ಇರಾನ್ ವಿರುದ್ಧ ಯುದ್ಧ 
ವಿದೇಶ

ಯುದ್ಧವನ್ನು ತಕ್ಷಣವೇ ಕೊನೆಗೊಳಿಸಬೇಕು; ಇದು ಇರಾನ್ ವಿರುದ್ಧ ಅಮೆರಿಕ, ಇಸ್ರೇಲ್‌ನ ಅಪ್ರಚೋದಿತ ಆಕ್ರಮಣ: ರಷ್ಯಾ

"ಮೊದಲ ಹೆಜ್ಜೆಯಾಗಿ ಅಮೆರಿಕ ಮತ್ತು ಇಸ್ರೇಲ್‌ನ ಮಿಲಿಟರಿ ಸಾಹಸಕ್ಕೆ ತಕ್ಷಣವೇ ಅಂತ್ಯ ಹಾಡಬೇಕು ಎಂದು ನಾವು ಒತ್ತಿ ಹೇಳುತ್ತೇವೆ" ಎಂದು ರಷ್ಯಾ ವಿದೇಶಾಂಗ ಸಚಿವಾಲಯ ಆಗ್ರಹಿಸಿದೆ.

ಮಾಸ್ಕೋ: ಪರ್ಷಿಯನ್ ಕೊಲ್ಲಿಯಲ್ಲಿ "ನಡೆಯುತ್ತಿರುವ ಸೇನಾ ಮುಖಾಮುಖಿ"ಯ ಬಗ್ಗೆ ಗಂಭೀರ ಕಳವಳ ವ್ಯಕ್ತಪಡಿಸಿದ ರಷ್ಯಾ, ಯುದ್ಧವನ್ನು ತಕ್ಷಣವೇ ಕೊನೆಗೊಳಿಸುವಂತೆ ಕರೆ ನೀಡಿದೆ. ಅಲ್ಲದೆ ಈ ಪರಿಸ್ಥಿತಿಯನ್ನು "ಇರಾನ್ ವಿರುದ್ಧ ಅಮೆರಿಕ ಮತ್ತು ಇಸ್ರೇಲ್‌ನ ಅಪ್ರಚೋದಿತ ಆಕ್ರಮಣ" ಎಂದು ಟೀಕಿಸಿದೆ.

ರಷ್ಯಾ ವಿದೇಶಾಂಗ ಸಚಿವಾಲಯವು Xನಲ್ಲಿ ಪೋಸ್ಟ್ ಮಾಡಲಾದ ಪ್ರಕಟಣೆಯಲ್ಲಿ, ಮಧ್ಯ ಪ್ರಾಚ್ಯ ಸಂಘರ್ಘವು ಹೆಚ್ಚುತ್ತಿರುವ ಅಪಾಯಗಳು ಮತ್ತು ಪ್ರಾದೇಶಿಕ ಸ್ಥಿರತೆಯ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ ಎಂದು ಒತ್ತಿ ಹೇಳಿದೆ.

"ಪರ್ಷಿಯನ್ ಕೊಲ್ಲಿಯಲ್ಲಿ ನಡೆಯುತ್ತಿರುವ ಸಶಸ್ತ್ರ ಸೇನಾ ಮುಖಾಮುಖಿ. ಉಲ್ಬಣಗೊಳ್ಳುತ್ತಿರುವ ಅಪಾಯಗಳ ಬಗ್ಗೆ ಮಾಸ್ಕೋ ಗಂಭೀರ ಕಳವಳ ವ್ಯಕ್ತಪಡಿಸಿದೆ. ಇರಾನ್ ಮತ್ತು ನೆರೆಯ ಅರಬ್ ರಾಷ್ಟ್ರಗಳಲ್ಲಿ ಇಂಧನ ಮತ್ತು ಇತರ ನಿರ್ಣಾಯಕ ಮೂಲಸೌಕರ್ಯಗಳಿಗೆ ಹಾನಿಯ ಪ್ರಮಾಣವು ಹೆಚ್ಚುತ್ತಲೇ ಇದೆ" ಎಂದು ರಷ್ಯಾ ಹೇಳಿದೆ.

