ಕ್ಸಿ ಜಿನ್ ಪಿಂಗ್ ಮತ್ತು ವ್ಲಾಡಿಮಿರ್ ಪುಟಿನ್ 
ವಿದೇಶ

ಇರಾನ್ ಮೇಲಿನ ಅಮೆರಿಕಾ-ಇಸ್ರೇಲ್‌ ಯುದ್ಧಕ್ಕೆ ವಿರೋಧ: Hormuz ಬಂದ್ ಮಾಡಿದ್ರೆ ಜಾಗತಿಕ ವ್ಯಾಪಾರಕ್ಕೆ ಮಾರಕ: ಪುಟಿನ್-ಕ್ಸಿ ಜಂಟಿ ಹೇಳಿಕೆ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಚೀನಾಕ್ಕೆ ಭೇಟಿ ನೀಡಿದ ಬಳಿಕ ಚೀನಾಕ್ಕೆ ಆಗಮಿಸಿರುವ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ದ್ವಿಪಕ್ಷೀಯ ಮಾತುಕತೆ ನಡೆಸಿದರು.

ಬೀಜಿಂಗ್: ಇರಾನ್ ಮೇಲೆ ಇಸ್ರೇಲ್ ಮತ್ತು ಅಮೆರಿಕ ನಡೆಸುತ್ತಿರುವ ಯುದ್ಧಕ್ಕೆ ರಷ್ಯಾ ಮತ್ತು ಚೀನಾ ವಿರೋಧ ವ್ಯಕ್ತಪಡಿಸಿದ್ದು, Hormuz ಬಂದ್ ಮಾಡಿದ್ರೆ ಜಾಗತಿಕ ವ್ಯಾಪಾರಕ್ಕೆ ಮಾರಕವಾಗುತ್ತದೆ ಎಂದು ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹೇಳಿದ್ದಾರೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಚೀನಾಕ್ಕೆ ಭೇಟಿ ನೀಡಿದ ಬಳಿಕ ಚೀನಾಕ್ಕೆ ಆಗಮಿಸಿರುವ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ದ್ವಿಪಕ್ಷೀಯ ಮಾತುಕತೆ ನಡೆಸಿದರು.

ಈ ವೇಳೆ ಜಂಟಿ ಹೇಳಿಕೆ ಹೊರಡಿಸಿರುವ ಉಭಯ ನಾಯಕರು, 'ಅಮೆರಿಕಾ-ಇಸ್ರೇಲ್‌ನ ಇರಾನ್ ಮೇಲಿನ ಯುದ್ಧಕ್ಕೆ ತಮ್ಮ ವಿರೋಧ ವ್ಯಕ್ತಪಡಿಸಿದರು. ಜೊತೆಗೆ “ಕೆಲವು ರಾಷ್ಟ್ರಗಳು” ಹೇರಿರುವ ನೌಕಾಯಾನ ನಿರ್ಬಂಧಗಳು ಜಾಗತಿಕ ವ್ಯಾಪಾರಕ್ಕೆ ಅಪಾಯ ಉಂಟುಮಾಡುತ್ತವೆ' ಎಂದು ಎಚ್ಚರಿಕೆ ನೀಡಿದರು.

ಇದು ಹೋರ್ಮುಜ್ ಜಲಸಂಧಿಯಲ್ಲಿ ಹಡಗು ಸಂಚಾರ ತಡೆಹಿಡಿದಿರುವ ತೆಹ್ರಾನ್‌ಗೆ ಪರೋಕ್ಷ ಉಲ್ಲೇಖವೆಂದು ಪರಿಗಣಿಸಲಾಗಿದೆ. ಗ್ರೇಟ್ ಹಾಲ್ ಆಫ್ ದ ಪೀಪಲ್‌ನಲ್ಲಿ ಪುಟಿನ್ ಅವರನ್ನು ಸ್ವಾಗತಿಸಿದ ಷಿ, ಗಲ್ಫ್ ಪ್ರದೇಶ ಮತ್ತು ವಿಸ್ತೃತ ಪಶ್ಚಿಮ ಏಷ್ಯಾದಲ್ಲಿ ಮತ್ತೆ ಯುದ್ಧ ಭುಗಿಲೆದ್ದರೆ ತಪ್ಪಿಸಬೇಕು ಹಾಗೂ ಮಾತುಕತೆ ಮುಂದುವರಿಯಬೇಕು ಎಂದು ಒತ್ತಿಹೇಳಿದರು.

