ಡೊನಾಲ್ಡ್ ಟ್ರಂಪ್ 
ವಿದೇಶ

ಇರಾನ್ ಮತ್ತೊಮ್ಮೆ ಕತಾರ್ ಮೇಲೆ ದಾಳಿ ಮಾಡಿದರೆ, ಸೌತ್ ಪಾರ್ಸ್ ಅನಿಲ ಸ್ಥಾವರ ಮೇಲೆ ಯುದ್ಧ ಖಂಡಿತ: Donald Trump

ಜಾಗತಿಕ ಇಂಧನ ಮಾರುಕಟ್ಟೆಗಳು ಅಸ್ಥಿರವಾಗಿರುವ ಸಂದರ್ಭದಲ್ಲಿ ಮತ್ತು ಇರಾನ್ ಕ್ಷಿಪಣಿಗಳು ಕತಾರ್ ಗೆ ತಾಕಿದ ಹಿನ್ನೆಲೆಯಲ್ಲಿ, ನಿನ್ನೆ ಬುಧವಾರ ರಾತ್ರಿ ಸಾಮಾಜಿಕ ಮಾಧ್ಯಮದಲ್ಲಿ ಟ್ರಂಪ್ ಈ ಬೆದರಿಕೆ ಹಾಕಿದ್ದಾರೆ.

ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು, ಇರಾನ್‌ನ ಪ್ರಮುಖ ಸೌತ್ ಪಾರ್ಸ್ ಅನಿಲ ಸ್ಥಾವರ ಮೇಲೆ ಇಸ್ರೇಲ್ ಇನ್ನಷ್ಟು ದಾಳಿ ನಡೆಸುವುದಿಲ್ಲ ಎಂದು ಭರವಸೆ ನೀಡಿದರು. ಆದರೆ ಇರಾನ್ ಮತ್ತೊಮ್ಮೆ ಕತಾರ್ ಮೇಲೆ ದಾಳಿ ಮಾಡಿದರೆ, ಅಮೆರಿಕಾ ಪ್ರತೀಕಾರವಾಗಿ ತೈಲ ನಿಕ್ಷೇಪವನ್ನು ಸಂಪೂರ್ಣವಾಗಿ ಭಾರೀ ಪ್ರಮಾಣದಲ್ಲಿ ಸ್ಫೋಟಗೊಳಿಸುತ್ತದೆ ಎಂದು ಎಚ್ಚರಿಕೆ ನೀಡಿದರು.

ಜಾಗತಿಕ ಇಂಧನ ಮಾರುಕಟ್ಟೆಗಳು ಅಸ್ಥಿರವಾಗಿರುವ ಸಂದರ್ಭದಲ್ಲಿ ಮತ್ತು ಇರಾನ್ ಕ್ಷಿಪಣಿಗಳು ಕತಾರ್ ಗೆ ತಾಕಿದ ಹಿನ್ನೆಲೆಯಲ್ಲಿ, ನಿನ್ನೆ ಬುಧವಾರ ರಾತ್ರಿ ಸಾಮಾಜಿಕ ಮಾಧ್ಯಮದಲ್ಲಿ ಟ್ರಂಪ್ ಈ ಬೆದರಿಕೆ ಹಾಕಿದ್ದಾರೆ.

ಇಸ್ರೇಲ್ ಇರಾನ್‌ನ ಸಮುದ್ರದಾಚೆಯ ಮಹತ್ತರ ಸೌತ್ ಪಾರ್ಸ್ ಅನಿಲ ಘಟಕ ಮೇಲೆ ದಾಳಿ ನಡೆಸುವ ಯೋಜನೆಗಳ ಬಗ್ಗೆ ಅಮೆರಿಕಾಗೆ ಮಾಹಿತಿ ಇದ್ದರೂ, ಅದರಲ್ಲಿ ಅಮೆರಿಕಾ ಭಾಗವಹಿಸಿಲ್ಲ ಎಂದು ಈ ವಿಷಯಕ್ಕೆ ಪರಿಚಿತನಾದ ಆದರೆ ಸಾರ್ವಜನಿಕವಾಗಿ ಮಾತನಾಡಲು ಅನುಮತಿ ಇಲ್ಲದ ವ್ಯಕ್ತಿಯೊಬ್ಬರು ಅನಾಮಧೇಯವಾಗಿ ತಿಳಿಸಿದ್ದಾರೆ.

ಅಮೆರಿಕಾ-ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧವು ಪ್ರಾದೇಶಿಕ ಇಂಧನ ಕ್ಷೇತ್ರದ ಮೇಲೆ ಒತ್ತಡವನ್ನು ಹೆಚ್ಚಿಸುತ್ತಿದ್ದು, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲದ ಬೆಲೆ ಶೇಕಡಾ 5ರಷ್ಟು ಏರಿಕೆಯಾಗಿ ಬ್ಯಾರಲ್‌ಗೆ 108 ಡಾಲರ್ ಗಿಂತ ಹೆಚ್ಚು ಆಗಿದೆ. ಇದರಿಂದ ಪೆಟ್ರೋಲ್ ಮತ್ತು ಇತರೆ ವಸ್ತುಗಳ ಬೆಲೆ ಹೆಚ್ಚಾಗಿ ಜಾಗತಿಕ ಆರ್ಥಿಕತೆಯ ಮೇಲೆ ಒತ್ತಡ ಉಂಟಾಗಿದೆ.

