ಡೊನಾಲ್ಡ್ ಟ್ರಂಪ್' ರೀತಿಯ ಅಪರೂಪದ ಎಮ್ಮೆ 
ವಿದೇಶ

ಕೊನೆ ಕ್ಷಣದಲ್ಲಿ 'ಡೊನಾಲ್ಡ್ ಟ್ರಂಪ್' ಎಮ್ಮೆಗೆ ಸಿಕ್ಕಿತು ಜೀವದಾನ: ಈದ್ ಬಲಿಗೆ ಸಿದ್ಧವಾಗಿದ್ದ ವೈರಲ್ ಎಮ್ಮೆ ರಕ್ಷಣೆ, ಮೃಗಾಲಯಕ್ಕೆ ರವಾನೆ..!

ಬಾಂಗ್ಲಾದೇಶದ ಫಾರ್ಮ್ ಒಂದರಲ್ಲಿ ಈ 4 ವರ್ಷದ ಆಲ್ಬಿನೋ ತಳಿಯ ಎಮ್ಮೆಯನ್ನು ಸಾಕಲಾಗಿತ್ತು. ತಿಳಿ ಗುಲಾಬಿ ಬಣ್ಣದ ಚರ್ಮ ಹಾಗೂ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವಿಶಿಷ್ಟ ಹೇರ್‌ಸ್ಟೈಲ್ ಅನ್ನು ಹೋಲುವ ಹೊಂಬಣ್ಣದ ಕೂದಲನ್ನು ಈ ಎಮ್ಮೆ ಹೊಂದಿತ್ತು.

ಢಾಕಾ: ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್ ಆಗಿದ್ದ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೆಸರಿನ ಅಪರೂಪದ ಎಮ್ಮೆಯನ್ನು ಬಾಂಗ್ಲಾದೇಶ ಸರ್ಕಾರವು ಕೊನೆಯ ಕ್ಷಣದಲ್ಲಿ ಬಕ್ರೀದ್ ಬಲಿಯಿಂದ ರಕ್ಷಿಸಿದೆ,

ಸಾರ್ವಜನಿಕರ ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ ಈ ಮೂಕಜೀವಿಯನ್ನು ಇದೀಗ ಢಾಕಾದ ರಾಷ್ಟ್ರೀಯ ಮೃಗಾಲಯಕ್ಕೆ ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ.

ಬಾಂಗ್ಲಾದೇಶದ ಫಾರ್ಮ್ ಒಂದರಲ್ಲಿ ಈ 4 ವರ್ಷದ ಆಲ್ಬಿನೋ ತಳಿಯ ಎಮ್ಮೆಯನ್ನು ಸಾಕಲಾಗಿತ್ತು. ತಿಳಿ ಗುಲಾಬಿ ಬಣ್ಣದ ಚರ್ಮ ಹಾಗೂ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವಿಶಿಷ್ಟ ಹೇರ್‌ಸ್ಟೈಲ್ ಅನ್ನು ಹೋಲುವ ಹೊಂಬಣ್ಣದ ಕೂದಲನ್ನು ಈ ಎಮ್ಮೆ ಹೊಂದಿತ್ತು. ಈ ವಿಶಿಷ್ಟ ನೋಟದಿಂದಾಗಿಯೇ ಇದಕ್ಕೆ "ಡೊನಾಲ್ಡ್ ಟ್ರಂಪ್" ಎಂದು ಹೆಸರಿಡಲಾಗಿತ್ತು.

ಬಕ್ರೀದ್ (ಈದ್ ಉಲ್ ಅದಾ) ಹಬ್ಬದ ಕುರ್ಬಾನಿಗಾಗಿ (ಬಲಿ ನೀಡಲು) ಢಾಕಾದ ಉದ್ಯಮಿಯೊಬ್ಬರು ಈ ಎಮ್ಮೆಯನ್ನು ಬರೋಬ್ಬರಿ 3.85 ಲಕ್ಷ ಬಾಂಗ್ಲಾದೇಶಿ ಟಾಕಾ (ಸುಮಾರು 3 ಲಕ್ಷ ಭಾರತೀಯ ರೂಪಾಯಿ) ನೀಡಿ ಖರೀದಿಸಿದ್ದರು.

ಈ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದಂತೆ, ಎಮ್ಮೆಯನ್ನು ನೋಡಲು ಉದ್ಯಮಿಯ ಮನೆಯ ಮುಂದೆ ಸಾವಿರಾರು ಜನರು ಮುಗಿಬಿದ್ದಿದ್ದರು.