ಇರಾನ್ ವಿರುದ್ಧ ಅಮೆರಿಕಾ ಮತ್ತು ಇಸ್ರೇಲ್ ನಡೆಸಿದ ದಾಳಿಗಳು ಕಾನೂನುಬಾಹಿರವಾಗಿದ್ದು, ಪಶ್ಚಿಮ ಏಷ್ಯಾದ ಸ್ಥಿರತೆಯನ್ನು ಗಂಭೀರವಾಗಿ ಹಾಳುಮಾಡಿವೆ ಎಂದು ಇಬ್ಬರು ನಾಯಕರ ದಿನಪೂರ್ತಿ ನಡೆದ ಮಾತುಕತೆಗಳ ಅಂತ್ಯದಲ್ಲಿ ಬಿಡುಗಡೆ ಮಾಡಿದ ಜಂಟಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಅದೇ ವೇಳೆ, ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ‘ಗೋಲ್ಡನ್ ಡೋಮ್’ ಕ್ಷಿಪಣಿ ರಕ್ಷಣಾ ಯೋಜನೆಯನ್ನು ಕೂಡ ಅವರು ಟೀಕಿಸಿದರು. ಟ್ರಂಪ್ ಆರಂಭಿಸಿದ ಬಹುಪದರ ಕ್ಷಿಪಣಿ ರಕ್ಷಣಾ ವ್ಯವಸ್ಥೆಯಾದ ಗೋಲ್ಡನ್ ಡೋಮ್ ಯೋಜನೆಯ ಅನುಷ್ಠಾನವು “ಅಂತರರಾಷ್ಟ್ರೀಯ ಭದ್ರತೆಗೆ ಗಂಭೀರ ನಕಾರಾತ್ಮಕ ಪರಿಣಾಮಗಳನ್ನು” ಉಂಟುಮಾಡಲಿದೆ ಎಂದು ಕ್ರೆಮ್ಲಿನ್ ಬಿಡುಗಡೆ ಮಾಡಿದ ಜಂಟಿ ಪ್ರಕಟಣೆ ತಿಳಿಸಿದೆ.

ಟಾಸ್ ಸುದ್ದಿ ಸಂಸ್ಥೆ ಉಲ್ಲೇಖಿಸಿದ ಜಂಟಿ ಪ್ರಕಟಣೆಯ ಪ್ರಮುಖ ಅಂಶಗಳ ಪ್ರಕಾರ, “ಕೆಲವು ರಾಷ್ಟ್ರಗಳು” ನೌಕಾಯಾನವನ್ನು ನಿರ್ಬಂಧಿಸುವ ಕ್ರಮಗಳನ್ನು ರಷ್ಯಾ ಮತ್ತು ಚೀನಾ ಜಾಗತಿಕ ವ್ಯಾಪಾರಕ್ಕೆ ಬೆದರಿಕೆ ಎಂದು ಪರಿಗಣಿಸುತ್ತವೆ. ಇದು ಹೋರ್ಮುಜ್ ಜಲಸಂಧಿ ಬಿಕ್ಕಟ್ಟಿಗೆ ಉಲ್ಲೇಖವಾಗಿದೆ. ಹೋರ್ಮುಜ್ ಜಲಸಂಧಿಯಲ್ಲಿ ವಾಣಿಜ್ಯ ಹಡಗುಗಳ ಸಂಚಾರವನ್ನು ತಡೆದ ಇರಾನ್ ಕ್ರಮಕ್ಕೆ ಪ್ರತಿಯಾಗಿ, ಅಮೆರಿಕಾ ಇರಾನ್ ಬಂದರುಗಳನ್ನು ನಿರ್ಬಂಧಿಸಿತು. ಇದರಿಂದ ಇರಾನ್‌ನಿಂದ ತೈಲ ಆಮದು ಮಾಡಿಕೊಳ್ಳುವ ಪ್ರಮುಖ ದೇಶವಾದ ಚೀನಾಕ್ಕೆ ಸರಬರಾಜು ವ್ಯತ್ಯಯ ಉಂಟಾಗಿತ್ತು.

