Gen-Z ಪ್ರತಿಭಟನೆಗೆ ರಣರಂಗವಾದ ಜರ್ಮನಿ Online Desk
ವಿದೇಶ

Gen-Z ಪ್ರತಿಭಟನೆಗೆ ರಣರಂಗವಾದ ಯುರೋಪ್: ಇಟಲಿ ಫ್ರಾನ್ಸ್‌ ನಂತರ ಜರ್ಮನಿಗೆ ವ್ಯಾಪಿಸಿದ ಹೋರಾಟ; ಅಂಗಡಿಗಳ ಲೂಟಿ, ಪೊಲೀಸರ ಮೇಲೆ ಪೆಟ್ರೋಲ್ ಬಾಂಬ್ ದಾಳಿ

ಸ್ಪೇನ್, ಇಟಲಿ ಮತ್ತು ಫ್ರಾನ್ಸ್‌ನಲ್ಲಿ ಭುಗಿಲೆದ್ದಿದ್ದ Gen-Z ಪ್ರತಿಭಟನೆಯ ಕಿಡಿ ಇದೀಗ ಜರ್ಮನಿಗೂ ವ್ಯಾಪಿಸಿದ್ದು, ಅಲ್ಲಿನ ಪ್ರಮುಖ ನಗರಗಳಲ್ಲಿ ತೀವ್ರ ಹಿಂಸಾಚಾರ, ಅಂಗಡಿಗಳ ಲೂಟಿ ಮತ್ತು ಪೊಲೀಸರ ಮೇಲಿನ ದಾಳಿಗೆ ಕಾರಣವಾಗಿದೆ. ಆ ಕುರಿತ ವರದಿ ಇಲ್ಲಿದೆ:

ಬರ್ಲಿನ್ (ಜರ್ಮನಿ): ಸ್ಪೇನ್, ಇಟಲಿ ಮತ್ತು ಫ್ರಾನ್ಸ್‌ನಲ್ಲಿ ಭುಗಿಲೆದ್ದಿದ್ದ Gen-Z ಪ್ರತಿಭಟನೆಯ ಕಿಡಿ ಇದೀಗ ಜರ್ಮನಿಗೂ ವ್ಯಾಪಿಸಿದ್ದು, ಅಲ್ಲಿನ ಪ್ರಮುಖ ನಗರಗಳಲ್ಲಿ ತೀವ್ರ ಹಿಂಸಾಚಾರ, ಅಂಗಡಿಗಳ ಲೂಟಿ ಮತ್ತು ಪೊಲೀಸರ ಮೇಲಿನ ದಾಳಿಗೆ ಕಾರಣವಾಗಿದೆ. ಹೆಚ್ಚುತ್ತಿರುವ ಜೀವನ ವೆಚ್ಚ, ಶಿಕ್ಷಣ ಕ್ಷೇತ್ರಕ್ಕೆ ಅನುದಾನದ ಕೊರತೆ, ಸಾರ್ವಜನಿಕ ವೆಚ್ಚ ಕಡಿತ ಹಾಗೂ ಕಡ್ಡಾಯ ಸೇನಾ ಸೇವೆಯ ಪ್ರಸ್ತಾಪವನ್ನು ವಿರೋಧಿಸಿ ಯುವ ಸಮುದಾಯವು ಜರ್ಮನಿಯಾದ್ಯಂತ ಬೃಹತ್ ರ್ಯಾಲಿಗಳನ್ನು ಆಯೋಜಿಸಿತ್ತು. ಹಗಲಿನಲ್ಲಿ ಶಾಂತಿಯುತವಾಗಿದ್ದ ಈ ಪ್ರತಿಭಟನೆಗಳು ರಾತ್ರಿಯಾಗುತ್ತಿದ್ದಂತೆ ಹಿಂಸಾತ್ಮಕ ರೂಪ ಪಡೆದುಕೊಂಡವು. ಆ ಕುರಿತ ವರದಿ ಇಲ್ಲಿದೆ:

Gen Zಗೆ ಅಧಿಕಾರ

ಈ ಬೃಹತ್ ಆಂದೋಲನವನ್ನು "Gen Z regelt" (ಜೆನ್-ಝೆಡ್ ಅಧಿಕಾರ ವಹಿಸಿಕೊಳ್ಳುತ್ತದೆ) ಎಂಬ ಯುವ ಒಕ್ಕೂಟದ ನೇತೃತ್ವದಲ್ಲಿ ನಡೆಸಲಾಯಿತು. ಬರ್ಲಿನ್, ಫ್ರಾಂಕ್‌ಫರ್ಟ್, ಕೊಲೋನ್, ಹ್ಯಾಂಬರ್ಗ್ ಮತ್ತು ಮ್ಯೂನಿಚ್ ಸೇರಿದಂತೆ 30ಕ್ಕೂ ಹೆಚ್ಚು ಪ್ರಮುಖ ನಗರಗಳಲ್ಲಿ ಹತ್ತಾರು ಸಾವಿರ ಯುವಕರು ಬೀದಿಗಿಳಿದಿದ್ದರು. ಈ ವೇಳೆ, ಜರ್ಮನಿಯ ಆರ್ಥಿಕ ಕೇಂದ್ರವಾದ ಫ್ರಾಂಕ್‌ಫರ್ಟ್‌ನ ಮುಖ್ಯ ಶಾಪಿಂಗ್ ಬೀದಿಗಳಲ್ಲಿ ಮುಸುಕುಧಾರಿ ಗಲಭೆಕೋರರು ಬಟ್ಟೆ ಮತ್ತು ಶೂ ಅಂಗಡಿಗಳ ಕಿಟಕಿಗಳನ್ನು ಒಡೆದು ವಸ್ತುಗಳನ್ನು ಲೂಟಿ ಮಾಡಿದ್ದಾರೆ. ಅಷ್ಟೇ ಅಲ್ಲದೆ, ಗನ್ ಅಂಗಡಿಯೊಂದರ ಮೇಲೆ ದಾಳಿ ನಡೆಸಿ ಆಯುಧಗಳನ್ನು ಕದಿಯಲು ಯತ್ನಿಸಿದ್ದು, ಪೊಲೀಸರ ಮೇಲೆ ಮೊಲೊಟೊವ್ ಕಾಕ್‌ಟೇಲ್ (ಪೆಟ್ರೋಲ್ ಬಾಂಬ್), ಬಾಟಲಿಗಳು ಮತ್ತು ಪಟಾಕಿಗಳನ್ನು ಎಸೆದಿದ್ದಾರೆ.

