ಶ್ವೇತಭವನದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾತನಾಡುತ್ತಿರುವಾಗ, ರಕ್ಷಣಾ ಸಚಿವ ಪೀಟ್ ಹೆಗ್ಸೆತ್ ಗಮನಿಸುತ್ತಿರುವುದು. online desk
ವಿದೇಶ

ಇತಿಹಾಸದಲ್ಲೇ ಮೊದಲು, ದೇಶ ತನ್ನದೇ ಯೋಧರನ್ನು ಶಿಕ್ಷಿಸ್ತಿದೆ: ದೋಷಾರೋಪಣೆ ವಿರುದ್ಧ ಅಮೆರಿಕ ರಕ್ಷಣಾ ಸಚಿವ ಹೆಗ್ಸೆತ್ ಅಸಮಾಧಾನ

ಇರಾನ್ ಜೊತೆಗಿನ ಅಮೆರಿಕದ ನಡೆಯುತ್ತಿರುವ ಯುದ್ಧವನ್ನು ನಿರ್ವಹಿಸಿದ್ದಕ್ಕಾಗಿ ಹೆಗ್ಸೆತ್ ದೋಷಾರೋಪಣೆ ಬೆದರಿಕೆಯನ್ನು ಎದುರಿಸುತ್ತಿದ್ದಾರೆ.

ವಾಷಿಂಗ್ ಟನ್: ಯುನೈಟೆಡ್ ಸ್ಟೇಟ್ಸ್ ನ ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್ ತಮ್ಮ ವಿರುದ್ಧದ ದೋಷಾರೋಪಣೆ ಪ್ರಯತ್ನವನ್ನು ವಿರೋಧಿಸಿದ್ದಾರೆ. ಈ ಪ್ರಯತ್ನ ದೇಶ "ತನ್ನದೇ ಆದ ಯೋಧರನ್ನು ಶಿಕ್ಷಿಸುತ್ತದೆ" ಎಂಬ ಸಂದೇಶವನ್ನು ಅಮೆರಿಕದ ಶತ್ರುಗಳಿಗೆ ರವಾನಿಸುತ್ತದೆ ಎಂದು ಹೆಗ್ಸತ್ ಹೇಳಿದ್ದಾರೆ.

ಮೇ ನಂತರದ ತಮ್ಮ ಮೊದಲ ಮಾಧ್ಯಮ ಗೋಷ್ಠಿಯಲ್ಲಿ ಅವರು "ನಮ್ಮ ಅಮೇರಿಕನ್ ಗಣರಾಜ್ಯದ 250 ವರ್ಷಗಳಲ್ಲಿ, ಯಾವುದೇ ರಕ್ಷಣಾ ಕಾರ್ಯದರ್ಶಿಯನ್ನು ಕಾನೂನುಬದ್ಧ ಮಿಲಿಟರಿ ಕಾರ್ಯಾಚರಣೆಗಳನ್ನು ನಡೆಸಿದ್ದಕ್ಕಾಗಿ ಎಂದಿಗೂ ದೋಷಾರೋಪಣೆ ಮಾಡಲಾಗಿಲ್ಲ" ಎಂದು ಹೇಳಿದರು, ನಿರ್ಗಮಿತ ರಿಪಬ್ಲಿಕನ್ ಶಾಸಕ ಥಾಮಸ್ ಮಾಸ್ಸಿ ಅವರು ಪ್ರಾರಂಭಿಸಿದ ದೋಷಾರೋಪಣೆ ಬೆದರಿಕೆಯನ್ನು ಅವರು ತಿರಸ್ಕರಿಸಿದ್ದಾರೆ.

ಇರಾನ್ ಜೊತೆಗಿನ ಅಮೆರಿಕದ ನಡೆಯುತ್ತಿರುವ ಯುದ್ಧವನ್ನು ನಿರ್ವಹಿಸಿದ್ದಕ್ಕಾಗಿ ಹೆಗ್ಸೆತ್ ದೋಷಾರೋಪಣೆ ಬೆದರಿಕೆಯನ್ನು ಎದುರಿಸುತ್ತಿದ್ದಾರೆ.

ಇತ್ತೀಚೆಗೆ ನಡೆದ ಮಧ್ಯಂತರ ಚುನಾವಣೆಗಳಲ್ಲಿ ರಿಪಬ್ಲಿಕನ್ನರು ಹೀನಾಯ ಸೋಲನ್ನು ಎದುರಿಸಿದ ನಂತರ ಕೆಂಟುಕಿಯ ಮಾಸ್ಸಿ ಸಲ್ಲಿಸಿದ ನಿರ್ಣಯ, ಹೆಗ್ಸೆತ್ ಅವರನ್ನು ಟ್ರಂಪ್ ಆಡಳಿತದಿಂದ ತೆಗೆದುಹಾಕಲು ಮತದಾನಕ್ಕೆ ವೇದಿಕೆಯನ್ನು ಸಿದ್ಧಪಡಿಸಿದೆ.

ಮಾಸ್ಸಿಯನ್ನು ಗುರಿಯಾಗಿಸಿಕೊಂಡು ಹೆಗ್ಸೆತ್ ಮಂಗಳವಾರ "ನೀತಿ ಭಿನ್ನಾಭಿಪ್ರಾಯಗಳ" ಬಗ್ಗೆ "ಅತೃಪ್ತ ಮತ್ತು ಸೋತ" ಕಾಂಗ್ರೆಸ್ಸಿಗರಿಂದ ತಮ್ಮ ವಿರುದ್ಧದ ಕ್ರಮ ಮುನ್ನಡೆಸಲ್ಪಡುತ್ತಿದೆ ಎಂದು ಹೇಳಿದ್ದರು.

