯೋತ್ಪಾದನೆ ನಿಗ್ರಹ ಕೇಂದ್ರದ ಮುಖ್ಯಸ್ಥರಾಗಿದ್ದ ಜೋಸೆಫ್ ಕೆಂಟ್ ರಾಜೀನಾಮೆ ನೀಡಿದ್ದು ಒಳ್ಳೆಯದೇ ಆಯಿತು ಎಂದು ಹೇಳಿದ್ದಾರೆ. ಇರಾನ್ ನಮಗೆ ಬೆದರಿಕೆ ದೇಶವಲ್ಲ ಎಂದು ಹೇಳಿದ್ದರು ಎಂದು ಡೊನಾಲ್ಡ್ ಟ್ರಂಪ್ ಪ್ರತಿಕ್ರಿಯಿಸಿದ್ದಾರೆ.

ಶ್ವೇತಭವನದ ಓವಲ್ ಆಫೀಸ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಡೊನಾಲ್ಡ್ ಟ್ರಂಪ್, ನಾನು ಅವರ ಹೇಳಿಕೆಯನ್ನು ಓದಿದ್ದೇನೆ. ಅವರು ಒಳ್ಳೆಯ ವ್ಯಕ್ತಿ ಎಂದು ನನಗೆ ಸದಾ ಅನಿಸಿತ್ತು, ಆದರೆ ಭದ್ರತೆ ವಿಷಯದಲ್ಲಿ ಅವರು ಸದಾ ದುರ್ಬಲರಾಗಿದ್ದರು ಎಂದು ಹೇಳಿದರು.

ಅವರ ಹೇಳಿಕೆಯನ್ನು ಓದಿದಾಗ, ಅವರು ರಾಜೀನಾಮೆ ನೀಡಿ ಹೊರಗೆ ಹೋಗಿರುವುದೇ ಒಳ್ಳೆಯದಾಯಿತು ಎಂದು ನನಗೆ ಅನಿಸುತ್ತಿದೆ. ಏಕೆಂದರೆ ಅವರು ಇರಾನ್ ನಮಗೆ ಬೆದರಿಕೆ ಅಲ್ಲ ಎಂದು ಹೇಳಿದ್ದರು. ಆದರೆ ಇರಾನ್ ಪ್ರತಿಯೊಂದು ದೇಶಕ್ಕೂ ಬೆದರಿಕೆಯೇ ಆಗಿತ್ತು ಎಂದು ಟ್ರಂಪ್ ಹೇಳಿದರು.

ಅಮೆರಿಕದ ಅಧ್ಯಕ್ಷರು, ತಮ್ಮ ಆಡಳಿತದಲ್ಲಿ ಯಾರಾದರೂ ಇರಾನ್ ಬೆದರಿಕೆ ಅಲ್ಲ ಎಂದು ನಂಬಿದರೆ, ಅಂತಹ ಜನರನ್ನು ನಾವು ಬಯಸುವುದಿಲ್ಲ, ಅವರು ಬುದ್ಧಿವಂತರಲ್ಲ, ಅಥವಾ ಚಾಣಾಕ್ಷರಾಗಿಲ್ಲ, ಇರಾನ್ ಒಂದು ಭಾರೀ ಬೆದರಿಕೆ ದೇಶ ಎಂದರು.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ ಮೇಲಿನ ದಾಳಿಗೆ ವಿಭಿನ್ನ ಕಾರಣಗಳನ್ನು ನೀಡುತ್ತಾ ಬಂದಿದ್ದಾರೆ, ಇಸ್ರೇಲ್ ಅಮೆರಿಕವನ್ನು ಕ್ರಮ ಕೈಗೊಳ್ಳಲು ಒತ್ತಾಯಿಸಿತು ಎಂಬ ಆರೋಪಗಳನ್ನು ತಳ್ಳಿಹಾಕಿದ್ದಾರೆ. ಈ ತಿಂಗಳ ಆರಂಭದಲ್ಲಿ, ಹೌಸ್ ಸ್ಪೀಕರ್ ಮೈಕ್ ಜಾನ್ಸನ್ ಅವರು, ಇಸ್ರೇಲ್ ಸ್ವತಂತ್ರವಾಗಿ ಕ್ರಮ ಕೈಗೊಳ್ಳಲು ಸಿದ್ಧವಾಗಿತ್ತು ಎಂಬ ನಂಬಿಕೆಯಿಂದ ವೈಟ್ ಹೌಸ್ ಇದ್ದುದಾಗಿ ಹೇಳಿದ್ದರು.

ಜೋಸೆಫ್ ಕೆಂಟ್ ರಾಜೀನಾಮೆ ನೀಡಿದ್ದೇಕೆ?

ಅಮೆರಿಕಾ-ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧದ ಹಿನ್ನೆಲೆ­ಯಲ್ಲಿ ಕೆಂಟ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದರು. ತಮ್ಮ ರಾಜೀನಾಮೆ ಪತ್ರದಲ್ಲಿ, ಇರಾನ್ ಅಮೆರಿಕಕ್ಕೆ ತಕ್ಷಣದ ಬೆದರಿಕೆ ಆಗಿರಲಿಲ್ಲ ಎಂದು ಹೇಳಿದ್ದಾರೆ, ಇಸ್ರೇಲ್ ಒತ್ತಡವೇ ಡೊನಾಲ್ಡ್ ಟ್ರಂಪ್ ಯುದ್ಧ ಆರಂಭಿಸಲು ಕಾರಣವಾಯಿತು ಎಂದು ಹೇಳಿದ್ದಾರೆ.

