ಕ್ಷಿಪಣಿ ಅವಶೇಷಗಳು ಬಿದ್ದು ಭಾರತೀಯ ಪ್ರಜೆಗೆ ಗಾಯ 
ವಿದೇಶ

ಅಬು ಧಾಬಿ: ಕ್ಷಿಪಣಿ ಅವಶೇಷಗಳು ಬಿದ್ದು ಭಾರತೀಯ ಪ್ರಜೆಗೆ ಗಾಯ

ಅಬುಧಾಬಿಯ ಅಲ್ ಶವಾಮೇಖ್ ಪ್ರದೇಶದಲ್ಲಿ ಈ ಘಟನೆ ಸಂಭವಿಸಿದ್ದು, ಕ್ಷಿಪಣಿ ಅವಶೇಷಗಳು ನೆಲಕ್ಕೆ ಬಿದ್ದ ಪರಿಣಾಮ ಓರ್ವ ಭಾರತೀಯರಿಗೆ ಗಾಯವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಬುಧಾಬಿ: ಯುಎಇ ಭದ್ರತಾ ಪಡೆ ಹೊಡೆದುರುಳಿಸಿದ ಬ್ಯಾಲಿಸ್ಟಿಕ್ ಕ್ಷಿಪಣಿಯ ಅವಶೇಷಗಳು ಬಿದ್ದು ಭಾರತೀಯ ಪ್ರಜೆಯೊಬ್ಬರು ಗಾಯಗೊಂಡಿದ್ದಾರೆಂದು ಸೋಮವಾರ ತಿಳಿದುಬಂದಿದೆ.

ಅಬುಧಾಬಿಯ ಅಲ್ ಶವಾಮೇಖ್ ಪ್ರದೇಶದಲ್ಲಿ ಈ ಘಟನೆ ಸಂಭವಿಸಿದ್ದು, ಕ್ಷಿಪಣಿ ಅವಶೇಷಗಳು ನೆಲಕ್ಕೆ ಬಿದ್ದ ಪರಿಣಾಮ ಓರ್ವ ಭಾರತೀಯರಿಗೆ ಗಾಯವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅಬುಧಾಬಿ ಮಾಧ್ಯಮ ಕಚೇರಿ, ವಾಯು ರಕ್ಷಣಾ ವ್ಯವಸ್ಥೆಗಳು ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ಯಶಸ್ವಿಯಾಗಿ ತಡೆದ ನಂತರ ಅಲ್ ಶವಾಮೇಖ್ ಪ್ರದೇಶದಲ್ಲಿ ಅವಶೇಷಗಳು ಬಿದ್ದು ಭಾರತೀಯ ಪ್ರಜೆಯೊಬ್ಬರಿಗೆ ಸಣ್ಣಪುಟ್ಟ ಗಾಯವಾಗಿದೆ.

ಸಾರ್ವಜನಿಕರು ಅಧಿಕೃತ ಮೂಲಗಳಿಂದ ಮಾತ್ರ ಮಾಹಿತಿಯನ್ನು ಪಡೆಯಬೇಕು. ವದಂತಿ ಅಥವಾ ಪರಿಶೀಲಿಸದ ಮಾಹಿತಿಯನ್ನು ಹರಡುವುದನ್ನು ತಪ್ಪಿಸಬೇಕು ಎಂದು ಹೇಳಿದೆ.

ಈ ಘಟನೆಗೆ ಸಂಬಂಧಿಸಿದಂತೆ ಒಟ್ಟು 161 ಮಂದಿ ಗಾಯಗೊಂಡಿದ್ದು, ಕೆಲವರಿಗೆ ಸಣ್ಣ ಗಾಯಗಳಿದ್ದರೆ, ಇನ್ನೂ ಕೆಲವರಿಗೆ ಗಂಭೀರ ಗಾಯಗಳಾಗಿವೆ ಎಂದು ವರದಿಯಾಗಿದೆ. ಗಾಯಗೊಂಡವರಲ್ಲಿ ಯುಎಇ, ಈಜಿಪ್ಟ್, ಸುಡಾನ್, ಇಥಿಯೋಪಿಯಾ, ಫಿಲಿಪೈನ್ಸ್, ಪಾಕಿಸ್ತಾನ, ಇರಾನ್, ಭಾರತ, ಬಾಂಗ್ಲಾದೇಶ, ಶ್ರೀಲಂಕಾ, ಅಜೆರ್ಬೈಜಾನ್, ಯೆಮೆನ್, ಉಗಾಂಡಾ, ಎರಿಟ್ರಿಯಾ, ಲೆಬನಾನ್, ಅಫ್ಘಾನಿಸ್ತಾನ, ಬಹ್ರೇನ್, ಕೊಮೊರೊಸ್, ಟರ್ಕಿಯೆ, ಇರಾಕ್, ನೇಪಾಳ, ನೈಜೀರಿಯಾ, ಓಮನ್, ಜೋರ್ಡಾನ್, ಪ್ಯಾಲೆಸ್ಟೈನ್, ಘಾನಾ, ಇಂಡೋನೇಷ್ಯಾ, ಸ್ವೀಡನ್ ಮತ್ತು ಟುನೀಶಿಯಾ ದೇಶಗಳ ಪ್ರಜೆಗಳು ಸೇರಿದ್ದಾರೆ ಎಂದು ತಿಳಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಚೀನಾ ಏಕಪಕ್ಷೀಯ ನೀತಿಗೆ ಬ್ರೇಕ್‌: 'Quad' ಸಭೆ ನಡುವೆ ಮಹತ್ವದ ಖನಿಜ ಒಪ್ಪಂದಕ್ಕೆ ಭಾರತ-ಅಮೆರಿಕಾ ಸಹಿ..!

Video: 'ಕಾಂತಾರ' ಕೆಂಗಣ್ಣಿಗೆ ಗುರಿ, ಬಾಲಿವುಡ್​ನಿಂದ ಬ್ಯಾನ್; ಚಾಮುಂಡೇಶ್ವರಿಗೆ ತಲೆಬಾಗಿ ಕ್ಷಮೆಯಾಚಿಸಿದ ರಣವೀರ್ ಸಿಂಗ್!

ಚೀನಾಗೆ ಕೌಂಟರ್: ಇಂಡೋ-ಪೆಸಿಫಿಕ್‌ನಲ್ಲಿ ಭದ್ರತಾ ಸಹಕಾರ ಹೆಚ್ಚಿಸಲು 'Quad' ಮಹತ್ವದ ತೀರ್ಮಾನ, ಹೊಸ ಕಾರ್ಯಯೋಜನೆ ಘೋಷಿಸಿದ ಮಾರ್ಕೊ ರುಬಿಯೋ..!

ಮಾಜಿ ಸಿಎಂ ಮಮತಾ ಬ್ಯಾನರ್ಜಿಗೆ ಮತ್ತೊಂದು ಶಾಕ್; 12 TMC ಸಂಸದರು BJP ಸೇರ್ಪಡೆ!

ಥೇಟ್ 'ಡೊನಾಲ್ಡ್ ಟ್ರಂಪ್' ರೀತಿಯ ಅಪರೂಪದ ಎಮ್ಮೆ! ನೋಡಲು ಮುಗಿಬಿದ್ದ ಜನರು, Video ವೈರಲ್

SCROLL FOR NEXT