ಮಧ್ಯಪ್ರಾಚ್ಯ ಸಂಘರ್ಷ 
ವಿದೇಶ

West Asia war: ಕುವೈತ್‌ ಪ್ರಮುಖ ತೈಲ ಶುದ್ಧೀಕರಣ ಘಟಕದ ಮೇಲೆ ಇರಾನ್ ಡ್ರೋನ್ ದಾಳಿ, ಭಾರೀ ಬೆಂಕಿ

ಕುವೈತ್ ಸರ್ಕಾರದ ಮಾಹಿತಿ ಪ್ರಕಾರ, ಇದೇ ಘಟಕದ ಮೇಲೆ ಗುರುವಾರವೂ ದಾಳಿ ನಡೆದಿದ್ದು, ಅದರಿಂದಲೂ ಬೆಂಕಿ ಕಾಣಿಸಿಕೊಂಡಿತ್ತು. ಶುಕ್ರವಾರ ಮತ್ತೊಮ್ಮೆ ದಾಳಿ ನಡೆದಿದ್ದು, ಇದರಿಂದ ಪರಿಸ್ಥಿತಿ ಮತ್ತಷ್ಟು ಗಂಭೀರಗೊಂಡಿದೆ ಎಂದು ತಿಳಿಸಿದೆ.

ಕುವೈತ್: ಮಧ್ಯಪ್ರಾಚ್ಯದಲ್ಲಿ ಯುದ್ಧ ಉದ್ವಿಗ್ನತೆ ಹೆಚ್ಚುತ್ತಿರುವ ನಡುವೆಯೇ, ಕುವೈತ್‌ನ ಪ್ರಮುಖ ತೈಲ ಶುದ್ಧೀಕರಣ ಘಟಕವಾದ ಮಿನಾ ಅಲ್-ಅಹ್ಮದಿ ಘಟಕದ ಮೇಲೆ ಇರಾನ್ ಮತ್ತೆ ಡ್ರೋನ್ ದಾಳಿ ನಡೆಸಿದ್ದು, ಭಾರೀ ಬೆಂಕಿ ಕಾಣಿಸಿಕೊಂಡಿದೆ ಎಂದು ತಿಳಿದುಬಂದಿದೆ.

ಕುವೈತ್ ಸರ್ಕಾರದ ಮಾಹಿತಿ ಪ್ರಕಾರ, ಇದೇ ಘಟಕದ ಮೇಲೆ ಗುರುವಾರವೂ ದಾಳಿ ನಡೆದಿದ್ದು, ಅದರಿಂದಲೂ ಬೆಂಕಿ ಕಾಣಿಸಿಕೊಂಡಿತ್ತು. ಶುಕ್ರವಾರ ಮತ್ತೊಮ್ಮೆ ದಾಳಿ ನಡೆದಿದ್ದು, ಇದರಿಂದ ಪರಿಸ್ಥಿತಿ ಮತ್ತಷ್ಟು ಗಂಭೀರಗೊಂಡಿದೆ ಎಂದು ತಿಳಿಸಿದೆ.

ಅಗ್ನಿಶಾಮಕ ದಳಗಳು ಬೆಂಕಿಯನ್ನು ನಿಗ್ರಹಿಸಲು ಹರಸಾಹಸ ಪಡುತ್ತಿದ್ದು, ತಕ್ಷಣದ ಮಾಹಿತಿ ಪ್ರಕಾರ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ದಾಳಿ ಮುಸ್ಲಿಂ ಸಮುದಾಯದ ಪ್ರಮುಖ ಹಬ್ಬವಾದ Eid al-Fitr ಆಚರಣೆ ನಡೆಯುತ್ತಿದ್ದ ಸಮಯದಲ್ಲೇ ನಡೆದಿರುವುದು ಗಮನಾರ್ಹವಾಗಿದೆ. ಇದರಿಂದ ಗಲ್ಪ್ ಪ್ರದೇಶದ ಭದ್ರತಾ ಪರಿಸ್ಥಿತಿ ಬಗ್ಗೆ ಮತ್ತಷ್ಟು ಆತಂಕ ವ್ಯಕ್ತವಾಗಿದೆ.