ಮುಂದುವರೆದು ಹಿಂಸಾಚಾರವನ್ನು ಹತ್ತಿಕ್ಕಲು ಜರ್ಮನ್ ಪೊಲೀಸರು ಪ್ರತಿಭಟನಾಕಾರರ ಮೇಲೆ ಅಶ್ರುವಾಯು, ಪೆಪ್ಪರ್ ಸ್ಪ್ರೇ ಹಾಗೂ ವಾಟರ್ ಕ್ಯಾನನ್‌ಗಳನ್ನು (ನೀರಿನ ಫಿರಂಗಿ) ವ್ಯಾಪಕವಾಗಿ ಬಳಸಿದ್ದಾರೆ. ಜೊತೆಗೆ, ದೇಶಾದ್ಯಂತ ವ್ಯಾಪಕ ಕಾರ್ಯಾಚರಣೆ ನಡೆಸಲಾಗುತ್ತಿದ್ದು, ಹ್ಯಾಂಬರ್ಗ್‌ನಲ್ಲಿ 120 ಕ್ಕೂ ಹೆಚ್ಚು ಹಾಗೂ ಫ್ರಾಂಕ್‌ಫರ್ಟ್‌ನಲ್ಲಿ 13 ರಿಂದ 29 ವರ್ಷದೊಳಗಿನ 54 ಕ್ಕೂ ಹೆಚ್ಚು ಯುವಕರನ್ನು ಬಂಧಿಸಲಾಗಿದೆ. ಏತನ್ಮಧ್ಯೆ, Gen Z regelt ಎಂಬ ಸಂಘಟನೆ ಈ ಶಾಂತಿಯುತ ಪ್ರತಿಭಟನೆಯನ್ನು ಆಯೋಜಿಸಿತ್ತು. ಆದರೆ, ರಾತ್ರಿಯ ವೇಳೆಯಲ್ಲಿ ಸುಮಾರು 100 ಕ್ಕೂ ಹೆಚ್ಚು ತೀವ್ರ ಎಡಪಂಥೀಯ ಉಗ್ರಗಾಮಿಗಳು ಈ ಪ್ರತಿಭಟನೆಯೊಳಗೆ ನುಸುಳಿ ಹಿಂಸಾಚಾರ ಉಂಟುಮಾಡಿದ್ದಾರೆ ಎಂದು ಜರ್ಮನಿಯ ಆಂತರಿಕ ಸಚಿವಾಲಯ ತಿಳಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Ayodhya ರಾಮಮಂದಿರ ದೇಣಿಗೆ ದುರುಪಯೋಗ ಪ್ರಕರಣ: ವಿಚಾರಣೆ ಸ್ಥಳೀಯ ನ್ಯಾಯಾಲಯಕ್ಕೆ ವರ್ಗಾಯಿಸಿದ ಸುಪ್ರೀಂ ಕೋರ್ಟ್..!

ದೆಹಲಿ ವಾಯು ಮಾಲಿನ್ಯ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ: ಮೊದಲ ದಿನವೇ 1,539 ವಾಹನಗಳಿಗೆ ನಿರ್ಬಂಧ, 68.4 ಲಕ್ಷ ರೂ. ದಂಡ ವಸೂಲಿ..!

ಅಮೆರಿಕದಲ್ಲಿ ಭೀಕರ ವಿಮಾನ ದುರಂತ: ಬೆಂಕಿ ಉಂಡೆಯಂತೆ ಜನನಿಬಿಡ ರಸ್ತೆಗೆ ಅಪ್ಪಳಿಸಿದ ಖಾಸಗಿ ಜೆಟ್; 9 ಮಂದಿ ದುರ್ಮರಣ..!

ನನ್ನ ಮೇಲೆ ಇಡಿ, ಐಟಿ ಛೂ ಬಿಡಲು ಕೇಂದ್ರ ಸಚಿವರ ಒತ್ತಡ: ಪ್ರಿಯಾಂಕ್‌ ಖರ್ಗೆ ಆರೋಪ!

ಬರಿಗೈಯಲ್ಲೇ ಶೌಚಾಲಯ ಕ್ಲೀನ್ ಮಾಡಿದ ಬಿಜೆಪಿ ಸಂಸದ ಜನಾರ್ದನ ಮಿಶ್ರಾ, Video ವೈರಲ್