"ಇದು ಒಂದು ರಾಜಕೀಯ ಪ್ರದರ್ಶನ; ಅಹಂಕಾರ ಮತ್ತು ದ್ವೇಷದಿಂದ ಕೂಡಿದ ವೈಯಕ್ತಿಕ ಪ್ರಣಾಳಿಕೆ. ಕಾಂಗ್ರೆಸ್‌ನಲ್ಲಿ (ಅಮೆರಿಕದ ಸಂಸತ್ತಿನಲ್ಲಿ) ಒಬ್ಬ ವ್ಯಕ್ತಿಯ ಕೊನೆಯ ದಿನಗಳಲ್ಲಿ, ಹಾಲಿ ಅಧ್ಯಕ್ಷರಿಗೆ ಹಾನಿ ಮಾಡಲು ನಡೆಸುತ್ತಿರುವ ಪ್ರಯತ್ನವಿದು. ಇದೊಂದು ಪ್ರಹಸನ ಮತ್ತು ಪ್ರಚಾರದ ತಂತ್ರ; ಇದು ಎಲ್ಲರಿಗೂ ತಿಳಿದಿರುವ ವಿಷಯವೇ," ಎಂದು ಹೆಗ್‌ಸೆತ್ ಹೇಳಿದರು.

ಇರಾನ್ ವಿರುದ್ಧ ಅಮೆರಿಕ ನಡೆಸಿದ ಯುದ್ಧವನ್ನು ಸಮರ್ಥಿಸಿಕೊಂಡ ಹೆಗ್‌ಸೆತ್, ಈ ಯುದ್ಧವು ಜಾಗತಿಕ ಮಟ್ಟದಲ್ಲಿ ತೀವ್ರ ಟೀಕೆಗೆ ಗುರಿಯಾಗಿದ್ದಲ್ಲದೆ, ರಿಪಬ್ಲಿಕನ್ ಪಕ್ಷಕ್ಕೆ ಭಾರಿ ನಷ್ಟವನ್ನೂ ಉಂಟುಮಾಡಿದೆ. ಆದರೂ, "ಪ್ರಸ್ತುತ ಚಾಲ್ತಿಯಲ್ಲಿರುವ ಅಭಿಪ್ರಾಯಕ್ಕಿಂತ ಭಿನ್ನವಾಗಿ, ಇತಿಹಾಸವು ಇರಾನ್ ಯುದ್ಧವನ್ನು ಬೇರೆಯದೇ ದೃಷ್ಟಿಕೋನದಿಂದ ನಿರ್ಣಯಿಸಲಿದೆ" ಎಂದು ಅವರು ಹೇಳಿದರು.

"ನಾವು ಈ ಯುದ್ಧವನ್ನು ಪ್ರಾರಂಭಿಸಲಿಲ್ಲ. 47 ವರ್ಷಗಳ ಹಿಂದೆಯೇ ಇರಾನ್ ಇದನ್ನು ಆರಂಭಿಸಿತ್ತು," ಎಂದು ಅವರು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಪ್ರಧಾನಿ ಹುದ್ದೆಗೆ ಮಹತ್ವಾಕಾಂಕ್ಷಿಯಾಗುವುದು ಅಪರಾಧವೇ?' ಸೋನಿಯಾ ಗಾಂಧಿಗೆ ಪ್ರಣಬ್ ಮುಖರ್ಜಿ ಪುತ್ರಿಯ ತಿರುಗೇಟು!

Made by China; ಪಾಕಿಸ್ತಾನದ ಅಣೆಕಟ್ಟು ಕಾಮಗಾರಿ ವೇಳೆ ಮತ್ತೆ ಭೂಕುಸಿತ, ಚೀನಾ ಕಂಪನಿಗಳ ಯೋಜನೆಗೆ ಭಾರೀ ಹಿನ್ನಡೆ-Video

ಪ್ರಧಾನಿ ಮೋದಿ ನನ್ನ ಕಣ್ಣಲ್ಲಿ ಕಣ್ಣಿಟ್ಟು ನೋಡುವುದಿಲ್ಲ: ನೆಹರು ವಿರುದ್ಧ 'ಬಿಜೆಪಿ ಹಗೆತನ': ಸೋನಿಯಾ ಆತ್ಮಚರಿತ್ರೆಯಲ್ಲಿ ರಿವೀಲ್!

ಪವನ್ ಕಲ್ಯಾಣ್ 3ನೇ ವಿಚ್ಚೇದನ: 4ನೇ ಮದುವೆ ಆಗ್ತಾರಾ ಆಂಧ್ರ ಡಿಸಿಎಂ, ನಟನ ಕುರಿತು ವೇಣುಸ್ವಾಮಿ ಹಳೇ ಭವಿಷ್ಯವಾಣಿ ವೈರಲ್!

2004ರಲ್ಲಿ ಸೋನಿಯಾ ಗಾಂಧಿ ಪ್ರಧಾನಿಯಾಗದಿರಲು ಕಾರಣವೇನು? 'Theek hai' ಎಂದವರು 'NO' ಎಂದಿದ್ದೇಕೆ? ಇಲ್ಲಿದೆ ಇನ್‌ಸೈಡ್ ಸ್ಟೋರಿ...!