ರಕ್ಷಣಾ ಕಾರ್ಯಾಚರಣೆ ನಡೆಸುತ್ತಿರುವುದು. 
ವಿದೇಶ

ಚೀನಾದ ಕಲ್ಲಿದ್ದಲು ಗಣಿಯಲ್ಲಿ ಭೀಕರ ಸ್ಫೋಟ; 82 ಕಾರ್ಮಿಕರ ದುರ್ಮರಣ, 9 ಮಂದಿ ನಾಪತ್ತೆ..!

ಸ್ಫೋಟ ಸಂಭವಿಸಿದ ವೇಳೆ ಸ್ಥಳದಲ್ಲಿ ಒಟ್ಟು 247 ಕಾರ್ಮಿಕರು ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದ್ದು, ಇವರಲ್ಲಿ ಬಹುತೇಕ ಮಂದಿಯನ್ನು ರಕ್ಷಣಾ ಸಿಬ್ಬಂದಿ ಸುರಕ್ಷಿತವಾಗಿ ಹೊರತೆಗೆದಿದ್ದಾರೆ.

ಬೀಜಿಂಗ್: ಚೀನಾದ ಕಲ್ಲಿದ್ದಲು ಗಣಿಯಲ್ಲಿ ಸಂಭವಿಸಿದ ಭೀಕರ ಸ್ಫೋಟ ಸಂಭವಿಸಿದ್ದು, ಕನಿಷ್ಠ 82 ಮಂದಿ ಕಾರ್ಮಿಕರು ಸಾವನ್ನಪ್ಪಿ ಇನ್ನೂ ಒಂಬತ್ತು ಮಂದಿ ನಾಪತ್ತೆಯಾಗಿರುವ ಘಟನೆ ದೇಶವನ್ನು ಬೆಚ್ಚಿಬೀಳಿಸಿದೆ.

ಚೀನಾದ ಶಾಂಕ್ಸಿ ಪ್ರಾಂತ್ಯದ ಲಿಯುಶೆನ್ಯು ಕಲ್ಲಿದ್ದಲು ಗಣಿಯಲ್ಲಿ ಶುಕ್ರವಾರ ರಾತ್ರಿ 7.29ರ ಸುಮಾರಿಗೆ ಸ್ಫೋಟ ಸಂಭವಿಸಿದೆ ಎಂದು ಚೀನಾದ ಸರ್ಕಾರಿ ಸುದ್ದಿ ಸಂಸ್ಥೆ ಕ್ಸಿನ್ಹುವಾ ವರದಿ ಮಾಡಿದೆ.

ಸ್ಫೋಟ ಸಂಭವಿಸಿದ ವೇಳೆ ಸ್ಥಳದಲ್ಲಿ ಒಟ್ಟು 247 ಕಾರ್ಮಿಕರು ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದ್ದು, ಇವರಲ್ಲಿ ಬಹುತೇಕ ಮಂದಿಯನ್ನು ರಕ್ಷಣಾ ಸಿಬ್ಬಂದಿ ಸುರಕ್ಷಿತವಾಗಿ ಹೊರತೆಗೆದಿದ್ದಾರೆ. ಆದರೆ, ಘಟನೆಯಲ್ಲಿ 82 ಮಂದಿ ಮೃತಪಟ್ಟಿರುವುದು ದೃಢಪಟ್ಟಿದ್ದು, ಇನ್ನೂ ಒಂಬತ್ತು ಮಂದಿಗಾಗಿ ತೀವ್ರ ಶೋಧ ಕಾರ್ಯ ಮುಂದುವರಿದಿದೆ.

