ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ 
ವಿದೇಶ

'ಮಿಲಿಟರಿ ಕಾರ್ಯಾಚರಣೆ ಮಾಡೋಣ ಎಂದಿದ್ದು ನೀವು': ರಕ್ಷಣಾ ಕಾರ್ಯದರ್ಶಿ ಹೆಗೆತ್ಸ್‌ ಮೇಲೆಯೇ ಯುದ್ಧದ ಹೊಣೆ ಹೊರಿಸಿದ ಡೊನಾಲ್ಡ್ ಟ್ರಂಪ್!

ಎಲ್ಲರಿಗಿಂತ ಮೊದಲು ಬಹುಶಃ ಪೀಟ್, ನೀವು ಮೊದಲು ಮಾತನಾಡಿದಿರಿ ಎಂದು ನಾನು ಭಾವಿಸುತ್ತೇನೆ, ನೀವು ಅವರು ಪರಮಾಣು ಶಸ್ತ್ರಾಸ್ತ್ರವನ್ನು ಹೊಂದಲು ಬಿಡಲು ಸಾಧ್ಯವಿಲ್ಲ ಎಂದಿದ್ದು, ಹಾಗಾಗಿ ಅದನ್ನು (ಮಿಲಿಟರಿ ಕಾರ್ಯಚರಣೆ) ಮಾಡೋಣ ಎಂದು ಹೇಳಿದ್ದೀರಿ.

ವಾಷಿಂಗ್ಟನ್: ಇರಾನ್ ವಿರುದ್ಧ ನಡೆದ ಅಮೆರಿಕಾ-ಇಸ್ರೇಲ್ ದಾಳಿಗಳ ಕುರಿತಾಗಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ನೀಡಿರುವ ಹೇಳಿಕೊಂಡು ದೊಡ್ಡ ಚರ್ಚೆಗೆ ಕಾರಣವಾಗಿದೆ.

ಇರಾನ್ ಮೇಲಿನ ದಾಳಿಯ ಹೊಣೆಯನ್ನು ಟ್ರಂಪ್ ಅವರು, ಅಮೆರಿಕಾ ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್ ಅವರ ಮೇಲೆ ಹಾಕಿದ್ದಾರೆ.

ಅಮೆರಿಕಾದ ಟೆನ್ನೆಸ್ಸೀ ರಾಜ್ಯದ ಮೆಂಫಿಸ್‌ನಲ್ಲಿ ನಡೆದ ದುಂಡುಮೇಜಿನ ಸಭೆಯಲ್ಲಿ ಈ ಕುರಿತು ಹೇಳಿಕೆ ನೀಡಿದ್ದು, ಇರಾನ್‌ ಮೇಲಿನ ದಾಳಿಗಳನ್ನು ಮೊದಲು ಪ್ರಸ್ತಾಪಿಸಿದ್ದೇ ಪೀಟ್‌ ಹೆಗೆತ್ಸ್‌ ಎಂದು ಹೇಳಿದ್ದಾರೆ.

ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ನಾನು ಪೀಟ್‌ ಹೇಗೆತ್ಸ್‌, ಜನರಲ್ ಕೇನ್‌ ಸೇರಿದಂತೆ ಹಲವರಿಗೆ ಕರೆ ಮಾಡಿ ಅವರಿಗೆ ಮಧ್ಯಪ್ರಾಚ್ಯದಲ್ಲಿ ಒಂದು ಸಮಸ್ಯೆಯಿದೆ, ಈ ಪ್ರದೇಶದಲ್ಲಿ ಇರಾನ್‌ ಎಂಬ ದೇಶವಿದ್ದು, ಇದು ಸುಮಾರು 47 ವರ್ಷಗಳಿಂದ ಭಯೋತ್ಪದನೆ ಪ್ರಾಯೋಜಕರಾಗಿದ್ದು, ಪರಮಾಣು ಅಸ್ತ್ರವನ್ನು ಹೊಂದುವಲ್ಲಿ ಕೆಲಸ ಮಾಡುತ್ತಿದ್ದಾರೆ. ಇದನ್ನು ತೊಡೆದುಹಾಕಲು ನಾನು ಅಲ್ಲಿ ಹೋಗಿ ಅದನ್ನು ನಿವಾರಿಸಬಹುದು ಎಂದು ಹೇಳಿದೆ.

ಇದಕ್ಕೆ ಎಲ್ಲರಿಗಿಂತ ಮೊದಲು "ಬಹುಶಃ ಪೀಟ್, ನೀವು ಮೊದಲು ಮಾತನಾಡಿದಿರಿ ಎಂದು ನಾನು ಭಾವಿಸುತ್ತೇನೆ, ನೀವು ಅವರು ಪರಮಾಣು ಶಸ್ತ್ರಾಸ್ತ್ರವನ್ನು ಹೊಂದಲು ಬಿಡಲು ಸಾಧ್ಯವಿಲ್ಲ ಎಂದಿದ್ದು, ಹಾಗಾಗಿ ಅದನ್ನು (ಮಿಲಿಟರಿ ಕಾರ್ಯಚರಣೆ) ಮಾಡೋಣ ಎಂದು ಹೇಳಿದ್ದೀರಿ ಎಂದು ಪಕ್ಕದಲ್ಲೇ ಇದ್ದ ಪೀಟ್‌ ಹೆಗೆತ್ಸ್‌ ನತ್ತ ನೋಡುತ್ತಾ ಹೇಳಿಕೆ ನೀಡಿದರು.