ಇಸ್ರೇಲ್ ಇತ್ತೀಚೆಗೆ ಇರಾನ್‌ನ ದಕ್ಷಿಣ ಪಾರ್ಸ್ ನೈಸರ್ಗಿಕ ಅನಿಲ ಕ್ಷೇತ್ರದ ಮೇಲೆ ದಾಳಿ ನಡೆಸಿತ್ತು. ಇದರ ಬೆನ್ನಲ್ಲೇ ಇರಾನ್ ಗಲ್ಪ್ ಅರಬ್ ರಾಷ್ಟ್ರಗಳ ಇಂಧನ ಮೂಲಸೌಕರ್ಯಗಳನ್ನು ಗುರಿಯಾಗಿಸಿಕೊಂಡು ಪ್ರತಿದಾಳಿ ನಡೆಸುತ್ತಿದೆ. ಇದರ ಪರಿಣಾಮವಾಗಿ ಜಾಗತಿಕ ಇಂಧನ ಮಾರುಕಟ್ಟೆಯಲ್ಲೂ ಅಸ್ಥಿರತೆ ಹೆಚ್ಚಾಗಿದೆ.

ಈ ಘಟನೆಯು ಮಧ್ಯಪ್ರಾಚ್ಯದ ಉದ್ವಿಗ್ನತೆಯನ್ನು ಮತ್ತಷ್ಟು ತೀವ್ರಗೊಳಿಸಿದ್ದು, ಮುಂದಿನ ದಿನಗಳಲ್ಲಿ ಇಂಧನ ಸರಬರಾಜು ಹಾಗೂ ತೈಲ ಬೆಲೆಗಳ ಮೇಲೆ ದೊಡ್ಡ ಪರಿಣಾಮ ಬೀರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇಂಧನ ಮೂಲಸೌಕರ್ಯಗಳ ಮೇಲೆ ದಾಳಿ ಬೇಡ: ಟ್ರಂಪ್ ಸೂಚನೆ ಬೆನ್ನಲ್ಲೇ ಹಿಂದೆ ಸರಿದ ಇಸ್ರೇಲ್, ಇರಾನ್ 'ನಾಶವಾಗಿದೆ' ಎಂದ ನೆತನ್ಯಾಹು

ಇಂಧನ ಮೂಲಸೌಕರ್ಯದ ಮೇಲೆ ದಾಳಿ ಮಾಡಿ ದೊಡ್ಡ ತಪ್ಪು ಮಾಡಿದ್ದೀರಿ, ಮತ್ತೆ ದಾಳಿಯಾದರೆ ಒತ್ತಡಕ್ಕೆ ಮಣಿಯದೆ ಅನಿಯಂತ್ರಿತ ದಾಳಿ: ಇರಾನ್ ಕಠಿಣ ಎಚ್ಚರಿಕೆ

West Asia war: ಇರಾನ್ ಗ್ಯಾಸ್ ಫೀಲ್ಡ್ ಮೇಲಿನ ದಾಳಿ ‘ಸೋಲೋ ಆಪರೇಷನ್’; ಅಮೆರಿಕಾ ಪಾತ್ರವಿಲ್ಲ- ಇಸ್ರೇಲ್ ಸ್ಪಷ್ಟನೆ

ಯುಗಾದಿ ಆಯ್ತು, ಇದೀಗ ಎಲ್ಲೆಡೆ ಹೊಸ ತೊಡಕು ಸಂಭ್ರಮ: ಮಾಂಸ ಖರೀದಿಗೆ ಪಾಪಣ್ಣ ಮಟನ್‌ ಸ್ಟಾಲ್‌ ಮುಂದೆ ಜನರ ಕ್ಯೂ..!

ದೇವೇಗೌಡರು- ಕುಮಾರಸ್ವಾಮಿ ಅವರಿಗೆ ವಿಶಾಲ ಹೃದಯ ಇರಲಿಲ್ಲ: ಅವರನ್ನು ಪಿಎಂ- ಸಿಎಂ ಮಾಡಿದ್ದು ನಮ್ಮ ಪಕ್ಷ; ಡಿ.ಕೆ‌. ಶಿವಕುಮಾರ್

SCROLL FOR NEXT