ಪಾರ್ಸ್ ಅನಿಲ ಸ್ಥಾವರ ಮೇಲೆ ದಾಳಿಯ ಸುದ್ದಿಯಿಂದ ಗಲ್ಫ್ ಪ್ರದೇಶದ ಇಂಧನ ಮೂಲಸೌಕರ್ಯಗಳ ಮೇಲೆ ಇರಾನ್ ಪ್ರತೀಕಾರ ನಡೆಸಬಹುದು ಎಂಬ ಭೀತಿಯಿಂದ ಜಾಗತಿಕ ತೈಲದ ಬೆಲೆ ಏರಿಕೆಯಾಯಿತು. ಕೆಲವೇ ಗಂಟೆಗಳ ನಂತರ, ಕತಾರ್ ಅಧಿಕಾರಿಗಳು ದೇಶದ ಪ್ರಮುಖ ಅನಿಲ ಘಟಕಕ್ಕೆ ಬ್ಯಾಲಿಸ್ಟಿಕ್ ಕ್ಷಿಪಣಿ ತಾಕಿ ಬೆಂಕಿ ಕಾಣಿಸಿಕೊಂಡು ವ್ಯಾಪಕ ಹಾನಿ ಉಂಟಾಗಿದೆ ಎಂದು ತಿಳಿಸಿದರು. ಇದಲ್ಲದೆ, ಕತಾರ್ ಕೆಲ ಇರಾನ್ ರಾಯಭಾರಿ ಕಚೇರಿ ಅಧಿಕಾರಿಗಳನ್ನು ದೇಶದಿಂದ ಹೊರಹಾಕುವಂತೆ ಆದೇಶಿಸಿತು.

ಫೆಬ್ರವರಿ 28ರಿಂದ ಆರಂಭವಾದ ಇರಾನ್ ಮೇಲೆ ಇಸ್ರೇಲ್ ಅಮೆರಿಕ ಯುದ್ಧದ ನಂತರ, ಇರಾನ್ ತನ್ನ ಪರ್ಷಿಯನ್ ಗಲ್ಫ್ ನೆರೆ ದೇಶಗಳ ಇಂಧನ ಸೌಕರ್ಯಗಳ ಮೇಲೆ ದಾಳಿ ನಡೆಸುತ್ತಿದ್ದು, ಜಗತ್ತಿನ ಐದರಲ್ಲಿ ಒಂದು ಭಾಗದ ತೈಲ ಸಾಗುವ ಹಾರ್ಮೊಜ್ ಸಮುದ್ರ ಮಾರ್ಗವನ್ನು ಬಹುತೇಕ ನಾಶ ಮಾಡಿದೆ. ಇರಾನ್ ಮತ್ತು ಹೆಜ್ಬೊಲ್ಲಾ ಇಸ್ರೇಲ್ ಮೇಲೆ ಡ್ರೋನ್ ಮತ್ತು ಕ್ಷಿಪಣಿಗಳ ದಾಳಿಯನ್ನೂ ನಡೆಸಿವೆ.

ಈ ಅಮೆರಿಕಾ-ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧದಲ್ಲಿ ಕನಿಷ್ಠ 1,300 ಜನರು ಇರಾನ್‌ನಲ್ಲಿ, 960 ಕ್ಕೂ ಹೆಚ್ಚು ಜನರು ಲೆಬನಾನ್‌ನಲ್ಲಿ ಮತ್ತು 14 ಜನರು ಇಸ್ರೇಲ್‌ನಲ್ಲಿ ಮೃತಪಟ್ಟಿದ್ದಾರೆ ಎಂದು ಸಂಬಂಧಿತ ದೇಶಗಳ ಅಧಿಕಾರಿಗಳು ತಿಳಿಸಿದ್ದಾರೆ. ಅಮೆರಿಕಾ ಸೇನೆಯ ಪ್ರಕಾರ, 13 ಅಮೆರಿಕನ್ ಸೈನಿಕರು ಮೃತಪಟ್ಟಿದ್ದು, ಸುಮಾರು 200 ಮಂದಿ ಗಾಯಗೊಂಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ವಿಧಾನಸೌಧದಲ್ಲಿ 'ಫ್ರೀಡಂ ಹಬ್ಬ: ಈ ಮೂರು ನಿಲ್ದಾಣದಲ್ಲಿ ಮೆಟ್ರೋ ನಿಲುಗಡೆ ಇಲ್ಲ!

ತಂದೆ ಎಲ್ಲಿದ್ದಾರೆ ಅಂತ ತಾಯಿನ ಕೇಳಿ; ವಿಧಾನಸಭೆಯಲ್ಲಿ ಹುಡುಕಬೇಡಿ; CM Vijay ಬಗ್ಗೆ ಬಿಜೆಪಿ ಅಧ್ಯಕ್ಷರ ಹೇಳಿಕೆ ವಿವಾದಕ್ಕೆ ಗುರಿ!

‘ರಜಾಕರ್‌ಗಳಿಂದ ನಮ್ಮನ್ನು ರಕ್ಷಿಸಿದ್ದು RSS ಅಲ್ಲ, ಭಾರತೀಯ ಸೇನೆ’: BL ಸಂತೋಷ್ ಗೆ ಸಚಿವ ಪ್ರಿಯಾಂಕ್ ಖರ್ಗೆ ತಿರುಗೇಟು!

ಯುರೋಪ್‌ನಲ್ಲಿ ತೀವ್ರಗೊಂಡ Heatwave; ಒಂದೆ ವಾರದಲ್ಲಿ 16,000 ಸಾವು!

Hockey World Cup 2026: ಸ್ವಾತಂತ್ರ್ಯ ದಿನಾಚರಣೆಯಂದೇ ಭಾರತ ಶುಭಾರಂಭ, ವೇಲ್ಸ್ ವಿರುದ್ಧ 3-1 ಅಂತರದ ಭರ್ಜರಿ ಜಯ