ದ್ವಿಪಕ್ಷೀಯ ಮಾತುಕತೆ

ಚೀನಾ ಮತ್ತು ರಷ್ಯಾ ಎರಡೂ ಇರಾನ್‌ನ ಬಲಿಷ್ಠ ತಂತ್ರಜ್ಞಾನದ ಮಿತ್ರ ರಾಷ್ಟ್ರಗಳಾಗಿದ್ದು, ಅಮೆರಿಕದ ನಿರ್ಬಂಧಗಳನ್ನು ಲೆಕ್ಕಿಸದೆ ತೆಹ್ರಾನ್ ಜೊತೆ ಸೈನಿಕ ಮತ್ತು ವಾಣಿಜ್ಯ ಸಂಬಂಧಗಳನ್ನು ಹೊಂದಿವೆ. ಇದಕ್ಕೂ ಮೊದಲು, ಪುಟಿನ್ ಮತ್ತು ಕ್ಸಿ ಪಶ್ಚಿಮ ಏಷ್ಯಾದಲ್ಲಿ ತಕ್ಷಣವೇ ಕದನ ವಿರಾಮ ಜಾರಿಗೆ ಬರಬೇಕು. ಪರಿಸ್ಥಿತಿ “ಗಂಭೀರ ತಿರುವು” ತಲುಪಿದೆ ಎಂದು ಹೇಳಿದ್ದಾರೆ.

ಸಂಘರ್ಷ ಶೀಘ್ರ ಅಂತ್ಯಗೊಂಡರೆ ಇಂಧನ ಸರಬರಾಜು, ಕೈಗಾರಿಕಾ ಮತ್ತು ಸರಬರಾಜು ಸರಪಳಿ ಹಾಗೂ ಜಾಗತಿಕ ವ್ಯಾಪಾರ ವ್ಯವಸ್ಥೆಯ ವ್ಯತ್ಯಯ ಕಡಿಮೆಯಾಗಲಿದೆ ಎಂದು ಕ್ಸಿ ಜಿನ್ ಪಿಂಗ್ ಹೇಳಿದರು.

ಚೀನಾ ಮತ್ತು ರಷ್ಯಾ ಎರಡೂ ಇರಾನ್‌ನ ಪ್ರಮುಖ ತಂತ್ರಜ್ಞಾನದ ಪಾಲುದಾರ ರಾಷ್ಟ್ರಗಳಾಗಿರುವುದರಿಂದ ಹಾಗೂ ಟೆಹ್ರಾನ್ ಜೊತೆ ಆಪ್ತ ಆರ್ಥಿಕ ಮತ್ತು ಸೈನಿಕ ಸಂಬಂಧಗಳನ್ನು ಹೊಂದಿರುವುದರಿಂದ, ಈ ಸಭೆಯ ಮೇಲೆ ಜಾಗತಿಕ ಗಮನ ಕೇಂದ್ರೀಕೃತವಾಗಿದೆ. ಹೋರ್ಮುಜ್ ಜಲಸಂಧಿ ಮುಚ್ಚುವ ವಿಚಾರದಲ್ಲಿ ಇರಾನ್‌ನ ಕಠಿಣ ನಿಲುವಿನ ಮೇಲೆ ಇವು ಪ್ರಭಾವ ಬೀರುವ ಸಾಧ್ಯತೆ ಇದೆ. ಇದೇ ಜಾಗತಿಕ ಇಂಧನ ಬಿಕ್ಕಟ್ಟಿಗೆ ಕಾರಣವಾಗಿದೆ.

ರಷ್ಯಾ-ಉಕ್ರೇನ್ ಯುದ್ಧ

ರಷ್ಯಾ-ಉಕ್ರೇನ್ ಯುದ್ಧದ ಕುರಿತು, ಉಕ್ರೇನ್ ಬಿಕ್ಕಟ್ಟಿನ ಮೂಲ ಕಾರಣಗಳನ್ನು ಪರಿಹರಿಸುವುದು ಅಗತ್ಯವೆಂದು ರಷ್ಯಾ ಮತ್ತು ಚೀನಾ ನಂಬಿವೆ ಎಂದು ಸಂಯುಕ್ತ ಪ್ರಕಟಣೆ ತಿಳಿಸಿದೆ. ಉಕ್ರೇನ್ ವಿಚಾರದಲ್ಲಿ ಚೀನಾ ತೆಗೆದುಕೊಂಡಿರುವ ವಸ್ತುನಿಷ್ಠ ಮತ್ತು ಪಕ್ಷಪಾತರಹಿತ ನಿಲುವನ್ನು ರಷ್ಯಾ ಮೆಚ್ಚಿದೆ.

