ಮಧ್ಯ ಪ್ರಾಚ್ಯ ಯುದ್ಧ 
ವಿದೇಶ

West Asia war: ಮಿತ್ರರಾಷ್ಟ್ರಗಳಿಗಷ್ಟೇ ಹಾರ್ಮುಜ್‌ ಜಲಸಂಧಿ ತೆರೆದ ಇರಾನ್‌; 15 ಅಂಶಗಳ ಶಾಂತಿ ಸೂತ್ರ ಮುಂದಿಟ್ಟ ಅಮೆರಿಕಾ; ಒಪ್ಪುತ್ತದೆಯೇ ಟೆಹ್ರಾನ್..?

ಪಾಕಿಸ್ತಾನ ಮಧ್ಯಸ್ಥಿಕೆ ಮೂಲಕ ಅಮೆರಿಕಾ ಈ ಶಾಂತಿ ಸೂತ್ರಗಳನ್ನು ಇರಾನ್'ಗೆ ತಲುಪಿಸಿದ್ದು, ಈ ಅಂಶಗಳಿಗೆ ಇರಾನ್ ಒಪ್ಪಿಗೆ ನೀಡುತ್ತದೆಯೇ ಎಂಬುದರ ಕುರಿತು ಕುತೂಹಲಗಳು ಮೂಡತೊಡಗಿವೆ.

ಮಧ್ಯ ಪ್ರಾಚ್ಯದಲ್ಲಿ ಯುದ್ಧ ಮುಂದುವರೆದಿರುವ ನಡುವಲ್ಲೇ ಮಹತ್ವದ ರಾಜತಾಂತ್ರಿಕ ಬೆಳವಣಿಗೆಗಳು ಕಂಡು ಬಂದಿವೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು, 15 ಅಂಶಗಳ ಶಾಂತಿ ಸೂತ್ರವನ್ನು ಇರಾನ್ ಮುಂದೆ ಇರಿಸಿದೆ.

ಪಾಕಿಸ್ತಾನ ಮಧ್ಯಸ್ಥಿಕೆ ಮೂಲಕ ಅಮೆರಿಕಾ ಈ ಶಾಂತಿ ಸೂತ್ರಗಳನ್ನು ಇರಾನ್'ಗೆ ತಲುಪಿಸಿದ್ದು, ಈ ಅಂಶಗಳಿಗೆ ಇರಾನ್ ಒಪ್ಪಿಗೆ ನೀಡುತ್ತದೆಯೇ ಎಂಬುದರ ಕುರಿತು ಕುತೂಹಲಗಳು ಮೂಡತೊಡಗಿವೆ.

ಪಾಕಿಸ್ತಾನವು ಈ ಪ್ರಕ್ರಿಯೆಯಲ್ಲಿ ಕೇವಲ ಸಂದೇಶ ಸಾಗಿಸುವ ಪಾತ್ರವಷ್ಟೇ ಅಲ್ಲದೆ, ಅಮೆರಿಕ ಮತ್ತು ಇರಾನ್ ನಡುವಿನ ನೇರ ಮಾತುಕತೆಗಳಿಗೆ ಆತಿಥ್ಯ ವಹಿಸಲು ಸಹ ಮುಂದಾಗಿದೆ ಎಂದು ತಿಳಿದುಬಂದಿದೆ.

ಟ್ರಂಪ್ ಅವರು ಪ್ರಸ್ತಾಪಿಸಿರುವ ಶಾಂತಿ ಸೂತ್ರದಲ್ಲಿ ಯಾವೆಲ್ಲಾ ಅಂಶಗಳಿವೆ ಎಂಬುದು ಇನ್ನೂ ಬಹಿರಂಗವಾಗಿಲ್ಲದಿದ್ದರೂ, ಇದು ಬಹುಮಟ್ಟಿಗೆ ಸೈನಿಕ, ಆರ್ಥಿಕ ಮತ್ತು ರಾಜತಾಂತ್ರಿಕ ಅಂಶಗಳನ್ನು ಒಳಗೊಂಡಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಯುದ್ಧ ಚಟುವಟಿಕೆಗಳನ್ನು ತಕ್ಷಣ ನಿಲ್ಲಿಸುವುದು, ಪ್ರಾಕ್ಸಿ ಗುಂಪುಗಳ ಚಟುವಟಿಕೆಗಳಿಗೆ ನಿಯಂತ್ರಣ, ಗಲ್ಫ್ ಪ್ರದೇಶದಲ್ಲಿ ಭದ್ರತೆ ಹೆಚ್ಚಿಸುವುದು ಮತ್ತು ಸಮುದ್ರ ಮಾರ್ಗಗಳ ಸುರಕ್ಷತೆ ಖಚಿತಪಡಿಸುವುದು ಈ ಯೋಜನೆಯ ಪ್ರಮುಖ ಅಂಶಗಳಾಗಿರಬಹುದು ಎಂದು ಹೇಳಲಾಗುತ್ತಿದೆ.