ಚೀನಾದ ಸರ್ಕಾರಿ ವಾಹಿನಿ CCTV ಪ್ರಸಾರ ಮಾಡಿದ ದೃಶ್ಯಗಳಲ್ಲಿ, ರಕ್ಷಣಾ ಸಿಬ್ಬಂದಿ ಸ್ಟ್ರೆಚರ್‌ಗಳ ಮೂಲಕ ಗಾಯಾಳುಗಳನ್ನು ಹೊರತೆಗೆದುಕೊಳ್ಳುತ್ತಿರುವುದು ಮತ್ತು ಸ್ಥಳದಲ್ಲಿ ಆಂಬುಲೆನ್ಸ್‌ಗಳು ನಿಂತಿರುವುದು ಕಂಡುಬಂದಿದೆ.

ಘಟನೆಯ ಬಗ್ಗೆ ತೀವ್ರ ಆತಂಕ ವ್ಯಕ್ತಪಡಿಸಿರುವ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್, ಗಾಯಾಳುಗಳಿಗೆ ತಕ್ಷಣ ಚಿಕಿತ್ಸೆ ನೀಡಲು ಹಾಗೂ ರಕ್ಷಣಾ ಕಾರ್ಯಾಚರಣೆಯನ್ನು ಸಮರೋಪಾದಿಯಲ್ಲಿ ನಡೆಸಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಜೊತೆಗೆ ಈ ದುರಂತದ ಕುರಿತು ಸಮಗ್ರ ತನಿಖೆ ನಡೆಸುವಂತೆ ಆದೇಶಿಸಿದ್ದಾರೆ.

ಈ ಘಟನೆಗಳಿಂದ ಎಲ್ಲಾ ಪ್ರದೇಶಗಳು ಮತ್ತು ಇಲಾಖೆಗಳು ಪಾಠ ಕಲಿಯಬೇಕು. ಕೈಗಾರಿಕಾ ಸುರಕ್ಷತೆಯಲ್ಲಿ ಯಾವುದೇ ನಿರ್ಲಕ್ಷ್ಯ ಸಹಿಸಬಾರದು. ಇಂತಹ ಮಹಾ ದುರಂತಗಳನ್ನು ತಡೆಯಲು ಕಟ್ಟುನಿಟ್ಟಿನ ಕ್ರಮ ಅಗತ್ಯ” ಎಂದು ಹೇಳಿದ್ದಾರೆ.

ಸ್ಫೋಟಕ್ಕೆ ಕಾರಣವಾದ ಕಂಪನಿಯ ಮಾಲೀಕನನ್ನು ಕಾನೂನು ಪ್ರಕಾರ ವಶಕ್ಕೆ ಪಡೆಯಲಾಗಿದೆ ಎಂದು ಚೀನಾದ ಸರ್ಕಾರಿ ಮಾಧ್ಯಮಗಳು ತಿಳಿಸಿವೆ.

ಆರಂಭದಲ್ಲಿ ಕೇವಲ ನಾಲ್ವರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದ್ದರೂ, ಗಣಿಯೊಳಗಿನ ಕಾರ್ಬನ್ ಮಾನೋಆಕ್ಸೈಡ್ ಪ್ರಮಾಣ ಮಿತಿಮೀರಿರುವುದು ಪತ್ತೆಯಾದ ಬಳಿಕ ಸಾವಿನ ಸಂಖ್ಯೆ ವೇಗವಾಗಿ ಏರಿಕೆಯಾಗಿದೆ. ಗಣಿಯೊಳಗೆ ಸಿಲುಕಿದ್ದ ಕೆಲ ಕಾರ್ಮಿಕರ ಸ್ಥಿತಿ ಗಂಭೀರವಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಚೀನಾದ ಶಾಂಕ್ಸಿ ಪ್ರಾಂತ್ಯವು ದೇಶದ ಪ್ರಮುಖ ಕಲ್ಲಿದ್ದಲು ಉತ್ಪಾದನಾ ಪ್ರದೇಶಗಳಲ್ಲಿ ಒಂದಾಗಿದೆ. ಕಳೆದ ಕೆಲವು ದಶಕಗಳಲ್ಲಿ ಗಣಿಗಳ ಸುರಕ್ಷತೆಯಲ್ಲಿ ಸುಧಾರಣೆ ಕಂಡುಬಂದಿದ್ದರೂ, ಸುರಕ್ಷತಾ ನಿಯಮಗಳ ನಿರ್ಲಕ್ಷ್ಯ ಹಾಗೂ ಸ್ಪಷ್ಟ ನಿಯಂತ್ರಣದ ಕೊರತೆಯಿಂದ ಇಂತಹ ಅಪಘಾತಗಳು ಮತ್ತೆ ಮತ್ತೆ ಸಂಭವಿಸುತ್ತಿವೆ.

