ಭಾನುವಾರ ರಾತ್ರಿ ಲಾಗಾರ್ಡಿಯಾ ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಿದ್ದ ಏರ್ ಕೆನಡಾ ವಿಮಾನವು ರಕ್ಷಣಾ ಟ್ರಕ್‌ಗೆ ಡಿಕ್ಕಿ ಹೊಡೆದ ಪರಿಣಾಮ, ಕನಿಷ್ಠ ಇಬ್ಬರು ಪೋರ್ಟ್ ಅಥಾರಿಟಿ ಪೊಲೀಸರು ಮೃತಪಟ್ಟಿದ್ದಾರೆ.
LaGuardia Airport (ಕ್ವೀನ್ಸ್) ನಲ್ಲಿ ಕಳೆದ ರಾತ್ರಿ ಸುಮಾರು 11:40ಕ್ಕೆ, ಮಾಂಟ್ರಿಯಲ್‌ನಿಂದ ಬರುತ್ತಿದ್ದ ಪ್ರಾದೇಶಿಕ ಜೆಟ್ ವಿಮಾನವು ಅಗ್ನಿಶಾಮಕ ವಾಹನಕ್ಕೆ ಡಿಕ್ಕಿ ಹೊಡೆದ ನಂತರ ರನ್‌ವೇ 4 ಕಡೆ ತುರ್ತು ವಾಹನಗಳು ದೌಡಾಯಿಸಿದವು ಎಂದು ನ್ಯೂಯಾರ್ಕ್ ಸಿಟಿ ಅಗ್ನಿಶಾಮಕ ದಳ ಮತ್ತು ಸಿಟಿಜೆನ್ ಆಪ್ ಗಳ ದೃಶ್ಯಾವಳಿಗಳು ಸೂಚಿಸುತ್ತಿವೆ.
ವಿಮಾನ ಸಂಸ್ಥೆಯ ಪ್ರಕಟಣೆ ಪ್ರಕಾರ, ಝಾಜ್ ಏವಿಯೇಶನ್ ನಡೆಸುತ್ತಿದ್ದ ಮತ್ತು ಏರ್ ಕೆನಡಾ ಪರವಾಗಿ ಕಾರ್ಯನಿರ್ವಹಿಸುತ್ತಿದ್ದ ಈ ವಿಮಾನದಲ್ಲಿ 72 ಪ್ರಯಾಣಿಕರು ಮತ್ತು ನಾಲ್ವರು ಸಿಬ್ಬಂದಿ ಇದ್ದರು.
FlightRadar24 ಪ್ರಕಾರ, ಈ ವಿಮಾನವು ಮಾಂಟ್ರಿಯಲ್‌ನಿಂದ ಪ್ರಯಾಣಿಸಿ ನ್ಯೂಯಾರ್ಕ್‌ನಲ್ಲಿ ಲ್ಯಾಂಡಿಂಗ್ ವೇಳೆ ಅಗ್ನಿಶಾಮಕ ವಾಹನಕ್ಕೆ ಡಿಕ್ಕಿ ಹೊಡೆದಿದೆ.
Federal Aviation Administration (FAA) ಪ್ರಕಟಿಸಿದ ಸೂಚನೆಯ ಪ್ರಕಾರ, ವಿಮಾನ ನಿಲ್ದಾಣದಲ್ಲಿ ಎಲ್ಲಾ ವಿಮಾನಗಳ ಹಾರಾಟಕ್ಕೆ ತಾತ್ಕಾಲಿಕ ನಿರ್ಬಂಧ ವಿಧಿಸಲಾಗಿದೆ. ಈ ನಿರ್ಬಂಧಕ್ಕೆ ಕಾರಣ ತುರ್ತು ಪರಿಸ್ಥಿತಿ ಆಗಿದ್ದು, ಇದರ ಅವಧಿ ವಿಸ್ತರಿಸುವ ಸಾಧ್ಯತೆಯೂ ಇದೆ ಎಂದು ಹೇಳಲಾಗಿದೆ.
ಪ್ಯಾಸೆಂಜರ್ ವಿಮಾನದ ಮುಂಭಾಗ ಹಾನಿಗೊಂಡಿದ್ದು, ಸ್ವಲ್ಪ ಮೇಲಕ್ಕೆ ಏರಿದ ಸ್ಥಿತಿಯಲ್ಲಿ ತಿರುಗಿರುವಂತೆ ಕಾಣಿಸಿದೆ. ಗಾಯಗೊಂಡ ಪೊಲೀಸರು ಪೋರ್ಟ್ ಅಥಾರಿಟಿ ಪೊಲೀಸ್ ಇಲಾಖೆಯ ಏರ್‌ಕ್ರಾಫ್ಟ್ ರೆಸ್ಕ್ಯೂ ಫೈರ್ ಫೈಟರ್ ಘಟಕದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಈ ಘಟಕವು ವಿಮಾನ ತುರ್ತು ಪರಿಸ್ಥಿತಿಗಳಿಗೆ ಪ್ರತಿಕ್ರಿಯಿಸಲು ನಿಯೋಜಿಸಲ್ಪಟ್ಟಿದೆ ಎಂದು ಮೂಲಗಳು ತಿಳಿಸಿವೆ.