ರಷ್ಯಾ ಜೊತೆ ಆಪ್ತ ಸಂಬಂಧ ಹೊಂದಿರುವ ಚೀನಾ, ಉಕ್ರೇನ್ ಮೇಲೆ ರಷ್ಯಾ ನಡೆಸಿದ ದಾಳಿಯನ್ನು ಖಂಡಿಸಿಲ್ಲ. ಮಾತುಕತೆಗಳ ಅಂತ್ಯದಲ್ಲಿ, ಎರಡೂ ದೇಶಗಳು 20 ಒಪ್ಪಂದಗಳಿಗೆ ಸಹಿ ಹಾಕಿವೆ ಎಂದು ರಷ್ಯಾದ ಸರ್ಕಾರಿ ಟಾಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಈ ಕ್ಸಿ-ಪುಟಿನ್ ಶೃಂಗಸಭೆ, ಜಾಗತಿಕ ಭೌಗೋಳಿಕ-ರಾಜಕೀಯ ಉದ್ವಿಗ್ನತೆ ಮತ್ತು ಅಶಾಂತಿಯ ನಡುವೆಯೇ ಅವರ ತಂತ್ರಜ್ಞಾನದ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸುವ ಸಾಧ್ಯತೆ ಇದೆ. ಆರ್ಥಿಕ ಸಹಕಾರದಿಂದ ಹಿಡಿದು ಪಶ್ಚಿಮ ಏಷ್ಯಾದ ಸಂಘರ್ಷ ಮತ್ತು ನಾಲ್ಕು ವರ್ಷಕ್ಕಿಂತ ಹೆಚ್ಚು ಕಾಲ ಮುಂದುವರಿದಿರುವ ಉಕ್ರೇನ್ ಯುದ್ಧದವರೆಗೆ ಹಲವು ವಿಷಯಗಳನ್ನು ಇಬ್ಬರು ನಾಯಕರು ಚರ್ಚಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

59 ವರ್ಷಗಳ ನಂತರ ತಮಿಳುನಾಡಿನಲ್ಲಿ ಕಾಂಗ್ರೆಸ್​ಗೆ ಅಧಿಕಾರ ಹಂಚಿಕೆ; ನಾಳೆ ಸಚಿವರಾಗಿ ಇಬ್ಬರು ಪ್ರಮಾಣ

ಹವಾಮಾನ: ಬಿಸಿಲಿನ ಝಳ, Heat wave ಗೆ ಉತ್ತರ ಭಾರತ ತತ್ತರ; ದೇಶದಲ್ಲೇ ಅತಿ ಹೆಚ್ಚು ತಾಪಮಾನ ಪ್ರದೇಶ ಯಾವುದು ಗೊತ್ತೇ?

ಹಸು ಮೇಲೆ ಅತ್ಯಾಚಾರ; ಕಾಮುಕನ ಬಂಧಿಸಿದ ಪೊಲೀಸರು, ಕೃತ್ಯ ಸಿಸಿಟಿವಿಯಲ್ಲಿ ಸೆರೆ, Video

ಪಾಕಿಸ್ತಾನಕ್ಕೆ ಮತ್ತೆ ಆಘಾತ, ಬಾಂಗ್ಲಾದೇಶಕ್ಕೆ 2ನೇ ಜಯ: WTC ಅಂಕಪಟ್ಟಿಯಲ್ಲಿ ಭಾರತವನ್ನೇ ಹಿಂದಿಕ್ಕಿದ ಬಾಂಗ್ಲಾ ಟೈಗರ್ಸ್!

ಬಿಡದಿ ಟೌನ್​​ಶಿಪ್​​ಗೆ ರೈತರ ಒಪ್ಪಿಗೆ; HDK ವಿರೋಧದ ನಡುವೆ ಜೂನ್ 1 ರಿಂದಲೇ ಹಣ ಬಿಡುಗಡೆ: ಡಿಕೆಶಿ ಮಹತ್ವದ ಘೋಷಣೆ

SCROLL FOR NEXT