ನಾನು ನನ್ನ ಮನಸ್ಸಿನ ಶುದ್ಧತೆಯಿಂದ ಇರಾನ್ ವಿರುದ್ಧ ನಡೆಯುತ್ತಿರುವ ಯುದ್ಧವನ್ನು ಬೆಂಬಲಿಸಲು ಸಾಧ್ಯವಿಲ್ಲ. ಇರಾನ್ ನಮ್ಮ ದೇಶಕ್ಕೆ ತಕ್ಷಣದ ಬೆದರಿಕೆ ಆಗಿರಲಿಲ್ಲ, ಇಸ್ರೇಲ್ ಹಾಗೂ ಅದರ ಪ್ರಭಾವಿ ಅಮೆರಿಕನ್ ಲಾಬಿಯ ಒತ್ತಡದಿಂದಲೇ ನಾವು ಈ ಯುದ್ಧವನ್ನು ಆರಂಭಿಸಿದ್ದೇವೆ ಎಂಬುದು ಸ್ಪಷ್ಟವಾಗಿದೆ ಎಂದು ಕೆಂಟ್ ಬರೆದಿದ್ದಾರೆ.

ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ನಿರ್ಧಾರವನ್ನು ಮರುಪರಿಶೀಲಿಸಬೇಕು ಎಂದು ಒತ್ತಾಯಿಸಿ, ಅಮೆರಿಕದ ಭವಿಷ್ಯಕ್ಕಾಗಿ ಹೊಸ ದಾರಿ ತೋರಬಹುದು ಅಥವಾ ದೇಶವನ್ನು ಇನ್ನಷ್ಟು ಗೊಂದಲದತ್ತ ಒಯ್ಯಬಹುದು ಎಂದು ಹೇಳಿದ್ದಾರೆ.

ನಾವು ಇರಾನ್‌ನಲ್ಲಿ ಏನು ಮಾಡುತ್ತಿದ್ದೇವೆ ಮತ್ತು ಯಾರಿಗಾಗಿ ಮಾಡುತ್ತಿದ್ದೇವೆ ಎಂಬುದನ್ನು ನೀವು ಆಲೋಚಿಸಬೇಕು ಎಂದು ನಾನು ಪ್ರಾರ್ಥಿಸುತ್ತೇನೆ. ಧೈರ್ಯಶಾಲಿ ಕ್ರಮ ಕೈಗೊಳ್ಳಬೇಕಾದ ಸಮಯ ಬಂದಿದೆ. ನೀವು ದಾರಿಯನ್ನು ಬದಲಿಸಿ ನಮ್ಮ ದೇಶಕ್ಕೆ ಹೊಸ ದಿಕ್ಕನ್ನು ನೀಡಬಹುದು, ಅಥವಾ ನಾವು ಇನ್ನಷ್ಟು ಕುಸಿತ ಮತ್ತು ಗೊಂದಲದತ್ತ ಸಾಗಲು ಬಿಡಬಹುದು. ನಿರ್ಧಾರ ನಿಮ್ಮ ಕೈಯಲ್ಲಿದೆ ಎಂದು ರಾಜೀನಾಮೆ ನೀಡುತ್ತಾ ಜೋಸೆಫ್ ಕೆಂಟ್ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕರ್ನಾಟಕ ಸೇರಿ ದೇಶಾದ್ಯಂತ Pakನ ISI ಬೆಂಬಲಿತ ಗ್ಯಾಂಗಸ್ಟರ್ ಶಹಜಾದ್ ಭಟ್ಟಿ ಜಾಲದ 200ಕ್ಕೂ ಹೆಚ್ಚು ಜನರ ಬಂಧನ: ಅಮಿತ್ ಶಾ

ಸಚಿವ ನಾಗೇಂದ್ರ ರಾಜೀನಾಮೆಗೆ ಬಿಜೆಪಿ ಬಿಗಿಪಟ್ಟು: ವಿಧಾನಸಭೆಯಲ್ಲಿ ಪ್ರತಿಭಟನೆ, ಗದ್ದಲ, ಕಲಾಪಕ್ಕೆ ಅಡ್ಡಿ!

'ಸ್ವಲ್ಪ ತಾಳ್ಮೆಯಿಂದ ಕಾಯಿರಿ' ಪಾಕಿಸ್ತಾನ, ಬಾಂಗ್ಲಾದೇಶ, ಅಪ್ಘಾನಿಸ್ತಾನ ಮತ್ತೆ ಭಾರತಕ್ಕೆ ಸೇರಿಕೊಳ್ಳುವ ದಿನ ಬರುತ್ತದೆ- ಬಾಬಾ ರಾಮದೇವ್!

ಆಪ್ ಕಿ ಅದಾಲತ್‌ನಲ್ಲಿ 'ಗಡ್ಡದ ಹಿಂದಿನ ಕಥೆ ಬಿಚ್ಚಿಟ್ಟ ಸೂಪರ್ ಸ್ಟಾರ್ ಯಶ್! Video

BJYM: Tejasvi Surya ಸ್ಥಾನಕ್ಕೆ ನೂತನ ನೇಮಕ; ಯಾರು ಈ ಡಾ. ಹೇಮಾಂಗ್ ಜೋಶಿ?