ಬಳಿಕ ಕದನವಿರಾಮ ಕುರಿತು ಮಾತನಾಡಿದ ಟ್ರಂಪ್‌, ಅಮರಿಕಾ ಹಾಗೂ ಇರಾನ್‌ ನಡುವೆ ಉತ್ತಮ ಮಾತುಕತೆ ನಡೆಯುತ್ತಿದೆ. ಕಳೆದ ರಾತ್ರಿ ಹಾಗೂ ಅದಕ್ಕೂ ಮೊದಲು ಸಹ ಉತ್ತಮ ಚರ್ಚೆಗಳು ನಡೆಯುತ್ತಿವೆ ಎಂದು ತಿಳಿಸಿದರು.

ಈ ನಡುವೆ ಅಮೆರಿಕಾ ಅಧ್ಯಕ್ಷರು ಘೋಷಿಸಿದ ಕದನ ವಿರಾಮವನ್ನು ಇರಾನ್‌ ತಿರಸ್ಕರಿಸಿದ್ದು, ಅಮೆರಿಕಾದೊಂದಿಗೆ ಯಾವುದೇ ಕದನ ವಿರಾಮ ಒಪ್ಪಂದ ಮಾತುಕತೆ ನಡೆದಿಲ್ಲ. ಸುಪ್ರೀಂ ಲೀಡರ್ ಮೊಜ್ತಬಾ ಖಮೇನಿ ನೇತೃತ್ವದಲ್ಲಿ ಅಮೆರಿಕಾ ಮತ್ತು ಇಸ್ರೇಲ್‌ ವಿರುದ್ಧದ ಹೋರಾಟ ಮುಂದುವರೆಯುತ್ತಿದೆ ಎಂದು ಹೇಳಿದ್ದಾರೆ.

ಇದೇ ವೇಳೆ ಇರಾನ್‌ ಮಾಧ್ಯಮಗಳು ಟ್ರಂಪ್‌ ಹೇಡಿತನದಿಂದ ಈ ನಿರ್ಧಾರಕ್ಕೆ ಬಂದಿದ್ದಾರೆ ಎಂದು ವ್ಯಂಗ್ಯವಾಡುತ್ತಿರುವ ಬೆಳವಣಿಗೆಗಳೂ ಕಂಡು ಬಂದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಖಾತೆ ಹಂಚಿಕೆ ಕಸರತ್ತು: ವರಿಷ್ಠರಿಗೆ ಪಟ್ಟಿ ನೀಡಿ ಬೆಂಗಳೂರಿಗೆ CM ಡಿ.ಕೆ ಶಿವಕುಮಾರ್ ವಾಪಸ್; ಹೇಳಿದ್ದೇನು?

ನಾವು ಹಿಂಸಾಚಾರನ ಬೆಂಬಲಿಸಲ್ಲ: ವಿದ್ಯಾರ್ಥಿಗಳ ಮೇಲೆ ಲಾಠಿ ಚಾರ್ಜ್‌ ಸರಿಯಲ್ಲ, ಜಾರ್ಖಂಡ್ ನಡೆ ಖಂಡಿಸಿದ ರಾಹುಲ್!

ಕೊಲಂಬಿಯಾದಲ್ಲಿ 7.4 ತೀವ್ರತೆಯ ಪ್ರಬಲ ಭೂಕಂಪ: ಕನಿಷ್ಠ 20 ಮಂದಿ ಸಾವು, ಡಜನ್ಗಟ್ಟಲೆ ಕಟ್ಟಡಗಳು ಕುಸಿತ!

ರೇಣುಕಾಸ್ವಾಮಿ ಕೊಲೆ ಪ್ರಕರಣ: ನಟ ದರ್ಶನ್‌, ಪವಿತ್ರಾ ಗೌಡಗೆ ಬಿಗ್ ಶಾಕ್; ಪ್ರದೋಷ್‌ ಮಾಫಿ ಸಾಕ್ಷಿಗೆ ಕೋರ್ಟ್‌ ಅಸ್ತು

'ಸತ್ಯವನ್ನು ಎದುರಿಸುವ ಧೈರ್ಯವಿಲ್ಲ': ಭಾರತದ ಕಮ್ಯುನಿಸ್ಟರು ಸಂಪೂರ್ಣ ಹೇಡಿಗಳು; ನಿರ್ಮಲಾ ಸೀತಾರಾಮನ್ ವಾಗ್ದಾಳಿ