ಕದನ ವಿರಾಮದ ಅಗತ್ಯವನ್ನು ಎತ್ತಿ ತೋರಿಸಿದ ರಷ್ಯಾ, "ಅಮೆರಿಕ ಮತ್ತು ಇಸ್ರೇಲ್, ಇರಾನ್ ವಿರುದ್ಧ ಅಪ್ರಚೋದಿತ ಆಕ್ರಮಣದಿಂದ ಉಂಟಾಗಿರುವ ಯುದ್ಧವನ್ನು ತಕ್ಷಣವೇ ನಿಲ್ಲಿಸಬೇಕೆಂದು ನಾವು ಕರೆ ನೀಡುತ್ತೇವೆ" ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

"ಮೊದಲ ಹೆಜ್ಜೆಯಾಗಿ ಅಮೆರಿಕ ಮತ್ತು ಇಸ್ರೇಲ್‌ನ ಮಿಲಿಟರಿ ಸಾಹಸಕ್ಕೆ ತಕ್ಷಣವೇ ಅಂತ್ಯ ಹಾಡಬೇಕು ಎಂದು ನಾವು ಒತ್ತಿ ಹೇಳುತ್ತೇವೆ" ಎಂದು ರಷ್ಯಾ ವಿದೇಶಾಂಗ ಸಚಿವಾಲಯ ಆಗ್ರಹಿಸಿದೆ.

ರಾಜತಾಂತ್ರಿಕ ಮಾರ್ಗಗಳ ಮೂಲಕ ಸಂಘರ್ಷವನ್ನು ಪರಿಹರಿಸಿಕೊಳ್ಳಲು ಮಧ್ಯಸ್ಥಿಕೆ ವಹಿಸಲು ಪ್ರಾದೇಶಿಕ ಮತ್ತು ಜಾಗತಿಕ ನಾಯಕರೊಂದಿಗೆ ಸಹಕರಿಸಲು ತಾನು ಸಿದ್ಧ ಎಂದು ರಷ್ಯಾ ತಿಳಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ವಾಣಿಜ್ಯ ಸಿಲಿಂಡರ್‌ಗಳ ಕೊರತೆ: ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿಗೆ ಪತ್ರ ಬರೆದ CM ಸಿದ್ದರಾಮಯ್ಯ

ಇರಾನ್‌ಗೆ ಮತ್ತೊಂದು ಮರ್ಮಾಘಾತ: ಟ್ರಂಪ್ ತಲೆ ಕಡಿತೀವಿ ಅಂತಿದ್ದ IRGC ವಕ್ತಾರ ಹಾಗೂ ಗುಪ್ತಚರ ಸಚಿವನ ಬರ್ಬರ ಹತ್ಯೆ!

ಕೋರ್ಟ್‌ನಲ್ಲಿ ರಾಜಕೀಯ ಹೋರಾಟಬೇಡ: CM ಸಿದ್ದರಾಮಯ್ಯ ವಿರುದ್ಧ ಬೆದರಿಕೆ ಆರೋಪ, ಅರ್ಜಿ ವಿಚಾರಣೆಗೆ 'ಸುಪ್ರೀಂ' ನಕಾರ!

West Asia war: ಕುವೈತ್‌ ಪ್ರಮುಖ ತೈಲ ಶುದ್ಧೀಕರಣ ಘಟಕದ ಮೇಲೆ ಇರಾನ್ ಡ್ರೋನ್ ದಾಳಿ, ಭಾರೀ ಬೆಂಕಿ

ಗಂಗಾ ನದಿಯಲ್ಲಿ ಚಿಕನ್ ಬಿರಿಯಾನಿ ತಿಂದ 14 ಜನ ಜೈಲು ಪಾಲು!

SCROLL FOR NEXT