ಕಿಮ್ ಜಾಂಗ್ ಉನ್ 
ವಿದೇಶ

North Korea Election: ಇತಿಹಾಸದಲ್ಲೇ ಮೊದಲು; Kim Jong Un ವಿರುದ್ಧ ಮತ ಚಲಾವಣೆ, ಆದರೂ ಶೇ. 99.99% ಮತದಾನ.. ಸರ್ವಾಧಿಕಾರಿಗೆ ಭರ್ಜರಿ ಜಯ

1957ರ ಬಳಿಕ ಇದೇ ಮೊದಲ ಬಾರಿಗೆ ಶೇ. 0.07%ರಷ್ಟು ಜನ ಉತ್ತರ ಕೊರಿಯಾ ಸರ್ವಾಧಿಕಾರಿ ವಿರುದ್ಧ ಮತ ಚಲಾಯಿಸಿದ್ದು, ಇದು ಜಗತ್ತಿನಾದ್ಯಂತ ದೊಡ್ಡ ಚರ್ಚೆಗೆ ಕಾರಣವಾಗಿದೆ.

ಪ್ಯೋಗ್ಯಾಂಗ್: ಉತ್ತರ ಕೊರಿಯಾದ ಸಂಸತ್ ಚುನಾವಣೆಯಲ್ಲಿ ಕಿಮ್ ಜಾಂಗ್ ಉನ್ ಶೇ. 99.97% ಮತಗಳೊಂದಿಗೆ ಭರ್ಜರಿ ಜಯ ಸಾಧಿಸಿದ್ದು, ಇದೇ ಮೊದಲ ಬಾರಿಗೆ ಸರ್ವಾಧಿಕಾರಿ ವಿರುದ್ಧ ಮತ ಚಲಾವಣೆಯಾಗಿದೆ.

ಅಚ್ಚರಿಯಾದರೂ ಸತ್ಯ.. 1957ರ ಬಳಿಕ ಇದೇ ಮೊದಲ ಬಾರಿಗೆ ಶೇ. 0.07%ರಷ್ಟು ಜನ ಉತ್ತರ ಕೊರಿಯಾ ಸರ್ವಾಧಿಕಾರಿ ವಿರುದ್ಧ ಮತ ಚಲಾಯಿಸಿದ್ದು, ಇದು ಜಗತ್ತಿನಾದ್ಯಂತ ದೊಡ್ಡ ಚರ್ಚೆಗೆ ಕಾರಣವಾಗಿದೆ. 15ನೇ ಸುಪ್ರೀಂ ಪೀಪಲ್ಸ್ ಅಸೆಂಬ್ಲಿಗೆ ಸದಸ್ಯರನ್ನು ಆಯ್ಕೆ ಮಾಡಲು ಮಾರ್ಚ್ 15 ರಂದು ಮತದಾನ ನಡೆದಿತ್ತು.

ಅಧಿಕೃತ ಅಂಕಿಅಂಶಗಳ ಪ್ರಕಾರ, ನೋಂದಾಯಿತ ಮತದಾರರಲ್ಲಿ ಶೇ. 99.99% ರಷ್ಟು ಜನ ಮತದಾನದಲ್ಲಿ ಭಾಗವಹಿಸಿದ್ದರು. ಕೇವಲ ಶೇ. 0.0037% ರಷ್ಟು ಜನ ಮಾತ್ರ ಮತ ಚಲಾಯಿಸಲು ಬಂದಿರಲಿಲ್ಲ. ಇವರು ವಿದೇಶದಲ್ಲಿ ಅಥವಾ ಸಮುದ್ರದಲ್ಲಿ ಕೆಲಸ ಮಾಡುವವರಾಗಿದ್ದರು.

ಮತ ಚಲಾಯಿಸಿದವರಲ್ಲಿ ಶೇ. 99.93% ರಷ್ಟು ಮಂದಿ ಸರ್ವಾಧಿಕಾರಿಯ ಅಭ್ಯರ್ಥಿಗಳನ್ನು ಬೆಂಬಲಿಸಿದ್ದರೆ, ಶೇ. 0.07% ರಷ್ಟು ಜನ ವಿರೋಧಿಸಿ ಮತ ಹಾಕಿದ್ದಾರೆ.

ಉತ್ತರ ಕೊರಿಯಾ ಚುನಾವಣಾ ನಿಯಮಗಳ ಪ್ರಕಾರ, ಕಾರ್ಮಿಕರು, ರೈತರು, ಬುದ್ಧಿಜೀವಿಗಳು, ಸೈನಿಕರು ಮತ್ತು ಅಧಿಕಾರಿಗಳು ಸೇರಿದಂತೆ ಒಟ್ಟು 687 ಪ್ರತಿನಿಧಿಗಳನ್ನು ಅಸೆಂಬ್ಲಿಗೆ ಆಯ್ಕೆ ಮಾಡಲಾಗಿದೆ.

ಸರ್ವಾಧಿಕಾರಿ ವಿರುದ್ಧ ಮತ ಚಲಾವಣೆ

ಉತ್ತರ ಕೊರಿಯಾದಲ್ಲಿ ಚುನಾವಣಾ ಫಲಿತಾಂಳಗಳು ಸಂಪೂರ್ಣವಾಗಿ ಏಕಪಕ್ಷೀಯವಾಗಿರುವುದು ಸಾಮಾನ್ಯ. ಆದರೆ ಈ ಬಾರಿ ಇತಿಹಾಸದಲ್ಲೇ ಮೊದಲ ಬಾರಿಗೆ ಸರ್ವಾಧಿಕಾರಿ ವಿರುದ್ಧ ಮತ ಚಲಾವಣೆಯಾಗಿದೆ. ಈ ಬಾರಿ ದಾಖಲಾದ ಶೇ. 0.07% ವಿರೋಧಿ ಮತಗಳು ಆನ್‌ಲೈನ್‌ನಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿವೆ.