ಜನಸಂದಣಿ ಹೆಚ್ಚಾದ ಕಾರಣ ಭದ್ರತಾ ಕಾಳಜಿ ಮತ್ತು ಪ್ರಾಣಿಯ ಸುರಕ್ಷತೆಯನ್ನು ಪರಿಗಣಿಸಿ ಬಾಂಗ್ಲಾದೇಶದ ಗೃಹ ಸಚಿವಾಲಯವು ತಕ್ಷಣವೇ ಹಸ್ತಕ್ಷೇಪ ಮಾಡಿದ್ದು, ಎಮ್ಮೆಯನ್ನು ಬಲಿ ನೀಡದಂತೆ ಕೊನೆಯ ಕ್ಷಣದಲ್ಲಿ ಆದೇಶ ಹೊರಡಿಸಿ, ರಕ್ಷಣೆ ಮಾಡಿದೆ. ಖರೀದಿದಾರನಿಗೆ ಸರ್ಕಾರವೇ ಹಣವನ್ನು ಮರುಪಾವತಿಸಿ, ಎಮ್ಮೆಯನ್ನು ತನ್ನ ಸುಪರ್ದಿಗೆ ಪಡೆದುಕೊಂಡಿದೆ.

ಸದ್ಯ ‘ಡೊನಾಲ್ಡ್ ಟ್ರಂಪ್’ ಎಮ್ಮೆಯನ್ನು ಢಾಕಾದ ರಾಷ್ಟ್ರೀಯ ಮೃಗಾಲಯಕ್ಕೆ (Mirpur National Zoo) ಒಪ್ಪಿಸಲಾಗಿದೆ. ಮೃಗಾಲಯದಲ್ಲಿ ಇದಕ್ಕೆ ಪ್ರತ್ಯೇಕ ಶೆಡ್ ವ್ಯವಸ್ಥೆ ಮಾಡಲಾಗಿದ್ದು, ವಿಶೇಷ ಆರೈಕೆಗಾಗಿ ಪ್ರತ್ಯೇಕ ಸಿಬ್ಬಂದಿಯನ್ನು ನೇಮಿಸಲಾಗಿದೆ. ಬಲಿಯಾಗಬೇಕಿದ್ದ ಪ್ರಾಣಿಯೊಂದು ಮೃಗಾಲಯದ ಆಕರ್ಷಣೆಯಾಗಿ ಬದಲಾಗಿರುವುದು ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Asian Games 2026: Cricket Finalನಲ್ಲಿ ಶ್ರೀಲಂಕಾ ಮಣಿಸಿ ಇತಿಹಾಸ ಬರೆದ ಭಾರತ ಮಹಿಳಾ ತಂಡ, ಚಿನ್ನದ ಬೇಟೆ!

ಇದೊಂದು ಕೆಲಸ ಮಾಡಿದ್ರೆ, ಮುಂದಿನ ಸಾಂಕ್ರಾಮಿಕದಲ್ಲಿ 27 ಲಕ್ಷಕ್ಕೂ ಅಧಿಕ ಜನರ ಜೀವ ಉಳಿಸಬಹುದು: ಅಧ್ಯಯನ

ಕರ್ನಾಟಕದ 4 ನಾಲ್ಕು MLC ಸ್ಥಾನಗಳಿಗೆ ಚುನಾವಣೆ ಘೋಷಣೆ; ನಾಲ್ಕು ರಾಜ್ಯಗಳ 28 ಪರಿಷತ್ ಚುನಾವಣೆಗೆ ಮುಹೂರ್ತ ಫಿಕ್ಸ್ ಮಾಡಿದ ಆಯೋಗ

ಜಾಗತಿಕ ವ್ಯವಸ್ಥೆ ಒತ್ತಡದಲ್ಲಿದೆ, ಬಹುಪಕ್ಷೀಯತೆಗೆ ಸುಧಾರಣೆ ಅಗತ್ಯ: ವಿಶ್ವಸಂಸ್ಥೆಯಲ್ಲಿ ಜೈಶಂಕರ್ ಕರೆ

ಜೀವ ಪಣಕ್ಕಿಟ್ಟು 3 ಕಿ.ಮೀ ಬೆನ್ನಟ್ಟಿ ಆನೆಮರಿ ರಕ್ಷಿಸಿದ ಮೀನುಗಾರರು, ಕೊನೆಗೂ ತಾಯಿ ಮಡಿಲು ಸೇರಿದ ಪುಟ್ಟ ಕಂದ! Video