ವಿಶೇಷವಾಗಿ ಹಾರ್ಮುಜ್ ಜಲಸಂಧಿಯಂತಹ ಪ್ರಮುಖ ಮಾರ್ಗಗಳಲ್ಲಿ ವಾಣಿಜ್ಯ ಹಡಗುಗಳ ಸುರಕ್ಷತೆ ಜಾಗತಿಕ ಮಟ್ಟದಲ್ಲಿ ಬಹಳ ಮಹತ್ವದ್ದಾಗಿರುವುದರಿಂದ, ಅದಕ್ಕೂ ಸ್ಪಷ್ಟ ಆದ್ಯತೆ ನೀಡಿರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಇದರ ಜೊತೆಗೆ, ಆರ್ಥಿಕ ಅಂಶಗಳಲ್ಲಿ ಇರಾನ್ ಮೇಲೆ ವಿಧಿಸಲಾದ ನಿರ್ಬಂಧಗಳನ್ನು ಹಂತ ಹಂತವಾಗಿ ಸಡಿಲಿಸುವುದು, ತೈಲ ರಫ್ತಿಗೆ ಅವಕಾಶ ಕಲ್ಪಿಸುವುದು ಮತ್ತು ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಸ್ಥಿರತೆ ತರಲು ಕ್ರಮಗಳನ್ನು ಕೈಗೊಳ್ಳುವ ಪ್ರಸ್ತಾಪಗಳೂ ಇರುವ ಸಾಧ್ಯತೆಗಳಿವೆ.

ರಾಜತಾಂತ್ರಿಕ ಮಟ್ಟದಲ್ಲಿ, ಅಣು ಯೋಜನೆ ಕುರಿತು ಮಾತುಕತೆಗಳನ್ನು ಪುನರಾರಂಭಿಸುವುದು, ಯುರೇನಿಯಂ ಸಂವರ್ಧನೆಗೆ ಮಿತಿ ವಿಧಿಸುವುದು ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳ ಮೇಲ್ವಿಚಾರಣೆಗೆ ಇರಾನ್ ಒಪ್ಪಿಕೊಳ್ಳುವಂತೆ ಮಾಡುವ ಪ್ರಯತ್ನವೂ ಈ ಯೋಜನೆಯ ಭಾಗವಾಗಿರಬಹುದು. ಮಾನವೀಯ ದೃಷ್ಟಿಯಿಂದ ಕೈದಿಗಳ ವಿನಿಮಯ ಮತ್ತು ಮಾನವೀಯ ನೆರವು ನೀಡುವ ಅಂಶಗಳೂ ಸೇರಿರಬಹುದು.

ಅಮೆರಿಕಾ ಶಾಂತಿ ಸೂತ್ರ ಪ್ರಯತ್ನ ಯಶಸ್ವಿಯಾಗಿದ್ದೇ ಆದರೆ, ಯುದ್ಧದಿಂದ ಎದುರಾಗುವ ಅಪಾಯಗಳು ಕಡಿಮೆಯಾಗಲಿದೆ, ಜಾಗತಿಕ ತೈಲ ಬೆಲೆಗಳು ಸ್ಥಿರವಾಗಬಹುದು ಮತ್ತು ಪಶ್ಚಿಮ ಏಷ್ಯಾದಲ್ಲಿ ರಾಜಕೀಯ ಸಮತೋಲನ ಸ್ಥಾಪನೆಯಾಗಬಹುದು.