0.07% ಮತಗಳು ಸಿಕ್ಕಿದ್ದು ಯಾರಿಗೆ?

ಮತಪತ್ರದಲ್ಲಿ ಯಾವುದೇ ವಿರೋಧ ಪಕ್ಷದ ಅಭ್ಯರ್ಥಿಗಳು ಇರಲಿಲ್ಲ. ಪ್ರತಿ ಕ್ಷೇತ್ರದಲ್ಲಿ, ಮತದಾರರಿಗೆ ಸ್ವೀಕರಿಸಲು ಅಥವಾ ತಿರಸ್ಕರಿಸಲು ಕೇವಲ ಒಬ್ಬ ಪೂರ್ವ-ಅನುಮೋದಿತ ಅಭ್ಯರ್ಥಿಗೆ ಅವಕಾಶ ನೀಡಲಾಗಿತ್ತು.

ಇದರರ್ಥ ಉಳಿದ ಶೇಕಡಾ 0.07 ರಷ್ಟು ಮತಗಳು ಪ್ರತಿಸ್ಪರ್ಧಿ ಪಕ್ಷ ಅಥವಾ ನಾಯಕನಿಗೆ ಹೋಗಲಿಲ್ಲ. ಬದಲಾಗಿ, ಅಧಿಕೃತ ಅಭ್ಯರ್ಥಿಯ ವಿರುದ್ಧ "ಇಲ್ಲ" ಅಥವಾ 'ಬೇಡ' ಎಂದು ಮತ ಚಲಾಯಿಸಲು ಆಯ್ಕೆ ಮಾಡಿದ ಮತದಾರರನ್ನು ಇದು ಪ್ರತಿನಿಧಿಸುತ್ತದೆ.

ಉತ್ತರ ಕೊರಿಯಾದ ರಾಜ್ಯ ಮಾಧ್ಯಮವು ಸಂಸತ್ತಿನ ಚುನಾವಣೆಯಲ್ಲಿ "ಇಲ್ಲ" ಅಥವಾ 'ಬೇಡ' ಮತಗಳನ್ನು ಬಹಿರಂಗವಾಗಿ ಒಪ್ಪಿಕೊಂಡಿರುವುದು ಇದೇ ಮೊದಲು, ವರದಿಗಳ ಪ್ರಕಾರ 1957 ರಿಂದ ಸಾರ್ವಜನಿಕವಾಗಿ ಇದನ್ನು ಒಪ್ಪಿಕೊಳ್ಳಲಾಗಿರಲಿಲ್ಲ.

ಯೋನ್‌ಹಾಪ್ ಸುದ್ದಿ ಸಂಸ್ಥೆಯ ಪ್ರಕಾರ, ಕೆಸಿಎನ್‌ಎ ವರದಿ ಮಾಡಿರುವ ಪ್ರಕಾರ, ಶೇಕಡಾ 0.07 ರಷ್ಟು ಮತದಾರರು ಅಭ್ಯರ್ಥಿಗಳ ವಿರುದ್ಧ ಮತ ಚಲಾಯಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ರಾಜ್ಯ ಸರ್ಕಾರದ 'ದ್ವೇಷ ಭಾಷಣ' ಮಸೂದೆಗೆ ಅಮಿತ್ ಶಾ ಅಡ್ಡಗಾಲು; ಅಸ್ತಿತ್ವದಲ್ಲಿರುವ ಕಾನೂನೇ ಸಾಕು: ಕೇಂದ್ರ

Mekedatu row: ಕರ್ನಾಟಕದ DPR ತಿರಸ್ಕರಿಸಿ; ಪ್ರಧಾನಿ ಮೋದಿಗೆ ತಮಿಳುನಾಡು ಸಿಎಂ ವಿಜಯ್ ಮನವಿ

IPL 2026: ನಾವೇನು ಸಿನಿಮಾ ಸ್ಟಾರ್‌ಗಳಲ್ಲ: ವಿಮಾನ ನಿಲ್ಗಾಣದಲ್ಲಿ Riyan Parag ಗರಂ, ವೈಭವ್ ಸೂರ್ಯವಂಶಿ ಶಾಕ್! Video

Video: 'ಕಾಂತಾರ' ಕೆಂಗಣ್ಣಿಗೆ ಗುರಿ, ಬಾಲಿವುಡ್​ನಿಂದ ಬ್ಯಾನ್; ಚಾಮುಂಡೇಶ್ವರಿಗೆ ತಲೆಬಾಗಿ ಕ್ಷಮೆಯಾಚಿಸಿದ ರಣವೀರ್ ಸಿಂಗ್!

IPL 2026: RCB vs GT ನಡುವಿನ ಕ್ವಾಲಿಫೈಯರ್ ಪಂದ್ಯಕ್ಕೆ ಮಳೆ ಆತಂಕ, ರಿಸರ್ವ್ ಡೇ ಕೂಡ ಇಲ್ಲ.. ಪಂದ್ಯ ರದ್ದಾದರೆ ಯಾರು ಫೈನಲ್ ಗೆ?

SCROLL FOR NEXT