2023ರಲ್ಲಿ ಉತ್ತರ ಒಳ ಮಂಗೋಲಿಯಾ ಪ್ರದೇಶದ ಕಲ್ಲಿದ್ದಲು ಗಣಿಯಲ್ಲಿ ಸಂಭವಿಸಿದ ಭೂಕುಸಿತದಲ್ಲಿ 53 ಮಂದಿ ಮೃತಪಟ್ಟಿದ್ದರು. 2009ರಲ್ಲಿ ಹೀಲೋಂಗ್‌ಜಿಯಾಂಗ್ ಪ್ರಾಂತ್ಯದ ಗಣಿಯಲ್ಲಿ ನಡೆದ ಸ್ಫೋಟದಲ್ಲಿ 100ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಪೆಟ್ರೋಲ್-ಡೀಸೆಲ್ ಬೆಲೆ ಮತ್ತೆ ಹೆಚ್ಚಳ: 10 ದಿನಗಳಲ್ಲಿ 3ನೇ ಬಾರಿ ತೈಲ ದರ ಏರಿಕೆ, ಗ್ರಾಹಕರಿಗೆ ಮತ್ತೆ ಇಂಧನ ಕಂಪನಿಗಳ ಶಾಕ್..!

ಭಾರತಕ್ಕೆ ಆಗಮಿಸಿದ ಅಮೆರಿಕಾ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೋ; ಕೋಲ್ಕತ್ತಾದಲ್ಲಿ ಭರ್ಜರಿ ಸ್ವಾಗತ, ಭಾರತ-ಅಮೆರಿಕಾ ಬಾಂಧವ್ಯಕ್ಕೆ ಹೊಸ ಬಲ

ಮಗನ ಮದುವೆಗಿಂತ ದೇಶವೇ ಮುಖ್ಯ: 'ಇರಾನ್ ಬಿಕ್ಕಟ್ಟು' ಹಿನ್ನೆಲೆಯಲ್ಲಿ ಟ್ರಂಪ್ ಮಹತ್ವದ ನಿರ್ಧಾರ, ಟೆಹ್ರಾನ್ ಮೇಲೆ ಭಾರೀ ದಾಳಿಗೆ ಅಮೆರಿಕಾ ಸಜ್ಜು..!

ದೇಶವನ್ನು ಅಸ್ಥಿರಗೊಳಿಸುವ ಪ್ರಯತ್ನದಲ್ಲಿ 'ಕಾಕ್ರೋಚ್ ಜನತಾ ಪಾರ್ಟಿ ಸಂಚು': ಬಿಜೆಪಿ ನಾಯಕ ರಾಜೀವ್ ಚಂದ್ರಶೇಖರ್!

ರಾಜ್ಯಸಭಾ ಚುನಾವಣೆ: ಎಚ್.ಡಿ. ದೇವೇಗೌಡರಿಗೆ NDA ಟಿಕೆಟ್..? ಮತ್ತೊಮ್ಮೆ ದೆಹಲಿ ಮೆಟ್ಟಿಲೇರುತ್ತಾರಾ 'ಮಣ್ಣಿನ ಮಗ'? ಹೆಚ್ಚಿದ ಕುತೂಹಲ

SCROLL FOR NEXT