ಈ ನಡುವೆ ಈ ಬೆಳವಣಿಗೆಯಲ್ಲಿ ಪಾಕಿಸ್ತಾನ ಪಾತ್ರ ವಿಶೇಷ ಗಮನ ಸೆಳೆಯುತ್ತಿದೆ. ಇಸ್ಲಾಮಾಬಾದ್ ತನ್ನ ರಾಜತಾಂತ್ರಿಕ ಪ್ರಭಾವವನ್ನು ಬಳಸಿಕೊಂಡು ಎರಡು ರಾಷ್ಟ್ರಗಳ ನಡುವೆ ಸಂವಹನದ ಸೇತುವೆಯಾಗಲು ಪ್ರಯತ್ನಿಸುತ್ತಿದೆ. ಮಾತುಕತೆಗಳಿಗೆ ಆತಿಥ್ಯ ವಹಿಸುವ ಮೂಲಕ ತನ್ನ ಜಾಗತಿಕ ಪ್ರಾಮುಖ್ಯತೆಯನ್ನು ಹೆಚ್ಚಿಸಿಕೊಳ್ಳಲು ಪಾಕಿಸ್ತಾನ ಪ್ರಯತ್ನಿಸುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಆದರೆ, ಇರಾನ್ ಈ ಸೂತ್ರವನ್ನು ಒಪ್ಪಿಕೊಳ್ಳುತ್ತದೆಯೇ, ಅಥವಾ ತನ್ನ ಷರತ್ತುಗಳನ್ನು ಮುಂದಿರಿಸುತ್ತದೆಯೋ ಎಂಬುದು ಸ್ಪಷ್ಟವಾಗಿಲ್ಲ. ಅಮೆರಿಕ ಯಾವ ಮಟ್ಟಿಗೆ ನಿರ್ಬಂಧಗಳನ್ನು ಸಡಿಲಿಸಲು ಸಿದ್ಧವಾಗಿದೆ ಎಂಬುದೂ ತಿಳಿದಿಲ್ಲ.

ಒಟ್ಟಿನಲ್ಲಿ, ಈ 15 ಅಂಶಗಳ ಯುದ್ಧ ವಿರಾಮ ಪ್ರಸ್ತಾವನೆ ಕೇವಲ ಒಂದು ರಾಜತಾಂತ್ರಿಕ ಪ್ರಯತ್ನವಷ್ಟೇ ಅಲ್ಲದೆ, ಮಧ್ಯ ಏಷ್ಯಾದಲ್ಲಿ ಶಾಂತಿ ಮತ್ತು ಸ್ಥಿರತೆ ತರಬಹುದಾದ ಒಂದು ಪ್ರಮುಖ ಅವಕಾಶವಾಗಿಯೂ ಪರಿಗಣಿಸಲಾಗುತ್ತಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಪ್ರಧಾನಿ ಮೋದಿ ಬಳಿಕ ರಾಷ್ಟ್ರಪತಿಗಳ ಭೇಟಿಯಾದ ಅಮಿತ್ ಶಾ; ಹೆಚ್ಚಿದ ಕುತೂಹಲ, ಕೇಂದ್ರ ಸಚಿವ ಸಂಪುಟದಲ್ಲಿ ಮೇಜರ್ ಸರ್ಜರಿ?

ಶತಮಾನದ ಭೀಕರ ಭೂಕಂಪಕ್ಕೆ ನಲುಗಿದ Venezuela: 235 ಮಂದಿ ಸಾವು; ಸಾವಿರಾರು ಜನರು ನಾಪತ್ತೆ, ಭರದಿಂದ ಸಾಗಿದ ರಕ್ಷಣಾ ಕಾರ್ಯಾಚರಣೆ

ಯುದ್ಧದಲ್ಲೂ ಮಕ್ಕಳ ರಕ್ಷಣೆ ಅಗತ್ಯ, ಶಾಲೆಗಳ ಗುರಿಯಾಗಿಸುವವರ ವಿರುದ್ಧ ಇಡೀ ವಿಶ್ವ ಒಗ್ಗೂಡಲಿ: ವಿಶ್ವಸಂಸ್ಥೆಯಲ್ಲಿ ಭಾರತದ ಆಗ್ರಹ..!

'Happy Birthday... Please Resign'; ಧರ್ಮೇಂದ್ರ ಪ್ರಧಾನ್‌ಗೆ ವಿನೂತನವಾಗಿ ಶುಭ ಹಾರೈಸಿದ Cockroach Janta Party

RSS ಗಲಿಬಿಲಿಗೊಂಡರೆ BJP ಏಕೆ ಬುಸುಗುಡುತ್ತೆ: ಬಾಲ ಯಾರ ಕೈಯ್ಯಲ್ಲಿದೆ; ಪ್ರಿಯಾಂಕ್ ಖರ್ಗೆ ವಾಗ್ದಾಳಿ