ಈ ವಿಮಾನವು ಬೊಂಬಾರ್ಡಿಯರ್ ಸಿಆರ್ ಜೆ-900 ಮಾದರಿಯದ್ದಾಗಿದ್ದು, ಅದರಲ್ಲಿ ಸುಮಾರು 100 ಪ್ರಯಾಣಿಕರು ಇದ್ದರು. ಅವರ ಆರೋಗ್ಯ ಸ್ಥಿತಿಯನ್ನು ಪರಿಶೀಲಿಸಲಾಗುತ್ತಿದೆ. ಮೂಲಗಳ ಪ್ರಕಾರ, ಈ ವಿಮಾನದಲ್ಲಿ ನ್ಯೂಯಾರ್ಕ್ ಪ್ರದೇಶದ ಆರ್ಥಡಾಕ್ಸ್ ಯಹೂದಿ ಸಮುದಾಯದ ಸದಸ್ಯರ ಗುಂಪು ಪ್ರಯಾಣಿಸುತ್ತಿದ್ದರು.
New York Police Department (NYPD) ಈ ಡಿಕ್ಕಿಯನ್ನು ದೃಢಪಡಿಸಿದರೂ, ಗಾಯಾಳುಗಳ ಬಗ್ಗೆ ಸೇರಿದಂತೆ ಹೆಚ್ಚಿನ ಮಾಹಿತಿಯನ್ನು ತಕ್ಷಣ ನೀಡಲಾಗಲಿಲ್ಲ ಎಂದು Associated Press ವರದಿ ಮಾಡಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಆಡಿಯೋ ಕ್ಲಿಪ್‌ನಲ್ಲಿ, ಏರ್ ಟ್ರಾಫಿಕ್ ಕಂಟ್ರೋಲ್ ಟವರ್‌ನಿಂದ ಬಂದಂತಿರುವ ಧ್ವನಿಯಲ್ಲಿ “Stop, stop, stop!” ಎಂದು ಟ್ರಕ್ ಚಾಲಕರಿಗೆ ಕೂಗುತ್ತಿರುವುದು ಕೇಳಿಸಿಕೊಳ್ಳುತ್ತದೆ, ಇದರ ಬೆನ್ನಿಗೇ ಡಿಕ್ಕಿ ಹೊಡೆದಿದೆ. ವಿಮಾನದ ಮುಂಭಾಗ ಮತ್ತು ಕಾಕ್‌ಪಿಟ್ ಭಾಗವು ಗಂಭೀರವಾಗಿ ಹಾನಿಗೊಂಡಿರುವುದು ಕಾಣಿಸಿದೆ.
ಈ ಅಪಘಾತದಿಂದ ಹಲವು ವಿಮಾನಗಳ ಹಾರಾಟ ಬಂದ್, ರಸ್ತೆ ಬಂದ್‌ಗಳು, ಟ್ರಾಫಿಕ್ ವಿಳಂಬಗಳು ಮತ್ತು ತುರ್ತು ಸಿಬ್ಬಂದಿ ಚಟುವಟಿಕೆ ಕಂಡುಬಂದಿದೆ ಎಂದು ನ್ಯೂಯಾರ್ಕ್ ತುರ್ತು ನಿರ್ವಹಣಾ ಸಂಸ್ಥೆ ಎಚ್ಚರಿಸಿದೆ.
ಸೋಮವಾರ ಬೆಳಗಿನವರೆಗೂ, ಲಾ ಗಾರ್ಡಿಯಾ ಏರ್ ಪೋರ್ಟ್ ನಿಂದ ಹೊರಡುವ ಎಲ್ಲಾ ವಿಮಾನಗಳು ವಿಳಂಬವಾಗಿದ್ದವು ಅಥವಾ ರದ್ದುಪಡಿಸಲ್ಪಟ್ಟಿದ್ದವು ಎಂದು ವಿಮಾನ ನಿಲ್ದಾಣದ ವೆಬ್‌ಸೈಟ್ ತಿಳಿಸಿದೆ.
ಇದಲ್ಲದೆ, ಕೆಟ್ಟ ಹವಾಮಾನದ ಕಾರಣದಿಂದಲೂ ಲಾಗಾರ್ಡಿಯಾ ವಿಮಾನ ನಿಲ್ದಾಣದಲ್ಲಿ ಈಗಾಗಲೇ ವ್ಯತ್ಯಯಗಳು ಉಂಟಾಗಿದ್ದವು ಎಂದು ತಿಳಿಸಲಾಗಿದೆ. ಕಳೆದ ವಾರ ಫೆಡರಲ್ ಹಣಕಾಸು ಸಮಸ್ಯೆಯಿಂದ ಸಿಬ್ಬಂದಿ ಕೊರತೆ ಉಂಟಾಗಿ ಭದ್ರತಾ ತಪಾಸಣೆಗೆ ಹೆಚ್ಚು ಸಮಯ ತೆಗೆದುಕೊಳ್ಳಲಾಗುತ್ತಿದೆ ಎಂಬುದನ್ನೂ ಅಧಿಕಾರಿಗಳು ಹೇಳಿದ್ದಾರೆ.